ಎನಗಿಂತ ಕಿರಿಯರಿಲ್ಲ, ಶಿವ ಚಕ್ತರಿಗಿಂತ ಹಿರಿಯರಿಲ್ಲ
ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ
ಕೂಡಲಸಂಗಮದೇವಾ ಎನಗಿದೇ ದಿಭ್ಯ.

— ಬಸವಣ್ಣ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಗಣೇಶ ರವರ ಬ್ಲಾಗ್

ರಾಷ್ಟ್ರ ಪ್ರಾಣಿ-ಆನೇನಾ?

ಅಡವಿಯ ರಾಜನಾಗಿ ಮೆರೆಯುತ್ತಿದ್ದ ಸಿಂಹಕ್ಕೆ ಮಾಡಿದಷ್ಟು ಅವಮಾನ ಬೇರೆ ಯಾವ ಪ್ರಾಣಿಗೂ ಮಾಡಿರಲಿಕ್ಕಿಲ್ಲ.


ಅದೇನೂ ಕೇಳಿರಲಿಲ್ಲ. ಆದರೂ ಅದನ್ನು ರಾಷ್ಟ್ರ ಪ್ರಾಣಿಯಾಗಿ ಮಾಡಿದರು. ಕೊನೆಗೆ ವಿನಾಕಾರಣ ಆ ಪದದಿಂದ ಕಿತ್ತೂ ಹಾಕಿದರು.


ಸಿಂಹಾಸನ, ಸಿಂಹಘರ್ಜನೆ, ಸಿಂಹಾವಲೋಕನ ಪದಗಳಿಗಿದ್ದ ಮರ್ಯಾದೆಯನ್ನೂ, ಸಾಮಾನ್ಯ ರಾಜಕಾರಣಿಗಳ ಸೀಟು, ಮಾತು,ವರ್ತನೆಗೆ ಹೋಲಿಸಿ ತೆಗೆದರು.  ಮುಂದೆ ಓದಿ »

ಉಪವಾಸ

ದೇವರ ಧ್ಯಾನದಲ್ಲೇ ಮುಳುಗಿದವನಿಗೆ ಹಸಿವಿನ ಯೋಚನೆಯೇ ಇರುವುದಿಲ್ಲ. ಈ ಉಪವಾಸ ನನ್ನಿಂದ ಸಾಧ್ಯವೇ ಇಲ್ಲ.

ಯಾವಾಗಲೂ "ಅಮ್ಮಾ..ಅಮ್ಮಾ..." ಎಂದು ರಚ್ಚೆ ಮಾಡುವ ಮಕ್ಕಳಿಗೆ ಅಮ್ಮ ಎರಡೇಟು ಕೊಟ್ಟು ದಬ್ಬುವಂತೆ,ದೇವರೂ ದೂರ ಮಾಡಿಯಾರು. ಅದಕ್ಕೆ ಟೈಮ್ ಸಿಕ್ಕಾಗ ದೇವರ ಮುಂದೆ ಮಿನಿಮಮ್ ಬೇಡಿಕೆಗಳ ಪಟ್ಟಿ ಇಟ್ಟು, ಕಾಲಕಾಲಕ್ಕೆ ರಿನೀವಲ್ ಮಾಡುತ್ತಿರುವೆನು.

ಇನ್ನೊಂದು ಉಪವಾಸ- ಊಟ ಇತ್ಯಾದಿ ತಿನ್ನದೇ ಹೊಟ್ಟೆ ಖಾಲಿ ಇಡುವುದು. "ಎಲ್ಲಾರೂ ಮಾಡುವುದು ಹೊಟ್ಟೆಗಾಗಿ"ದಾಸರು ಹೇಳಿಲ್ವೇ?

ನಾನಂತೂ ಹೊಟ್ಟೆ ಪಕ್ಷದವ-

ಬೆಳಗ್ಗೆ "ಟೀ" ವಾಸನೆ ಬಂದಾಗಲೇ ನನಗೆ ಎಚ್ಚರವಾಗುವುದು. ನೆಕ್ಸ್ಟ್ "ನಾಸ್ಟಾ"..  ಮುಂದೆ ಓದಿ »

ದ್ಯಾಡೇಬ್ರಶ್ Vs ಬೇವಿನಕಡ್ಡಿ

ಚಳಿ ಕಮ್ಮಿಯಾಗುತ್ತಾ ಬಂತು..

ಈಗ ಯಾವ ಸೀಸನ್?

..

..ಮದುವೆ ಸೀಸನ್!

ಇನ್ನು ೩-೪ ತಿಂಗಳು ನಾನು busy!

ಮದುವೆಗೆ ಸಂಬಂಧಿಸಿ ನಿಶ್ಚಯ ಇತ್ಯಾದಿ ಎಲ್ಲಾ ಸಮಾರಂಭಗಳಲ್ಲಿ ಇರಲೇಬೇಕಾದ, (ಇದ್ದಾಗ ಲೆಕ್ಕಕ್ಕಿಲ್ಲದ) ಇರದಿದ್ದರೆ ದೊಡ್ಡ issue ಆಗುವ (ನ)ಗಣ್ಯರ ಪಟ್ಟಿಯಲ್ಲಿದ್ದೇನೆ.  ಮುಂದೆ ಓದಿ »

ಬೇವಿನ ಮದ!

ಕೆಲ ವಾರಗಳ ಮೊದಲು, ಬೇವಿನ ಮರದಿಂದ ಬರುತ್ತಿದ್ದ ಹಾಲಿನಂತಹ ಸಿಹಿ ದ್ರವವನ್ನು ಸಂಗ್ರಹಿಸಿ ಜನರು ಕುಡಿಯುತ್ತಿದ್ದುದನ್ನು ಟಿ.ವಿ.ಯಲ್ಲಿ ತೋರಿಸಿದ್ದರು. ಕಹಿ ಕಹಿ ಬೇವಿನಿಂದ ಸಿಹಿ ಹೇಗೆ ಬರಲು ಸಾಧ್ಯ? ಏನಾದರೂ ಕಣ್ಣುಕಟ್ಟು ಮಾಡಿರಬಹುದೆ? ಅಥವಾ ಕಳೆದ ಜನ್ಮದಲ್ಲಿ ಈ ಮರ "ಕಾಮಧೇನು"ವಾಗಿದ್ದು, ಈ ಜನ್ಮದಲ್ಲಿ ಬೇವಿನ ಮರವಾಗಿರಬಹುದೆ?


ಇಲ್ಲ. ಆನೆಗೆ ಮದ ಬರುವಂತೆ, ಬೇವಿನ ಮರಕ್ಕೂ "ಮದ" ಬರುವುದು!!


ನೀರು ಸಾಕಷ್ಟು ಪ್ರಮಾಣದಲ್ಲಿ ಸಿಗುವ ಸ್ಥಳದಲ್ಲಿ ಚೆನ್ನಾಗಿ ಬೆಳೆದ ಕೆಲ ಬೇವಿನ ಮರದ ಎಲೆ, ದೊಡ್ಡಕೊಂಬೆ ಅಥವಾ ಬೇರಿನಿಂದ ಹಾಲಿನ ಬಣ್ಣದ ತೆಳ್ಳಗಿನ ಸಿಹಿ ಸ್ರಾವ ಬರುವುದು.


೭ ವಾರಗಳವರೆಗೂ ಸ್ರವಿಸುವುದು. ೩-೪ ವರ್ಷಗಳ ಅಂತರದಲ್ಲಿ ಕೆಲ ಮರಗಳಲ್ಲಿ ಈ ತರಹ ಸುರಿದ ನಂತರ ಮರ ಒಣಗುವುದು.


ಮದ ಬಂದಾಗ ಮೊದಲಿಗೆ ಮರದಿಂದ ಒಂದು ಸಣ್ಣ ಧ್ವನಿ ಕೇಳುವುದಂತೆ! ನಂತರ ಹಾಲಿನಂತಹ ದ್ರವ ಸುರಿಯುವಾಗ ಧ್ವನಿ ನಿಲ್ಲುವುದಂತೆ!


(ಸಂಗ್ರಹ)


-ಗಣೇಶ.


ಬೇವಿನ ಗುಣಗಾನ ಮುಂದಿನ ಕಂತಲ್ಲಿ..

ದಂತಕತೆ- ಇಮ್ಲೀ ಕಾ ಊತ..

ಒಂದಾನೊಂದು ಕಾಲದಲ್ಲಿ, ಒಂದು ಊರಲ್ಲಿ, ಒಬ್ಬ ಯುವ ವೈದ್ಯರು, ಒಂದು ಚಿಕಿತ್ಸಾಲಯ ಆರಂಭಿಸಿದರು.


ದೂರದ ಊರಲ್ಲಿದ್ದ ವೃದ್ಧ ವೈದ್ಯರು, ಈ ಯುವ ವೈದ್ಯರ ಬುದ್ಧಿವಂತಿಕೆ ಪರೀಕ್ಷಿಸಲು ತೀರ್ಮಾನಿಸಿದರು-ಒಬ್ಬ "ಆರೋಗ್ಯವಂತ" ಯುವಕನ ಕೈಯಲ್ಲಿ ಒಂದು ಪತ್ರ ಕೊಟ್ಟು, ಯುವ ವೈದ್ಯರಿಗೆ ತಲುಪಿಸಲು ಹೇಳಿದರು. ಆ ಊರಿಗೆ ಹೋಗುವಾಗ ರಾತ್ರಿ ಹೊತ್ತಲ್ಲಿ "ಹುಣಸೇಮರ"ದ ಬುಡದಲ್ಲಿ ಮಲಗಬೇಕೆಂದು ಹೇಳಿದರು.


ಆ ಯುವಕ ರಾತ್ರಿ ಹೊತ್ತು ಹುಣಸೇ ಮರದ ಬುಡದಲ್ಲಿ ನಿದ್ರಿಸಿ, ಮರುದಿನ ಯುವವೈದ್ಯರನ್ನು ಭೇಟಿಯಾಗಿ, ಪತ್ರವನ್ನು ಕೊಟ್ಟನು.


ಪತ್ರದಲ್ಲಿ " ಕೃಪೆ ಮಾಡಿ, ಈತನಿಗಿರುವ ರೋಗವನ್ನು ಔಷಧಿ ನೀಡದೇ, ಶೀಘ್ರವೇ ಗುಣಪಡಿಸಿ ಕಳುಹಿಸಿ" ಎಂದಿತ್ತು. ಯುವಕನ ಮೈ ಸ್ವಲ್ಪ ಊದಿರುವುದನ್ನು ಗಮನಿಸಿದ ಯುವವೈದ್ಯರು ಪ್ರಶ್ನಿಸಿದಾಗ, ಆತ ಹಿಂದಿನ ರಾತ್ರಿ ಹುಣಸೇಮರದಡಿ ಮಲಗಿದ್ದನ್ನು ತಿಳಿಸಿದನು.


ಯುವ ವೈದ್ಯರು ಆತನಿಗೆ ಯಾವುದೇ ಔಷಧಿ ನೀಡದೇ, ಮರು ಪ್ರಯಾಣ ಮಾಡುವಾಗ, ಹುಣಸೇ ಮರದಡಿ ಮಲಗದೇ, "_ _ _ _ _"ದ ಬುಡದಲ್ಲಿ ಮಲಗಲು ಹೇಳಿದರು.  ಮುಂದೆ ಓದಿ »

Syndicate content