ಕಾರಂತರ ಬಾಳ್ವೆಯೇ ಬೆಳಕು ಪುಸ್ತಕ ಓದುತ್ತಿರುವೆ. ಬದುಕು, ಹುಟ್ಟು ಸಾವುಗಳು, ಜೀವನವನ್ನು ಎದುರಿಸಬೇಕಾದ ಕ್ರಮ ಮುಂತಾದವುಗಳ ಕುರಿತಾದ ಲೇಖನಗಳಿರುವ ಪುಸ್ತಕವಿದು.
ಹಟ್ಟಿ ಹರಳಿನಂತಹ ವಾಕ್ಯಗಳನ್ನು ಓದುತ್ತ ಕಾರಂತರನ್ನು ಮೆಚ್ಚಿದ್ದೇ ಹೆಚ್ಚು ಓದಿದ್ದು ಕಡಿಮೆ ಎನ್ನಿಸತೊಡಗಿತು.
ದೇವರು, ಧರ್ಮ, ಸಂಪ್ರದಾಯಗಳ ಬಗ್ಗೆ ಬರೆಯುವುದಕ್ಕೆ, ಚರ್ಚಿಸುವುದಕ್ಕೆ ನನಗೆ ಆಸಕ್ತಿ ಇತ್ತು. ಇವುಗಳ ವಿರುದ್ಧ ಮಾತನಾಡುವಾಗ ಬಳಸುತ್ತಿದ್ದ ಚಿಂತನೆಗಳು, ಕಟ್ಟಿಕೊಳ್ಳುತ್ತಿದ್ದ ವಾದ ಸರಣಿ, ಅವುಗಳಿಗೆ ಭೂಮಿಕೆಯಾಗಿರುತ್ತಿದ್ದ ನನ್ನ ಗ್ರಹಿಕೆ ಇವು ತೀರಾ ಭಿನ್ನವಾಗಿರುವಂತಹ ಪುಸ್ತಕ 'ಬಾಳ್ವೆಯೇ ಬೆಳಕು'. ನಾನು ಪರವಾಗಿದ್ದೇನೆ ಎಂದು ತಿಳಿದ ವಿಚಾರ ಧಾರೆಯೇ ನನಗೆಷ್ಟು ಅಪರಿಚಿತ, ನಾನು ವಿರೋಧ ಮಾಡುತ್ತಿದ್ದ ಚಿಂತನೆ ನಾನು ತಿಳಿದದ್ದಕ್ಕಿಂತ ಎಷ್ಟು ಭಿನ್ನ ಎಂಬ ಜಿಜ್ಞಾಸೆ ಹುಟ್ಟು ಹಾಕುವಂತೆ ಮಾಡಿದೆ.
ಸತ್ಯಕ್ಕೆ ಹತ್ತಿರವಾಗಿರುವುದಕ್ಕೆ ಬರಹಗಾರನಿಗೆ ಬರವಣಿಗೆಯೇ ದೊಡ್ಡ ಅಡ್ಡಿಯಾಗುವುದೇ- ಮೊದಲಾದ ಪ್ರಶ್ನೆಗಳು ಈ ಓದಿನಿಂದ ಟಿಸಿಲೊಡೆಯುತ್ತಿವೆ.
ಇದನ್ನು ಓದುತ್ತ ಅನ್ನಿಸಿದ್ದನ್ನು ಮುಂದಿನ ಪೋಸ್ಟುಗಳಲ್ಲಿ ಬರೆಯುತ್ತ ಹೋಗುತ್ತೇನೆ.
ಕಾರಂತರ ಬಾಳ್ವೆಯೇ ಬೆಳಕು
October 11, 2011 - 9:40am
ಬ್ಲಾಗ್ ವರ್ಗಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:








