26
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಕಾಣದ ಲೋಕ

July 25, 2012 - 7:24pm
kpbolumbu

ನಾ ಕಾಣದ ಲೋಕ;
ತೆರಕೊಂಡಿತಿಂದು ಇಲ್ಲಿ,
ಕಂಡಿರದ ಮಾಟಗಳ ಕೊಡಮಾಡಿತು.

ಎಲ್ಲೋ ಒಮ್ಮೆ ಕಂಡ ಹಾಗೆ;
ಕಂಡು ಮರೆತು ಹೋದ ಹಾಗೆ,
ಕಾಣದಾಗಲೂ ಕೂಡ ಕಾಣುತಿದ್ದ ಹಾಗೆ.

ದೂರದಿಂದ ಕಂಡೆ;
ಕಂಡು ಸೋತುಹೋದೆ,
ಮಾತುಗಳಿಲ್ಲದೆ ಮೂಕನಾಗಿಹೋದೆ.

ನೀನೇನೋ ದೋಚಿಕೊಂಡೆ;
ನಾನೇನೋ ಕಳೆದುಕೊಂಡೆ,
ಕೊಟ್ಟುಕೊಳುವ ಲೆಕ್ಕವನೂ ನಾ ಮರೆತುಹೋದೆ.

ಕೇಳರಿಯದಾ ರಾಗ;
ನಿನ್ನ ಪಿಳ್ಳಂಗೋವಿಯಲಿ,
ನನ್ನ ಸ್ಪರ್ಶದಿಂದೊಮ್ಮೆ ಮೂಡಿಬಂದ ಹಾಗೆ.

ಆಕಾಶ ಗೋಪುರದ;
ಮೇಲುಹಾಸನೂ ದಾಟಿ,
ಇಂಪಾದ ರಾಗವನ್ನು ಊದುತಿರುವ ಹಾಗೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by ksraghavendranavada on

ಚೆ೦ದದ ಕವನ ಕೃಷ್ಣ ಪ್ರಕಾಶರೇ..

>> ಕೇಳರಿಯದಾ ರಾಗ ನಿನ್ನ ಪಿಳ್ಳ೦ಗೋವಿಯಲಿ..
ನನ್ನ ಸ್ಪರ್ಶದಿ೦ದೊಮ್ಮೆ ಮೂಡಿ ಬ೦ದ ಹಾಗೆ

ನೀನೇನೋ ದೋಚಿಕೊಂಡೆ;
ನಾನೇನೋ ಕಳೆದುಕೊಂಡೆ,
ಕೊಟ್ಟುಕೊಳುವ ಲೆಕ್ಕವನೂ ನಾ ಮರೆತುಹೋದೆ.

ಚೆ೦ದದ ಸಾಲುಗಳು..

ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

'ಕೃಷ್ಣ'ನ ಪಿಳ್ಳಂಗೋವಿಯಿಂದ ಹೊರಟ ಈ ಸುಮಧುರ ರಾಗ ಕಾಣದ ಹೊಸ ಲೋಕಕ್ಕೆ ಕೊಂಡೊಯ್ದಿದೆ. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Premashri on

ಉತ್ತಮ ಕವಿತೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

"ಎಲ್ಲೋ ಒಮ್ಮೆ ಕಂಡ ಹಾಗೆ;
ಕಂಡು ಮರೆತು ಹೋದ ಹಾಗೆ,
ಕಾಣದಾಗಲೂ ಕೂಡ ಕಾಣುತಿದ್ದ ಹಾಗೆ."

ತುಂಬಾ ಚೆನ್ನಾಗಿದೆ...
ಮೆಚ್ಚುಗೆಯಾಯ್ತು...

ಶುಭವಾಗಲಿ...

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ಎಲ್ಲೋ ಒಮ್ಮೆ ಕಂಡ ಹಾಗೆ;
ಕಂಡು ಮರೆತು ಹೋದ ಹಾಗೆ,
ಕಾಣದಾಗಲೂ ಕೂಡ ಕಾಣುತಿದ್ದ ಹಾಗೆ.

ಚೆನ್ನಾಗಿದೆ !

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kpbolumbu on
ಧನ್ಯವಾದಗಳು ನಾವಡರು, ಮಕರ, ಪ್ರೇಮಶ್ರೀ, ವೆಂಕಟ್ ಮತ್ತು ಪಾರ್ಥ.