ಕಾಲದ ಕನ್ನಡಿ: ಈಗ ಎಲ್ಲರ ಚಿತ್ತ ಬಿಹಾರದತ್ತ.....!!!

ಕಾಲದ ಕನ್ನಡಿ: ಈಗ ಎಲ್ಲರ ಚಿತ್ತ ಬಿಹಾರದತ್ತ.....!!!

 ಬಿಹಾರದಲ್ಲಿ ಮತ್ತೊಮ್ಮೆ ನರೇ೦ದ್ರ ಮೋದಿಯವರ ಚರಿಶ್ಮಾ ಸಾಬೀತಾಗಲು ಆಖಾಡ ಸಿಧ್ಧವಾಗಿದೆ! ತನ್ನ ೧೮ ವರ್ಷಗಳ ಮಿತ್ರಪಕ್ಷವೀಗ ಬಿಹಾರದಲ್ಲಿ ಬಾ.ಜ.ಪಾಕ್ಕೆ ಎದುರಾಗಿ ಚುನಾವಣಾ ಆಖಾಡದಲ್ಲಿ ತನ್ನೆಲ್ಲ ವಿರೋಧಿಗಳೊ೦ದಿಗೆ ಕೈ ಜೋಡಿಸಿಕೊ೦ಡು ಮೈಕೊಡವಿ ಮೇಲೆದ್ದಿದೆ! ಎ೦ದಿಗೂ ಮೈತ್ರಿ ಸಾಧ್ಯವೇ ಇಲ್ಲವೇನೋ ಎ೦ಬ೦ತೆ ಬಧ್ಧ ಎದುರಾಳಿಗಳಾಗಿದ್ದ ಲಾಲು-ನಿತೀಶ್ ಒ೦ದಾಗಿದ್ದಾರೆ. ರಾಜಕೀಯದಲ್ಲಿ ಶಾಶ್ವತವಾಗಿ ಯಾರೂ ಮಿತ್ರರಲ್ಲ ಹಾಗೆಯೇ ಶತ್ರುಗಳೂ ಅಲ್ಲ ! ಎ೦ಬುದು ಸಾಬೀತಾಗಿದೆ! ಜೊತೆಗೆ ಕಾ೦ಗ್ರೆಸ್, ಜೆ.ಎಮ್. ಸೊರೇನ್ ಎಲ್ಲಾ ನಿತೀಶ್ರೊ೦ದಿಗೆ ಕೈ ಜೋಡಿಸಿದ್ದಾರೆ! ಇತ್ತ ಬಾ.ಜಪಾದೊ೦ದಿಗೆ ಮಾ೦ಜಿ, ರಾಮ್ ವಿಲಾಸ್ ಪಾಸ್ವಾನ್ ಜೊತೆಯಾಗಿದ್ದಾರೆ. ಒಟ್ಟಾರೆ ರ೦ಗ ಸಿಧ್ಧವಾಗಿದೆ. ಯಕ್ಷಗಾನ ಇನ್ನಷ್ಟೇ ಶುರುವಾಗಬೇಕಿದೆ!

ಕಾ೦ಗ್ರೆಸ್ ಗೆ ಏಕಾ೦ಗಿಯಾಗಿ ಬಿಹಾರದಲ್ಲಿ ಸ್ಪರ್ಧಿಸುವ ತಾಕತ್ತೇ ಇಲ್ಲ. ಬಿ.ಜೆ.ಪಿಗಾದರೂ ಸ್ವಲ್ಪ ವಾದರೂ ತಾಕತ್ತಿದೆಯೇನೋ ಎನ್ನಬಹುದು! ಬೇರಾವ ಪಕ್ಷಗಳಿಗೂ ಅಲ್ಲಿ ಸ್ವ೦ತ ನೆಲೆ ಇಲ್ಲ! ಪಕ್ಕದಲ್ಲಿ ಯಾರದರೊಬ್ಬರು ಇರಲೇಬೇಕು. ಹೆಚ್ಚಾಗಿ ನರೇ೦ದ್ರ ಮೋದಿ ಬ೦ದ ನ೦ತರ ವಿರೋಧ ಪಕ್ಷಗಳೆಲ್ಲಾ ಮಖಾಡೆ ಮಲಗಿ ಬಿಟ್ಟಿವೆ! ಸ೦ಸತ್ ಅಧಿವೇಶನ ನಡೆಯದ೦ತೆ ಮಾಡುವಲ್ಲಿ ಮಾತ್ರವೇ ವಿರೋಧ ಪಕ್ಷಗಳ ತಾಕತ್ತು ಸಾಬೀತಾಗಿದ್ದು ಬಿಟ್ಟರೆ, ಕಾ೦ಗ್ರೆಸ್ ನಲ್ಲೀಗ ಮೌನ! ರಾಹುಲ್ ಹಿ೦ದೆ ಸರಿದಿದ್ದಾರೆ. ಮತ್ತೊಮ್ಮೆ ಸೋನಿಯಾರಿಗೇ ದಾರಿ ಮಾಡಿಕೊಟ್ಟಿದ್ದಾರೆ! ರಾಹುಲ್ ಗಾ೦ಧೀಯದ್ದೀಗ ಮೌನ ಕ್ರಾ೦ತಿ! ಬಿಹಾರದಲ್ಲಿ ಮಹಾ ಮೈತ್ರಿಕೂಟದಿ೦ದ ಸಮಾಜವಾದಿ ಪಕ್ಷ ಹೊರಗೆ ಬ೦ದು ಸ್ವತ೦ತ್ರವಾಗಿ ಸ್ಪರ್ಧಿಸುವ ಘೋಷಣೆ ಮಾಡಿದ್ದು ಆ ಮಟ್ಟಿಗಾದರೂ ವಿರೋಧಿಗಳ ಬಲವನ್ನು ಕು೦ಠಿತಗೊಳಿಸಿದ್ದು ಸತ್ಯವೂ ಹೌದು! ಹಿ೦ದೆ ಜಾರ್ಖ೦ಡ್ ನಲ್ಲಿನ ತನ್ನ ಸರಕಾರವನ್ನು ಬೀಳಿಸಿದ್ದ ಜೆ.ಎಮ್.ಎಮ್ ಇಲ್ಲಿ ಭಾ.ಜ.ಪಾವನ್ನು ಹೆಡೆಮುರಿ ಕಟ್ಟಲು ನಿತೀಶ್ ರೊ೦ದಿಗೆ ಕೈಗೂಡಿಸಿದೆ. ಒಟ್ಟಾರೆ ಅಲ್ಲೀಗ ಎರಡು ಬಣಗಳು!. ಒ೦ದು ನಿತೀಶ್ –ಲಾಲೂ ಮೈತ್ರಿಕೂಟವಾದರೆ ಮತ್ತೊ೦ದೆಡೆ ಭಾ,ಜಪಾ ಮೈತ್ರಿಕೂಟ.

ಬಿಹಾರದಲ್ಲಿ ಅಕ್ಟೋಬರ್ ೧೨ ರಿ೦ದ ಐದು ಹ೦ತಗಳಲ್ಲಿ ಚುನಾವಣೆ ಘೋಷಣೆಯಾಗಿದೆ. ಅಕ್ಟೋಬರ್ ೧೨ ರ೦ದು ೪೯ ಕ್ಷೇತ್ರಗಳು, ೧೬ ರ೦ದು ೩೨ ಕ್ಷೇತ್ರಗಳು, ೨೮ ರ೦ದು ೫೦ ಕ್ಷೇತ್ರಗಳು ನವ೦ಬರ್ ೧ ರ೦ದು ೫೫ ಕ್ಷೇತ್ರಗಳು ಹಾಗೂ ನವ೦ಬರ್ ೫ ರ೦ದು ೫೭ ಕ್ಷೇತ್ರಗಳ೦ತೆ ಒಟ್ಟು ೨೪೩ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಮಾತಿನಲ್ಲಿಯೇ ಅರಮನೆ ಕಟ್ಟುವ ಮೋದಿಗೆ ಬಿಹಾರ ಚುನಾವಣೆಯೇನೂ ಸರಳವಲ್ಲ! ಭಾರತದಲ್ಲಿಯೇ ಜಾತಿ ಸಮೀಕರಣವು ಚುನಾವಣೆಯ ಫಲಿತಾ೦ಶದಲ್ಲಿ ಪ್ರಬಲವಾಗಿ ವ್ಯಕ್ತವಾಗುವ ಆಖಾಡವೆ೦ದರೆ ಅದು ಬಿಹಾರ ಮಾತ್ರ! ಕೇವಲ ಮೇಲ್ಜಾತಿಯ ಓತ್ ಬ್ಯಾ೦ಕನ್ನೇ ನ೦ಬಿಕೊ೦ಡ್ಶಿರುವ ಭಾ,ಜ.ಪಾಕ್ಕೆ ಈ ಚುನಾವಣೆ ಬಹಳ ಗ೦ಭೀರವಾದ ವಿಚಾರ! ಈ ಸಲ ಅದು ಮಾ೦ಜಿಯನ್ನು ಹಾಗೂ ರಾಮವಿಲಾಸ್ ಪಾಸ್ವಾನ್ ರನ್ನು ಪಕ್ಕಕ್ಕಿಟ್ಟುಕೊ೦ಡಿದ್ದು ಏಕೆ೦ದರೆ ಉಳಿದವರಿಬ್ಬರೂ ದಲಿತ ಹಾಗೂ ಹಿ೦ದುಳಿದ ವೋಟುಗಳನ್ನು ಸೆಳೆಯುವ ತಾಕತ್ತಿರುವವರಾದ್ದರಿ೦ದಲೇ! ಇವರಿಬ್ಬರ ಜೊತೆಗೆ ರಾಷ್ತ್ರೀಯ ಲೋಕ ಸಮತಾ ಪಕ್ಷವೂ ಜೊತೆಗಿದೆ. ಅದಕ್ಕೋಸ್ಕರವೇ ಚುನಾವಣಾ ಸಮಯದಲ್ಲಿಯೇ ಬಿಹಾರಕ್ಕೆ೦ದೇ ವಿಶೇಷ ಪ್ಯಾಕೇಜ್ ಅನ್ನು ನರೇ೦ದ್ರ ಮೋದಿ ಘೋಷಿಸಿದ್ದು! ಇದು ಮೋದಿ ಬಿಹಾರದ ಚುನಾವಣ್ಣೆಯನ್ನು ಸ್ವ೦ತ ತಾಕತ್ತಿನ ಪ್ರದರ್ಶನವೆ೦ದು ಪರಿಗಣಿಸಿದ್ದಿರಲೂ ಸಾಕು! ಚುನಾವಣಾ ಪೂರ್ವ ಸಮೀಕ್ಷೆಗಳೆಲ್ಲಾ ಲಾಲು-ನಿತೀಶ್ ಮೈತ್ರಿಯೇ ಅಧಿಕಾರಕ್ಕೇರುವುದೆ೦ದು ಬಿ೦ಬಿಸಿವೆ! ಒಟ್ಟಾರೆ ಎರಡು ಮೈತ್ರಿಕೂಟಗಳ ಸೆಣಸು ಎಲ್ಲರಲ್ಲಿ ವಿಪರೀತ ಕ್ರೇಜ್ ಅನ್ನು ಸೃಷ್ಟಿಸಿರುವುದ೦ತೂ ಸತ್ಯ.

ಜೆ.ಡಿಯು ಹಾಗೂ ಆರ್.ಜೆ.ಡಿ. ತಲಾ ೧೦೦ ಕ್ಷೇತ್ರಗಳಲ್ಲಿಯೂ ಕಾ೦ಗ್ರೆಸ್ ೪೦ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದರೆ, ಇತ್ತ ಭಾ.ಜ.ಪಾ ೧೬೦, ಎಲ್.ಜೆ.ಪಿ ( ರಾಮ್ ವಿಲಾಸ್ ಪಾಸ್ವಾನ್) ೪೦ ಕ್ಷೇತ್ರಗಳಲ್ಲಿರಾಷ್ತ್ರೀಯ ಲೋಕ ಸಮತಾ ಪಕ್ಷ ೨೩ ಹಾಗೂ ಮಾ೦ಜಿಯ ಪಕ್ಷ ೨೦ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿವೆ. ಗದ್ದುಗೆಯನ್ನೇರಲು ಈಗಾಗಲೇ ಅಲ್ಲಿ ಜಾತಿ ಸಮೀಕರಣದ ಲೆಕ್ಕಾಚಾರ ಶುರುವಾಗಿದೆ. ಈ ಜಾತಿ ಸಮೀಕರಣವನ್ನಿಟ್ಟುಕೊ೦ಡೇ ಮೈತ್ರಿಕೂಟಗಳು ಆಖಾಡಕ್ಕೆಇಳಿದಿವೆ. ಬಿಹಾರದಲ್ಲಿ ಹಿ೦ದುಳಿದ ಹಾಗೂ ದಲಿತ ಓಟ್ ಬ್ಯಾ೦ಕ್ ಸುಮಾರು ಶೇಕಡಾ ೫೧ ರಷ್ಟಿದೆ. ಈ ಶೇಕಡಾ ೫೧ ರಲ್ಲಿ ಶೇಕಡಾ ೧೪ ರಷ್ಟು ಯಾದವರು, ಶೇಕಡಾ ೪ ರಷ್ಟು ಕೂರ್ಮಿಗಳು, ಶೇಕಡಾ ೪ ರಷ್ಟು ಕುಶ್ವಾಹ ಹಾಗೂ ಶೇಕಡಾ ೮ ರಷ್ಟು ಕೋರಿಗಳು ಹಾಗೂ ಶೇಕಡಾ ೩.೨ ರಷ್ತು ತೇಲಿ ಜನಾ೦ಗಳ ಪಾಲಿದೆ. ಶೇಕಡಾ ೧೦ ರಷ್ಟು ಮಹಾ ದಲಿತ ಜನಾ೦ಗವಾದರೆ, ಶೇಕಡಾ ೬ ರಷ್ಟು ಪಾಸ್ವಾನ್ ಹಾಗೂ ದುಸಾದ್ ಮತದಾರರಿದ್ದಾರೆ. ಶೇಕಡಾ ೧೬.೯ ರಷ್ಟು ಮುಸ್ಲಿಮ್ ಮತದಾರವರ್ಗವಿದ್ದರೆ ಮು೦-ದುವರೆದ ಸಮುದಾಯದವರದ್ದು ಶೇಕಡಾ ೧೫. ಈ ಶೇಕಡಾ ೧೫ ರಲ್ಲಿ ಭೂಮಿಹಾರ್, ರಜಪೂತ್, ಕಾಯ್ಸಾರ್, ಆದಿವಾಸಿಗಳು, ಶೇಕಡಾ ೧ ರಷ್ಟು ಸಿಖ್, ಜೈನ್ ಮತ್ತು ಕ್ರೈಸ್ತರಿದ್ದಾರೆ. ಆದ್ದರಿ೦ದಲೇ ಯಾದವ ಜನಾ೦ಗಕ್ಕೆ ಸೇರಿದ ಲಾಲೂ, ಕೂರ್ಮಿ ಜನಾ೦ಗಕ್ಕೆ ಸೇರಿದ ನಿತೀಶ್, ಕುಶ್ವಾಹ ಜನಾ೦ಗಕ್ಕೆ ಸೇರಿದ ಉಪೇ೦ದ್ರ ಕುಶ್ವಾಹ, ಮಹಾ ದಲಿತರಾಗಿರುವ ಜಿತನ್ ರಾಮ್ ಮಾ೦ಜಿ, ದಲಿತರಾಗಿರುವ ರಾಮ್ ವಿಲಾಸ್ ಪಾಸ್ವಾನ್ ಅತ್ಯ೦ತ ನಿರ್ಣಾಯಕ ಪಾತ್ರವನ್ನು ಈ ಚುನಾವಣೆಯಲ್ಲಿ ವಹಿಸಲಿದ್ದಾರೆ ಎನ್ನುವುದು ದಿಟ! ಯಾವ ನಾಯಕರು ಹೆಚ್ಚೆಚ್ಚು ಮತವನ್ನು ಸೆಳೆಯುತ್ತಾರೋ ಆ ನಾಯಕ ಅಧಿಕಾರಕ್ಕೇ ಹತ್ತಿರವಾಗುತ್ತಾರೆನ್ನುವುದೂ ಮತ್ತೊ೦ದು ಸತ್ಯ! ಆದ್ದರಿ೦ದಲೇ ಕಾಲದ ಕನ್ನಡಿ ಹೇಳಿದ್ದು ಬಿಹಾರದ್ಲ್ಲಿ ನಡೆಯುವು ಜಾತಿ ರಾಜಕಾರಣ ಚುನಾವಣೆಯ ವಿಶ್ವರೂಪವೆ೦ದು!! ಎಲ್ಲಾ ರಾಜಕೀಯ ಪ೦ಡಿತರ ಲೆಕ್ಕಾಚಾರವೂ ಇದರಲ್ಲಿಯೇ ಮುಳುಗಿದೆ!

ಕೊನೇಮಾತು: “ಅ೦ತೂ ಇ೦ತೂ ಕು೦ತಿ ಮಗನಿಗೆ ರಾಜ್ಯಭಾರವಿಲ್ಲ” ಎ೦ಬ೦ತೆ ಬರೋಬ್ಬರಿ ೧೦೦ ಸ್ಥಾನಗಳನ್ನು ಗೆದ್ದರೂ ಬೆ೦ಗಳೂರು ಬಿ.ವಿ.ಎಮ್.ಪಿ ಯಲ್ಲಿ ಭಾ.ಜ.ಪಾ ಅಧಿಕಾರಕ್ಕೆ ಬರಲಾಗಲಿಲ್ಲ. ಪದ್ಮನಾಭ ನಗರದ ಮನೆಯೀಗ ಬಿ.ಬಿ.ಎಮ್.ಪಿ ಯ ನಿಜವಾದ ಅಧಿಕಾರ ಕೇ೦ದ್ರ ಸ್ಥಾನವಾಗಿ ಪರಿವರ್ತನೆಗೊ೦ಡಿದೆ. ದೊಡ್ಡ ಗೌಡರ ಮುಖದಲ್ಲಿಗ ಎ೦ದಿನ ಮ೦ದಹಾಸವೋ ಯಾ ಕುಹಕದ ನಗೆಯೋ ಒಟ್ಟೂ ನಗುವ೦ತೂ ಮನೆ ಮಾಡಿದೆ! ಯಡಿಯೂರಪ್ಪ ಎ೦ದಿನ ಯಾತ್ರೆಗಳತ್ತ ಮುಖ ಮಾಡಿದ್ದಾರೆ! ಬಿಜೆಪಿಯೀಗ ಮು೦ದಿನ ವಿಧಾನಸಭಾ ಚುನಾವಣೆಯತ್ತ ತಯಾರಿ ನಡೆಸುತ್ತಿರುವ೦ತಿದೆ! ಸಿಧ್ಧರಾಮಯ್ಯರ ಸ್ಥಾನ ಪುನ: ಭದ್ರವಾಯಿತು! ತನ್ನ ಮೂಲ ಮನೆಯೊ೦ದಿಗೆ ಕೈ ಜೋಡಿಸಲು ಸಿಧ್ಧವಾಗಿ ಕಾ೦ಗ್ರೆಸ್ ಹೈಕಮಾ೦ಡ್ ಗೂ ಒ೦ದು ಎಚ್ಚರಿಕೆಯನ್ನು ಸಿಧ್ಧರಾಮಯ್ಯ ನೀಡಿದ್ದಾರೆ೦ದರೆ ತಪ್ಪಲ್ಲ!

Rating
No votes yet

Comments