ಈ ಸುಂದರಿ ಶುಕಸಂದೇಶವನ್ನು ಕಳಿಸಿದಾಗಲೂ ಬಳಿ ಬಾರದ ಚೆನ್ನಿಗನ ಮೇಲೆ ಪ್ರೀತಿಯಿದ್ದರೂ, ತುಸು ಕೋಪವೂ ಬಾರದಿರದು. ಅಲ್ಲವೇ? ಅದಕ್ಕೇ ತುಸು ಪ್ರೀತಿಯಿಂದ ಮತ್ತೆ ತುಸು ಹುಸಿ ಕೋಪದಿಂದ ಬರೆದ ಎರಡು ಷಟ್ಪದಿಗಳು ಇಲ್ಲಿವೆ.
ಚಿತ್ರದಲ್ಲಿರದ ಚೆನ್ನಿಗನ ಮೇಲೆ ಪದ್ಯವಿದ್ದರೆ ಅದು ನನ್ನ ತಪ್ಪಲ್ಲ. ಎಷ್ಟೇ ಅಂದರೂ ಶುಕಭಾಷಿಣಿ ತನ್ನ ಗಿಣಿಯೊಂದಿಗೆ ಅವನಿಗೇ ತಾನೇ ಸಂದೇಶವಿತ್ತಿದ್ದು? ಹಾಗಾಗಿ ತಪ್ಪೇನಿದ್ದರೂ ಅವಳದ್ದೇ, ಬಿಡಿ!
ಪ್ರೀತಿಯಿಂದ ಚೆನ್ನಿಗನಿಗೊಂದು ಕಿವಿಮಾತು :
ಹೊಳೆವ ಕಂಗಳ ಚೆಲುವೆ ಬಣ್ಣದ
ಗಿಳಿಯ ಕೈಯಲಿ ಹಿಡಿದ ಸೊಬಗಿಯಿ-
ವಳನು ಮರೆತಿರೆ ನೀನದೆಂತಹ ದೇವನಾಗುವೆಯೊ?
ಎಳೆಯ ಮನಸಿಗೆ ಘಾಸಿ ಮಾಡಿ ಹ
ದುಳವ ನೀಗಿಹೆ ಚೆನ್ನ ಬೇಗನೆ
ಕಳೆಯಲಿಕೆ ಬಾ ಮುಗುದೆ ಮನಸಿನ ದುಗುಡವೆಲ್ಲವನು!
ಚೆನ್ನಿಗನ ಬಗ್ಗೆ ರೋಸಿ ಹೋಗಿ, ಶುಕಭಾಷಿಣಿಗೊಂದು ಕಿವಿಮಾತು :
ಹೊಳೆವ ಕಂಗಳ ಚೆಲುವೆ ಬಣ್ಣದ
ಗಿಳಿಯ ಕೈಯಲಿ ಹಿಡಿದ ಸೊಬಗಿಯಿ-
ವಳನು ಮರೆತವನಾವ ದೇವನದೆಂಥ ಚೆನ್ನಿಗನು?
ಎಳೆಯ ಜೀವವ ನೋಯಿಸುತ್ತ ಹ
-ದುಳವ ನೀಗಿಹನಲ್ತೆ! ಕೇಡಿ ದು
-ರುಳನ ನೆನಹನು ತೊರೆದು ನೆಮ್ಮದಿ ಗಳಿಸು ನೀ ಹೆಣ್ಣೆ !









ಪ್ರತಿಕ್ರಿಯೆಗಳು
ಉ: ಕಿವಿಮಾತುಗಳು
ಚಿತ್ರದಲ್ಲಿರದ ಚೆನ್ನಿಗನ ಮೇಲೆ ಪದ್ಯವಿದ್ದರೆ ಅದು ನನ್ನ ತಪ್ಪಲ್ಲ. ಎಷ್ಟೇ ಅಂದರೂ ಶುಕಭಾಷಿಣಿ ತನ್ನ ಗಿಣಿಯೊಂದಿಗೆ ಅವನಿಗೇ ತಾನೇ ಸಂದೇಶವಿತ್ತಿದ್ದು? ಹಾಗಾಗಿ ತಪ್ಪೇನಿದ್ದರೂ ಅವಳದ್ದೇ, ಬಿಡಿ!
:((
:()))
-ಹಂಸಾನಂದಿ
ಅವರೇ-
ಚಿತ್ರವನ್ಣ ನೋಡಿ ಆ ಬಗ್ಗೆಯೇ ಒಂದು ಷಟ್ಪದಿ ಬರೆವ ನಿಮ್ಮ ಪ್ರತಿಭೆಗೆ ನಮೋ ನಮೋ-
ಆದಾಗಲೇ ಸುಮಾರು ನಿಮ್ಮ ಬರಹಗಳನ್ನ ಓದಿರುವೆ..
ಎಲ್ಲರ ಬರಹಗಳ ವಿಧ ಒಂದು ಆದರೆ ನಿಮ್ಮದೇ ಬರಹಗಳ ವಿಧ ಇನ್ನೊಂದು- ಅದೇ ನಿಮಂ ವಿಶೇಷತೆ..
.
ಷಟ್ಪದಿ ಹಿಡಿಸಿತು..
>> ಸೊಬಗಿಯಿ-
ವಳನು ಮರೆತಿರೆ ನೀನದೆಂತಹ ದೇವನಾಗುವೆಯೊ?
>>> ಸೊಬಗಿಯಿ-
ವಳನು ಮರೆತವನಾವ ದೇವನದೆಂಥ ಚೆನ್ನಿಗನು?
ಒಂದು ಚಿತ್ರ ನೋಡಿ ಎರಡು ವಿಧವಾದ ಬರಹ ಬರೆದದ್ದು ಖುಷಿ ತಂತು ಹಾಗೆಯೇ ನಿಮ್ಮ ವಿಶೇಷತೆಯ ಪರಿಚಯ ಆಯ್ತು..
ಶುಭವಾಗಲಿ..
ಉ: ಕಿವಿಮಾತುಗಳು
ಪದ್ಯ ಚೆನ್ನಾಗಿದೆ. ಪದ್ಯಪಾನದಮಲನು ಸವಿಯಲು ದಾರಿ ತೋರಿಸಿರುವುದಕ್ಕೆ ಧನ್ಯವಾದಗಳು.
ಉ: ಕಿವಿಮಾತುಗಳು
ಧನ್ಯವಾದಗಳು!
ಪದ್ಯಪಾನ ಒಂದು ಅಮಲೇ ಸರಿ. ಅದಕ್ಕೆ ಇನ್ನೊಂದು ಇದೇ ಚಿತ್ರದ ಮೇಲೆ, ಮಲ್ಲಿಕಾಮಾಲೆ ಎಂಬ ವೃತ್ತದಲ್ಲಿ ಒಂದು ಪ್ರಯತ್ನ.
ಮತ್ತಕೋಕಿಲವಲ್ಲವೈ ಸಖಿ ಚೆಂದ ಮಾತಿನ ಹಕ್ಕಿ ನಾ
ಮತ್ತದೇನನು ಹೇಳಬೇಕಿದೆ ಚೆನ್ನಕೇಶವ ನಲ್ಲಗೆ
ಸುತ್ತಮುತ್ತಲು ಯಾರುಮಿಲ್ಲವು ಮೆಲ್ಲ ನೀ ನುಡಿ ಬೇಗನೆ
ಉತ್ತರಿಲ್ಲದೆ ಸುಮ್ಮನಿದ್ದರದೇನ ಪೇಳಲಿ ಚೆನ್ನಗೆ?
ಉ: ಕಿವಿಮಾತುಗಳು-ನಿಮಗೆ . ೧೦೦ ವರ್ಷ ಆಯಸ್ಸು?
ಹಂಸಾನಂದಿ
ಅವರೇ
ನಿಮಗೆ . ೧೦೦ ವರ್ಷ ಆಯಸ್ಸು- ಇನ್ನೂ ಹೆಚ್ಚಾಗಲಿ ಎನ್ನುವ ಹಾರೈಕೆ ನನದು...
ಯಾಕೆ?
ಈಗ್ಗೆ ಸ್ವಲ್ಪ ಹೊತ್ತಿನ ಹಿಂದೆ ನಾನೂ-ಗಣೇಶ್ ಅಣ್ಣ ನಿಮ್ಮನ್ನೇ ನೆನಪಿಸಿಕೊಂಡೆವು...
ನಿಮ್ಮದೇ ಬರಹಕ್ಕೆ ಬಂದ ಪ್ರತಿಕ್ರಿಯೆಗಳನ್ನ ಓದಿ..
ರಾಮಾಯಣದಲ್ಲೊಂದು ಮಹಾಭಾರತ! | ಸಂಪದ - Sampada
http://sampada.net/b...
ನಿಮಗೆ ಗೊತ್ತಾಗುತ್ತೆ..
ನೀವ್ ಆಗಾಗ ನಿಮ್ಮ ಹಳೆಯ ಬರಹಗಳನ್ನ ನೋಡುತ್ತ ಇರಿ, ಹೊಸ ಹೊಸ ಪ್ರತಿಕ್ರಿಯೆ ಬಂದಿರುತ್ತವೆ....
ಶುಭವಾಗಲಿ...
ಉ: ಕಿವಿಮಾತುಗಳು-ನಿಮಗೆ . ೧೦೦ ವರ್ಷ ಆಯಸ್ಸು?
ಮಲ್ಲಿಕಾಮಾಲೆ ವೃತ್ತದಲ್ಲಿ ಪದ್ಯವನ್ನು ಬರೆದಿದ್ದೀರಿ. ತುಂಬಾ ಚೆನ್ನಾಗಿದೆ. ಈ ವೃತ್ತದಲ್ಲಿರುವ ವಿಶೇಷವೆಂದರೆ ಬಲಗಡೆಯಿಂದ ಓದಿದರೂ ಎಡಗಡೆಯಿಂದ ಓದಿದರೂ ಒಂದೇಯಾಗಿರುವಂತೆ ಬರೆಯಲು ಸಾಧ್ಯವಿದೆ. ನಿಮ್ಮಂತವರಿಗೆ ಇದು ತುಂಬ ಸುಲಭವೆನಿಸುತ್ತಿದೆ. ಧನ್ಯವಾದಗಳು.