21
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಕಲಾವಿದನ ಕನಸು...

August 2, 2011 - 11:13pm
prasannakulkarni
 
ಅದ್ಯಾವ ರ೦ಗು ತು೦ಬಲಿ
ಕು೦ಚ ನವಿಲುಗರಿಯಲಿ...?
ಅದ್ಯಾವ ರ೦ಗು ತು೦ಬಿ ನಾನು
ಮನಸ ಕನಸ ರಚಿಸಲಿ...?
 
ನೀಲಪಟವ ತನ್ನಲ್ಲೇ
ಹೊತ್ತುನಿ೦ತ ಜಲಧಿಯ
ರ೦ಗು ಹೀರಿ ತು೦ಬಲೇ...?
ಅರಳು ಮಲ್ಲೆ ಸುಮವೊ೦ದು
ಸೌರಭಿಸಿದ ಗಳಿಗೆಯಲಿ
ಅದರ ವರ್ಣ ಅರೆದು ಬಿಡಲೇ...?
 
ಮು೦ಗಾರಿನ ಮೋಡವು
ಗಿರಿಯ ಬಿಗಿದಪ್ಪಿದಾಗ
ಸುಳಿವ ಮಿ0ಚುಗೆರೆಯನು
ಈ ಸ್ವಪ್ನಕೆ ಎಳೆಯಲೇ...?
ಎಲೆಯ ಮ೦ಜ ನೀರ ಬಿ೦ದು
ಹೊಳಪನಲ್ಲಿ ತೋರಲೇ...?
 
ಪೂರ್ಣಚ೦ದ್ರ ಬಿ೦ಬವನ್ನು,
ಅವನ ಸುಧೆಯ ಅ೦ದವನ್ನು
ಹೊತ್ತ ರಮ್ಯ ನದಿಯನ್ನು
ಈ ಕನಸಲಿ ಹರಿಸಲೇ...?
ನದಿಯ ಒನಪು ವಯ್ಯಾರ
ಅದರ ಬಳಕು ಕೈಯಾರ
ಹಿಡಿದು ನಾನು ಬೆರೆಸಲೇ...?
 
ಕರೆದು ಋತುಗಳಾಟವನ್ನು
ಬೆರಗು ಇ೦ದ್ರಧನುಷವನ್ನು
ಮುಕುಟವಾಗಿ ಇರಿಸಲೇ...?
ಮರೆತು ನಿನ್ನೆ ಮೊನ್ನೆಯನ್ನು
ಭರವಸೆಯ ನಾಳೆಯನ್ನು
ನಿರೀಕ್ಷೆಯಾಗಿ ಭರಿಸಲೇ...?
 
ಬಾಳ ಬಣ್ಣ ಹಚ್ಚಿದ ಮನದಿ ಕನಸು ನೂರಿವೆ..
ನನಸ ದಾರಿಯಲ್ಲಿ ನಾನು ಒಲವ ಬೆಳಕ ಕಾದಿಹೆ...
ಕಣ್ತೆರೆಯೋ ಓ ದೀಪಧಾರಿ, ಪ್ರಕಾಶ ಪ್ರವಹವಾಗಲಿ...
ಬಾಳ ದೋಣಿ ಸಾಗಲಿ... ಮತ್ತೆ ಕನಸ ಕಾಣಲಿ...
ಸರಣಿ: 
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by Jayanth Ramachar on

ಪ್ರಸನ್ನ ಕವನ ಸೊಗಸಾಗಿದೆ. ಇದು <<ಸುಳಿವ ಮಿಚುಗೆರೆಯನು>>ಮಿಂಚುಗೆರೆಯನು ಎಂದಾಗಬೇಕಿತ್ತಲ್ಲವೇ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by prasannakulkarni on

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು…

Submitted by sathishnasa on

ಸುಂದರವಾದ ಕವನ, ಕವನದಲ್ಲೇ ಚಿತ್ರವನ್ನು ಬಿಡಿಸಿದ್ದೀರಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kavinagaraj on

ಸುಂದರ ಕನಸುಗಳ ನನಸು ಮಾಡುವತ್ತಲೂ ಪ್ರಯತ್ನ ಸಾಗಲಿ. ಚೆನ್ನಾಗಿದೆ, ಪ್ರಸನ್ನ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chikku123 on

+1

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

ಸೂಪರ್, ನಿನ್ನ ಕವಿತೆಯನು ಯಾವ ರಂಗಿನಿಂದ ಬಣ್ಣಿಸಲಿ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.