~
ಕಾವೇರಿ ನೀರಿಡಾರ್ ಯೋಜನೆ
ಈ ಯೋಜನೆಯ ಕರಡುಪ್ರತಿ ಸಿದ್ಧವಾಗುತ್ತಿದೆ.ಅದರ ಒಂದು ಝಲಕ್ ಇಲ್ಲಿದೆ.
ಜನಾಪ್ರಿಯ ಸರಕಾರ ಬಂದಾಗ ಈ ಯೋಜನೆ ಸುರುಮಾಡಲಾಗುವುದು.
FAQs :-
೧. ಏನಿದು ಈ ನೀರಿಡಾರ್ ಯೋಜನೆ ?
ಶ್ರೀಮಂತರ ಕಾರು, ಬೆಂಗಳೂರಿನಿಂದ ಮೈಸೂರಿಗೆ ವೇಗವಾಗಿ ಹೋಗಲು ಸುರು ಮಾಡಿದ,
‘ಕಾರಿ’ಡಾರ್‌ನಂತೆ, ಕೊಡಗಿನಿಂದ ನೀರು ಹೊಗೆನಕಲ್ ಮೂಲಕ ಚನ್ನೈಗೆ ವೇಗವಾಗಿ
ಹೋಗಲು ಸುರುಮಾಡಿದ ಯೋಜನೆ ‘ನೀರಿ’ಡಾರ್..
೨. ಕೊಡಗಿನಿಂದಲೇ ಏಕೆ ?
ಕಾವೇರಿ ನದಿ ಕೊಡಗಿನಿಂದ ಹರಿಯುತ್ತಾ ಹಾದಿಯುದ್ದಕ್ಕೂ ಮಲಿನವಾಗುತ್ತಾ,
ತಮಿಳುನಾಡು ತಲುಪುವುದು. ನಮ್ಮ ಸಹೋದರರೇ ಆ ‘ಕೊಳಕು’ ನೀರು ಕುಡಿಯಲು
ಉಪಯೋಗಿಸುವುದು ಬೇಸರದ ಸಂಗತಿ. (ಮೇಲಿಂದ ಮೇಲೆ ಕೋರ್‍ಟ್‌ನಲ್ಲಿ ಕೇಸು ಹಾಕಿ,
ಹಾಕಿ,ತಮಿಳು ನಾಡೇ ಈ ಬೇಡಿಕೆ ಕೇಳುವ ಮೊದಲೇ) ಕಾವೇರಿಯ ಉಗಮದಿಂದಲೇ
ಶುದ್ಧ ನೀರನ್ನು ಕೊಳವೆ ಮೂಲಕ ತಮಿಳುನಾಡಿಗೆ ತಲುಪಿಸುವುದು ಈ ಯೋಜನೆಯ
ಗುರಿ.
೩. ಕನ್ನಡಿಗ ರೈತರ ಗತಿ ?
ಈಗೇನು ಚೆನ್ನಾಗಿದೆಯಾ? ಈಗ ಸಿಗುತ್ತಿರುವ ಸ್ವಲ್ಪ ನೀರು ಉಪಯೋಗಿಸಿ ಅವರು
ಬೆಳೆದ ಬೆಳೆಗೆ ಚಿಕ್ಕಾಸೂ ಬೆಲೆಯಿಲ್ಲ.
ಸಾಲಮಾಡಿ ಬೆಳೀತಾರೆ, ಸಾಲಮಾಡಿ ಸಾಗಿಸುತ್ತಾರೆ,
ಬೆಲೆಯಿಲ್ಲದೇ ರಸ್ತೆಗೆ ಚೆಲ್ಲಿ, ಸಾಲಮಾಡಿ ಹಿಂದೆ ಬರುತ್ತಾರೆ.
ಎಲ್ಲಾ ರಾಜಕಾರಣಿಗಳೂ ಹರಿಸುವ ಮೊಸಳೆ ಕಣ್ಣೀರನ್ನೇ ಸಂಗ್ರಹಿಸಿದರೆ ೩೦೦
ಟಿ.ಎಮ್.ಸಿ ದಾಟುವುದು.ಅದನ್ನೇ ಸಂಗ್ರಹಿಸಿ ಮುಂದಿನ ಬೆಳೆಗೆ
ಉಪಯೋಗಿಸಲಿ. ಅಥವಾ-
ಅವ್ರ ಜಮೀನು ಕೊಟ್ಟರೆ, ನಮ್ಮ ಸ್ಯಾಟಲೈಟ್ ಟೌನ್‌ಷಿಪ್‌ನಲ್ಲಿ ಒಂದು ಫ್ಲಾಟ್,
ಇಲ್ಲಾ ಅವರ ಜಮೀನಿನಲ್ಲಿ ಐ.ಟಿ., ಬಿ.ಟಿ.,ಮಾಡಿ ನೌಕರಿ ಕೊಡಿಸುವೆವು.
೪. ಅದ್ಸರಿ..ಬೆಂಗಳೂರಿಗರಿಗೆ ನೀರು?
ಆಕಾಶದೆತ್ತರಕ್ಕೆ ದಿನೇ ದಿನೇ ಬೆಳೆಯುತ್ತಿರುವ ಬೆಂಗಳೂರಿಗೆ, ಈಗ ಸಿಗುವ
ಕಾವೇರಿ ನೀರು ಎಲ್ಲಿಗೆ ಸಾಕು? ರಿ..ರಿ..ರಿಸೈಕಲ್ ಮಾಡಿ ಉಪಯೋಗಿಸಬೇಕು.
ನಮ್ಮ ಈ ಯೋಜನೆ ಯಲ್ಲಿ ಸಂಗ್ರಹವಾದ ಹಣದಲ್ಲಿ ಅಲ್ಲಲ್ಲಿ ನೀರು ಬಂಕ್
ತೆರೆದು ಹಿಮಾಲಯದಿಂದಲೇ ಮಿನರಲ್ ವಾಟರ್ ತರಿಸಿ ಹಂಚುವೆವು.
ಐ.ಟಿ...ಯವರು ಅಮೆರಿಕನ್ ಡಾಲರ್ ಜತೆ ವಾಟರ್ ತರಿಸುವರು.ಭಯಬೇಡ.

- ಗಣೇಶ ರವರ ಬ್ಲಾಗ್
- Login or register to post comments
- 402 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಕಾವೇರಿ ನೀರಿಡಾರ್ ಯೋಜನೆ
ಹ್ಹ ಹ್ಹ ! ಸೊಗಸಾಗಿದೆ.
-ಹಂಸಾನಂದಿ
ಉ: ಕಾವೇರಿ ನೀರಿಡಾರ್ ಯೋಜನೆ
ಬೆಂಗಳೂರಿಗೆ ಕಾವೇರಿ ಹರಿಸ್ತಾ ಇರೋದಂತೂ ದಿಟ..
ವಿದ್ಯಾರಣ್ಯಪುರಕ್ಕೂ ಕಾವೇರಿ ಬತ್ತಾಳಂತೆ! ದಿಟವಾಗ್ಲೂ ಆಗ್ಲೇ ಗಾರೆ-ಕೊಳವೆಗಳನ್ನ ಹಾಕವ್ರೆ!
ಉ: ಕಾವೇರಿ ನೀರಿಡಾರ್ ಯೋಜನೆ
ಹಂಸಾನಂದಿಯವರಿಗೆ ನನ್ನಿ.
ಮಹೇಶ ವಿದ್ಯಾ'ರಣ್ಯ'ಪುರ ವಾಸಿಯೋ?
ಕಾವೇರಿ ಕನಸು!
ಉ: ಕಾವೇರಿ ನೀರಿಡಾರ್ ಯೋಜನೆ
ರೀ ಕಾವೇರಿ ಕನಸೇನು ಬಂತು.. ನಾನು ಹುಟ್ಟು ಕಾವೇರಿ ಕಂದ
.. ಮಂಡ್ಯ-ಮಯ್ಸೂರಲ್ಲಿ ೨೧ ವರುಶ ಹುಟ್ಟಿ-ಬದುಕಿದ್ದೀನ್ರಿ!
ನಾನ್ ಚಂದ್ರ ಲೋಕದಲ್ಲೂ ಕಾವೇರಿ ಕನಸ್ ಕಾಣೋದ್ರಲ್ಲಿ ಅರ್ತ ಇದ್ದೇ ಇರ್ತಯ್ತೆ!
ಉ: ಕಾವೇರಿ ನೀರಿಡಾರ್ ಯೋಜನೆ
ಏನ್ರೀ ಇದು ? ನೀವು ಕನ್ನಡ ಲೋಕ ಬಿಟ್ಟೂ ಬೇರೆ ಲೋಕದ ಕಡೆ ಕಣ್ಣೂ ಹಾಯಿಸ್ತಾ ಇದ್ದೀರಾ ?