ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › ಗಣೇಶ ರವರ ಬ್ಲಾಗ್

ಪುಸ್ತಕ ಪ್ರೇಮಿ?

March 15, 2008 - 12:10am — ಗಣೇಶ

ಈ ಕಂಪ್ಯೂಟರ್ ಯುಗದವರಿಗೆ ನಮ್ಮ ಕಾಲದವರ(ಮುದುಕರ?) ಕಷ್ಟ ಗೊತ್ತಾಗಲಿಕ್ಕಿಲ್ಲ. ಹಿಂದೆ ಏನಾದರೂ ವಿಷಯ ತಿಳಕೊಳ್ಳಲು ಮನೆಯಲ್ಲಿರುವ ಅಥವಾ ಲೈಬ್ರೇರಿಯ ಪುಸ್ತಕಗಳನ್ನು ಹುಡುಕಾಡಬೇಕಿತ್ತು.

ಲೈಬ್ರೇರಿಗೆ ಹೋಗಿ ಪುಸ್ತಕಗಳನ್ನು ಹುಡುಕಿ, ಖಾಲಿ ಕುರ್ಚಿ ಸರಿಮಾಡಿ, ಬ್ಯಾಲೆನ್ಸ್ ಮಾಡಿಕೊಂಡು ಕುಳಿತು, ಪುಸ್ತಕ ತೆರೆದು ನಮಗೆ ಬೇಕಾದ ಪುಟ ಹುಡುಕಿದರೆ ಆ ಹಾಳೆನೇ ನಾಪತ್ತೆ.
ಮನೆಯಲ್ಲಿದ್ದ ಪುಸ್ತಕಗಳಲ್ಲಿ ನಾವು ಹುಡುಕುತ್ತಿದ್ದ ವಿಷಯಗಳನ್ನೇ ಯಾರೋ ತಿಂದು ಬಿಟ್ಟಿರುತ್ತಿದ್ದರು.
ಲೈಬ್ರೇರಿಯಲ್ಲಿ ಸೀಝರ್ ಫಿಶ್‌ಗಳು ಹಾಳೆಗಳನ್ನು ಕತ್ತರಿಸಿ ಎಗರಿಸಿದರೆ,
ಮನೆಯಲ್ಲಿ ಸಿಲ್ವರ್ ಫಿಶ್‌ಗಳು ಹಾಳೆಗಳನ್ನು ಸೊಗಸಾಗಿ ಕತ್ತ್ರಿಸಿ ತಿಂದು ಮುಗಿಸಿರುತ್ತವೆ.
ಕಳೆದ ಜನ್ಮದಲ್ಲಿ ಓದಿ,ಓದಿ ಅರಗಿಸಿಕೊಳ್ಳಲಾಗದಿದ್ದವರು ಈ ಜನ್ಮದಲ್ಲಿ ಸಿಲ್ವರ್ ಫಿಶ್ ಆಗಿದ್ದಾರೋ ಏನೋ?
ಟಿ.ವಿ., ಕಂಪ್ಯೂಟರ್ ನಿಂದಾಗಿ ಇವೆರಡು ಫಿಶ್‌ಗಳು ವಿನಾಶದಂಚಿಗೆ ತಲುಪಿದ್ದಾವೆ !!

ಹೊಸ ಮನೆ ಗೃಹ ಪ್ರವೇಶಕ್ಕೆ ಹೋದಾಗ ಟಿ.ವಿ., ಫ್ರಿಡ್ಜ್, ಕಂಪ್ಯೂಟರ್, ಗ್ಯಾಸ್, ಬಟ್ಟೆಬರೆ, ದೇವರು.. .. ಎಲ್ಲಾ ಇಡಲು ವ್ಯವಸ್ಥೆ ಮಾಡಿರುವುದನ್ನು ಕರೆದು,ಕರೆದು,ಕೊರೆದು ತೋರಿಸುವರು. ಇದು ನೋಡಿ ಪುಸ್ತಕಗಳನ್ನು ಇಡಲು ಸ್ಥಳ ಎಂದು ಒಬ್ಬ.. ..ಊಹೂಂ.,
ಪುಸ್ತಕಗಳೇ ಸಿಗದಿದ್ದಲ್ಲಿ ಸಿಲ್ವರ್ ಫಿಶ್‌ಗಳ ಗತಿ? ಬರೀ ಅರ್ಧದಿಂದ ಹೆಚ್ಚೆಂದರೆ ಒಂದು ಇಂಚಿನವರೆಗೆ ಬೆಳೆಯುವ ಈ ಪುಟಾಣಿಯ ‘ಉಳಿವಿ’ಗಾಗಿ ಇದರ ಬಗ್ಗೆ ಓದಿದಾಗ ಸಿಕ್ಕ ಕೆಲ ವಿಷಯಗಳು-
ಇವುಗಳಿಗೆ ಪುಸ್ತಕ ಮಾತ್ರ ಆಹಾರವಲ್ಲ. ತಲೆಹೊಟ್ಟು, ಅಂಟು, ಫೋಟೋ,ಕೂದಲು,ಹತ್ತಿ, ಸಿಲ್ಕ್‌ಸೀರೆ..ಏನೂ ಸಿಗದಿದ್ದರೆ ಚರ್ಮದ ಚೀಲ,ಚಪ್ಪಲನ್ನೂ ತಿನ್ನುವುದು. ಆಹಾರವಿಲ್ಲದೇ ಒಂದು ವರ್ಷ ಬದುಕಬಲ್ಲವಂತೆ!(ಇವುಗಳ ಮೆನು ನೋಡಿದರೆ ಅಂತಹ ಸಮಯ ಬರಲಿಕ್ಕಿಲ್ಲ ಬಿಡಿ.)
೨ ರಿಂದ ೮ ವರ್ಷದ ಜೀವಿತಾವಧಿಯಲ್ಲಿ ಒಂದು ಹೆಣ್ಣು ಅಂದಾಜು ೧೦೦ ಮೊಟ್ಟೆಗಳನ್ನಿಡಬಹುದು. ಚುರುಕಾಗಿ ಓಡಾಡುವ ಇದು ರಾತ್ರಿ ಸಂಚಾರಿಯಾದದ್ದರಿಂದ ಸಾಮಾನ್ಯವಾಗಿ ಕಾಣ ಸಿಗದು.

ಇವುಗಳ ನಿವಾರಣೆಗೆ ಟೇಪ್ ಸಹಿತ ಒದ್ದೆ ಬಟ್ಟೆ ಅವು ಓಡಾಡುವ ಸ್ಥಳದಲ್ಲಿ ಇಡಬೇಕು. ಅಥವಾ ನ್ಯಾಫ್ತಲೀನ್ ಬಾಲ್‌ಗಳನ್ನು ಇಟ್ಟರೂ ಸಾಕು. ಆದರೆ ಪಾಪ ಪುಸ್ತಕ ಪ್ರೇಮಿಯನ್ನು ಕೊಲ್ಲುವುದು ಸರಿಯೇ?

  • ಸಿಲ್ವರ್ ಫಿಶ್
~.~
  • ಗಣೇಶ ರವರ ಬ್ಲಾಗ್
  • Login or register to post comments
  • 184 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪುಸ್ತಕ ನಿಧಿ - ಕಂಪ್ಯೂಟರ್ ಕುರಿತು ಅದ್ಭುತ ಪುಸ್ತಕ
  • OLN ರವರ ಪುಸ್ತಕ - ಲೋಕಾಂತ ಏಕಾಂತ
  • ಪುಸ್ತಕಗಳನ್ನು ಯಾಕೆ ಇಟ್ಟುಕೊಳ್ಳಬೇಕು?
  • ಪುಸ್ತಕಗಳನ್ನು ಓದುವ/ ಇಟ್ಟುಕೊಳ್ಳುವ ಕುರಿತು
  • ಪುಸ್ತಕ ಯಾಕೆ ಇಟ್ಟುಕೊಳ್ಳಬೇಕು: ಭಾಗ ಎರಡು
Syndicate content

ಲೇಖಕರು

ಗಣೇಶ's picture

ಪರಿಚಯ

ಕನ್ನಡ ಬಲು ಇಷ್ಟ
ಇಂಗ್ಲೀಷ್/ಕಂಪ್ಯೂಟರ್ ಸ್ವಲ್ಪ ಕಷ್ಟ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೧)
  • ನೆನೆವುದೆನ್ನ ಮನ ಕರ್ನಾಟಕ ದೇಶವಮ್
  • ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
  • ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
  • ಮೊಬೈಲ್ ಕಥೆ
  • ಭಾರತೀಯರು ನರಕಕ್ಕೆ ಹೋದ್ರೆ ಏನ್ ಮಾಡ್ತಾರೆ?
  • ದಿನಚರಿಯ ಒಂದು ದಿನ...
  • ಈ ಗಾದೆಗಳು ಗೊತ್ತಾ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • girish.rajanal
    ಉ: ಹಣ "investment"
    July 9, 2008 - 5:03pm
  • cmariejoseph
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 4:50pm
  • cmariejoseph
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 4:47pm
  • cmariejoseph
    ಉ: ಕನ್ನಡ ರಸಪ್ರಶ್ನೆ:೮
    July 9, 2008 - 4:41pm
  • girish.rajanal
    ಉ: ಈ ಗಾದೆಗಳು ಗೊತ್ತಾ?
    July 9, 2008 - 4:27pm
  • girish.rajanal
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 4:25pm
  • harshavardhan v...
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:24pm
  • shashikannada
    ಉ: ಸುಮ್ನೆ 1 ಮದ್ವೆ ಬ್ಲಾಗು :)
    July 9, 2008 - 4:20pm
  • hpn
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:17pm
  • hpn
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:15pm
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 34 ಅತಿಥಿಗಳು ಆನ್ಲೈನ್ ಇರುವರು.


ಕಿವುಡುತನ ತಪ್ಪೀತೆ ರನ್ನಕುಂಡಲದಿಂದ? |
ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? ||
ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ |
ಜವರಾಯ ಸಮವರ್ತಿ -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator