~
ಕವಿತೆಗೆ ಹೆಸರು ಕೊಡಿ
ಬತ್ತಿಹೋಯಿತೇಕೋ ಸೆಲೆಯು
ಹೊಸತು ಹಾಡು ಬಾರದು
ಹಸಿವು ನುಂಗಿ ಕಾವು ಇಂಗಿ
ಬಸಿದ ಬಾಳು ಸೇರದು
ಮಸೆದ ಕತ್ತಿ ಅಂಚಿನಂತೆ
ನಾಳೆ ನಾಳು ತೂಗುತಿದೆ
ಕುಸಿದ ಜೀವ ನೂರು ನೋವ
ರಾಡಿಯಲ್ಲಿ ಹೆಣಗುತಿದೆ
ಇಲ್ಲಿ ನಾಳು= ದಿನವೂ . ಈ ಪದ ಪ್ರಯೋಗ ತಪ್ಪೋ ಸರಿಯೊ ತಿಳಿದವರು ಹೇಳಬೇಕು.

- ಕೇವೆಂ ರವರ ಬ್ಲಾಗ್
- Login or register to post comments
- 362 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ಕವಿತೆಗೆ ಹೆಸರು ಕೊಡಿ
ಇದಕ್ಕೆ ’ಬದುಕು’ ಎನ್ನಬಹುದೇ.....
- ನಂದನ್
ನಮ್ಮ ತಾಣ - http://www.satyakagyann.blogspot.com
ಉ: ಕವಿತೆಗೆ ಹೆಸರು ಕೊಡಿ
ನಾಳು ಸರಿ...
ಚನ್ನಾಗಿದೆ..
ಇದಕ್ಕೆ ನನ್ನ ಹೆಸರು ’ಸೋತ ಸೆಲೆ’
=====================================
ಮಾಯ್ಸ!
ಉ: ಕವಿತೆಗೆ ಹೆಸರು ಕೊಡಿ
'ಹೆಣಗು'
-
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಕವಿತೆಗೆ ಹೆಸರು ಕೊಡಿ
"ಅಜ್ಜಯ್ಯನ ಆಲಾಪ"

ಹಾಡು ಚೆನ್ನಾಗಿದೆ,.. ನಗೆ ಉಕ್ಕಲಿ ಅಂತ ಆ ತಲೆಬರಹ...
-------------------------------------------------------------
ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.
ಉ: ಕವಿತೆಗೆ ಹೆಸರು ಕೊಡಿ
ಕೇವೆಂರವರೆ,
ನೀವು ಕೊಟ್ಟಿರವ ಹೆಸರೇ ತುಂಬಾ ಚೆನ್ನಾಗಿದೆ.
"ಕವಿತೆಗೆ ಹೆಸರು ಕೊಡಿ" - ಕವಿಯ ಭಾವವನ್ನು ಗುರುತಿಸಿ ಎಂದು ಹೇಳುತ್ತಿರುವಂತಿದೆ.