ಈಗಿನಂತೆ 2 ಸದಸ್ಯರು ಮತ್ತು 94 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಕಥೆ : ವೃತ್ತಿಗೌರವ
partha1059's picture
ಪಾರ್ಥಸಾರಥಿ
17
May
2011
ಲೇಖನ

ವೃತ್ತಿಗೌರವ
ಬಾಚಣಿಗೆಯನ್ನು ಕೈಯಲ್ಲಿ ಹಿಡಿದಿದ್ದ ಕತ್ತರಿಯಿಂದ 'ಟಪ್' ಎಂದು ಬಡೆದು ಮೂಲೆಗೆ ಹೋಗಿ 'ಊಫ್...

ಪ್ರತಿಕ್ರಿಯೆಗಳು: 15
ಹಿಟ್ಸ್ : 760
ಸಂವೇದನ - ಆಗಸ್ಟ್ ತಿಂಗಳ ಕಾರ್ಯಕ್ರಮ "ನೆನಪಿನಂಗಳದಲ್ಲಿ ಕಿ. ರಂ."
Poornapragna's picture
Poornapragna G A
24
Aug
2010
ಪುಟ

ಸ್ನೇಹಿತರೆ,
 
ಭಾನುವಾರ, ಆಗಸ್ಟ್ 29 ರಂದು  ಬೆಳಗ್ಗೆ 10.30ಕ್ಕೆ ಸಂವೇದನ ತಂಡದ ಒಂದು ಒಳ್ಳೆಯ ಕಾರ್ಯಕ್ರಮ "ನೆನಪಿನಂಗಳದಲ್ಲಿ ಕಿ. ರಂ." ಪ್ರಸ್ತುತ...

ಪ್ರತಿಕ್ರಿಯೆಗಳು: 0
ಹಿಟ್ಸ್ : 858
ಕರ್ನಾಟಕ ಪ್ರಿಮಿಯರ್ ಲೀಗ್
rajeshnaik111's picture
20
Nov
2009
ಬ್ಲಾಗ್ ಬರಹ

ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಏನೇ ಹೇಳಲಿ. ರಾಹುಲ್ ದ್ರಾವಿಡ್ ದೂರಾನೇ ಉಳಿಯಲಿ. ಬೃಜೇಶ್ ಪಟೇಲ್ ಮತ್ತು ಒಡೆಯರ್ ಎಷ್ಟೇ ಕಚ್ಚಾಡಿಕೊಳ್ಳಲಿ. ಕರ್ನಾಟಕ ಪ್ರಿಮಿಯರ್...

ಪ್ರತಿಕ್ರಿಯೆಗಳು: 3
ಹಿಟ್ಸ್ : 1,018
ಗುಸು ಗುಸು ಪ್ರಸಂಗ !
bhalle's picture
ಶ್ರೀನಾಥ್ ಭಲ್ಲೆ
22
Mar
2011
ಲೇಖನ

 

ಮೊನ್ನೆ ಹೀಗೇ ಕಾರನ್ನು ಪಾರ್ಕ್ ಮಾಡಿ ಧೂಮಪಾನ ಕ್ಷೇತ್ರವನ್ನು (smoking area) ದಾಟಿ ಹೋಗುತ್ತಿದ್ದೆ. ಸ್ವಲ್ಪವೇ ದೂರದಲ್ಲಿ ಇವರಿಬ್ಬರನ್ನು ಕಂಡೆ. ಒಬ್ಬ...

ಪ್ರತಿಕ್ರಿಯೆಗಳು: 26
ಹಿಟ್ಸ್ : 860
ಹೆಬ್ಬಾಳದ ಹಾಸ್ಟೆಲ್ ದಿನಗಳು
addoor's picture
ಅಡ್ಡೂರು ಕೃಷ್ಣ ರಾವ್
06
Feb
2012
ಲೇಖನ



ಬೆಂಗಳೂರಿನ ಹೆಬ್ಬಾಳದ ವೆಟರ್ನರಿ ಕಾಲೇಜ್ ಹಾಸ್ಟೆಲಿಗೆ...

ಪ್ರತಿಕ್ರಿಯೆಗಳು: 5
ಹಿಟ್ಸ್ : 335
‘ಆಪರೇಷನ್ ಕಾಮನ್ ಕೋಬ್ರಾ’ ಯಶಸ್ವಿ! ಬದುಕುಳಿದ ‘ಗೋದಿ ನಾಗರ’.
harshavardhan v.sheelavant's picture
harshavardhan v. sheelavant
29
Jun
2010
ಪುಟ

...

ಪ್ರತಿಕ್ರಿಯೆಗಳು: 12
ಹಿಟ್ಸ್ : 1,712
ಅನನ್ಯ ಅಲ್ಲಮ ೧೧ (೬)
csomsekraiah's picture
ಸಿ ಸೋಮಶೇಖರಯ್ಯ
22
Sep
2011
ಲೇಖನ

 ಭಾರತ ಭೂಶಿರದ ಕಟ್ಟಕಡೆಯ ಮೃತ್ತಿಕೆಯ ಮೇಲೆ ಕಾಲಿಟ್ಟ ಅಲ್ಲಮಪ್ರಭುವು ಸುತ್ತ ಹಬ್ಬಿ ನಿಂತಿದ್ದ ಅಪಾರ ಜಲರಾಶಿಯ ಅಗಾಧತೆಯನ್ನು ಕಂಡು , ಆ ನಿರ್ಜನ ನಿಶ್ಶೀಮ ವಾತಾವರಣದಲ್ಲಿ...

ಪ್ರತಿಕ್ರಿಯೆಗಳು: 5
ಹಿಟ್ಸ್ : 129
ಭೀಮೇಶ್ವರದ ತುಪ್ಪದ ಕೊಡ
devaru.rbhat's picture
ದೇವರು ಆರ್ ಭಟ್
18
Jan
2011
ಲೇಖನ

ಭೀಮೇಶ್ವರದ ತುಪ್ಪದ ಕೊಡ :
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಮರಗುಡಿ ಸೀಮಾ ವ್ಯಾಪ್ತಿಯ,...

ಪ್ರತಿಕ್ರಿಯೆಗಳು: 2
ಹಿಟ್ಸ್ : 784
ರಾಘವೇಂದ್ರ ಶರ್ಮಾ ತಲವಾಟ ಮತ್ತವರ ಜೇನು ಕೃಷಿ
palachandra's picture
ಪಾಲಚಂದ್ರ
10
Aug
2010
ಬ್ಲಾಗ್ ಬರಹ

ಕಳೆದ ವಾರಾಂತ್ಯ ಸ್ನೇಹಿತರೊಂದಿಗೆ ಮಲೆನಾಡ ಜೋಗ, ಕೆಳದಿ, ತೀರ್ಥಹಳ್ಳಿಯ ಕವಿಶೈಲಕ್ಕೆ ಭೇಟಿ ನೀಡಿ ಬಂದೆ. ತಂಗಿದ್ದು ಜೋಗದ ಬಳಿಯ ತಲವಾಟ ಎಂಬ ಹಳ್ಳಿಯ ಹೋಂ ಸ್ಟೇ ಒಂದರಲ್ಲಿ. ಅದರ...

ಪ್ರತಿಕ್ರಿಯೆಗಳು: 13
ಹಿಟ್ಸ್ : 1,126

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಭಟ್ಟರಿಂದ ಹೊಸ ಪತ್ರಿಕೆ (ಯುಗಾದಿ ಕೊಡುಗೆ)

ಭಟ್ಟರಿಂದ ಹೊಸ ಪತ್ರಿಕೆ (ಯುಗಾದಿ ಕೊಡುಗೆ)

ಅನೇಕ ದಿನಗಳಿಂದ ನಿರೀಕ್ಷಿಸಿದ್ದ ಗಳಿಗೆ ಕಡೆಗೂ ಕೂಡಿ ಬಂದಿತು!

ಚಾತಕ ಪಕ್ಷಿಯಂತೆ ಬಾಯಾರಿದ್ದ ಓದುಗರಿಗೆ ಸ್ವಾತಿ ಮಳೆ ಹನಿಯಲಿದೆ!

ಪತ್ರಿಕಾ ಲೋಕದಲ್ಲಿ ಸುನಾಮಿ ಏಳಲಿದೆ!!

ಹೀಗಂದವರು ನಮ್ಮ ಬೀದಿಯ ದರ್ಶಿನಿ ಹೋಟಲಿನ ಸುಬ್ರಾಯ ಭಟ್ಟರು. ಅವರ ಸಂಪಾದಕತ್ವದಲ್ಲಿ ಮುಂದಿನ ಯುಗಾದಿ ಸಮಯಕ್ಕೆ "ಅಡುಗೆ" ವಿಷಯಕ್ಕೆ ಸಂಬಂಧಿಸಿದ ದಿನ ಪತ್ರಿಕೆ ಬರುವುದಂತೆ!

ಮುಂದಿನ ಪುಟದಲ್ಲೇ ಬಾಯಲ್ಲಿ ನೀರೂರಿಸುವಂತಹ ಹೊಸ ಹೊಸ ಅಡುಗೆಯ ಚಿತ್ರ-ಲೇಖನಗಳು, ಉಚಿತ ಸ್ಯಾಂಪ್‌ಲ್‌ನೊಂದಿಗೆ! ಒಳಪುಟಗಳಲ್ಲಿ ಹೋಟಲ್‌ಗಳು ಹಾಗೂ ಅಲ್ಲಿನ ವಿಶೇಷ ತಿನಿಸುಗಳ ವಿವರ, ಕನ್ಷೆಷನ್ ಕೂಪನ್‌ಗಳ ಜತೆ! ಕೊನೆಯ ಅರ್ಧ ಪುಟದಲ್ಲಿ ಮಾತ್ರ ಆ ದಿನದ ರಾಜಕೀಯ+ಸಿನೆಮಾ+ಕ್ರೀಡಾ ಸುದ್ದಿಗಳು ಇರುವುದಂತೆ.

ಎಕ್ಸ್ಟ್ರಾ ಹತ್ತು ರೂ ಕೊಟ್ಟರೆ ಪತ್ರಿಕೆ ಜತೆ "ರೆಡಿ ಟು ಈಟ್" ತಿನಿಸು ಸಹ ಬೆಳಗ್ಗೆ ಬೆಳಗ್ಗೆ ನಿಮ್ಮ ಮನೆಬಾಗಿಲಿಗೆ ಬರಲಿದೆ.

ಅಡುಗೆ ಮಾಡಲು ಉದಾಸೀನ ಕ್ಷಮಿಸಿ ಸಮಯವಿಲ್ಲದ ನಾರಿಯರೇ, ತಮ್ಮ ಮನೆಯವರನ್ನು ಕೂಡಲೇ ನಿಮ್ಮ ಏರಿಯಾದ ಪತ್ರಿಕಾ ವಿತರಕರ ಬಳಿಗೆ ಅಟ್ಟಿ..

 ಅಥವಾ ಬೆಳ್ಳಂಬೆಳಗ್ಗೆ ಪತ್ರಿಕೆ ಓದುತ್ತಾ ಗೋಬೀ ಮಂಚೂರಿ ತಿನ್ನುತ್ತಿರುವ ಪಕ್ಕದ ಮನೆ ಪಂಕಜಮ್ಮನವರನ್ನು ನೋಡಿ ಹೊಟ್ಟೆ ಉರಿಸಿಕೊಳ್ಳಿ..

-ಗಣೇಶ.

Average: 5 (1 vote)
909 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
ksraghavendranavada's picture
01
Apr
2011
7:55

ಉ: ಭಟ್ಟರಿಂದ ಹೊಸ ಪತ್ರಿಕೆ (ಯುಗಾದಿ ಕೊಡುಗೆ)

ಬೆಳ ಬೆಳಿಗ್ಗೇನೆ ನಾವೇ ಸಿಕ್ಕಿದ್ದಾ... ಬೇರೆ ಯಾರೂ ಸಿಗಲಿಲ್ಲವೇ?
ಹ.ಹ.ಹ. ನಿಮ್ಮ ಭಟ್ಟರಲ್ಲಿ ಅ೦ಚೆ ಮೂಲಕ ಕಳುಹಿಸುವ ಎರ್ಪಾಡು ಇದೆಯೋ ಕೇಳಿ... ನನ್ನ ಹೆಸರಿನಲ್ಲಿ ನೀವೇ ಹಣ ಕಟ್ಟಿ, ಪತ್ರಿಕೆಯನ್ನು ಮಾತ್ರ ನನಗೆ ಕಳುಹಿಸುವ೦ತವರಾಗಿ ಗಣೇಶಣ್ಣ..
ಇವತ್ತು ಏಪ್ರಿಲ್ ಒ೦ದು ಅ೦ತ ನ೦ಗೊತ್ತಿಲ್ಲ ಅನ್ಕೊ೦ಡ್ರಾ...!!!

ಗಣೇಶ's picture
01
Apr
2011
11:42

ಉ: ಭಟ್ಟರಿಂದ ಹೊಸ ಪತ್ರಿಕೆ (ಯುಗಾದಿ ಕೊಡುಗೆ)

:) :)
>>ಇವತ್ತು ಏಪ್ರಿಲ್ ಒ೦ದು ಅ೦ತ ನ೦ಗೊತ್ತಿಲ್ಲ ಅನ್ಕೊ೦ಡ್ರಾ...!!!
-ಗೊತ್ತಿದ್ದೂ ಓದಿದ ಹಾಗೂ ಮೆಚ್ಚಿದ ತಮಗೆ ಹಾಗೂ ಕಾಮತ್, ಚಿಕ್ಕು, ಆಸುಹೆಗ್ಡೆಯವರಿಗೆ ತುಂಬಾ ತುಂಬಾ ಧನ್ಯವಾದಗಳು.
ಗಣೇಶ.

ಗಣೇಶ's picture
04
Apr
2011
11:01

ಉ: ಭಟ್ಟರಿಂದ ಹೊಸ ಪತ್ರಿಕೆ (ಯುಗಾದಿ ಕೊಡುಗೆ)

ಮೆಚ್ಚಿದ ಕವಿನಾಗರಾಜ್, ಭಲ್ಲೇಜಿ, ದುಬೈಮಂಜಣ್ಣನವರಿಗೆ ಧನ್ಯವಾದಗಳು,
-ಗಣೇಶ.

ಗಣೇಶ's picture
14
Apr
2011
12:20

ಉ: ಭಟ್ಟರಿಂದ ಹೊಸ ಪತ್ರಿಕೆ (ಯುಗಾದಿ ಕೊಡುಗೆ)

ಮೆಚ್ಚಿದ ಇಬ್ಬರೂ ಗೋಪಾಲರಿಗೆ ಹಾಗೂ ಉಳಿದ ಸಂಪದ ಮಿತ್ರರಿಗೆ ಯುಗಾದಿಯ(ಸೌರಮಾನ) ಶುಭಾಶಯಗಳು
-ಗಣೇಶ.

sasi.hebbar's picture
18
Apr
2011
5:31

ಉ: ಭಟ್ಟರಿಂದ ಹೊಸ ಪತ್ರಿಕೆ (ಯುಗಾದಿ ಕೊಡುಗೆ)

ಭಟ್ಟರ ಹೊಸ ಪತ್ರಿಕೆಯಲ್ಲಿ, "ನೂರೆಂಟು ರುಚಿ" ಮತ್ತು "ಸಿಂಹ ಘರ್ಜನೆ" ಎಂಬ ಹೊಸ ಅಂಕಣಗಳೂ ಇರುತ್ತವಂತೆ , ಹೌದಾ?

ಗಣೇಶ's picture
18
Apr
2011
11:10

ಉ: ಭಟ್ಟರಿಂದ ಹೊಸ ಪತ್ರಿಕೆ (ಯುಗಾದಿ ಕೊಡುಗೆ)

:) :)
"ನೂರೆಂಟು ರುಚಿ"ಯಲ್ಲಿ ಭಟ್ಟರು ಕೈಯಾರೆ ಮಾಡಿದ ಅಡುಗೆ ಸವಿ ಸವಿಯಬಹುದು.
"ಸಿಂಹಘರ್ಜನೆ" ಅಂದ್ರೆ ಭಯ ಬೀಳಬೇಡಿ. ಭೋಜನವೇ..ಮಸಾಲೆ ಇತ್ಯಾದಿ ಜಾಸ್ತಿ ಇರುವ ನಾನ್ ಅಡುಗೆಗಳ ಬಗ್ಗೆ ಪ್ರಸಿದ್ಧ ಅಂಕಣ ಖಾರರ ಬರಹ.
-ಗಣೇಶ.

venkatb83's picture
09
Jan
2012
8:07

ಉ: ಭಟ್ಟರಿಂದ ಹೊಸ ಪತ್ರಿಕೆ (ಯುಗಾದಿ ಕೊಡುಗೆ)

ಬೆಳ್ಳಂಬೆಳಗ್ಗೆ ಪತ್ರಿಕೆ ಓದುತ್ತಾ ಗೋಬೀ ಮಂಚೂರಿ ತಿನ್ನುತ್ತಿರುವ ಪಕ್ಕದ ಮನೆ ಪಂಕಜಮ್ಮನವರನ್ನು ನೋಡಿ ಹೊಟ್ಟೆ ಉರಿಸಿಕೊಳ್ಳಿ.

ನಾ ನಿಮಗೆ ಗೋಬಿ ಕೊಡಲಿಲ್ಲ ಅಂತ ನೀವು, ನನ್ನ ಅನುಮತಿ ಇಲ್ಲದೆ ನಾ 'ಗೋಬಿ ಮಂಚೂರಿ' ತಿನ್ನುವ ಬಗ್ಗೆ 'ಗೇಲಿ' ಮಾಡಿ ಬರೆದ ನಿಮ್ಮನ್ನ ಅಂತರ ರಾಷ್ಟ್ರೀಯ ನ್ಯಾಲಯಕ್ಕೆ .
.
.
.
.
.
.
.
.
.
.
.
.
'ಎಳೆಯದೆ',
ನಮ್ಮ 'ಮಹಿಳಾ ಸಂಘಕ್ಕೆ' ಕರೆಸಿ 'ಘಂಟೆಘಟ್ಟಲೇ' ಒಂಟಿ ಗಾಲಲಿ ನಿಲ್ಲಿಸಿ 'ಧನ್ಡಿಸಿ' ಆಮೇಲೆ 'ವಾಗ್ಧಂಡನೆ'
.....ದು

ಇಂತಿ
ಪಕ್ಕದ್ ಮನೆ ಪಂಕಜ....

>>>>ಏಪ್ರಿಲ್ 'ಒಂದಕ್ಕೆ' ಈ ಬರಹ ಬರೆದು ನೀವು ಅದೇಸ್ಟು ಜನರನ್ನ ಬೇಸ್ತು ಬೀಳಿಸಿದಿರೋ!! ಯಾರೂ 'ಹಣ' ಕಲಿಸಿಲ್ಲ ತಾನೇ:(

ಓದಿ :()

ನಿಮ್ಮ ಬರಹಕ್ಕೆ ಬಂದ ಪ್ರತಿಕ್ರಿಯೆಗಳು ಓದಿ ಇನ್ನಸ್ಟು :() :( :)