19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಕಾಣೆಯಾದ ಕಾಗದಗಳು !!!

February 7, 2012 - 6:10am
rasikathe

ಕಾಣೆಯಾದ ಕಾಗದಗಳು


ಕಾಗದಗಳು ! ಅರ್ಥಾತ್ ಕಾಗದದ ಕಾಗದಗಳು (ಪೇಪರ್ ಲೆಟರ್ಸ್) ಮರೆಯಾಗಿ ಹೋಗಿವೆ. ಈ- ಪತ್ರಗಳ ಕಾಟದಿಂದ ಅವುಗಳು ಔಟ್ ಡೇಟೆಡ್ ಆಗಿ ಸತ್ತು ಹೋಗಿವೆ. ಅದನ್ನು ನೆನೆಸಿಕೊಂಡರೆ ಒಂದು ತರಹ ವ್ಯಥೆಯಾಗುವುದಷ್ಟೇ ಅಲ್ಲ, ಭಾವುಕತೆ ಕಟ್ಟೆ ಒಡೆದು ಕಣ್ಣಿನಲ್ಲಿ ನೀರೇ ಬರುತ್ತೆ. ಕಾಗದಗಳು ಎಷ್ಟೊಂದು ಎಮೋಶನಲ್ ಅಂದರೆ, ನೀವು ಹಳೆಯದೊಂದು ಪತ್ರವನ್ನು ಓದಿ ನೋಡಿ, ಆಗ ಅನುಭವವಾಗುತ್ತೆ. ಕೈಬರಹದಿಂದ ಬರೆದ ಕಾಗದಗಳು ವಿಷಯವಷ್ಟೇ ಅಲ್ಲ,  ಭಾವನೆಗಳನ್ನು ಕಟ್ಟಿ, ಒದುವಾಗ ಒಂದು ದೃಶ್ಯವನ್ನೇ ತರಿಸುವಂತಹ ಶಕ್ತಿಯನ್ನು ಹೊಂದಿರುತ್ತಿದ್ದವು. ಮನಸ್ಸಿನ ಮೇಲೆ ಪರಿಣಾಮ ಬೀರುವುದರಲ್ಲೂ ಯಶಸ್ವಿಯಾಗಿದ್ದವು. ಕಾಗದಗಳ ನೆನಪಿನ ದಾರಿಯಲ್ಲಿ ಪಯಣಿಸಿದಾಗ........

ಅಣ್ಣನಿಗೆ ಅಂಚೆಯವನು ಮನೆ ಹತ್ತಿರ ಬಂದು ಪತ್ರ ಕೊಡುವರೆಗೂ ಸಮಾಧಾನವಿರಲಿಲ್ಲ. ನಮ್ಮಲ್ಲಿ ಯಾರನ್ನಾದರೂ ಪೋಸ್ಟ್ ಆಫೀಸ್ ಗೆ ಕಳಿಸಿ ಪತ್ರ ತರಿಸಿಕೊಳ್ಳುತ್ತಿದ್ದರು. ನಮ್ಮ ಅಕ್ಕ ಬೇರೆ ಊರಿಗೆ ಕಾಲೇಜ್ಗೆಂದು ಹೋದಾಗಲಂತೂ, ವಾರಕ್ಕೊಂದು ಕಾಗದ ಬರೆದು ಯೋಗಕ್ಷೇಮ ತಿಳಿಸಬೇಕೆಂದು ಹೇಳಿದ್ದರಿಂದ ವಾರಕ್ಕೊಂದಾದರೂ ಪತ್ರ ಬರುತ್ತಿತ್ತು. ಹೀಗೆ ಒಂದಲ್ಲ ಒಂದು ಪತ್ರಗಳು ಇದ್ದೇ ಇರುತ್ತಿದ್ದವು. ಒಂದು ರೀತಿಯ ಕುತೂಹಲ ಬೆಳಗ್ಗೆ ೮ ಗಂಟೆಯಾದಾಗ ಯಾವ ಪತ್ರ ಬರತ್ತೆ ಇವತ್ತು ಅಂತ?. ಪರೀಕ್ಷೆ ಫಲಿತಾಂಶ ಕ್ಕೆ ಕಾಯುವಾಗಲಂತೂ ( ಕಾಲೇಜ್ ನಲ್ಲಿ ಓದುವಾಗ) ತುಂಬಾ ತಮಾಷೆಗಳಾಗುತ್ತಿತ್ತು. ಸರಿಯಾದ ಸಮಯಕ್ಕೆ ಪತ್ರ ಬರಲಿಲ್ಲ ಅಂದರೆ, "ಎಲ್ಲೋ ಫೇಲ್ ಆಗಿರಬೇಕು, ಅದನ್ನೇನ್ ತಿಳಿಸೋದು ಅಂತ ಪತ್ರ ಬರೆದಿಲ್ಲ" ಅಂತ ಯಾರಾದರು ಶುರು ಮಾಡ್ತಾ ಇದ್ದರು. ಕೆಲವು ಸಲ ಮಕ್ಕಳು ಕಾಗದ ಬರೆದಿದ್ದರೆ, "ನಮಸ್ಕಾರ" ಬರೆಯುವ ಜಾಗದಲ್ಲಿ "ಆಶೀರ್ವಾದ" ಅಂತ ಬರೆದಿರುವುದು ಮತ್ತು ಕೆಲವು ಶಾರ್ಟ್ ಫಾರ್ಮ್ ಗಳು "ಮಾತೋಶ್ರೀ" ಅಂತ ಪೂರ್ತಿ ಹೇಳುವ ಬದಲು "ಮಾರವರು" ಅಂತ ಬರೆಯುವುದು ಎಲ್ಲ ರೂಢಿಯಲ್ಲಿತ್ತು. ಕೆಲವು ಸಲ ಮನಿ ಆರ್ಡರ್, ಚೆಕ್ ಬರುವುದಿದ್ದಾಗಂತೂ, ದಿನಾ ಮೈಲ್ ಗೆ ಕಾದು ಕುಳಿತಿರುವುದು, ಹೀಗಿತ್ತು ಆ ದಿನಗಳು.

ಪೋಸ್ಟ್ ಆಫೀಸ್ ಹತ್ತಿರ ಗುಂಪು ಗುಂಪಾಗಿ ಜನ ಕಾದು ಕುಳಿತಿರುತ್ತಿದ್ದರು. ಅಂಚೆಯವನು ಎಲ್ಲ ಪತ್ರಗಳನ್ನು ತನ್ನ ದೊಡ್ದ ಅಂಚೆ ಚೀಲಕ್ಕೆ ಹಾಕಿಕೊಂಡು, ಕೈಯಲ್ಲಿ ಕೆಲವು ಹಿಡಿದು ಕಟ್ಟಡದಿಂದ ಹೊರಗೆ ಬಂದು ಅಲ್ಲೇ ಜಗುಲಿಯ ಮೇಲೆ ಕೂತು "ಎಲ್ಲರಿಗೂ ನಿಮ್ಮ ಪತ್ರಗಳನ್ನು ಕೊಡುತ್ತೇನೆ, ಸ್ವಲ್ಪ ಗಲಾಟೆ ಮಾಡೆಬೇಡಿ ಅಂತ ಹೇಳಿ " ಪೇಟೆ ಸೂರಿ", "ಕೋಟೆ ಶೇಷಗಿರಿ", ರಂಗೇ ಗೌಡ್ರು, ತಿಮ್ಮಾಪ್ಪಯ್ಯ, ಅಂಗಡಿ ಶಂಕ್ರು, ಕರಿಯಪ್ಪ, ಅಂತ ಕರೆದು, ಕರೆದು ಎಲ್ಲರಿಗು ಅವರವರ ಪತ್ರಗಳನ್ನು ಕೊಡುವುದು ಒಂದು ತರ "ಕಡ್ಲೇ ಪುರಿ" ಹಂಚಿದಹಾಗಿತ್ತು. ಕಡೆಗೆ ಗುಂಪೆಲ್ಲ ಕದರಿದಾಗ, ಕಡಿಮೆಯಾದಾಗ ನಮ್ಮನ್ನೆಲ್ಲ ( ಹುಡುಗಿಯರನ್ನೆಲ್ಲ) ಕೇಳುತ್ತಿದ್ದ: "ನಿಮ್ಮಪ್ಪ ಬರಲಿಲ್ವಾ ಇವತ್ತು, ಅವರು ನೋಡುತ್ತಿದ್ದ ಪತ್ರ ಇವತ್ ಬಂದಿದೆ ಅಂತ ನಮಗೆ ಕೊಟ್ಟು ಆಮೇಲೆ ಸೈಕಲ್ ಹತ್ತಿ ಮಿಕ್ಕ ಪತ್ರಗಳನ್ನು ಹಂಚಲು ಹೋಗುವ. ಅರ್ಧದಷ್ಟು ಪತ್ರಗಳು ಅಲ್ಲೇ ಖಾಲಿಯಾಗುತ್ತಿತ್ತು. ಆಮೇಲೆ ಸಂಧಿ ಗೊಂದಿಯಲ್ಲಿ ನುಸುಳಿ ಎಲ್ಲರಿಗೂ ಅವರವರ ಅಪತ್ರಗಳನ್ನು ತಲುಪಿಸುತ್ತಿದ್ದ. ಅವನ ಕೆಲಸ ಏನು ಸುಲಭ ಅಲ್ಲ, ಕೆಲವು ಸಲ ಪೂರ್ತಿ ವಿಳಾಸವೇ ಇರುತ್ತಿರಲಿಲ್ಲ ಲಕೋಟೆಯ ಮೇಲೆ. ಬೆಂಗಳೂರಿಂದ ಬರೆದವ್ರೆ "ಹೆಸರೇ ಬರೆದಿಲ್ಲ" ಚೆನ್ನಪ್ಪನ ವಠಾರ ಅಂತಷ್ಟೇ ಬರೆದಿದ್ದರೆ, ನಿಮಗೇನಾದ್ರೂ ಗೊತ್ತಾಗತ್ತ ಅಂತ ನಮಗೂ ತೋರಿಸುತ್ತಿದ್ದ. ವಠಾರದಲ್ಲಿ ಎಲ್ಲರಿಘು ಒಂದ್ ರೌಂಡ್ ತೋರಿಸಿ ಕಡೆಗೆ ತಲುಪಬೇಗಾದವರಿಗೆ ತಲುಪಿಸುತ್ತಿದ್ದ. ಇದನ್ನೆಲ್ಲ ನೆನೆಸಿಕೊಂಡರೆ ನಮ್ಮ ಭಾರತದ ಮೈಲ್ ಮನ್ ಅಷ್ಟು ಶ್ರದ್ಧೆವಹಿಸಿ ಪ್ರಪಂಚದಲ್ಲಿ ಯಾವ ದೇಶದ ಅಂಚೆಯವನೂ ಕೆಲಸ ಮಾಡುವುದಿಲ್ಲ. ಪೂರ್ಣ ವಿಳಾಸವಿದ್ದೇ ಇಲ್ಲಿ (ಅಮೇರಿಕಾದಲ್ಲಿ) ಮೈಲ್ ಗಳು ಮಿಸ್ ಆಗುತ್ತಿರುತ್ತೆ. ಕಾಗದಗಳ ಮಜವೇ ಬೇರೆ. ಕಾಗದ ಬರೆಯುವ ಶೈಲಿ, ಓದುವ ಧಾಟಿ, ಅವುಗಳು ತರುವ ಮನೋಲ್ಲಾಸ ಎಲ್ಲ ಒಂದು ತರಹ ಮನೋರಂಜನೆಯ ವಸ್ತುವಾಗಿತ್ತು. ಹಳೆಯ ಪತ್ರಗಳನ್ನು ಗಟ್ಟಿಯಾಗಿ ಶೇಕರಿಸಿಡಿ. ಇನ್ನು ಮುಂದೆ ಅವುಗಳು ಸಿಗುವುದಿಲ್ಲ. "ಅಪರೂಪದ ಅಮೂಲ್ಯವಾದ ಆಸ್ತಿ" ಎಂದರೆ ತಪ್ಪಾಗಲಾರದು !!!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (6 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by rasikathe on

ಮೇಲೆ ಹಾಕಿದ ಚಿತ್ರ "ಕಾಗದ" ನನಗೆ ಬಂದಿದ್ದು ನನ್ನ ಒಬ್ಬ ಪೇಶಂಟ್ ತಾಯಿಯಿಂದ. ಎಷ್ಟು ಮುತುವರ್ಜಿಯಿಂದ ಬರೆದ ಪತ್ರ. ನನ್ನ ಇ‍ಮೈಲ್ ವಿಳಾಸ ತಿಳಿದಿರದಿದ್ದರಿಂದ ಕಾಗದದ ಕಾಗದ ಬರೆದು ಕಳಿಸಿದ್ದರು. ಇದೂ ನನ್ನ "ಕಾಡುವ ಕಾಗದಗಳಲ್ಲೊಂದು" ಎಂದು ಹೇಳಲು ಹೆಮ್ಮೆಯಾಗುತ್ತೆ.
~ಮೀನಾ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Shreekar on

ಡಾಕ್ಟ್ರೇ,

ನಾನೂ ಇದೇ ವಿಷಯದ ಮೇಲೆ ಬರೆಯಬೇಕೆಂದಿದ್ದೆ!

ನೀವೀಗ ಬರೆದಿರುವುದರಿಂದ ನನ್ನ ಶ್ರಮ ಉಳಿಯಿತು.

ಪತ್ರದ ಬರುವಿಕೆಗಾಗಿ ಕಾತರದಿಂದ ಕಾಯುತ್ತಿದ್ದದ್ದು, ಬಂದ ಮೇಲೆ ಅದಕ್ಕೆ ಉತ್ತರಿಸುವ ಸಂಭ್ರಮ, ಎಲ್ಲ ಈಗ ಮೆಲಕು ಹಾಕುವಂತಾಯಿತು ನಿಮ್ಮ ಬರಹದಿಂದ!

1961/1975 ರ ಹಿಟ್ ಪದ್ಯ ದಿ ಕಾರ್ಪೆಂಟರ್ಸ್ ನ Please Mr. Postman .... Is there a letter, a letter for me?
ಇಲ್ಲಿ ಕೇಳಿ ಆನಂದಿಸಿ.

http://tindeck.com/l...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by rasikathe on

ದ್ಹನ್ಯವಾದಗಳು ಶ್ರಿಕರ್ ಅವರೆ,
ಲಿಂಕ್ ಗೂ ಸೇರಿ,
ಮೀನ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by padma.A on

ಡಾ: ಮೀನಾ ಲೇಖನ ನಮ್ಮನೆಲ್ಲಾ 1960, 1970ರ ಸರಿಸುಮಾರಿಗೆ ಕರೆದುಕೊಂಡು ಹೋಗುತ್ತದೆ.
ಆಕಾಶವಾಣಿ ಕಾರ್ಯಕ್ರಮಕ್ಕಾಗಿ 'ಪತ್ರಸಂಸ್ಕೃತಿ' ಎಂಬ ಲೇಖನವನ್ನು 4‍‍‍, 5‍ ವರ್ಷಗಳ ಹಿಂದಿ ಬರೆದಿದ್ದೆ. ಅದು ಈಗ ನೆನಪಾಯಿತು.
ಲೇಖನ ಚೆನ್ನಾಗಿದೆ.
ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by rasikathe on

ನಮಸ್ಕಾರ ಪದ್ಮ ಅವರೆ,
ದ್ಹನ್ಯವಾದಗಳು! ನಿಮ್ಮ ಲೇಖನದ ಪ್ರತಿ ಇದ್ದರೆ, ಕಳಿಸಿ ಓದುವ ಆಸೆ.
ಮೀನಾ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ಅಂಚೆಯ ಅಣ್ಣ ಬಂದಿಹನಣ್ಣ
ಅಂಚೆಯ ಹಂಚಲು ಮನೆಮನೆಗೆ
ಸಾವಿರ ಸುದ್ದಿಯ ಬೀರುತ ಬರುವನು
ತುಂಬಿದ ಚೀಲವು ಹೆಗಲೊಳಗೆ
..
ಬಾಗಿಲ ಕುಟ್ಟಿ ಚಿಲಕವ ತಟ್ಟಿ
ಸದ್ದನು ಮಾಡುತ ಕರೆಯುವನು
ಕಾಗಗ ಬಂದಿದೆ ಬೇಗನೆ ಬನ್ನಿರಿ
ಕಾಗದ ಕೊಳ್ಳಿರಿ ಎನ್ನುವನು

.
ಕಾಗದವಿದೆ ಯೆ ಕಾಗದವೆಂದು
ಮಕ್ಕಳು ಕೇಳಲು ಬಾಯ್ತುಂಬ
ಹೆಗಲಿನ ಚೀಲದಿ ಬೆರಳುಗಳಾಡಿಸಿ
ಇಡುವನು ಓಲೆಯ ಕೈತುಂಬ

....
ಪ್ರೈಮರಿ ಶಾಲೆಯಲ್ಲಿ ಈ ಪದ್ಯ ಓದಿದ ನೆನಪು
ಬಹುಷಃ ನಾಲ್ಕನೆ ತರಗತಿ ,

ನಿಮ್ಮ ಲೇಖನದಿಂದ ನೆನಪಿಗೆ ಬಂದಷ್ಟು ಸಾಲುಗಳನ್ನು ಬರೆದಿದ್ದೀನಿ
ಉಳಿದಿದ್ದು ನೆನಪಿದ್ದರೆ ಯಾರದರು ಬರೆಯಬಹುದು

ಹಳೆಯ ನೆನಪು ಕೆದಕಿದ ಲೇಖನಕ್ಕೆ ವಂದನೆಗಳು

:)
=ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by rasikathe on

ದ್ಹನ್ಯವಾದಗಳು ! ಪಾರ್ಥಸಾರಥಿಯವರೆ, ಈ ಪದ್ಯ ತುಂಬಾ ಚೆನ್ನಾಗಿದೆ.
ಮೀನಾ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Shreekar on

ಒಂದು ಉತ್ತಮ‌ ಬಾಲ‌ಗೀತೆಯ‌ನ್ನು ನೆನಪಿಸಿದ್ದಕ್ಕಾಗಿ ಪಾರ್ಥರಿಗೆ ಧನ್ಯವಾದಗಳು.

ನೀವು ಅಪೇಕ್ಷಿಸಿದಂತೆ ಪದ್ಯದ ಪೂರ್ಣ ಪಾಠ ಇಲ್ಲಿದೆ.
ರಚನಾಕಾರರು: ನಿ. ರೇ. ಹಿರೇಮಠ
ಸಂಗೀತಕಾರ ಪ್ರವೀಣ್ ಡಿ. ರಾವ್ ಅವರ ತಿರುಕನ ಕನಸು ಸಿ.ಡಿ. ಯಲ್ಲಿ ಈ ಹಾಡಿದೆ; ಅಂತ‌ರ್ಜಾಲ‌ದ‌ಲ್ಲೂ ಲಭ್ಯ.

ಅಂಚೆಯ ಅಣ್ಣಾ ಬಂದಿಹೆ ಚಿಣ್ಣಾ
ಅಂಚೆಯ ಹಂಚಲು ಮನೆಮನೆಗೆ
ಸಾವಿರ ಸುದ್ದಿಯ ಬೀರುತ ಬರುವೆನು
ತುಂಬಿದ ಚೀಲವು ಹೆಗಲೊಳಗೆ

ಬಾಗಿಲ ತಟ್ಟಿ ಚಿಲಕವ ಕುಟ್ಟಿ
ಸದ್ದನು ಮಾಡುತ ಕರೆಯುವೆನು
ಕಾಗದ ಬಂದಿದೆ ಬೇಗದಿ ಬನ್ನಿರಿ
ಕಾಗದ ಕೊಳ್ಳಿರಿ ಎನ್ನುವೆನು

ಕಾಗದವಿದೆಯೆ ಕಾಗದವೆಂದು
ಮಕ್ಕಳು ಕೇಳಲು ಬಾಯ್ತುಂಬ
ಕೊರಳಿನ ಚೀಲದಿ ಬೆರಳುಗಳಾಡಿಸಿ
ಹಿರಿವೆನು ಓಲೆಯ ಕೈತುಂಬ

ಕಾಗದ ಹೊರಳಿಸಿ ಕಣ್ಣುಗಳರಳಿಸಿ
ವೇಗದಿ ಹೆಸರುಗಳೋದುವೇನು
ಗಂಟನು ಕಟ್ಟಿ ಗಲ್ಲವ ತಟ್ಟಿ
ಕಾಗದವಿದೆಕೋ ಎನ್ನುವೆನು
<>

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

>>>ಇನ್ನು ಮುಂದೆ ಅವುಗಳು ಸಿಗುವುದಿಲ್ಲ. "ಅಪರೂಪದ ಅಮೂಲ್ಯವಾದ ಆಸ್ತಿ" ಎಂದರೆ ತಪ್ಪಾಗಲಾರದು !!!>>>>

ನಿಜ.
ನನ್ನಲ್ಲಿ ೧೯೮೦ ಮೇ ತಿಂಗಳಿಂದ ನನಗೆ ಬಂದಿರುವ ಎಲ್ಲಾ ಪತ್ರಗಳೂ ಇವೆ. ಅಲ್ಲದೇ, ನಾನು ನನ್ನ ಅಪ್ಪಯ್ಯನವರಿಗೆ ಬರೆದಿದ್ದ ಪತ್ರಗಳ ಕಂತೆಯೂ ಇದೆ. (ಊರಲ್ಲಿ ತಮ್ಮಂದಿರು ಸಂಗ್ರಹಿಸಿ ಇಟ್ಟಿರುತ್ತಿದ್ದರು. ರಜೆಯಲ್ಲಿ ಹೋದಾಗ ನಾನೇ ಕೊಂಡುಬರುತ್ತಿದ್ದೆ). :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by rasikathe on

ದ್ಹನ್ಯವಾದಗಳು ! ನಿಮ್ಮ ಕಾಗದ ಶೇಕರಿಸಿಡುವ ಹವ್ಯಾಸ ಉತ್ತಮವಾದದ್ದು, ನನ್ನಲ್ಲಿಯೂ ಕೆಲವು ಪತ್ರಗಳಿವೆ,
ಮೀನಾ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by manju787 on

ಕಾಗದಗಳಲ್ಲಿ ತು೦ಬಿರುತ್ತಿದ್ದ ಭಾವ ತೀವ್ರತೆ, ಆ ಕಾಯುವಿಕೆ, ಇ೦ದಿನ ಮಿ೦ಚ೦ಚೆ, ಎಸ್ಸೆಮ್ಮೆಸ್ಸುಗಳಿಗೆಲ್ಲಿದೆ? ಕೆಲವು ಅಮೂಲ್ಯ ಕಾಗದಗಳು ಇ೦ದಿಗೂ ನನ್ನ ಅಮೂಲ್ಯ ಆಸ್ತಿಗಳಾಗಿ ಉಳಿದುಕೊ೦ಡಿವೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by rasikathe on

ದ್ಹನ್ಯವಾದಗಳು ! ಏ ಅಸ್ಸ್ತಿಗಳು ದುಡ್ಡಿಗೆ ಬರಲ್ಲ, ಆದ್ದರಿಂದ ಅತ್ಯಮೂಲ್ಯ ಅಲ್ವಾ?

ಮೀನಾ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.