19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಕುಡಿಯುವ ನೀರನ್ನು ಕ್ಲೋ'ರಿನ್'ನಿಂದ ತೊಳೆಯಬಹುದೇ?

June 13, 2008 - 12:18am
ಗಣೇಶ
“ ಈ ದಿನದ ನ್ಯೂಸ್- ವಿದ್ಯಾರ್ಥಿಗಳು ಅಸ್ವಸ್ಥ ತುಮಕೂರಿನ ನಗರಸಭೆ ನೀರು ಶುದ್ಧೀಕರಣಗೊಳಿಸಲು ತಂದಿಟ್ಟಿದ್ದ ಕ್ಲೋರಿನ್ ಅನಿಲಟ್ಯಾಂಕ್ ಸೋರಿ ಅದನ್ನು ಸೇವಿಸಿದ ೩೫ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಬುಧವಾರ ಬೆಳಗ್ಗೆ(೧೧-೬-೦೮) ಈ ಅನಿಲ ಸೇವಿಸಿ ಸಿದ್ದಗಂಗಾ ಮಹಿಳಾ ಕಾಲೇಜು ಮತ್ತು ಸೈಂಟ್ ಮೇರೀಸ್ ಕಾಲೇಜು ವಿದ್ಯಾರ್ಥಿಗಳು ಉಸಿರಾಟದ ತೊಂದರೆಯಿಂದ ನೆಲಕ್ಕುರುಳಿದರು.” ---ಗಾಳಿಯಲ್ಲಿ ಬೆರೆತ ಸ್ವಲ್ಪ ಕ್ಲೋರಿನ್ ಇಷ್ಟು ಹಾನಿ ಮಾಡಿದರೆ, ನೀರಿನಲ್ಲಿ ಬೆರೆಸಿದ್ದು (ನೀರನ್ನು ಸಾಂಕ್ರಾಮಿಕ ರೋಗ ತರುವ ಕ್ರಿಮಿಗಳಿಂದ ಶುದ್ಧ ಮಾಡಿರಬಹುದು) ದೇಹಕ್ಕೆ ಒಳ್ಳೆಯದೇ? ನಳ್ಳಿಯಲ್ಲಿ ನೀರು ಬರುವ ದಿನ ಜನ (ಜಗಳಾಡಿಕೊಂಡು :) ) ಕುಡಿಯುವ ನೀರಿನ ಸಂಗ್ರಹ ಮಾಡುವರು. ಕೆಲವರು ಬೆಳಗೆದ್ದ ಕೂಡಲೇ ೨-೩ ಲೋಟ ನೀರು ಕುಡಿಯುವರು-ಆರೋಗ್ಯಕ್ಕೆ ಒಳ್ಳೆಯದೆಂದು! ಎಷ್ಟು ನೀರಿಗೆ ಎಷ್ಟು ಪ್ರಮಾಣದಲ್ಲಿ ಕ್ಲೋರಿನ್ ಸೇರಿಸುವರು-ಅದರ ಬಗ್ಗೆ ತಿಳಿಯಲು BWSSB ಯ ವೆಬ್ ಸೈಟಲ್ಲಿ ಹುಡುಕಿದರೆ ಅದರ ಬಗ್ಗೆ ವಿವರವಿಲ್ಲ. ಕ್ಲೋರಿನ್ ಯುಕ್ತ ನೀರಿನಿಂದಾಗುವ ಹಾನಿಯ ಬಗ್ಗೆ google ನಲ್ಲಿ ‘The negative health effects of chlorine ‘ ಕ್ಲಿಕ್ ಮಾಡಿ ನೋಡಿ. ಕ್ಲೋರಿನ್ ಬದಲಿ ಉಪಯೋಗಿಸಲು ಬೇರೆ ಆಯ್ಕೆಗಳೂ ಇವೆ. ಎಲ್ಲಕ್ಕಿಂತಲೂ ಉತ್ತಮ- ಸಂಪದದ ಎಡ/ಬಲದಲ್ಲಿರುವ ವಾಟರ್ ಪೋರ್ಟಲ್ ಕ್ಲಿಕ್ ಮಾಡಿ ಓದಿ- ‘ಮಳೆ ನೀರು ಸಂಗ್ರಹಿಸಿ’ -ಗಣೇಶ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.