ಕಂಪ್ಯೂಟರ್ ಯುಗ‌!!

ಕಂಪ್ಯೂಟರ್ ಯುಗ‌!!

ಗ್ಯಾಸ್ ಟ್ರಬ್‌ಲ್ :
Dear Indane customer, against your refill booking............., cash memo ..................... generated, cylinder shall be delivered shortly. Save fuel for a better tomorrow.
ಈ  sms ನನ್ನ ಮೊಬೈಲ್‌ಗೆ ಬಂದುದು ೨೩ ಜನವರಿಗೆ...(ನಾನು ಬುಕ್ ಮಾಡಿದ್ದು ೧೩ ಜನವರಿಯಂದು) ಈ ದಿನ ೧೩ ಫೆಬ್ರವರಿ. ಇನ್ನೂ ಬಂದಿಲ್ಲ. ಕಂಪ್ಲೈಂಟ್ ಮಾಡೋಣ ಎಂದರೆ ಗ್ಯಾಸ್ ಸರಬರಾಜು ಕಂಪನಿಯವರು ಫೋನೇ ಎತ್ತುತ್ತಿಲ್ಲ. ೮೯೭೦೦೨೪೩೬೫ರ ದೂರು ಸಲ್ಲಿಸಿದರೆ-ಬೇರೆ ಒಂದು ನಂಬರ್ ಕೊಡುವರು ಅಲ್ಲಿಗೆ ದೂರು ಸಲ್ಲಿಸಿದಾಗ‌ ಮತ್ತೆ.. ಕಂ.ನಂ.....
ಗ್ಯಾಸ್ ಟ್ರಬ್‌ಲ್‌ನಿಂದಾಗಿ ಸಲಡ್, ಜ್ಯೂಸ್ ಡಯಟ್‌ನಲ್ಲಿದ್ದೇವೆ.... :(

***********************
ಡಿಡಿ ಟ್ರಬ್‌ಲ್ :
ಅರ್ಜೆಂಟ್ ಡಿಡಿ ಬೇಕಿತ್ತು. ಬ್ಯಾಂಕ್‌ಗೆ ಹೋಗಿ ಫಾರ್ಮ್, ಚಕ್ ಎಲ್ಲಾ ಬರೆದು ಡಿಡಿ ಕೌಂಟರ್‌ಗೆ ಹೋದರೆ ಕಂಪ್ಯೂಟರ್ ವರ್ಕ್ ಮಾಡುತ್ತಿಲ್ಲ.
 "ರಿಪೇರಿಯವರು ಬರಬೇಕಷ್ಟೆ.."
"ಮ್ಯಾಡಂ, ಹಿಂದಿನಂತೆ ಕೈಯಲ್ಲೇ ಬರೆದು ಕೊಡಬಹುದಲ್ವಾ?"
"ಸಾಧ್ಯವೇ ಇಲ್ಲ.. ಅಷ್ಟು ಅರ್ಜೆಂಟ್ ಇದ್ದರೆ ಬೇರೆ ಬ್ಯಾಂಕ್‌ಗೆ ಹೋಗ್ರೀ"

*******************
ಅಟಲ್‌ಜಿ "ಜನಸ್ನೇಹಿ" ಕೇಂದ್ರ : ( http://www.newindianexpress.com/states/karnataka/article1389896.ece#.Uv0... )
ರೆಸಿಡೆನ್ಷಿಯಲ್ ಸರ್ಟಿಫಿಕೇಟ್ ಬೇಕಿತ್ತು. ಹುಟ್ಟಿನಿಂದ ಕರ್ನಾಟಕದಲ್ಲೇ ಇದ್ದೇವೆ. birth certificate ನಿಂದ ಹಿಡಿದು sslc, puc, ಡಿಗ್ರಿ ಎಲ್ಲಾ ಸರ್ಟಿಫಿಕೇಟು ತೋರಿಸಿದರೂ, "ಅಪ್ಲಿಕೇಶನ್ ಫಾರ್ಮ್‌ನಲ್ಲೇ ಇರುವ ರೆಸಿಡೆನ್ಷಿಯಲ್ ಸರ್ಟಿಫಿಕೇಟ್‌"ಗೆ ಸೈನ್ ಹಾಕಿ ಕೊಡುವುದಿಲ್ಲ ಎಂದರು! "ಕಂಪ್ಯೂಟರ್‌ಗೇ ಫೀಡ್ ಮಾಡಬೇಕು. ಏಳು ದಿನ ಬಿಟ್ಟು ಬಂದು ತೆಗೆದುಕೊಂಡು ಹೋಗಿ" ಎಂದರು. ಅದಕ್ಕೂ ಮೊದಲು ನೋಟರಿಯ ಬಳಿಯಿಂದ ಲೆಟರ್ ತನ್ನಿ! ಎಲ್ಲಾ ತಂದು ಕೊಟ್ಟು ಏಳು ದಿನ ಬಿಟ್ಟು ಹೋದಾಗ ಆಶ್ಚರ್ಯ! ಮಿನಿಮಮ್ ಹತ್ತು ವರ್ಷ ವಾಸವಿರುವ ಸರ್ಟಿಫಿಕೇಟ್ ಬೇಕಾದಲ್ಲಿ "ಒಂದು" ವರ್ಷ ವಾಸದ ಸರ್ಟಿಫಿಕೇಟ್ ಕೊಟ್ಟರು!!

 

Rating
No votes yet

Comments

Submitted by nageshamysore Fri, 02/14/2014 - 02:22

ಗಣೇಶ್ ಜಿ, ನಿಮಗೆ ಸ್ವಲ್ಪ ಅವಸರ ಜಾಸ್ತಿ - ಸ್ವಲ್ಪ ತಾಳ್ಮೆಯಿಂದಿರಿ; ಈಗ ಇನ್ನೇನು ಹೊಸತಿನ ಅವಿಷ್ಕಾರ , ಆಗಮನ ಆಗುವುದರಲ್ಲಿದೆ - 'ಇಂಟರ್ನೆಟ್ ಆಫ್ ಥಿಂಗ್ಸ್' ಅಂತ (ಐಓಟಿ). ಆಗ ನೀವು ಗ್ಯಾಸು ಮುಗಿದಾಗ ಬುಕ್ ಮಾಡಲೆಬೇಕಿಲ್ಲ. ಸಿಲಿಂಡರೆ ತನಗೆ ತಾನೆ ಗ್ಯಾಸ್ ಕಂಪನಿಗೆ ಸುದ್ಧಿ ಕಳಿಸಿ ಬುಕ್ ಮಾಡಿಕೊಳ್ಳುತ್ತದೆ! ಕಾರಿನ ಪಾರ್ಟೊಂದು ರಿಪೇರಿಗೆ ಬಂದಿದ್ದರೆ, ತಂತಾನೆ ವಾರ್ನಿಂಗ್ ಕೊಡುತ್ತದೆ (ಬದಲಾಯಿಸಲಿಕ್ಕೆ ಇತ್ಯಾದಿ). ಆದರೆ ನಮ್ಮೂರುಗಳಲ್ಲಿ ಸಿಲಿಂಡರು ನಮಗೇ ಬುಕ್ಕಾಗುವುದೊ, ಪಕ್ಕದ ಮನೆಯವರಿಗೊ ಹೇಳುವುದು ಕಷ್ಟ!  ಜತೆಗೆ ಮನೆಗೆ ಕಾಲಿಡುತ್ತಿದ್ದ ಹಾಗೆ ಬುಕ್ ಮಾಡಿಕೊಳ್ಳುವುದೊ, ಖಾಲಿಯಾದಮೇಲೆ ಬುಕ್ ಮಾಡಿಕೊಳ್ಳುವುದೊ ಅನ್ನುವುದು ಮತ್ತೊಂದು ಯಕ್ಷಪ್ರಶ್ನೆ (ಲೀಡ್ ಟೈಮ್ ಪರಿಗಣಿಸಬೇಕಲ್ಲಾ?)
ಸಿಂಗಪುರದಲ್ಲಿ ಗ್ಯಾಸ್ ಎರಡು ತರದಲ್ಲಿ ಲಭ್ಯ. ಒಂದು ನೀರಿನ ಹಾಗೆ ಪೈಪಲ್ಲಿ - ಗೌರ್ನಮೆಂಟುನಿಂದ 24 X 7. ತಿಂಗಳಿಗೊಮ್ಮೆ ನೀರು, ಕರೆಂಟು, ಗ್ಯಾಸು ಮೂರು ಸೇರಿ ಒಂದು ಬಿಲ್ ಬರುತ್ತದೆ. ಒಟ್ಟಿಗೆ ಒಮ್ಮೆಗೆ ಕಟ್ಟಿದರೆ ಸಾಕು (ಪಬ್ಲಿಕ್ ಯುಟಿಲಿಟಿ ಬೋರ್ಡ್ ಅಂತ - ನೀರಿಗೆ, ಕರೆಂಟಿಗೆ, ಗ್ಯಾಸಿಗೆ ಅಂತ ಬೇರೆ ಬೇರೆ ಆಫೀಸುಗಳಿಲ್ಲ). ಇನ್ನು ಗ್ಯಾಸು ಪೈಪುಗಳಿಲ್ಲದ ಕಡೆ ಸಿಲಿಂಡರು ಸಿಗುತ್ತದೆ - ಪೋನು ಮಾಡಿದ ಅರ್ಧ ದಿನದೊಳಗೆ ಸರಬರಾಜು ಮಾಡುತ್ತೇವೆನ್ನುತ್ತಾರೆ. ಆದರೆ ಮುಕ್ಕಾಲು ಪಾಲು ಒಂದೆರಡು ಗಂಟೆಯೊಳಗೆ ತಂದು ಹಾಕಿ ಬಿಡುತ್ತದೆ ಅವರ ಸಂಚಾರಿ ವ್ಯಾನು (ವರ್ಕಿಂಗ್ ಅವರ್ಸ್ನಲ್ಲಿ ಬುಕ್ ಮಾಡಿದರೆ).
ಸರ್ವೀಸ್ (ಸೇವಾ) ವಿಧಾನ, ವಿಭಾಗಗಳಲ್ಲಿ ನಾವೀನ್ನು ಬಹಳ ಬಹಳ ಹಿಂದೆಯೆ. ಉತ್ತಮಗೊಳಿಸಿಕೊಳ್ಳಲು ಸಾಕಷ್ಟು ಅವಕಾಶ ಜಾಗೆ ಖಾಲಿಯಿದೆ :-)

Submitted by ಗಣೇಶ Sun, 02/16/2014 - 23:59

In reply to by nageshamysore

:) :) ನಾಗೇಶರೆ, ಸಿಂಗಾಪುರದಲ್ಲಿ ಬಾಳುವುದು ನಮ್ಮಂತಹವರಿಗೆ ಬಹಳ‌ ಕಷ್ಟ‌! ಗ್ಯಾಸ್ ಟ್ರಬ್ಲ್ ಇಲ್ಲ‌, ನೀರು ಟ್ರಬ್ಲ್ ಇಲ್ಲ‌, ಕರೆಂಟು ಟ್ರಬ್ಲ್ ಇಲ್ಲ‌...ಹಾಗಿದ್ದರೆ ಒಬ್ಬರಿಗೊಬ್ಬರು ಮಾತನಾಡಲು ವಿಷಯವೇನಿದೆ ಅಲ್ಲಿ!?:)
ತಿಂಗಳಾದರೂ ಬಾರದ‌ ಗ್ಯಾಸ್..ಸಂಪದದಲ್ಲಿ ದೂರಿದ‌ ಮಾರನೇ ದಿನವೇ ಬಂತು!

Submitted by kavinagaraj Sat, 02/15/2014 - 08:24

ಕಂಪ್ಯೂಟರ್ ಯುಗದಲ್ಲೂ ಅಡ್ಡದಾರಿಗಳು ಇರುತ್ತವೆ. ನಿಮಗೆ ಗೊತ್ತಿಲ್ಲದ್ದೇನಲ್ಲ!! :)

Submitted by ಗಣೇಶ Mon, 02/17/2014 - 00:04

In reply to by kavinagaraj

ಕವಿನಾಗರಾಜರೆ, "ಅಟಲ್ ಜಿ" "ಜನಸ್ನೇಹಿ" ಪದಗಳು ನನಗೆ ಮೋಸ‌ ಮಾಡಿದವು. ನಂತರ‌ ಸರಿದಾರಿಯಲ್ಲಿ ಎರಡೇ ಗಂಟೆಯಲ್ಲಿ ಸಹಿ ಹಾಕಿದ‌ ಪತ್ರ‌ ಸಿಕ್ಕಿತು. :(