ಮನೆಯವರಿಗೆ ಒಂದು ಲೋಟ ಕಾಫಿ ಕೊಡು ಅಂತ ಹೇಳಿ ಸಾವರಿಸಿಕೊಳ್ಳಲು ಸೋಫಾ ಮೇಲೆ ಕುಳಿತೆ.
ಕಾಫಿ ಕುಡಿದು ಮುಂದಿನ ಕಾಲ್ ಕವಿ ಸರ್
ನಾ: ನಾಳೆ ಸಂಜೆ ಮ್ಯಾಚಿಗೆ ಹೋಗೋಣ ಟೀಮ್ ಸಮೇತ, ಬರ್ತೀರಾ?
ಕ: ಆಯ್ತು ಚಿಕ್ಕು ಬರ್ತೀನಿ.
ನಾ: ಒಳ್ಳೇದು, ಹಾಗಾದ್ರೆ ನಾಳೆ ಚಿನ್ನಸ್ವಾಮಿ ಸ್ಟೇಡಿಯಂ ಹತ್ತಿರ ಸಿಗೋಣ.
ಕ: ಆಗಲಿ, ಮತ್ತೊಂದು ವಿಷಯ.
ನಾ: ಹೇಳಿ.
ಕ: ಬರುವಾಗ ಖಡ್ಗವನ್ನ ತಗೆದುಕೊಂಡು ಬರುತ್ತೇನೆ.
ನಾ: ಅದೇನಕ್ಕೆ.
ಕ: ಅಯ್ಯೋ ಚಿಕ್ಕು, ಈ ನಡ್ವೆ ದೆವ್ವ ಭೂತಗಳು ನಮ್ಮ ಸೋ ಕಾಲ್ಡ್ ಐ ಟಿ ಸಿಟಿಯಲ್ಲೂ ಬಂದಿವೆ, ಅದಕ್ಕೆ ಆ ಖಡ್ಗವನ್ನ ತರ್ತೀನಿ ಅಂದಿದ್ದು.
ನಾ: ಮೊದಲು ಆ ಕೆಲ್ಸಾ ಮಾಡಿ.
ಕ: ಹಾಗೆ ಮಾಡ್ಲೇಬೇಕು, ನೀವು ಇಂಜಿನಿಯರ್ಗಳು ದಂಡಕ್ಕೆ. ಒಂದು ಸಾಫ್ಟ್ವೇರ್ ಮಾಡಿ ಎಲ್ಲಾ ದೆವ್ವಗಳನ್ನ ಓಡಿಸೋದಲ್ವಾ?
ನಾ: ಅಯ್ಯೋ ನಮ್ಮ ಕಷ್ಟ ಯಾಕೆ ಹೇಳ್ತೀರಾ, ಆ ಸಾಫ್ಟ್ವೇರ್ಗಳನ್ನ ಯೂಸ್ ಮಾಡೇ ದೆವ್ವಗಳನ್ನ ಸೃಷ್ಟಿ ಮಾಡ್ತಿದ್ದಾರೆ :(
ಕ: ಹೋಗ್ಲಿ ಬಿಡು, ಬೇಜಾರಾಗ್ಬೇಡ. ಅದಕ್ಕೆ ಖಡ್ಗವೇ ಮದ್ದು.
ನಾ: ಸರಿ ಹಾಗಿದ್ರೆ ನಾಳೆ ಸಿಗುವ.
ನೆಕ್ಸ್ಟ್ ಗಣೇಶಣ್ಣಗೆ ಕಾಲ್ ಮಾಡಿದೆ
ನಾ: ನಾಳೆ ಸಂಜೆ ಮ್ಯಾಚಿಗೆ ಹೋಗೋಣ ಟೀಮ್ ಸಮೇತ, ಬರ್ತೀರಾ?
ಗ: ಮನೆಯವ್ರು, ಮಕ್ಳನ್ನ ಬಿಟ್ಟು ಬರೋದು ಕಷ್ಟ ಚಿಕ್ಕು, ಆಗಲ್ಲ ಹೋಗಿ ಬನ್ನಿ.
ನಾ: ಸರಿ ಬಿಡಿ ಹಾಗೆ ಆಗ್ಲಿ ಗಣೇಶಣ್ಣ. ಮತ್ತೊಂದು ವಿಷ್ಯ.
ಗ: ಏನದು?
ನಾ: ಚೀರ್ ಗರ್ಲ್ಸ್ ಎದ್ರಿಗೆ ಸೀಟ್ ಸಿಕ್ಕಿದೆ.
ಗ: ಹ್ಮ್ಮ್ ಹಾಂ (ಗಂಟಲು ಸರಿ ಮಾಡ್ಕೊಳ್ತಾ), ಚಿಕ್ಕು?
ನಾ: ಆಯ್ತು ಗಣೇಶಣ್ಣ, ಇನ್ನೊಮ್ಮೆ ಒಟ್ಟಿಗೆ ಹೋಗೋಣ.
ಗ: ಅಲ್ಲ ಚಿಕ್ಕು, ಇನ್ನೊಮ್ಮೆಯ ವಿಷ್ಯ ಆಚೆ ಇರ್ಲಿ. ಮನೆಯವ್ರು, ಮಕ್ಳನ್ನ ಮಾವನ ಮನೇಲಿ ಬಿಟ್ಟು ನಾನು ಮ್ಯಾಚ್ ನೋಡೋಕೆ ಬರ್ತೀನಿ.
ನಾ: ಬೇಡ, ಸುಮ್ನೆ ಎಲ್ರಿಗೂ ತೊಂದ್ರೆ ಆಲ್ವಾ!!?
ಗ: ಹ್ಹೆ ಹ್ಹೆ, ಛೆ, ಹಾಗೇನಿಲ್ಲ. ನಾನೂ ಇದೂವರೆಗೆ ಸ್ಟೇಡಿಯಮ್ನಲ್ಲಿ ಕ್ರಿಕೆಟ್ ನೋಡಿಲ್ಲ, ನೋಡಿದ ಹಾಗಾಗತ್ತೆ ಅಂತ.
ನಾ: ಹ್ಮ್ಮ್!!!!!!, ಸರಿ ಗಣೇಶಣ್ಣ ಹಾಗಿದ್ರೆ ನಾಳೆ ಸಿಗಣ.
ಮುಂದೆ ರಾಮಮೋಹನವ್ರಿಗೆ ಕಾಲ್ ಮಾಡಿದೆ.
ಅವ್ರ ಮನೆಯವರು ಕಾಲ್ ರಿಸೀವ್ ಮಾಡಿದ್ರು. ನಾನು ಅವ್ರ ಸಂಪದ ಮಿತ್ರ ಅಂದಾಗ, ತಡೀರಿ ಕರ್ದೆ ಅಂದ್ರು.
(
ಬ್ಯಾಕ್ಗ್ರೌಂಡ್ನಲ್ಲಿ,
ರೀ ನಿಮ್ಮ ಫ್ರೆಂಡ್, ಅದ್ಯಾರೋ ಸಂಪದ....
ಬಂದೆ ತಡಿ ಲಲ್ತಾ, ಶಾರದಾ ಥತ್...
ಯಾವಳ್ರೀ ಅವ್ಳು ಲಲ್ತಾ, ಶಾರದಾ?
ಏ ಯಾರೂ ಇಲ್ಲಾ ಕಣೇ.
ಸುಮ್ನೆ ಕೂತ್ಕೊಳ್ರೀ ಸಾಕು, ಈ ವಯಸ್ಸಲ್ಲಿ ನಿಮ್ಗೆನ್ರೀ ಬಂತು.
ಎಂಥ ಇಲ್ಲ ಕ...
........................................
.........................................)
ಅಲ್ಲಿಗೆ ಪಕ್ಕಾ ಆಯ್ತು, ರಾಮಮೋಹನವ್ರು ಮ್ಯಾಚಿಗೆ ಬರಲ್ಲ ಅಂತ.
ಕಾಲ್ ಕಟ್ ಮಾಡಿ ನೆಕ್ಸ್ಟ್ ಮಂಜಣ್ಣಗೆ ಕಾಲ್ ಮಾಡಿದೆ.









ಪ್ರತಿಕ್ರಿಯೆಗಳು
ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ೨
ಸಪ್ತಗಿರಿಗಳ ದೋಸೆಗೆ ಬೀಳದ ಗಣೇಶರು ಚಿಕ್ಕುವಿನ ಚೀರ್ ಗರ್ಲ್ಸ್ ಗೆ ಶರಣಾಗಿದ್ದಾರೆ. ಜೈ ಚಿಕ್ಕೂ.... ಜೈ ಚೀರ್ ಗರ್ಲ್ಸ್ :))
ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ೨
:) :) :)
ಚಿಯರ್ ಗರ್ಲ್ಸ್ ಪ್ರಭಾವ ನಮ್ಮ ಸ್ವಾಮೀಜಿನಾ ಬಿಡೋ ಹಾಗಿಲ್ಲ, ಮುಂದೆ ನೋಡ್ರಂತೆ
ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ೨ : ಚಿಯರ್ -ಚಿಯರ್ ಗರ್ಲ್ಸ್!
ಚೇತನ್
ಕವಿಗಳ ಪಾತ್ರ ಮತ್ತು ಗಣೇಶ್ ಅಣ್ಣ -ರಾಮ ಮೋಹನ್ ಅವ್ರ ಪಾತ್ರ ನಿರೂಪಣೆ :()))) ತರಿಸಿತು..
ಅದರಲ್ಲೂ ಗಣೇಶ್ ಅಣ್ಣ ಛೇ ಛೇ!! ಅಲ್ಲ ಚಿಯರ್ -ಚಿಯರ್ ಗರ್ಲ್ಸ್!
ಮುಂದಿನ ಭಾಗ ಎದುರು ನೋಡುತ್ತಿರುವೆ..
ಶುಭವಾಗಲಿ...
ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ೨ : ಚಿಯರ್ -ಚಿಯರ್ ಗರ್ಲ್ಸ್!
:) :)
ಧನ್ಯವಾದ ಸಪ್ತಗಿರಿಯವ್ರೆ
ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ೨
ಚೇತನ್
ಕ್ರಿಕೇಟ್ ನಾನೊಮ್ಮೆ ಅತಿ ಪ್ರೀತಿಸುತ್ತಿದ್ದ ಆಟ
ಈಗ ಐಪಿಲ್ ನಂತ ಕ್ರಿಕೇಟ್ ಪ್ರಾರಂಬವಾದನಂತರ ನಾನು ಅತಿ ಬೇಸರಪಡುವ ಆಟ
ಒಂದು ಪ್ರಶ್ನೆ ನಿಜಕ್ಕು ನೀವು ಐ ಪಿ ಎಲ್ ಅನ್ನು ಕ್ರಿಕೇಟ್ ಎಂದು ಒಪ್ಪಿಕೊಳ್ಳುತ್ತೀರ?
read here
ಪ್ರತಿಕ್ರಿಯೆಗಾಗಿ ಬೇಸರ ಪಡಬೇಡಿ
*ಪಾರ್ಥಸಾರಥಿ
ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ೨
ಪಾರ್ಥಸಾರಥಿಯವರೆ,
>>>ಕ್ರಿಕೇಟ್ ನಾನೊಮ್ಮೆ ಅತಿ ಪ್ರೀತಿಸುತ್ತಿದ್ದ ಆಟ
-ನಾನೂ ಸಹ.
>>>ಈಗ ಐಪಿಲ್ ನಂತ ಕ್ರಿಕೇಟ್ ಪ್ರಾರಂಬವಾದನಂತರ ನಾನು ಅತಿ ಬೇಸರಪಡುವ ಆಟ
-ನಾನೂ ಸಹ ಅತೀ ಬೇಸರಪಟ್ಟುಕೊಂಡು ಚೇತನ್ ಜತೆ ಚಿಯರ್ ಲೀಡರ್‌ಗಳ ಆಟ ಮಾತ್ರ ನೋಡುವೆ. :)
>>>ಒಂದು ಪ್ರಶ್ನೆ ನಿಜಕ್ಕು ನೀವು ಐ ಪಿ ಎಲ್ ಅನ್ನು ಕ್ರಿಕೇಟ್ ಎಂದು ಒಪ್ಪಿಕೊಳ್ಳುತ್ತೀರ?
-ಕ್ರಿಕೆಟ್ ಅಲ್ಲವೇ ಅಲ್ಲ. ಕುದುರೆಜೂಜು.
ಚೇತನ್,
ದೆವ್ವದ ಕತೆಯಲ್ಲಿ ಇನ್ನೊಂದು u ಟರ್ನ್ :)
-ಗಣೇಶ.
ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ೨
<ನಾನೂ ಸಹ ಅತೀ ಬೇಸರಪಟ್ಟುಕೊಂಡು ಚೇತನ್ ಜತೆ ಚಿಯರ್ ಲೀಡರ್‌ಗಳ ಆಟ ಮಾತ್ರ ನೋಡುವೆ. :)> :) :) :) :) :)
ಅದ್ಕೆ ಗಣೇಶಣ್ಣ ಹತ್ರಾನೇ ಸೀಟ್ ತಗೊಂಡಿರೋದು, ಮುಂದೈತೆ ಮಾರಿಹಬ್ಬ ಗಣೇಶಣ್ಣ
<ದೆವ್ವದ ಕತೆಯಲ್ಲಿ ಇನ್ನೊಂದು u ಟರ್ನ್ :)> ಫಾಲೋ ಮಾಡ್ತೀನಿ
ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ೨:ಅಚ್ಚರಿ ತಂದದ್ದು ನನಗೆ..!!???
ಗುರುಗಳ ಈ ಪ್ರತಿಕ್ರಿಯೆ ನಿಜವಾಗಿ ಅಚ್ಚರಿ ತಂದದ್ದು ನನಗೆ...!!
ಯಾಕೆ-???
ರೀಡ್ ....ರ್ ಅಂತ ಕೊಟ್ಟಾಗಲೆ ನನಗೆ ಅನ್ನಿಸಿತು ಗುರುಗಳು ...ವ್ ಬರೆದ ಈ ಬರಹದ ಬಗ್ಗೆಯೇ ಹೇಳುತ್ತಿರುವರು ಅ0ತ್, ಮತ್ತು ಅದಕ್ಕೆ ಮೊತ್ತ ಮೊದಲು- ಪ್ರತಿಕ್ರಿಯಿಸಿದ್ದು ??????
, ಹಾಗೆ .........ದೇ ಪ್ರತಿಕ್ರಿಯೆ ಅದಕ್ಕೆ ಬಂದದ್ದು...!!
ಅದಕ್ಕೆ ಮಾರುತ್ತರವನ್ನು ಗುರುಗಳು ಕೊಟ್ಟಿಲ್ಲ....!!
ನನಗಂತೂ ಕ್ರಿಕೆಟ್ ಯಾವತ್ತೂ ಇಸ್ಟ ಆಗಿದ್ದು ಇಲ್ಲ, ನಮ್ಮ ಹಳ್ಳಿಯಲ್ಲಿ(ಎಲ್ಲ ಹಳ್ಳಿಯಲ್ಲೂ ಇರಬಹುದು!!) ಪ್ರತಿ ಮಗುವೂ ಕೈನಲ್ಲಿ ಹಿಡಿಯೋದ್ ಬ್ಯಾಟ್ ಅಥವಾ ಬಾಲು, ಕಬಡ್ಡಿ- ಖೊ ಖೊ(ನಾವ್ ಚಿಕವರಿದ್ದಾಗ ಆಡುತ್ತಿದ್ದುದು) ಕೇಳೋರು -ನೋಡೋರು ದಿಕ್ಕು ಇಲ್ಲ..:(((
ಗಣೇಶ್ ಅಣ್ಣ ಅವ್ರ ಆಗಮನ ಖುಷಿ ತಂತು(ಈಗ ಅವರು ಪ್ರತ್ಯಕ್ಷ ಆದರು)
@ ಗಣೇಶ್ ಅಣ್ಣ
ಅಲ್ಲ-ಗಣೇಶ್ ಅಣ್ಣ- ಈಗಸ್ಟೆ ರೂಮ್ ಇಂದ ಹೊರಗೆ ಬಂದು ಆಕಾಶ ನೋಡಿ- ಕೆಳಗೊಮ್ಮೆ ಧ್ರುಸ್ತಿ ಹಾಯಿಸಿ
...ಡ್ ನೋಡಿ ಹಾಗೆಯೇ
...... ಡಿ ಮರಳಿ ರೂಮಿಗೆ ಹೋದ ನೀವು, ಅಸ್ತು ಬೇಗ ಪ್ರತಿಕ್ರಿಯಿಸಲು ಶುರು ಹಚ್ಚಿಕೊಂಡಿರ?????..
ಶುಭವಾಗಲಿ...
ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ೨:ಅಚ್ಚರಿ ತಂದದ್ದು ನನಗೆ..!!???
>>>ಈಗಸ್ಟೆ ರೂಮ್ ಇಂದ ಹೊರಗೆ ಬಂದು ಆಕಾಶ ನೋಡಿ- ಕೆಳಗೊಮ್ಮೆ ಧ್ರುಸ್ತಿ ಹಾಯಿಸಿ
...ಡ್ ನೋಡಿ ಹಾಗೆಯೇ
...... ಡಿ ಮರಳಿ ರೂಮಿಗೆ ಹೋದ ನೀವು, ಅಸ್ತು ಬೇಗ ಪ್ರತಿಕ್ರಿಯಿಸಲು ಶುರು ಹಚ್ಚಿಕೊಂಡಿರ?????..
-ಸಪ್ತಗಿರಿವಾಸಿಗೆ ಈದಿನವೂ ಬಸ್,ರಿಕ್ಷಾ ಎಲ್ಲಾ ಕೈಕೊಟ್ಟು..ಆಕಾಶ ಮಾರ್ಗವಾಗಿ ಬರಬಹುದೋ ಎಂದು ಆಕಾಶ ನೋಡಿದೆ.. ರೋಡ್‌ನಲ್ಲಿ ನೀವು ಕಾಣಿಸಿ ಸಮಾಧಾನವಾಯಿತು. ಎದುರಿಗೆ ಮಾತನಾಡುವ ಬದಲು ಸಂಪದದ ಮೂಲಕ ಮಾತು ಚೆನ್ನಾಗಿರುತ್ತದೆ ಎಂದು ಒಳಗೆ ಹೋಗಿ ಶುರು ಹಚ್ಚಿಕೊಂಡೆ. :)
ಶುಭರಾತ್ರಿ.
-ಗಣೇಶ.
ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ೨: ಗ-ಅಣ್ಣ ನಿಮ್ಮ ದಿನಚರಿ ಗಮನಿಸಿ..??
ಈ ದಿನ
ಉಹೂ
ರಾತ್ರಿ-
ಉಹೂ- ಉುೂ---
ಮದ್ಯ ರಾತ್ರಿ ಏನೂ ಸಮಸ್ಯೆ ಆಗಲಿಲ್ಲ, ಮೊದಲೇ ಜಾಗ್ರತೆ ವಹಿಸಿ ಮದ್ಯ ರಾತ್ರಿ ಬೆಳಗಿನ ಗಂಟ ಬಸ್ ಬರೋ ಜಾಗಗಳನ್ನ ಹುಡುಕಿ ಯಶವಂತಪುರ- ಜಯನಗರ- ಕಮಲಾನಗರ ಹುಡುಕಿ ಯಶವಂತಪುರ ಆಯ್ದುಕೊಂಡಿದ್ದೆ...!!
ಕೆಲವೊಮ್ಮೆ ಗ್ರ್ಹಚಾರ- ಭವಿಷ್ಯ(ದಿನ ಭವಿಷ್ಯ) ನಮಗೆ ಕಾಂಗ್ರೆಸ್ಸ್ ಚಿಹ್ನೆ ತೋರಿಸುತ್ತೆ...:()))
ಇವತ್ತು ಆರಾಮವಾಗೇ ೯೦(ಅದಲ್ಲ!!) ನಂಬರ್ ಬಸ್ ನಲ್ಲಿ ಬಂದು ರೂಮ್ ಸೇರಿದೆ....:()))
ಊಟ ಆಯ್ತು
ಇತ್ತೀಚಿನ ಪ್ರತಿಕ್ರಿಯೆಗಳು ಗಮನಿಸಿದರೆ ಗಣೇಶ್ ಅಣ್ಣ ಕಾಣಿಸಿದರು..
ಊಟದ ಮಧ್ಯೆಯೇ ಎಡ ಕೈನಲ್ಲಿ ಮೌಸ್ ಹಿಡಿದು ಟೈಪ್ ಮಾಡ್ತಾ- ಬಲ್ ಗೈನಲಿ ಊಟ ಮಾಡ್ತಾ..
ಪ್ರತಿಕ್ರಿಯಿಸಲು ಶುರು ಹಚ್ಚಿಕೊಂಡೆ...!!!
ಯಾರೂ ನೋಡದ-=ಕಾಣದ-ಕೇಳದ ಬರೀ ಊಹೆಯಲಿ ಕಲ್ಪನೆಯಲಿ ಬರುವ ಗಣೇಶ್ ಅಣ್ಣ ಕೇವಲ ಸಪ್ತಗಿರಿವಾಸಿಗೆ ಕಾಣಿಸುವುದು-ಕೇಳಿಸುವುದು ಅಂದ್ರೆ???
ಅದ್ ಖಂಡಿತ ಅಲ್ಲ....??
ಇನ್ನೂ ಒಂದು ಅಚ್ಚರಿಯ ವಿಚಾರ ಹೇಳುವೆ.....???
ನೀವ್ ನಾ ಬಹು ಸಾರಿ ಎದುರು ಬದುರು ಆಗಿರುವೆವು....
ನನಗೆ ನೀವ್ 'ಅವರೇ' ಅಂತ ಗೊತ್ತಾಗಿದ್ದು ತೀರಾ ಇತ್ತೆಚೆಗೆ-ಆಕಾಸ್ಮಾತ್ತಾಗಿ- ನೀವೇ ಹೇಳಿಕೊಂಡಿದ್ದರಿಂದ...
ನಾ ಅದು ಗೊತ್ತಿದ್ದೂ ......??
ಈ ಅಂಡ್ ಅಂಡ್ ಭಂಡ ಸ್ವಾಮಿಗಳ ಮಹಾಣ ರಹಸ್ಯ -ರಹಸ್ಯವಾಗಿರೋದು ಬೇಡ ಅಂತಾ ಮುಂದಾಲೋಚನೆ ಮಾಡಿ ಜಗಜ್ಜಾಹೀರು ಮಾಡಿದೆ...:()))
ಒಮ್ಮೆ ಈ ೩ ತಿಂಗಳ ನಿಮ್ಮ ದಿನಚರಿ ಗಮನಿಸಿ -
ಭೇಟಿ ಮಾಡಿದವರ ಮುಖ ಚರ್ಯೆ ನೆನಪಿಸಿಕೊಳ್ಳಿ,
ಅವರ ಜೊತೆ ಏನೇನು ಮಾತಾಡಿದಿರಿ ನೆನಪಿಸಿಕೊಳ್ಳಿ...
ಆಗ ನಿಮಗೆ ಗೊತ್ತಾಗುವುದು ಸಪ್ತಗರಿವಾಸಿ ನಿಮ್ಮನ್ನು ಎಲ್ಲಿ-ಯಾವಾಗ -ಹೆಂಗೆ ನೋಡಿದ ಅಂತ...
ಹಾಗಾದ್ರೆ ನಿಮ್ಮ ಫೋಟೋ ಯಾಕೆ ಹಾಕಿಲ್ಲ ಅಂದಿರ?
ಫೋಟೋ ಆಗಲೇ ತೆಗೆದು ಆಗಿದೆ(ನನ್ನ ಮೊಬೈಲ್ ಅಲ್ಲ- ಸ್ನೇಹಿತರಿಗೆ ಹೇಳಿ ತೆಗೆಸಿದ್ದು!!) ಅದನ್ನು ಸೂಕ್ತ ಸಮಯದಲ್ ಹಾಕುವೆ...
ಸೂಕ್ತ ಸಮಯ????
ನಿರೀಕ್ಷಿಸಿ...
ನಿರೀಕ್ಷಿಸಿ...
ನಿರೀಕ್ಷಿಸಿ...
.....!!!
ಈಗ ನೀವ್ ಸಂಪದದಿಂದ ಸೈನ್ ಔಟ್ ಆಗಿ 'ಅತಿಥಿ' ಓದುಗ ಆಗಿ ಎಲ್ಲ ಕಾಮೆಂಟ್ಸ್ ಬರಹ ಓದುವಿರಿ ಅಂತಲೂ ನನಗೆ ಗೊತ್ತು....!!!
(ಅದನ್ನು ನೀವೇ ಹೇಳಿದ್ದು...!!)
ಶುಭ ಮಧ್ಯ ರಾತ್ರಿ....
ಬೆಳಗು...
ನೀವ್ ನಿದ್ದೆ ತಪ್ಪಿಸಿಕೊಳ್ಳಲಾರಿರಿ..
ಅಂತ ಗೊತ್ತು...
ಪ್ರಯತ್ನಿಸಿ...
ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ೨
ಪಾರ್ಥವ್ರೆ ನಾನೂ ಮೊದಲು ತುಂಬಾ ಇಷ್ಟಪಟ್ಟು ನೋಡುತ್ತಿದ್ದ ಆಟ ಕ್ರಿಕೆಟ್ ಆದರೆ ಹಲವಾರು ಕಾರಣಗಳಿಂದ ಅದರ ಬಗ್ಗೆ ಇದ್ದ ಆಸಕ್ತಿ ಈಗ ಕಡಿಮೆಯಾಗಿದೆ.
<ಒಂದು ಪ್ರಶ್ನೆ ನಿಜಕ್ಕು ನೀವು ಐ ಪಿ ಎಲ್ ಅನ್ನು ಕ್ರಿಕೇಟ್ ಎಂದು ಒಪ್ಪಿಕೊಳ್ಳುತ್ತೀರ?> ಖಂಡಿತ ಇಲ್ಲ, ನನಗೂ ಇದರ ಬಗ್ಗೆ ಅಷ್ಟೊಂದು ಒಲವಿಲ್ಲ.
ನಮ್ಮ ಅಕ್ಕನ ಮಗಳು ಮ್ಯಾಚ್ ನೋಡೋದಕ್ಕೆ ಹೋಗಿದ್ದಳು ಜೊತೆಗೆ ಗಣೇಶಣ್ಣನ ಒಂದು ಬ್ಲಾಗ್ ನೋಡಿ ಎಲ್ಲಾ ಮಿಕ್ಸ್ ಮಾಡಿ ಈ ಬ್ಲಾಗ್ ಬರೆದೆ,
ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ೨
ಚಿಕ್ಕು ಬೇಗ ಗಣೇಶಣ್ಣನ ಕರೆದುಕೊ೦ಡು ಹೋಗಿ ಆರ್.ಸಿ.ಬಿ ಗೆ ಒ೦ದು ಮ೦ತ್ರ ಹಾಕಿಸಿ ಆಗಲಾದರೂ ಮ್ಯಾಚ್ ಗೆಲ್ಲುತ್ತಾರೇನೋ ನೋಡೋಣ.
ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ೨
ಆಯ್ತು ಆಯ್ತು ಜಯಂತ್.
ಎಲ್ಲರನ್ನೂ ಕರೆದು ಆಮೇಲೆ ಹೊರಡ್ತೀವಿ :)
ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ೨
ಹೌದು ಜಯಂತ್
ನಿಮ್ಮ ಗಣೇಶಣ್ಣ ಸ್ಟೇಡಿಯಂ ನಲ್ಲಿರುವ ಎಲ್ಲ ಚಿಪ್ಸ್ ಸ್ನಾಕ್ಸ್ ತಂಪುಪಾನಿಯ ಎಲ್ಲವನ್ನು ಅವರ ಮುಂದೆ ಗುಡ್ಡೆ ಹಾಕಿ ತಿನ್ನಲು ಸಿದ್ದವಾಗಿ ಕುಳಿತರೆ
ದಾಂಡಿಗರು ಬ್ಯಾಟ್ ಬೀಸುವದ ಮರೆತು ಇವರತ್ತ ನೋಡುತ್ತ ಔಟಾಗುತ್ತಾರೆ
ಹಾಗೆ
ಚಿಯರ್ ಗರ್ಲ್ಸ್ ಎಂಬ ಬೆಡಗು ಕನ್ಯೆಯರು
ಗಣೇಶರ ...ಬಾಕ ತನದ ಪರಮ ಗಾಂಭೀರ್ಯವನ್ನು ನೋಡುತ್ತ
ತಮ್ಮ ನಾಟ್ಯವನ್ನು ಮರೆತು ಬೇಲೂರ ಶಿಲೆಗಳಾಗುತ್ತಾರೆ
ಇಷ್ಟೆಲ್ಲ ಆದರು ನಿಮ್ಮ ಅರ್ ಸಿ ಬಿ ಮಾತ್ರ ಗೆಲ್ಲಲಾರದು
ಅಲ್ಲಿ ಗೆಲುವು ಯಾರ ಹಸಿವು ಅಲ್ಲ
ಚಿಯರ್ ಜಯಂತ್