ರೀ ಮತ್ತು ಸಾರೀ ಮತ್ತು ಸುರೆ
ಸಹವಾಸ ದೋಷ. ಯಾವುದೇ ಶಬ್ದ ಸಿಕ್ಕಿದರೂ-
ಅದು ಹೇಗೆ ಬಂದಿರಬಹುದು?
ಕನ್ನಡವೋ? ಇಂಗ್ಲೀಷೋ?
ಯಾಕೆ ಕನ್ನಡಕ್ಕೆ ಬಂತು?
ಯಾರು ತಂದರು? ಇದೇ ಕೆಲಸ ಈಗ ಸುರುಮಾಡಿದ್ದೇನೆ.
ಹೆಂಡತಿ ‘ರೀ..’ ಎಂದು ಕರೆದರೂ..ಉತ್ತರ ಕೊಡುವ ಬದಲು-
‘ರೀ’ ಇಂಗ್ಲೀಷ್‌ನಿಂದ ಬಂದುದೋ?
ಸಂಗೀತದಿಂದಲೋ?
‘ಸಾ..ರೀ..’ ಶಾಸ್ತ್ರೀಯ ಸಂಗೀತಕ್ಕೂ ಸಾರಿ(saree)ಗೂ ಸಂಬಂಧವಿದೆಯೋ?
ಸಾರಿ(sorry) ಇಂಗ್ಲೀಷ್ಗೆ ನಮ್ಮ ಶಾಸ್ತ್ರೀಯ ಸಂಗೀತದ ಕಾಣಿಕೆಯೋ?
... ..ತಲೆಗೆ ಮೊಟಕಿದಾಗಲೇ ಈ ಲೋಕಕ್ಕೆ ಬರುವುದು.
ಹೀಗೇ ವೈನ್ (wine) ಬಗ್ಗೆ ಬರೆಯಲು ಹೊರಟೆ-
‘Elixir of life’
‘Drink of God’ -‘ಸುರೆ’-ಸಹವಾಸ ದೋಷ-
‘ಸುರೆ’ಯನ್ನು ಕುಡಿದುದರಿಂದ ದೇವತೆಗಳು ‘ಸುರ’ರು.
ಸುರೆ ಬಿಟ್ಟು ಉಳಿದುದು (ಕಳ್ಳಭಟ್ಟಿ?) ಕುಡಿದವರು ‘ಅಸುರ’ರು.
ಎರಡೂ ಮಾಡದ ‘ಮಾನ’ವಂತರು ‘ಮಾನ’ವರು.
ಹಾಗಾದರೆ ನಾನು ಯಾರು?
ಅಮಲಿಳಿದ ಮೇಲೆ ವೈನ್ ಬಗ್ಗೆ ನಾಳೆ ಬರೆಯುವೆನು.
-ಗಣೇಶ.

- ಗಣೇಶ ರವರ ಬ್ಲಾಗ್
- Login or register to post comments
- 220 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS:
ಪ್ರತಿಕ್ರಿಯೆಗಳು
ಉ: ರೀ ಮತ್ತು ಸಾರೀ ಮತ್ತು ಸುರೆ
ಬಹಳಾ ಚನ್ನಾಗಿದೆ ನೀವು ಹೇಳೋದು.
ಹೆಂಡತಿಯರು "ರೀ" ಅಂದ್ರೆ ಬೇರೆ ಅರ್ಥವೇ ಇದೆ.
ಸಾಮಾನ್ಯವಾಗಿ ಗಂಡಂದಿರು ಹೆಂಡತಿಯರನ್ನ ಕರೆದಾಗ/ಕೂಗಿದಾಗ ಹೆಂಗಸರು "ಸೀರೇ,ಸೀರೇ,ಸೀರೇ" ಅಂತ ಸೀರೆ ತಂದು ಕೊಟ್ಟಾಗ ಮಾತ್ರ ನೀವು ಕರೆದಲ್ಲಿ ಬರ್ತೀನಿ ಅಂತ ಹೇಳ್ತಾರೆ.
ಆದರೆ ಗಂಡಂದಿರು ಹೆಂಡತಿಯರಿಗಿಂತ ಬಹಳಾ ಬುದ್ದಿವಂತರಾದ್ದರಿಂದ "ಸೀರೇ" ಅನ್ನುವದನ್ನು ನಾವು "ರೀ,ರೀ" ಎಂದು ಕೇಳಿಸಿದಂಗೆ ನಟಿಸುತ್ತೇವೆ.
"ಗಂಡಸರು ಗುಂಡಿಗೆ ಇರುವವರು...!!"
-ಯುವಪ್ರೇಮಿ
ಉ: ರೀ ಮತ್ತು ಸಾರೀ ಮತ್ತು ಸುರೆ
ಸಕತ್ ರೀ
ನೀವು ಬಹಳಷ್ಟು 'ರೀ'ಸರ್ಚ್ ಮಾಡಿದ್ದೀರಿ!!
-ಗಣೇಶ.
ಉ: ರೀ ಮತ್ತು ಸಾರೀ ಮತ್ತು ಸುರೆ
"ಸಹವಾಸ ದೋಷ. ಯಾವುದೇ ಶಬ್ದ ಸಿಕ್ಕಿದರೂ-
ಅದು ಹೇಗೆ ಬಂದಿರಬಹುದು?
ಕನ್ನಡವೋ? ಇಂಗ್ಲೀಷೋ?
ಯಾಕೆ ಕನ್ನಡಕ್ಕೆ ಬಂತು?
ಯಾರು ತಂದರು? ಇದೇ ಕೆಲಸ ಈಗ ಸುರುಮಾಡಿದ್ದೇನೆ."
ಇದಂತೂ ದಿಟರೀ....
ನನಗಂತೂ ದಿನಪತ್ರಿಕೆ (ದಿನ (?) ಕಾಗದ (?)) ಸರಿಯಾಗಿ ಓದಕ್ಕೆ ಆಗ್ತ ಇಲ್ಲ ನೋಡಿ...
ಒಂದೊಂದು ಒರೆನೂ ಹೀಗೆ ಮಸೂರ (ಇದು ಕನ್ನಡನಾ?) ಹಿಡಿದು ನೋಡೀ ನೋಡೀ ದಿನೇ ದಿನೇ(?!!) ಮಂಕಾಗ್ತಿದೀನಿ ...
ಮೊನ್ನೆ ಹೀಗೆ ಗೆಳೆಯನ ಜೊತೆ ಮಾತಾಡುವಾಗ ಇದ್ದಕ್ಕಿದ್ದ ಹಗೆ ಅರ್ಧ(?)ದಲ್ಲೇ ನಿಲ್ಲಿಸ್ಬಿಟ್ಟೆ! "ಏನಾಯ್ತೋ ಅಂದ"..."ಏನಿಲ್ಲ ಸ್ವಲ್ಪ ಕನ್ನಡ ಜ್ವರ ಬಂದಿದೆ" ಅಂದೆ...
--ಸಿರಿ
ಉ: ರೀ ಮತ್ತು ಸಾರೀ ಮತ್ತು ಸುರೆ
ಯಪ್ಪಾ...ನಂಗೆ ಕನ್ನಡ ಬರಲ್ಲ
ಉ: ರೀ ಮತ್ತು ಸಾರೀ ಮತ್ತು ಸುರೆ
ಹ ಹ ಹ ಹ ಹ
ಒಳ್ಳೆಯದು.. ತುಸು ನಾಳುಗಳಲ್ಲಿ ನಿಮಗೆ ಕಂಡಿತ ಒಳ್ಳೆಯದಾಗುವುದು..!!
ನಾವು ಈ ಹಂತ ದಾಟಿದ್ದೀವಿ..
ನಮಗೆ ಒಂದು ಹೊರನುಡಿ ಒರೆ ಬಾಯಿಂದ ಬರಲು ಮುಕ್ಕರಿಯುವುದು. ಒಂದು ಹೊರನುಡಿ ಒರೆ ಕಂಡರೆ ಕೂಡಲೆ ಮೆದುಳು ಅದಕ್ಕೆ ಸಮ ಅಪ್ಪಟಕನ್ನಡ ಒರೆಗೆ ತಿಳಿಸುವುದು.
ಮಾದರಿ :
ತಡದ ಬಳಕೆ ಬಗ್ಗೆ ತಡವರಿಸಿ
) ಬಸ್ಸು ’ತಡ’ವಾಗಿ ಸಿಕ್ತು
..
( ಪೋನ್ ಮಾತುಕತೆ )
ಹುಡುಗಿ : "ಗುಡ್ ಮಾರ್ನಿಂಗ್"
ನಾನು : ( ಮೆದುಳು => ಚಂಬೆಳಗು ) "ಒಳ್ಳೇದು.. ಈಗ ಬಂದ್ರಾ?"
ಹುಡುಗಿ : "ಲೇಟಾಯ್ತು.."
ನಾನು : ( ಲೇಟ್ = ತಡ ) .. ಯಾಕೆ ತಡ?
ಹುಡುಗಿ
ಸದ್ಯ ನನ್ ಹುಡುಗಿ ನನ್ ಕನ್ನಡಬಳಕೆಯನ್ನ ಮೆಚ್ತಾಳೆ.
ಹೆ ಹೆ.. ನಿಮ್ಮ ಹುಡುಗಿ ಮೇಲೂ ಈ ಅಂಬು ಎಸೆಯಿರಿ.. ಮಾತು ಕಡಮೆ ಮಾಡ್ತಾರೆ. 
ಉ: ರೀ ಮತ್ತು ಸಾರೀ ಮತ್ತು ಸುರೆ
"ನಿಮ್ಮ ಹುಡುಗಿ ಮೇಲೂ ಈ ಅಂಬು ಎಸೆಯಿರಿ.. ಮಾತು ಕಡಮೆ ಮಾಡ್ತಾರೆ. "
ಹುಡುಗೀ ಸಿಕ್ಕಮೇಲೆ ಅಷ್ಟೆ ಅಂಬೂ ಎಸೀಬಹುದು ಕೊಂಬೂ ಬೇಸೀ ಬಹುದು