20
June
2013

ಕಾಗೆಗೆ ಪಾಠ!: ಜಮಾನಾದ ಜೋಕುಗಳು ೯

July 26, 2012 - 8:36pm
makara

    ಒಬ್ಬ ದಿನಾಲು ಚೆಂಬು ಹಿಡಿದು ಬಹಿರ್ದೆಶೆಗೆ ಹಿತ್ತಲಿನ ಕಡೆಗೆ ಹೋಗುತ್ತಿದ್ದ. ಅವನು ಬಹಿರ್ದೆಶೆಗೆ ಕುಳಿತುಕೊಂಡ ಕೂಡಲೇ ಎಲ್ಲಿಂದಲೋ ಕಾಗೆಯೊಂದು ಬಂದು ಚೊಂಬನ್ನು ಉರುಳಿಸಿ ಬಿಡುತ್ತಿತ್ತು. ಆಗ ಆವನು ತನ್ನ ಹೆಂಡತಿಯನ್ನು ಕೂಗಿ ಕರೆದು ಮತ್ತೆ ಚಂಬಿನಲ್ಲಿ ನೀರು ತರಿಸಿಕೊಂಡು ತನ್ನ ಕಾರ್ಯಕ್ರಮವನ್ನು ಮುಗಿಸುತ್ತಿದ್ದ. ಇದೇ ಕ್ರಮ ದಿನಾಲೂ ಪುನರಾವರ್ತನೆಯಾಗುತ್ತಿತ್ತು. ಅದೊಂದು ದಿವಸ ಗಂಡ ಬಹಿರ್ದೆಶೆಗೆ ಕುಳಿತುಕೊಂಡು ಅಷ್ಟೊತ್ತಾದರೂ; ತನ್ನ ಹೆಂಡತಿಯನ್ನು ನೀರಿಗಾಗಿ ಕೂಗಿ ಕರೆಯಲೇ ಇಲ್ಲ. ಹೆಂಡತಿ ಆಶ್ಚರ್ಯಗೊಂಡು ಹೊರಗೆ ಬಂದು, ಈ ದಿನವೇಕೆ ನೀರಿಗಾಗಿ ತನ್ನನ್ನು ಕೂಗಿ ಕರೆಯಲಿಲ್ಲವೆಂದು ಕೇಳಿದಳು. ಆಗ ಗಂಡ, " ಆ ಕಾಗೆ ದಿನಾಲೂ ಬಂದು ಚೊಂಬು ಉರುಳಿಸುತ್ತಿತ್ತಲ್ಲ, ಅದಕ್ಕೇ ಅದಕ್ಕೊಂದು ಪಾಠ ಕಲಿಸಬೇಕೆಂದು, ಮೊದಲೇ ತೊಳೆದುಕೊಂಡು ಬಂದು ಕೂತ್ಕೊಂಡೆ!"

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by partha1059 on

ಪಾಪ ! ಕಾಗೆಗಳ ಕಾಟ !!!

:)))

ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

ಪಾರ್ಥಸಾರಥಿಗಳೆ,
ಅದಕ್ಕೇ ಅವನು ಕಾಗೆಗೆ ಹಾಗೆ ಪಾಠ ಕಲಿಸಿದ್ದು :))

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathishnasa on

ಇದು ಅತಿಯಾದ " ಬುದ್ದಿವಂತಿಕೆ" ...!!
...ಸತೀಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

ಬುದ್ಧಿವಂತಿಕೆಯನ್ನು ತೋರಿಸ ಹೋಗಿ ಅವನು ಮಡಿವಂತಿಕೆಯನ್ನು ಮರೆತ :))

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chikku123 on

:) :) :)
ಬಕೆಟ್ ತಗೊಂಡು ಹೋಗಿದ್ರೆ ಆಗ್ತಿತ್ತು!!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

ಹ್ಹ...ಹ್ಹ...ಹ್ಹಾ! ಒಳ್ಳೆಯ ಐಡಿಯಾ ಚಿಕ್ಕೂ!
ಆಗಿನ ಕಾಲದಲ್ಲಿ ಬಕೆಟ್ ಇರಲಿಲ್ಲ; ಒಂದು ವೇಳೆ ಇದ್ದರೂ ಅಷ್ಟೊಂದು ನೀರು ಇರುತ್ತಿರಲಿಲ್ಲ. ಏನೇ ಆಗಲಿ ಐಟಿ....ಬಿಟಿ, ಜಮಾನಾದ ಈ ಬುದ್ಧಿವಂತಿಕೆ ಆಗಿನವರಿಗೆ ಖಂಡಿತ ಇರಲಿಲ್ಲ ಬಿಡಿ. ಇದ್ದಿದ್ದರೆ ಟಾಯ್ಲೆಟ್ ಪೇಪರ್ ಒಯ್ಯುತ್ತಿದ್ದನೇನೋ? :)))

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.