ಗಣಿತದ ಮಾಯಾ ಚೌಕಗಳು

ಗಣಿತದ ಮಾಯಾ ಚೌಕಗಳು

ಮಾಯಾ ಚೌಕದ ಮೋಜಿನ ಮೊತ್ತದ

ಲೀಲಾವತಿ ಗ್ರಂಥದ ಸುಲಭದ ಸೂತ್ರ

ಅಕ್ಷರ ಸೃಷ್ಟಿಯು ಜ್ಞಾನದ ಉಳಿವಿಗೆ

ಸಂಖ್ಯಾ ಸೃಷ್ಟಿಯು ವಿಜ್ಞಾನದ ಬೆಳಕಿಗೆ

ಸಂಖೆಯ ಹಂಚುವೆ ಅಷ್ಟದಿಕ್ಪಾಲಕರಿಗೆ

ನಾರದ ಮುನಿಗಳೆ ಸೇರಿಸಿ ಸಭೆಯನು

ಹೇಳಿದ ಗಣಪನು ಮೋದಕ ಸವಿಯುತ

ಕರೆದರು ಮುನಿಗಳು ದಿಕ್ಪಾಲಕರನು

ವರುಣನೆ ಮೊದಲಿಗ ಸಂಖ್ಯಾ ಸಭೆಗೆ

ಗರಿಷ್ಟ ಸಂಖೆಯ ಪಡೆದನು ವರುಣನು

ಅಷ್ಟಮ ಸಂಖೆಯು ಅಗ್ನಿಯ ಪಾಲಿಗೆ

ಸಪ್ತಮ ಸಂಖೆಯು ಕುಬೇರನ ಜೇಬಿಗೆ

ಈಶಾನ್ಯ ಪಡೆದನು ಆರನು ಹರುಷದಿ

ನಾಲ್ಕನೆ ಸಂಖೆಗೆ ನೈರುತ್ಯ ತೃಪ್ತನು

ಯಮನಿಗೆ ಮೂರು ವಾಯುವ್ಯನಿಗೆರಡು

ಕೊನೆಯಲಿ ಬಂದ ಇಂದ್ರನಿಗೊಂದು

ಪಂಚಮ ಸಂಖೆಯ ಪ್ರೀತಿಯ ಗಣಪನು

ತಾನೇ ಕುಳಿತನು ಚೌಕದ ಮಧ್ಯದಿ

ಮಾಯಾ ಚೌಕದ ಮೋಜಿನ ಲೆಕ್ಕವ

ಮಕ್ಕಳು ಮಾಡಲಿ ಸುಲಭದಲೆಂದು

ಕನ್ನಡ ನಾಡಿನ ಹೆಮ್ಮೆಯ ಭಾಸ್ಕರ

ಬರೆದಿಹ ಸೂತ್ರವ ನೆನೆಯುವ ಅನುದಿನ

Rating
No votes yet