April 21, 2012 - 9:44am
ಕಪ್ಪೆಗಳೆರಡು ಸಾಗುತಲಿದ್ದವು
ಮೊಸರಗಡಿಗೆಗೆ ಜಾರಿ ಬಿದ್ದವು
ಮೊದಲನೆಯ ಕಪ್ಪೆಯು ಇದು ಹುಳಿಯಾಗಿದೆ
ಬಿಳಿಯ ವಿಷವೆ ಇರಬೇಕೆನುತ
ಗೊಣಗಿತು ಗೊಣಗಿತು ಕೊನೆಗೆ
ಮುಳುಗಿ ಸತ್ತೇ ಹೋಯಿತು
ಎರಡನೆ ಕಪ್ಪೆಯು ಯೋಚಿಸಿ ಧೈರ್ಯದಿ
ದಣಿವಾದರು ಬಿಡದೆ ಈಜಿತು ಈಜಿತು
ಒಮ್ಮೆಲೆ ಮೇಲೆ ಬಂದಂತೆನಿಸಿತು
ಛಂಗನೆ ನೆಗೆದು ಜೀವವ ಉಳಿಸಿತು
ಗಡಿಗೆಯಲಿ ಬೆಣ್ಣೆಯ ಮುದ್ದೆಯು ತೇಲುತಲಿತ್ತು !
ಕೇಳಿರಿ ಮಕ್ಕಳೆ ಧನಾತ್ಮಕ ಯೋಚನೆಯು
ದಾರಿಯ ತೋರುತ ತೆರೆಯುವುದು
ನಂಬಿಕೆಯನಿರಿಸಿ ಯತ್ನವ ಮಾಡುತ
ಗುರಿಯನು ತಲಪೋಣ
ಆಧಾರ-ಎರಡು ಕಪ್ಪೆಗಳ ಕಥೆ
ಚಿತ್ರಕೃಪೆ-
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಕೇಳಿರಿ ಮಕ್ಕಳೆ
ಪ್ರೇಮಾ ಅವರೆ,
ನಿಮ್ಮ ಅನುವಾದ ಚೆನ್ನಾಗಿ ಮೂಢಿ ಬಂದಿದೆ. ಅದಕ್ಕೆ ಸೂಕ್ತ ಚಿತ್ರಗಳನ್ನು ಈ ಕೊಂಡಿಗಳು ಒದಗಿಸುತ್ತವೆ. ಸಾಧ್ಯವಾದರೆ ಅವನ್ನೂ ಅಪ್ ಲೋಡ್ ಮಾಡಿ. ಕೊಂಡಿಗಳು:
http://t3.gstatic.co...
http://t3.gstatic.co...
ಉ: ಕೇಳಿರಿ ಮಕ್ಕಳೆ
ವಂದನೆಗಳು ಶ್ರೀಧರ್ ಬಂಡ್ರಿಯವರೆ,
ಪ್ರಜಾವಾಣಿಯಲ್ಲಿ ಭರತ್ ಮತ್ತು ಶಾಲನ್ ಸವೂರ್ ಅವರ "ಸ್ವಸ್ಥ ಬದುಕು "ಅಂಕಣದಲ್ಲಿ ಒಂದು ಕಥೆಯನ್ನು ಓದಿ ಎಂದು ಧನಾತ್ಮಕ ಚಿಂತನೆಯ ಮಹತ್ವವನ್ನು ತುಂಬಾ ಚೆನ್ನಾಗಿ ಬರೆದಿದ್ದರು.ಆ ಕಥೆ ಹೀಗಿದೆ-
ಎರಡು ಕಪ್ಪೆಗಳು ಹಾಲಿನ ಕೆನೆಯಿದ್ದ ಜಾಡಿಯೊಳಗೆ ಜಾರಿ ಬಿದ್ದವು.ಋಣಾತ್ಮಕ ಚಿಂತನೆಯ ಕಪ್ಪೆ "ಓ.. ಇದು ಎಷ್ಟು ಹುಳಿಯಾಗಿದೆ.ಇದು ವಿಷವೆ ಇರಬೇಕು ಎಂದು ಗೊಣಗಿತು. ಆ ಕಪ್ಪೆ ಮೊದಲು ತನ್ನ ಹತಾಶೆಯಲ್ಲಿ ಮುಳುಗಿತು.ಆ ನಂತರ ಕೆನೆಯಲ್ಲಿ ಮುಳುಗಿ ಸತ್ತೇ ಹೋಯಿತು.
ಸಕಾರಾತ್ಮಕ ಚಿಂತನೆಯ ಎರಡನೆ ಕಪ್ಪೆ ನಾನೇನು ಮಾಡಬಹುದೆಂದು ಯೋಚಿಸಿತು. ಅದೇ ಜಾಡಿಯಲ್ಲಿ ಈಜಲು ಆರಂಭಿಸಿತು. ಆಗಾಗ ದಣಿವಾದಂತೆ ಅನ್ನಿಸಿದರೂ ಈಜುವುದನ್ನು ಕೈಕಾಲು ಆಡಿಸುವುದನ್ನು ಬಿಡಲಿಲ್ಲ.ಒಮ್ಮೆಲೆ ಅದಕ್ಕೆ ಮೇಲೆ ಬಂದಂತೆ ಅನ್ನಿಸಿತು.ಒಂದೇ ಒಂದು ಜಿಗಿತದಲ್ಲಿ ಅದು ಜಾಡಿಯಿಂದ ಹೊರಗೆ ಬಿದ್ದಿತ್ತು.ಅದರ ಈಜುವಿಕೆಯಿಂದ ನೀರು, ನೀರಾದ ಹಾಲಿನ ಕೆನೆ ಬೆಣ್ಣೆಯ ಗಟ್ಟಿಮುದ್ದೆಯಾಗಿ ಬದಲಾಗಿತ್ತು.
ಓದಿ ಮುಚ್ಚಿಟ್ಟರೂ ಕಥೆ ನನ್ನನ್ನು ಕಾಡುತ್ತಲೇ ಇತ್ತು. ಪದ್ಯದಂತೆ ಬರೆಯಬೇಕೆನಿಸಿತು. ಸಣ್ಣದೊಂದು ಪ್ರಯತ್ನ ಮಾಡಿದೆ.
<< ನಿಮ್ಮ ಅನುವಾದ ಚೆನ್ನಾಗಿ ಮೂಢಿ ಬಂದಿದೆ.>> ಅನುವಾದವೆನ್ನಲು ಮೊದಲೆ ಬೇರೆ ಭಾಷೆಯಲ್ಲಿ ಇದೆಯಾ?ಇದ್ದರೆ ಅದರ ಕೊಂಡಿ ತಿಳಿಸುವಿರಾ?
<<ಅದಕ್ಕೆ ಸೂಕ್ತ ಚಿತ್ರಗಳನ್ನು ಈ ಕೊಂಡಿಗಳು ಒದಗಿಸುತ್ತವೆ. ಸಾಧ್ಯವಾದರೆ ಅವನ್ನೂ ಅಪ್ ಲೋಡ್ ಮಾಡಿ.>> ನೀವು ಒದಗಿಸಿದ ಕೊಂಡಿಗಳನ್ನು ನೋಡಿದೆ.ಪದ್ಯಕ್ಕೆ ಸೂಕ್ತವಾಗಿದೆ.ಅಪ್ ಲೋಡ್ ಮಾಡಲು ಸಾಧ್ಯವಾಗಬಹುದೇನೊ.ಆದರೆ ನನಗೆ ಕಂಪ್ಯೂಟರ್ ಬಗ್ಗೆ ಹೆಚ್ಚು ತಿಳಿದಿಲ್ಲ.ಅದೇನೊ ಚಿತ್ರಕ್ಕೆ ಸೂಕ್ತ ಕ್ರೆಡಿಟ್ಸ್ ಕೊಡಬೇಕೆನ್ನುತ್ತಾರೆ.ಅದು ಏನು,ಯಾಕೆ,ಹೇಗೆ ಗೊತ್ತಿಲ್ಲ.
ಧನ್ಯವಾದಗಳು.
ಉ: ಕೇಳಿರಿ ಮಕ್ಕಳೆ
ಪ್ರೇಮಾರವರೆ,
ನಿಮ್ಮ ಕವನವನ್ನು ಓದಿದ ಮೇಲೆ ಇದರ ಬಗ್ಗೆ ಎಲ್ಲಿಯೋ ಓದಿದ್ದೇನೆನ್ನಿಸಿತು. ಆದ್ದರಿಂದ ಗೂಗಲ್ ಸರ್ಚಿನಲ್ಲಿ Tale of two frogs ಎನ್ನುವ ಹುಡುಕು ಪದವನ್ನು ಕೊಟ್ಟು ನೋಡಿದಾಗ ಅದಕ್ಕೆ ಇಮೇಜಸ್ ನಲ್ಲಿ ಮೇಲಿನ ಎರಡು ಚಿತ್ರಗಳು ಸೂಕ್ತವೆನಿಸಿದವು. ಆದ್ದರಿಂದ ಆ ಕೊಂಡಿಗಳನ್ನು ಕೊಟ್ಟೆ. ಚಿತ್ರಕ್ಕೆ ಸಂಭಂದಪಟ್ಟ ಮೂಲವನ್ನು ಅಥವಾ ಅದಕ್ಕೆ ಸಂಭಂದ ಪಟ್ಟ ಕೊಂಡಿಯನ್ನು ಕೊಡುವುದನ್ನೇ ಸೂಕ್ತ ಕ್ರೆಡಿಟ್ಸ್ ಕೊಡುವುದು ಅನ್ನುತ್ತಾರಷ್ಟೆ. ಈ ಎರಡು ಕಪ್ಪೆಗಳ ಬಗ್ಗೆ ಸಾವಿರಾರು ಕೊಂಡಿಗಳಿವೆ; ಅದರಲ್ಲಿ ಒಂದು ಹೀಗಿದೆ:
http://www.google.co...
ನಿಮಗೆ ಈ ಮಾಹಿತಿ ಉಪಯೋಗವಾಗಬಹುದೆಂದುಕೊಳ್ಳುತ್ತೇನೆ. ಧನ್ಯವಾದಗಳು.
ಉ: ಕೇಳಿರಿ ಮಕ್ಕಳೆ
ಚಿತ್ರವನ್ನು ಸೇರಿಸಿದೆ.ಶ್ರೀಧರ್ ಬಂಡ್ರಿಯವರೆ ನಿಮ್ಮ ಸಲಹೆಗೆ ಧನ್ಯವಾದಗಳು.
ಉ: ಕೇಳಿರಿ ಮಕ್ಕಳೆ
ಪ್ರೇಮಾ ಅವರೆ,
ನನ್ನ ಸಲಹೆಯನ್ನು ಒಪ್ಪಿಕೊಂಡು ಅದರಂತೆ ಚಿತ್ರಗಳನ್ನು ಸೇರಿಸಿದ್ದಕ್ಕೆ ಧನ್ಯವಾದಗಳು. ಕವನದ ಕೆಳಗಡೆ ಚಿತ್ರಕೃಪೆ : ಎಂದು ನಮೂದಿಸಿ ಚಿತ್ರಗಳ ಕೊಂಡಿಗಳನ್ನು ಕೊಟ್ಟಿದ್ದರೆ ಚಿತ್ರಗಳಿಗೆ ಸೂಕ್ತ ಕ್ರೆಡಿಟ್ಸ್ ಕೊಟ್ಟಂತೆ ಆಗುತ್ತಿತ್ತು.
ಉ: ಕೇಳಿರಿ ಮಕ್ಕಳೆ
ಅಂತೂ ನಿಮ್ಮಸಲಹೆಯಂತೆ ಸೂಕ್ತ ಕ್ರೆಡಿಟ್ಸ್ ಕೊಟ್ಟೆ.ಧನ್ಯವಾದಗಳು ಶ್ರೀಧರ್ ಬಂಡ್ರಿಯವರೆ.
ಉ: ಕೇಳಿರಿ ಮಕ್ಕಳೆ
ಸಂತೋಷ ಪ್ರೇಮಾ ಅವರೆ. ಚಿತ್ರಕ್ರುಪೆ: ಇದರ ಕೆಳಗಡೆ ಎರಡೂ ಕೊಂಡಿಗಳನ್ನು ಕೊಟ್ಟಿದ್ದರೆ ಸರಿಯಾಗುತ್ತಿತ್ತು. :))
ಉ: ಕೇಳಿರಿ ಮಕ್ಕಳೆ
ಪ್ರೇಮ ಅವರೆ,
ಸರಳವಾದ ಹಾಗು ನೀತಿ ಬೊಧಕ ಕವನ ರಚಿಸಿದ್ದೀರಿ,
ಮೆಚ್ಚುಗೆಆಯಿತು.
ಶುಭವಾಗಲಿ
ಉ: ಕೇಳಿರಿ ಮಕ್ಕಳೆ
ರಮೇಶ್ ಕಾಮತ್ ಅವರೆ ಧನ್ಯವಾದಗಳು.ಈ ಮೆಚ್ಚುಗೆ ವಾಸ್ತವವಾಗಿ ಎರಡು ಕಪ್ಪೆಗಳ ಕಥೆ ಯ ಮೂಲ ಲೇಖಕರಿಗೆ ಸಲ್ಲಬೇಕು.ನಾನು ಆ ಕಥೆಯನ್ನು ಆಧಾರವಾಗಿಟ್ಟು ಪದ್ಯಬರೆಯುವ ಪ್ರಯತ್ನ ಮಾಡಿದೆನಷ್ಟೆ.
ಉ: ಕೇಳಿರಿ ಮಕ್ಕಳೆ
ಮಕ್ಕಳಿಗೆ ಹೇಳಲು ಸೊಗಸಾಗಿದೆ, ಪ್ರೇಮಾರವರೇ.
ಉ: ಕೇಳಿರಿ ಮಕ್ಕಳೆ
ಧನ್ಯವಾದಗಳು ಕವಿನಾಗರಾಜ್ ಅವರೆ.
ಉ: ಕೇಳಿರಿ ಮಕ್ಕಳೆ
ಕೇಳಿರಿ ಮಕ್ಕಳೆ ಧನಾತ್ಮಕ ಯೋಚನೆಯು
ದಾರಿಯ ತೋರುತ ತೆರೆಯುವುದು
ನಂಬಿಕೆಯನಿರಿಸಿ ಯತ್ನವ ಮಾಡುತ
ಗುರಿಯನು ತಲಪೋಣ....
=============================
ಪ್ರೇಮ ಅವ್ರೆ
ನೀತಿ ಕವನ ತುಂಬಾ ಚೆನ್ನಾಗಿದೆ...
ಹಿಡಿಸಿತು...
ಸಮಸ್ಯೆಗಳು ಎಲ್ಲೆಡೆ ಎಲ್ಲರಿಗೂ ಬರಬಹುದು...
ಆದರೆ ಧೈರ್ಯವಹ್ಸಿ-ಯೋಚಿಸಿ(ಧನಾತ್ಮಕ)ದರೆ ತೊಂದರೆಯಿಂದ ಪಾರಾಗಬಹುದು....
ಶ್ರೀಧರ್ ಜೀ ಅವರು ಕೊಟ್ಟಿರುವ ಲಿಂಕ್ ಗಳಿಂದ ಫೋಟೋಗಳನ್ನ ಈ ಕವನಕ್ಕೆ ಸೇರಿಸಿ ಆಗ ಕವನ ಇನ್ನಸ್ತು ಚೆನ್ನಾಗಿರುವುದು...
ಶುಭವಾಗಲಿ...
ಉ: ಕೇಳಿರಿ ಮಕ್ಕಳೆ
ಧನ್ಯವಾದಗಳು ಸಪ್ತಗಿರಿಯವರೆ.