ಮದುವೆ ಸಮಯದಲ್ಲಿ ಹೊಲಿಸಿದ "ಕರಿ ಕೋಟು" ನಂತರ ಯಾವುದೋ ಕಪಾಟಿನ ಮೂಲೆಯಲ್ಲಿ ಭದ್ರವಾಗಿ ಇತ್ತು. ಕಳೆದ ತಿಂಗಳು ಮನೆ ಶಿಫ್ಟ್ ಮಾಡುವಾಗ ಸಿಕ್ಕಿತು. ಸಾವಿರಾರು ರೂಪಾಯಿ ಖರ್ಚು ಮಾಡಿ ಹೊಲಿಸಿದ ಕೋಟನ್ನು ಮೂಲೆಯಲ್ಲಿ ಇಟ್ಟದ್ದಕ್ಕೆ ಮನೆಯಾಕೆಗೆ ಸಿಕ್ಕಾಪಟ್ಟೆ ಬೈದು (ಮನಸ್ಸಲ್ಲೇ), ನೀಟಾಗಿ ಇಸ್ತ್ರಿ ಮಾಡಿ ರೆಡಿ ಮಾಡಿ ಇಟ್ಟಿದ್ದೆ. ಈ ದಿನ ಬೆಳಗ್ಗೆ ಹಾಕಿಕೊಂಡು ಟ್ರಿಮ್ಮಾಗಿ ಆಫೀಸಿಗೆ ಹೊರಟೆನು.
ಆಶ್ಚರ್ಯ!
ಎದುರು ಸಿಕ್ಕವರೆಲ್ಲಾ ನಮಸ್ಕಾರ ಮಾಡುತ್ತಿದ್ದರು. ನನ್ನ ಲಟಾರಿ ಸ್ಕೂಟರ್‌ಗೆ ಭಾರಿ ಭಾರಿ ಕಾರಿನವರೇ ಸೈಡು ಕೊಟ್ಟು ಮುಂದೆ ಹೋಗಲು ಬಿಡುತ್ತಿದ್ದರು.
ಮಂತ್ರಿಗಳ ಕಾರು! ... ರಿವರ್ಸ್ ಸಾಂಗ್ ಹೇಳುತ್ತಾ ಹಿಂದೆ ಹೋಯಿತು!
ಸಿಗ್ನಲ್‌ನಲ್ಲಿ ನಿಂತಿದ್ದಾಗ, ಎಲ್ಲರ ಮುಗುಳ್ನಗೆ, ಸಲ್ಯೂಟ್, ಸಲಾಮು!
ಒಬ್ಬಾತ-"ಸರ್, ನೀವು ಯಾವ ದಾರಿಯಲ್ಲಿ ಕೋರ್ಟಿಗೆ ಹೋಗುತ್ತೀರಿ" ಅಂದ. "ಯಾವ ಕೋರ್ಟು?" ಅಂದೆ ನಾನು. ಆತ "ನೀವು ವಕೀಲರಲ್ಲವಾ?" ಅಂದಾಗಲೇ ಈ ಕರೀ ಕೋಟಿನ ಮಹತ್ವ ಗೊತ್ತಾಯಿತು. ಹೀಗೋ ಕತೆ, ಸ್ವಲ್ಪ ಆಟವಾಡಿಸೋಣ ಎಂದು, ಸ್ಕೂಟರ್ ಅಲ್ಲೇ ಸೈಡ್ ಸ್ಟ್ಯಾಂಡ್ ಹಾಕಿ ನಿಲ್ಲಿಸಿ, "ಏನಲೇ? ನಾನು ವಕೀಲನಲ್ಲವಾ? ಕಣ್ಣಿಗೆ ಪರೆ ಬಂದಿದ್ಯಾ .., ಈ ಕರಿಕೋಟು ಕಣ್ಣಿಗೆ ಕಾಣಿಸಲಿಲ್ವಾ?" ಎಂದು ಎರಡು ಬಾರಿಸಿದೆ. "ಸರ್ ದಮ್ಮಯ್ಯ, ಹಾಗೆ ಕೇಳಿದ್ದಲ್ಲಾ.. ನಾನು ನೀವು ಹೋಗುವ ಹಾದಿ ಬಿಟ್ಟು ಬೇರೆ ರಸ್ತೆಯಲ್ಲಿ ಹೋಗಲು ಕೇಳಿದ್ದು..ದಮ್ಮಯ್ಯ ಹೊಡಿಬ್ಯಾಡಿ ಸರ್. ಇನ್ಮೇಲೆ ಕೇಳೊಲ್ಲ" ಅಂದ. ಅಯ್ಯೋ ಪಾಪ ಅನ್ನಿಸಿದರೂ ಇನ್ನೆರಡು ಬಾರಿಸಿ, ತಿರುಗಿ ನೋಡುತ್ತೇನೆ, ಟ್ರಾಫಿಕ್ ಪೋಲಿಸ್ ಕೈಮುಗಿದು ನಿಂತಿದ್ದಾನೆ!
"ಏನೋ..ಫೈನ್ ಕಟ್ಟಬೇಕಾ?" "ಬೇಡ ಸರ್, ನೀವು ಹೋಗಿ ಸರ್. ಅವನನ್ನ ನಾನು ವಿಚಾರಿಸಿಕೊಳ್ಳುತ್ತೇನೆ" ಅಂದ. " ಎಷ್ಟು ಸಲ ನನಗೆ ಫೈನ್ ಹಾಕಿದ್ದಿ ..?" ಹೆಲ್ಮೆಟ್ ಅನ್ನು ದೂರ ಎಸೆದು(೩೦ ವರ್ಷದಿಂದ ಹೆಲ್ಮೆಟ್ ಹಾಕಿ ಹಾಕಿ ಸಾಕಾಗಿ ಹೋಗಿತ್ತು), " ಈಗ ಹಾಕೋ ಫೈನ್" ಅಂದೆ. ಓಡಿ ಹೋಗಿ ಹೆಲ್ಮೆಟ್ ತಂದು ನನಗೆ ಕೊಟ್ಟು " ಸಾರಿ ಸರ್, ಕ್ಷಮಿಸಿ ಸಾರ್, ತಪ್ಪಾಯ್ತು ಇನ್ಮೇಲೆ ದಂಡ ಹಾಕೊಲ್ಲಾ" ಎಂದು ಉದ್ದಂಡ ನಮಸ್ಕರಿಸಿದ. ಹೆಲ್ಮೆಟ್ ಪುನಃ ತಂದು ಕೊಟ್ಟ ಕೋಪಕ್ಕೆ ಅದರಿಂದಲೇ ಎರಡು ಬಾರಿಸಿ, ಸುತ್ತಲೂ ನೋಡಿದೆ.
ನನ್ನ ಸ್ಕೂಟರ್ ಸ್ಟಾರ್ಟ್ ಆಗುವುದು ಸ್ವಲ್ಪ ತಡವಾದರೆ, "ಪೇಂ ಪೇಂ.." "ಪೋಂ..ಪೋಂ" ಎಂದು ಹಾರ್ನ್ ಬಾರಿಸಿ, ಸಹಸ್ರನಾಮ ಮಾಡುವ ವಾಹನ ಸವಾರರು ಈವಾಗ ಸೈಲೆಂಟಾಗಿ ನೋಡುತ್ತಿದ್ದರು.
ಆಗ ಸುಮಾರು ೧೦೦-೧೫೦ ಜನ ಹೆಲ್ಮೆಟ್ ಧರಿಸಿ, ಲಾಠಿ ಬೀಸುತ್ತಾ ಬಂದ ಪೋಲೀಸರು, ನನಗೆ ತೊಂದರೆ ಕೊಟ್ಟದ್ದಕ್ಕೆ ಟ್ರಾಫಿಕ್‌ನವನನ್ನು ಅರೆಸ್ಟ್ ಮಾಡಿ, ಉಳಿದ ವಾಹನ ಸವಾರರಿಗೆ ಲಾಠೀ ಚಾರ್ಜ್ ಮಾಡಿ, ನನಗೆ ಹೋಗಲು ದಾರಿ ಮಾಡಿ ಕೊಟ್ಟರು. ಆ ಕೂಡಲೇ ಹೋದರೆ ಹೇಗೆ? ಕರಿಕೋಟಿನ ಮರ್ಯಾದೆ ಪ್ರಶ್ನೆ.. ಸ್ಕೂಟರ್ ಸ್ಟಾರ್ಟ್ ಮಾಡಿ, ಒಂದು ಕೈಯಲ್ಲಿ ಸ್ಕೂಟರ್ ಬಿಡುತ್ತಾ, ಇನ್ನೊಂದು ಕೈಯಿಂದ ಮೊಬೈಲ್ ತೆಗೆದು ಮನೆಯಾಕೆಗೆ ರಿಂಗ್ ಮಾಡಿ ಅದೇ ಸಿಗ್ನಲ್‌ಗೆ ಸುತ್ತು ಹಾಕುತ್ತಿದ್ದೆ. ೧೦೦+ ಪೋಲೀಸರು ನನ್ನ ಹಿಂದೆ ಓಡುತ್ತಾ ಸುತ್ತು ಬರುತ್ತಿದ್ದರು.. ಮನೆಯಾಕೆ ಫೋನ್ ಎತ್ತಿದಾಗ ಅಂದೆ- "ಏನಂದೀ ನೀನು.. ಕರಿಕೋಟು ಭಿಕ್ಷುಕರಿಗೆ ಕೊಟ್ಟರೂ ತೆಗೆದುಕೊಳ್ಳುವುದಿಲ್ಲಾಂತಲ್ವಾ? ಟಿ.ವಿ. ಆನ್ ಮಾಡಿ ನ್ಯೂಸ್ ಚಾನಲ್ ನೋಡು.. ನಿನಗೇ ಗೊತ್ತಾಗುತ್ತೆ ಕರಿಕೋಟಿನ ಮಹತ್ವ"
ಆಕೆ ಏನಂದ್ಲು ಗೊತ್ತಾ........
............
"ಆ ಪರ್ಕಟ್ ಕೋಟ್ ಎದುರು ನಿಂತು ಏನ್ರೀ ಗೊಣಗುತ್ತಿದ್ದೀರಿ? ಆಫೀಸಿಗೆ ಲೇಟಾಯ್ತು..ಬೇಗ ಹೊರಡಿ"









ಪ್ರತಿಕ್ರಿಯೆಗಳು
ಉ: ಕರೀಕೋಟು
ನಿಮ್ಮ ಶ್ರೀಮತಿಯ ಪಂಚ್ ಆ ಕರಿಕೋಟಿನವರ ಪಂಚಿಗಿಂತಲೂ ಸೂಪರ್!!!
ಉ: ಕರೀಕೋಟು
:)
ಇನ್ನೂ ಕೆಲವರಿಗೆ ಬಾರಿಸಲು ಬಾಕಿಯಿತ್ತು. :)
ಏನು ಮಾಡುವುದು ಕವಿನಾಗರಾಜರೆ.. ಶ್ರೀಮತಿಯವರ ಪಂಚ್‌ನಿಂದ ನನ್ನ ಕನಸೆಲ್ಲಾ ಪಂಚರ್ ಆಯಿತು.
-ಗಣೇಶ.
ಉ: ಕರೀಕೋಟು
ಗಣೇಶಣ್ಣ ಶೀರ್ಷಿಕೆ ನೋಡಿ ಇದು ಮೊನ್ನೆ ನಡೆದ ಘಟನೆಯ ಕುರಿತಾದ ಲೇಖನ್ ಎ೦ದುಕೊ೦ಡಿದ್ದೆ. ಆದರೆ ಹಾಸ್ಯ ಲೇಪನ ಕೊಟ್ಟು ಚೆನ್ನಾಗಿ ಬರಿದಿದ್ದೀರ.
ಉ: ಕರೀಕೋಟು
ಮೊನ್ನಿನ ಘಟನೆ ನಡೆಯಬೇಕಾದದ್ದೇ.
ಅನ್ನ ನೀಡುವ ರೈತನನ್ನ ರಾಜಕಾರಣಿಗಳ ಕಪಿಮುಷ್ಠಿಯಲ್ಲಿರುವ ಪೋಲೀಸರು ಓಡಿಸಿ ಓಡಿಸಿ ಹೊಡೆಯಲಿಲ್ಲವಾ?
ಈಗ ವಕೀಲರು(ಒರಿಜಿನಲ್ಲೋ ಅಥವಾ ವಕೀಲರ ವೇಷದಲ್ಲಿರುವ ಗೂಂಡಾಗಳೋ) ಪೋಲೀಸರನ್ನು ಅಟ್ಟಾಡಿಸಿ ಹೊಡೆದರು.
ಹೆಚ್ಚಿನ ರಾಜಕಾರಣಿಗಳು ಕೋರ್ಟು ಕೇಸುಗಳಿಂದಾಗಿ ಈಗ ವಕೀಲರ ಕಿಸೆಯಲ್ಲಿದ್ದಾರೆ. ವಕೀಲರನ್ನು ಪೋಲೀಸರು ಏನೂ ಮಾಡುವ ಹಾಗಿಲ್ಲ. ಮುಂದೊಂದು ದಿನ ಇದೇ ರಾಜಕಾರಣಿಗಳೂ ವಕೀಲರ ಕೈಯಿಂದ ಪೆಟ್ಟು ತಿನ್ನಲು ಬಾಕಿ ಇದೆ.
ನಂತರ ಸಾರ್ವಜನಿಕರ ಒದೆತ ಇವರೆಲ್ಲರಿಗೆ ಕಾದಿದೆ. ಬೇಗ ಎಲ್ಲರೂ ಸುಧಾರಿಸಿ ಈ ಪರಿಸ್ಥಿತಿ ಬರದಿರಲಿ ಎಂಬ ಹಾರೈಕೆ.
-ಗಣೇಶ.
ಉ: ಕರೀಕೋಟು
ಹಹಹಹಹಾ...........ಸಕತ್ತಾಗಿದೆ ಕಣ್ರೀ ಗನೇ’ಸಣ್ಣ’! ನಿಮ್ಮ ಕರಿಕೋಟಿನ ಮಹತ್ವ!! :-)
ಉ: ಕರೀಕೋಟು
ಧನ್ಯವಾದಗಳು ಮಂಜಣ್ಣ,
ಗಣೇಶ.
ಉ: ಕರೀಕೋಟು
ಗಣೇಶ್
ಕರಿಕೋಟ್ ಧಾರಿಗಳ ಪುಂಡಾಟಿಕೆಯ ಸ್ಫೂರ್ತಿ ಚೆನ್ನಾಗಿದೆ. ಇಂದಿನ ಹಾಸ್ಯ ನಾಳೆಯ ವಾಸ್ತವವಾದರೂ ಆಶ್ಚರ್ಯವಿಲ್ಲ. ಹಾಗಾಗದಿರಲಿ.
ಘಟನೆಗೆ ಒಳ್ಳೆ ಹಾಸ್ಯಲೇಪ ಲೇಖನ ಚೆನ್ನಾಗಿದೆ
ಉ: ಕರೀಕೋಟು
ಪದ್ಮ ಅವರೆ,
ಹಾಗಾಗದಿರಲಿ ಎಂದು ನನ್ನದೂ ಆಶಯ.
ಧನ್ಯವಾದಗಳು.
-ಗಣೇಶ.
ಉ: ಕರೀಕೋಟು
ಗಣೇಶರೆ ಎಡ್ಡೆ ಉಂಡು ಮಾರ್ರೆ ಈರ್ನಾ ತೆಲಿಕೆದ ಬರ್ಸೋಲು!!!
'ಲಟಾರಿ' 'ಪರ್ಕಟ್' ಶಬ್ದ ಓದಿ ಇನ್ನೂ ಹೆಚ್ಚು ನಗೆ ಬಂತು :)
ಉ: ಕರೀಕೋಟು
ಸೆಕೆಗ್ ಒಂತೆ ತಂಪಾಂಡತ್ತಾ?
ಧನ್ಯವಾದಗಳು ಕಾಮತ್ ಅವರೆ.
-ಗಣೇಶ.
ಉ: ಕರೀಕೋಟು
ಗಣೇಶ್ ಅಣ್ಣ
ನಾ ಈ ಬರಹದ ಶೀರ್ಷಿಕೆ ಓದಿ,
ನೀವು ನಿಮ್ಮ 'ಮದುವೆಯಲಿ' ಹಾಕಿದ್ದ ಕೋಟು ಕುರಿತು
ಹೇಳ ಹೊರಟಿರಿ ಅಂದುಕೊಂಡು ಪೂರ್ತಿ ಬರಹ ಓದಿ !:())))
ಅಮೋಘ ೨ ಸಾರಿ 'ನಾವ್ ಮಾಡಿದ್ದೆ ಸ್ಸರಿ!!
ಸಿನೆಮಾನ ನಡು ರೋಡಲ್ಲಿ ತೆಗೆದ ಆ ಕರಿ ಕೋಟಿನವರ ಕುರಿತು ಹಾಸ್ಸ್ಸ್ಯಾತ್ಮಕವಾಗಿ ಒಳ್ಳೇ ಬರಹ ಬರ್ದಿದೀರಾ..
---------------------------------------------------------------------------
ಆ ಕೂಡಲೇ ಹೋದರೆ ಹೇಗೆ? ಕರಿಕೋಟಿನ ಮರ್ಯಾದೆ ಪ್ರಶ್ನೆ :((((
--------------------------------------------------------------------------
ಪ್ರತಿಕ್ರಿಯೆಗಳು ಮುದ ನೀಡಿದವು ......
ಉ: ಕರೀಕೋಟು
ಹಾಸ್ಯಲೇಖನ ಸೂಪರ್...
ಉ: ಕರೀಕೋಟು
ಧನ್ಯವಾದಗಳು ಪ್ರೇಮಾ S..Bhat,
-ಗಣೇಶ
ಉ: ಕರೀಕೋಟು
ಸಪ್ತಗಿರಿವಾಸಿಯವರೆ,
>>>ಅಮೋಘ ೨ ಸಾರಿ 'ನಾವ್ ಮಾಡಿದ್ದೆ ಸ್ಸರಿ!!
ಸಿನೆಮಾನ ನಡು ರೋಡಲ್ಲಿ ತೆಗೆದ ಆ ಕರಿ ಕೋಟಿನವರ ಕುರಿ..
-ಈಗಲೂ ಅವರಿಗೆ ಪಶ್ಚಾತಾಪವಿಲ್ಲ. ತಾವು ಮಾಡಿದ್ದೆ ಸರಿ ಎನ್ನುತ್ತಿದ್ದಾರೆ. ಅವರು ಹಂಚುತ್ತಿರುವ ಪೋಲೀಸರ ದೌರ್ಜನ್ಯದ ಸಿಡಿ ನೋಡಲು ಸಿಕ್ಕಿತು.
ಮಾಧ್ಯಮದವರು,ಲಾಯರುಗಳು, ಪೋಲೀಸರು- ಎಲ್ಲರೂ ಅವರವರ ತಪ್ಪುಗಳನ್ನು ಮುಚ್ಚಿಟ್ಟು ಉಳಿದವರೆಡೆಗೆ ಬೊಟ್ಟು ಮಾಡುತ್ತಿದ್ದಾರೆ.
>>>ನೀವು ನಿಮ್ಮ 'ಮದುವೆಯಲಿ' ಹಾಕಿದ್ದ ಕೋಟು ಕುರಿತು..
ಮದುವೆಯಲ್ಲಿ ಷರ್ಟ್ ಸಹ ಬಿಚ್ಚಿರಬೇಕು, ಇನ್ನು ಕೋಟು ಎಲ್ಲಿ? ರಿಸೆಪ್ಷನ್‌ಗೆ ಬರ್ಮಾ ಬಜಾರ್ ಎದುರು ರಸ್ತೆ ಬದಿಯಲ್ಲಿ ತೆಗೆದುಕೊಂಡ ಷರ್ಟ್ ಹಾಕಿದ್ದೆ. ಸಿಂಪ್‌ಲ್ ಆಗಿ ಇದ್ದೆ.
-ಗಣೇಶ.
ಉ: ಕರೀಕೋಟು
ಅಯ್ಯಯ್ಯೊ ಮೊದಲೆ ಹೇಳಿದ್ರೆ ...
ನನ್ನ ಹತ್ತಿರ ನಿಮ್ಮ ಕೋಟಿನಂತೆದೆ ಒಂದು ಕರಿ ಕೋಟು ಇತ್ತು, ನಾನು ನೀವು ನಿಮ್ಮ ಪರ್ಕಟ್ ಸ್ಕೂಟರ್ ನಲ್ಲಿ
ಡಬ್ಬಲ್ ರೈಡಿಂಗ್ ಹೋಗಿದ್ರೆ ಚೆನ್ನಾಗಿರೋದು.
ನನಗು...
...
..
..
ಕೆಲವರನ್ನು ತದಕಬೇಕು ಅಂತ ಆಸೆ ಇದೆ ನನ್ನ ನಿಮ್ಮ ಕರಿಕೋಟಿನ ಸಹಾಯದಿಂದ ಸಾದಿಸಬಹುದು.
= ಪಾರ್ಥಸಾರಥಿ
ಉ: ಕರೀಕೋಟು
ಹ್ಹ..ಹ್ಹ.. :)
ಯೇ ಕಾಲಿ ಕಾಲಿ ಕೋಟು.. ಹಮ್ ನಹೀ ಚೋಡೆಂಗೇ..ಅನ್ನುತ್ತಾ ಪರ್ಕಟ್ ಸ್ಕೂಟರ್‌ನಲ್ಲಿ ಹೋದರೆ ಲಾರೆಲ್-ಹಾರ್ಡಿ ತರಹ...
ಸಿಗ್ನಲ್ ಆ ಬದಿ ನೀವು ಒದೆಯುವುದು-ಈ ಬದಿಯಲ್ಲಿ ನಾನು..
ಈಗಲೂ ತಡವಾಗಲಿಲ್ಲ. ಮುಂಜಾನೆ ಕೆಲಸಕ್ಕೆ ಹೊರಡುವ ಮೊದಲು ನಿಮ್ಮ ಕರಿಕೋಟಿನ ಎದುರು ನಿಂತು ಅಲೋಚಿಸಿ..
ಬೇಗ ಹೊರಡಿ ಎಂದು ಮನೆಯಾಕೆ ತ.....ತನಕ :)
-ಗಣೇಶ.
ಉ: ಕರೀಕೋಟು
ಗಣೇಶರೆ
ಹಳೆ ಕೋಟು ಜೇಬಲ್ಲಿ ಒಮ್ಮೆ ನೋಡಿ ಕೊಳ್ಳಿ ಮಾರಾಯರೇ
ಎಂತದಾರು ಹಳೆದು sikkItu
ದುಡ್ಡು ತಾಯಿತ ಮಿನಿ.....
ಉ: ಕರೀಕೋಟು
ಗೋಪೀನಾಥರೆ,
ಆಸೆ ಹುಟ್ಟಿಸಿದಿರಿ.. ನೋಡಿದರೆ..
ಕೋಟು ಜೇಬಿಂದ ನೇರ ಪ್ಯಾಂಟ್ ಜೇಬ್ಗೆ ಕೈ ಹೋಯಿತು. :(
-ಗಣೇಶ.
ಉ: ಕರೀಕೋಟು
ಗಣೇಶ್ ಅವರೇ,
ಇನ್ ಮೇಲೆ ಕರಿ ಕೋಟ್ ಹಾಕಿಕೊಂಡು ಹೋದ್ರೆ ಫುಲ್ ಸೇಫ್ ಅಲ್ವ...
ಒಳ್ಳೆಯ ಬರಹ,ಆದರೆ ವಕೀಲರನ್ನು ನೋಡಿದರೆ ಇವಾಗ ಅಸಹ್ಯ ಆಗುತೆ,ಎಂಥ ಕೀಳು ಮಟ್ಟಕ್ಕೆ ಇಳಿದಿದ್ದಾರೆ ಎಂದು
ಉ: ಕರೀಕೋಟು
ಅಂಬಿಕಾ ಪ್ರವೀಣ್ ಅವರೆ,
ಖಾಕಿ,ಖಾದಿ,ಖಾವಿಗಳ ಜತೆ ಈ ಕರಿಕೋಟು ಸಹ ಅಸಹ್ಯ..ಆದರೆ ಸಹಿಸಿಕೊಳ್ಳಬೇಕು. ಇವರೆಲ್ಲಾ ಅನಿವಾರ್ಯ. :(
-ಗಣೇಶ.
ಉ: ಕರೀಕೋಟು
ಸೂಪರ್ ವಿಡಂಬನೆ!
ಉ: ಕರೀಕೋಟು
ಧನ್ಯವಾದಗಳು ಶ್ರೀಕರ್,
-ಗಣೇಶ.
ಉ: ಕರೀಕೋಟು
ಕರಿಕೋಟಿನಿಂದ ಇಷ್ಟೆಲ್ಲ ಅನುಕೂಲ ಇದೆ ಅಂತ ಗೊತ್ತಿರಲಿಲ್ಲ ಇವತ್ತೆ ನಾನು ಹುಡಿಕಿ ನೋಡ್ತಿನಿ ಯಾವುದಾದರು ಹಳೆ ಕೋಟ್ ಸಿಗುತ್ತಾ ಅಂತ (ನಮ್ಮ ತಂದೆ ಕಾಲದ್ದು ) ಆದರೆ ಒಂದು ಸಮಸ್ಯೆ ಏನು ಅಂದರೆ ಹಳೆ ಸ್ಕೂಟರ್ ಇಲ್ಲ ಅದನ್ನು ನಿಮ್ಮ ಹತ್ರನೆ ಖರೀದಿ ಮಾಡಬೇಕು (ನೀವು ಕೊಟ್ಟರೆ) . ವಾಸ್ತವತೆ ಬಗ್ಗೆ ಒಳ್ಳೆ ಹಾಸ್ಯ ಬರಹ ಗಣೇಶ್ ರವರೇ.
....ಸತೀಶ್
ಉ: ಕರೀಕೋಟು
ಸತೀಶ್ ಅವರೆ,
ನೀವು ಕೇಳಿದಾಗ ಆಗುವುದಿಲ್ಲ ಎನ್ನಲು ಮನಸ್ಸಿಲ್ಲ. ಸದ್ಯಕ್ಕೆ ಪರ್ಕಟ್ ಕೋಟು, ಸ್ಕೂಟರ್ ಕೊಡುವ ಪ್ರಶ್ನೆಯೇ ಇಲ್ಲ. ನೀವೂ ಬನ್ನಿ. ಹಿಂದಿನ ಸೀಟಲ್ಲಿ ಪಾರ್ಥರ ಜತೆ ಅಡ್ಜಸ್ಟ್ ಮಾಡಿ ಕುಳಿತರಾಯಿತು. :)
-ಗಣೇಶ.
ಉ: ಕರೀಕೋಟು
ಗಣೇಶರೆ,
ನಿಮ್ಮ ಶೀರ್ಷಿಕೆಯಲ್ಲಿ ತಪ್ಪು ತಲೆದೋರಿದೆ......ಅದು ಕರೀಕೋಟು ಅಲ್ಲ ....."ಕರಿಗೆ (ಆನೆಗೆ) ಕೋಟು" ಎಂದಾಗಬೇಕಿತ್ತು :))
ಉ: ಕರೀಕೋಟು
:())))
ಉ: ಕರೀಕೋಟು
ಶ್ರೀಧರ್‌ಜಿ,
ಶೀರ್ಷಿಕೆ "ಕರಿಕೋಟು" ಎಂದು ಬರೆದು, ಚರ್ಚೆ ಕೋಟಿನ ಸೈಜ್ ಬಗ್ಗೆ ಆಗಬಹುದು ಎಂದು ಆಲೋಚಿಸಿ "ಕರೀಕೋಟು" ಮಾಡಿದೆ.. ಬದಲಾಯಿಸಿದರೂ ಕರಿಗೇ ಕೋಟು ಹಾಕ್ಸಿದಿರಲ್ಲಾ? :)
-ಗಣೇಶ.
ಉ: ಕರೀಕೋಟು
ಎಲ್ಲಾ ಅಂಡಾಂಡಭಂಡ ಸ್ವಾಮಿಗಳ ಮಹಿಮೆ :))