ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › ಗಣೇಶ ರವರ ಬ್ಲಾಗ್

ಮುಂಜಾನೆದ್ದು ...

June 15, 2008 - 5:45pm — ಗಣೇಶ

ಮನುಷ್ಯರಲ್ಲಿ ಎರಡೇ ಜಾತಿ.
ಬೆಳಗ್ಗೆ ಬೇಗ ಏಳುವವರು, ಬೆಳಗ್ಗೆ ತಡವಾಗಿ ಏಳುವವರು.

ಸೂರ್ಯನ ತರಹ ಕಟ್ಟುನಿಟ್ಟಾಗಿ ಬೆಳಗ್ಗೆ ಬೇಗನೆ ಏಳುವ,ರಾತ್ರಿ ಬೇಗನೆ ಮಲಗುವವರನ್ನು
ಸೂರ್ಯವಂಶಿಗಳೆನ್ನೋಣ.
ಉಳಿದವರು ಚಂದ್ರವಂಶಿಗಳು.

ಈ ಸೂರ್ಯವಂಶಿಗಳಲ್ಲಿ ಬಹಳ ಮೂಢನಂಬಿಕೆಗಳಿವೆ-
ಬೇಗನೆ ಏಳುವವರು ಚುರುಕು
ಲೇಟಾಗಿ ಏಳುವವರು ಲೇಝಿಗಳು.
ಮುಂಜಾನೆದ್ದು ವಾಕಿಂಗ್ ಹೋಗಿ ತಂಪುಗಾಳಿ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಮನಸ್ಸು ಫ್ರೆಷ್ ಆಗಿರುವುದು, ಇತ್ಯಾದಿ..

ನಿಜ ಹೇಳಿ-
ಮುಂಜಾನೆಯ ತಂಪು ಗಾಳಿಯಲ್ಲಿ ಹಾಯಾಗಿ ಮಲಗಿರುವುದು ಒಳ್ಳೆಯದೋ? ಓಡಾಡಿ, ಬೆವರುಸುರಿಸಿ ಬೆಳಗ್ಗಿನ ವಾತಾವರಣವನ್ನು ಹಾಳು ಮಾಡುವುದೋ?

ಹಿಂದಿನ ದಿನದ ಗಲೀಜೆಲ್ಲಾ ರಸ್ತೆ,ಪಾರ್ಕ್‌ಗಳಲ್ಲಿ ತುಂಬಿರುವುದು. ಬೆಳಗ್ಗೆ ವಾಕಿಂಗ್ ಹೋಗುವವರಿಗೆ ಒಳ್ಳೆ ಗಾಳಿ ಸಿಗುವುದೇ? ನಾವು ಎದ್ದು ಹೊರಡುವ ಹೊತ್ತಿಗೆ
ಕಾರ್ಪೋರೇಷನ್‌ನವರು ಗುಡಿಸಿ ಕ್ಲೀನ್ ಮಾಡಿಟ್ಟಿರುತ್ತಾರೆ.

ಪಾರ್ಕ್‌ಗೆ ಹೋಗಿ ಸುತ್ತಿ ಬಂದವರು ಆಕ್ಷಿಜನ್ ಎಲ್ಲಾ ತುಂಬಿಸಿಕೊಂಡು ಬಂದವರಂತೆ
ವರ್ತಿಸುತ್ತಾರೆ. ಸಿನಿಮಾ ಆಕ್ಟರ್‌ಗಳ ಮುಖದ ಹಾಗೇ, ಎಲೆಗಳ ಮೇಲೆ ಮಣ್ಣು,ಧೂಳು, ಹೊಗೆಯ ೩-೪ ಲೇಯರ್ ಕೋಟಿಂಗ್ ಇರುವುದು. ಈ ಎಲೆಗಳು ಕಾರ್ಬನ್ ಡೈ
ಆಕ್ಸೈಡ್ ಹೇಗೋ ತೆಗೆದುಕೊಳ್ಳಬಹುದು, ಆಕ್ಸಿಜನ್ ಬಿಡಲು ಸಾಧ್ಯವಾ? ಏನೋ ಪಾಪ,
ಭೂಮಿ ಆಳದ ನೀರು,ಆಹಾರದ ಬಲದಿಂದ ಹಾಗೂ ಹೀಗೂ ಬದುಕಿಕೊಂಡಿವೆ.

ಸೂರ್ಯವಂಶಿಗಳ ಇನ್ನೊಂದು ಚಟ-
ತಮ್ಮ ಮಕ್ಕಳನ್ನು ಬೆಳಗ್ಗೆ ೪ ಗಂಟೆಗೆ ಎದ್ದು ಓದಲು ಹೇಳುವುದು.
ಬೆಳೆಯುತ್ತಿರುವ ಆ ಮಕ್ಕಳ ಸಿಹಿನಿದ್ರೆಗೆ ತೊಂದರೆ ಕೊಡುತ್ತಾರಲ್ಲಾ?
ನಾನು ನೋಡಿದಂತೆ ಬೆಳಗ್ಗೆ ಬೇಗ ಎದ್ದು ಒದ್ದಾಡಿ ಓದಿದವರಿಗಿಂತ ಲೇಟಾಗಿ ಎದ್ದವರೇ ಜಾಸ್ತಿ ಮಾರ್ಕ್ ತೆಗೆದುಕೊಂಡಿರುವುದು.

ಹೇಗೂ ಬೇಗ ಎದ್ದಿರುತ್ತಾರೆ, ಪೇಪರ್ ತುದಿಯಿಂದ ಕೊನೆಯವರೆಗೆ ಓದಿ, ಬೆಳಗ್ಗೇನೆ ಕೊಲೆ ಸುಲಿಗೆ,ರಾಜಕೀಯ ಬಗ್ಗೆ ಮನೆ/ ಆಫೀಸಲ್ಲಿ ಕೊರೆಯಲು ಸುರುಮಾಡುವರು.ತಡವಾಗಿ ಏಳುವವರಿಗೆ
ತಲೆ ಕೆರೆದುಕೊಳ್ಳಲೂ ಸಮಯವಿರುವುದಿಲ್ಲ.

ಕೆಲಸದ ಅನಿವಾರ್ಯವಿರುವವರನ್ನು ಬಿಟ್ಟರೆ, ಈಗಿನ ಜನರೇಶನ್ ಹೆಚ್ಚಿನವರು
ಚಂದ್ರವಂಶಿಗಳು. ಇದೊಂದು ಸಮಾಧಾನದ ವಿಷಯ.

~.~
  • ಗಣೇಶ ರವರ ಬ್ಲಾಗ್
  • Login or register to post comments
  • 221 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 16, 2008 - 12:40pm — madhava_hs

ಉ: ಮುಂಜಾನೆದ್ದು ...

madhava_hs's picture

ನಾನೂ ಸಹ ಸ್ವಭಾವತಃ ಚಂದ್ರವಂಶಿ. ಸೂರ್ಯವಂಶಿಯಾಗಲು ಪದೇ ಪದೇ ಪ್ರಯತ್ನಿಸಿ ವಿಫಲನಾದವನು Sad . ಈಗ ತೀರ್ಮಾನಕ್ಕೆ ಬಂದಿರುವುದೇನೆಂದರೆ ಸೂರ್ಯವಂಶಿಗಳಾಗುವುದು ಸುಲಭದ ಮಾತಲ್ಲ, ಅದಕ್ಕೂ ಜನ್ಮ ಜನ್ಮಾಂತರದ ಪುಣ್ಯ ಇರಬೇಕೆಂದು Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 16, 2008 - 2:09pm — ASHMYA

ಉ: ಮುಂಜಾನೆದ್ದು ...

ASHMYA's picture

ನಾನು ಚಂದ್ರವಂಶಿನೇ...(ಪದವಿಪೂರ್ವದಲ್ಲಿ ಮನೆ ಪಾಠಕ್ಕೆಂದು ೫ ಘಂಟೆಗೆ ಏಳುತ್ತಿದದ್ದು ಬಿಟ್ಟರೆ).ಆದ್ರೆ ಒಂದು ತಿಂಗಳಿನಿಂದ ಕಷ್ಟ ಪಟು,೫.೪೫ಕ್ಕೆ ಎದ್ದು ಯೋಗ ಕ್ಲಾಸಿಗೆ ಹೋಗ್ತಿದ್ದೀನಿ.
ಒಂದು ಸಲ ಅಭ್ಯಾಸ ಮಾಡಿಕೊಂಡರೆ ಬೇಗ ಏಳೋದು ಅಷ್ಟು ಕಷ್ಟ ಅಲ್ಲ ಅಂತ ನನ್ಗ್ಯಾವತ್ತು ಅನ್ನಿಸಿಲ್ಲ!ಪ್ರತಿ ದಿನ ಬೇಗ ಏಳಬೇಕಾದರೂ,ಅದು ಮೊದಲನೆ ದಿನ ಬೇಗ ಎದ್ದಷ್ಟೆ ಕಷ್ಟ ಅನ್ನಿಸುತ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 16, 2008 - 3:03pm — madhava_hs

ಉ: ಮುಂಜಾನೆದ್ದು ...

madhava_hs's picture

ಅರ್ಲೀ ಟು ಬೆಡ್ ಅಂಡ್ ಅರ್ಲೀ ಟು ರೈಸ್ ಮೇಕ್ಸ್ ಎ ಮ್ಯಾನ್ ವೈಸ್ ಅಂಡ್ ವೆಲ್ತಿ. ಬಟ್ ಅಯಾಮ್ ಅದರ್ವೈಸ್ ! Smiling

ಮೂಲ ಸೊಗಡನ್ನು ಉಳಿಸಿಕೊಳ್ಳಲು ಆಂಗ್ಲೋಕ್ತಿಯನ್ನು ಕನ್ನಡಿಸದೇ ಬರೆದಿದ್ದಾಯ್ತು. !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 16, 2008 - 3:16pm — ಶ್ರೀನಿವಾಸ ವೀ. ಬ೦ಗೋಡಿ

ಉ: ಮುಂಜಾನೆದ್ದು ...

ಶ್ರೀನಿವಾಸ ವೀ. ಬ೦ಗೋಡಿ's picture

ಒಂದು ಹಾಸ್ಯ ಕಾದಂಬರಿಯಲ್ಲಿ ಇದನ್ನು ಹೀಗೆ ಹೇಳಿದ್ದರು...

Early to Bread, Early to Rice, makes...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ವ್ಯಾಯಾಮ್ ಹರಾಮ್ ಹೈ
  • ೧೯ ಆಗಸ್ಟ್ ೨೦೦೫
  • ಹಬ್ಬಕ್ಕೆ ಮುಂಚೆ ... ನಂತರ ... ಒಂದು ರೀಮಾಸ್ಟರ್ಡ್ ಸಿಡಿಯ ಕಥೆ ...
  • ನಾನೂ ಡಾಕ್ಟ್ರಾದೆ
  • ಬಿಟ್ಟಿ ಬೋದಕರ ಕಾಟ!
Syndicate content

ಲೇಖಕರು

ಗಣೇಶ's picture

ಪರಿಚಯ

ಕನ್ನಡ ಬಲು ಇಷ್ಟ
ಇಂಗ್ಲೀಷ್/ಕಂಪ್ಯೂಟರ್ ಸ್ವಲ್ಪ ಕಷ್ಟ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ನರಸಿಂಹ ತೀರ್ಥ, ಮುಳಬಾಗಿಲು

(ಫೋಟೋ: ಹರಿ ಪ್ರಸಾದ್ ನಾಡಿಗ್)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಲಿನಕ್ಸಾಯಣ - ೧೯ - EvDO ಲಿನಕ್ಸ್ ನಲ್ಲಿ?
  • ನಾನು ನಿಜವಾಗಿಯು ಹುಚ್ಚಾನ?
  • ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
  • ಹಿಂದಿ ದಿವಸ : ಒಕ್ಕೂಟ ವ್ಯವಸ್ಥೆಗೊಂದು ಕಳಂಕ
  • ಓದಿದ್ದು ಕೇಳಿದ್ದು ನೋಡಿದ್ದು-12
  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Shivakumar.Revadi
    ಉ: ಬಾಲ್ಯದ ನೆನಪುಗಳು
    September 8, 2008 - 5:42pm
  • girish.rajanal
    ಉ: ಕನ್ನಡಕ್ಕೆ ಶಾಸ್ತ್ರೀಯ ಸ್ತಾನ ನೀಡುವುದರಲ್ಲಿ ವಿಳಂಬ - ಕ.ರ.ವೇ. ಪ್ರತಿಭಟನೆ
    September 8, 2008 - 5:38pm
  • girish.rajanal
    ಉ: ಸರ್ವಜ್ಞನ ಕೆಲವು ವಚನಗಳು
    September 8, 2008 - 5:35pm
  • venkatesh
    ಉ: ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
    September 8, 2008 - 5:15pm
  • srivathsajoshi
    ಉ: ಬಾಲ್ಯದ ನೆನಪುಗಳು
    September 8, 2008 - 5:05pm
  • sandeepkn
    ಉ: ಎಲ್ಲ ಓಕೆ ಹಿಂದಿ ಹೇರಿಕೆ ಯಾಕೆ
    September 8, 2008 - 4:59pm
  • omshivaprakash
    ಉ: ಬಿಗುಮಾನದ ಚಿತ್ರಗಳು
    September 8, 2008 - 4:45pm
  • Shashikanth. Birge
    ಉ: ನಾನು ನಿಜವಾಗಿಯು ಹುಚ್ಚಾನ?
    September 8, 2008 - 4:41pm
  • pramodc84
    ಉ: ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
    September 8, 2008 - 4:28pm
  • anil.ramesh
    ಉ: ನಾನು ನಿಜವಾಗಿಯು ಹುಚ್ಚಾನ?
    September 8, 2008 - 4:06pm
ಇನ್ನಷ್ಟು
ಈಗಿನಂತೆ 11 ಸದಸ್ಯರು ಮತ್ತು 117 ಅತಿಥಿಗಳು ಆನ್ಲೈನ್ ಇರುವರು.


ಮಾತಾಡುವುದನ್ನು ನಿಲ್ಲಿಸಿ, ಕೆಲಸ ಮಾಡುವುದೇ ಯಶಸ್ಸಿನ ಶುಭಾರಂಭ!

— ವಾಲ್ಟ್ ಡಿಸ್ನಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator