ಕದನ ಕುತೂಹಲ
ಬೆಳ್ಳಂಬೆಳಗ್ಗೆ ಬಿಟ್ಟಿ ಮನರಂಜನೆ!
ಯಾರಾದರೂ ಬಿಟ್ಟಾರಾ..?
ಹಿಂದಿನ ಮನೆಯಾಕೆ ತನ್ನ ಗಂಡನಿಗೆ ಜೋರುಮಾಡುತ್ತಿದ್ದಳು. ಎರಡೂ ಕಿವಿಯನ್ನು ಅತ್ಲಾಗೆ ತಿರುಗಿಸಿದೆ.
ಆಆಹಾಹಾ...ಅದೇನು ಸಂತೋಷ..
ರಸ್ತೆಯಲ್ಲಿ ಯಾರಾದರು ಇಬ್ಬರು ಏರುಸ್ವರದಲ್ಲಿ ಮಾತನಾಡಲು ಸುರುಮಾಡಲಿ..., ಜನರೊಂದಿಗೆ ನಾನೂ ನನ್ನ ಕೆಲಸವೆಲ್ಲಾ ಬದಿಗೊತ್ತಿ ಜಗಳ ನೋಡುತ್ತಿರುತ್ತೇನೆ.
ಏನೋ ಒಂದು ತರಹ ಖುಷಿ...
ಜಗಳ,ಗಲಭೆ ಅಂದರೆ ಕೆಟ್ಟ ಕುತೂಹಲ- ನಾವು ಬೆಳೆದು ಬಂದಿದ್ದೇ ಹಾಗೇ :
ಬಾಲ್ಯದಲ್ಲಿ ದೇವತೆಗಳು-ರಾಕ್ಷಸರ ನಡುವೆ ಯುದ್ಧದ ಕತೆ ಕೇಳುವ ಕುತೂಹಲ.
ಯಕ್ಷಗಾನ ನೋಡಲು ಹೋದರೆ-ಯುದ್ಧ ಸುರುವಾಗುವಾಗ(ರಡ್ಡಡ್ಡಡ್ಡ ಡ್ಡೈ ಚಂಡೆ ಶಬ್ದ ಕೇಳಿದಾಗ), ಅಡ್ಡಾದಿಡ್ಡಿ ಮಲಗಿದ್ದಲ್ಲಿಂದ ಎದ್ದು ಕುಳಿತು ನೋಡುತ್ತಿದ್ದೆವು.
ಸಿನೆಮಾ ಕೊನೆಯಲ್ಲಾದರೂ ಹೀರೋ ವಿಲನ್ ಜತೆ- ಡಿಶುಂ ಡಿಶುಂ-ಹೋರಾಡಲೇಬೇಕು.
ಇಂಗ್ಲೀಷ್ ಸಿನೆಮಾ ಅರ್ಥವಾಗದಿದ್ದರೂ ಗನ್‌ಫೈಟ್..ಟಿಶ್ಯೂಂ..ಡಮಾರ್.. ಅರ್ಥವಾಗುತ್ತಿತ್ತು.
ಸ್ಕೂಲ್‌ನಲ್ಲೂ ತಲೆತುಂಬಾ ಪಾಣಿಪತ್,ಪ್ಲಾಸೀ...ಇತ್ಯಾದಿ ನೂರಾರು ಕದನ ನಡೆಯುತ್ತಿತ್ತು. ಶಾಂತಿ ಬಗ್ಗೆ ಆಸಕ್ತಿ,ಕುತೂಹಲ ಬಂದುದು ಮದುವೆ ವಯಸ್ಸಿಗೆ ಬಂದಾಗಲೇ.. :)
ಏನೋ ಹೇಳಲು ಹೋಗಿ ಇನ್ನೇನೋ ಹೇಳಲು ಸುರುಮಾಡಿದೆ. ಹಿಂದಿನ ಮನೆಯಲ್ಲಿ ಕದನದ ಬಗ್ಗೆ ಹೇಳಲು ಹೊರಟ್ಟಿದ್ದೆ ಅಲ್ವಾ? ಅದೂ..
ಹಿಂದಿನ ಮನೆಯವಳದ್ದಲ್ಲ, ನನ್ನಾಕೆಯದ್ದೇ ಸ್ವರ. ಕಿರುಚುವಾಗ ಎಲ್ಲಾ ಹೆಂಗಸರ ಸ್ವರ ಒಂದೇ ಅಲ್ಲವಾ? (ಕಪ್ಪು ೭ರಲ್ಲಿ?)
ನಿನ್ನೆ ರಾತ್ರಿಯ (ಉಂಡು ಮಲಗುವಾಗಿನ) ಕದನ ವಿರಾಮದ ನಂತರ ಈ ದಿನಕ್ಕೆ ಮುಂದುವರಿದಿದೆ..
ವಿಷಯ ಏನಪ್ಪಾ ಅಂದರೆ......
ವಿಷಯ ಯಾರಿಗೆ ಬೇಕು? ನೋಡುಗರಿಗೆ ಕದನ ಮುಂದುವರಿಯಬೇಕು.
ನನಗೆ ಕದನ ವಿರಾಮ ಬೇಕು..
ಹೇಗೂ ಚಳಿಗಾಲದಲ್ಲಿ ಹಗಲು ಕಮ್ಮಿಯಲ್ವಾ... :)
-ಗಣೇಶ.
- ಗಣೇಶ's blog
- Login or register to post comments
- 582 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಕದನ ಕುತೂಹಲ
ಶೀರ್ಷಿಕೆ ನೋಡಿಯೇ ಕುತೂಹಲವಾಗಿ (ಮಾನವ ಸಹಜ) ಇತ್ತ ಕಡೆ ಬಂದೆ. ಮೊದಲಿಗೆ ಕ್ಲೈಮಾಕ್ಸ್ ಓದಿ ಸ್ವಲ್ಪ ಬೇಸರವಾಯಿತು (ಏನು ವಿಷಯಕ್ಕೆ ಕಿತ್ತಾಟವಾಯಿತೆಂಬುದೇ ಗೊತ್ತಾಗಲಿಲ್ಲವಲ್ಲ!) ಆದ್ರೂ ಸಕತ್ ನಗು ಬಂತು. ಮತ್ತೊಂದು ಸಲ ಯಾವ ವಿಷಯಕ್ಕೆ ಕಿತ್ತಾಟವೆಂಬುದನ್ನು ಬರೆಯಿರಿ. ಕುತೂಹಲ ತಣಿಯಬಹುದು. :-)
ಉ: ಕದನ ಕುತೂಹಲ
ಇಂಚರ,
>>ಮೊದಲಿಗೆ ಕ್ಲೈಮಾಕ್ಸ್ ಓದಿ ..
>>ಯಾವ ವಿಷಯಕ್ಕೆ ಕಿತ್ತಾಟವೆಂಬುದನ್ನು ಬರೆಯಿರಿ
’ಕದನ ಕುತೂಹಲಿ೧೨೩’!! :)
-ಗಣೇಶ.
ಉ: ಕದನ ಕುತೂಹಲ
ಹೌದು, ನಾನು ಕಾದಂಬರಿಗಳಲ್ಲಿಯೂ ಮೊದಲ ೩ ಪೇಜ್ ಓದಿ ಆಮೇಲೆ ಕ್ಲೈಮಾಕ್ಸ್ ಓದಿ, ಸಮಯವಿದ್ದರೆ ಮಧ್ಯದ ಭಾಗವನ್ನು ಓದುವುದು ;-). ಹಾಗೆಯೇ ೨ ವಾಕ್ಯಗಳನ್ನು ಓದಿ, ಕ್ಲೈಮಾಕ್ಸ್ ಓದಿದ್ರೆ (ಛೇ! ಗೊತ್ತೇ ಆಗಲಿಲ್ಲ). ಪ್ಲೀಸ್ ಬೇಗ ಬರೆಯಿರಿ, ಕುತೂಹಲ ತಡೆಯುವುದಕ್ಕಾಗುತ್ತಿಲ್ಲ :-)
ಉ: ಕದನ ಕುತೂಹಲ
ಬಹಳ ದಿನಗಳ ಮೇಲೆ ಗಣೇಶ brand ಹಾಸ್ಯ ಒದಗಿಸಿದ್ದಕ್ಕಾಗಿ thanksu.
ಹಣೆಪಟ್ಟಿ ನೋಡಿ ಸಂಗೀತದ ಬಗ್ಗೆ ಇರಬಹುದು ಅಂದುಕೊಂಡರೆ ಸಿಕ್ಕದ್ದು ಗಣೇಶನ ಮೋಡಿಯ ಮೋದಕ.
ಉ: ಕದನ ಕುತೂಹಲ
ಗಣೇಶರೆ ನಿಮ್ಮ ಬರಹ ಸಕತ್ತಾಗಿದೆ.
ನಾವು ಬೆಳೆದಿದ್ದೂ ನಿಮ್ಮಂಗೆ .. ಚೆನ್ನಾಗಿ ಫೈಟ್ ಮಾಡೋರೆ ನಮಗೆ ಆಗೆಲ್ಲ ಹೀರೋಗಳು... ಫಿಲ್ಪ್ಮ್ನಲ್ಲಿ ಫೈಟ್ ಗಾಗೆ ಕಾಯ್ತಾ ಇರ್ತಾ ಇದ್ವು. ಅದೊಂದೇ ನಮಗೆ ಆಗ ಅರ್ಥ ಆಗ್ತಾ ಇದ್ದದ್ದು.
ಮುಂಚೆ ಎಲ್ಲ ನಾವು "ನೋಡುಗರಾಗ್ತಾ" ಇದ್ವಿ.. ಅದಕ್ಕೇನೆ.. ಗದ್ದಲ, ಜಗಳ, ಗಲಭೆ, ಫೈಟು, ಯುದ್ದ, ಇವುಗಳ ಬಗ್ಗೆ ನಮಗೆ ಆಗ ಕದನ ಕುತೂಹಲ.
ಈಗ ಅದ್ಯಾಕೋ ಮನಸ್ಸು ಶಾಂತಿ ಬಯಸುತ್ತೆ... ವಿರಾಮ ಬಯಸುತ್ತೆ. ;)
ಚಳಿಗಾಲ ನಿಜಕ್ಕೂ ವರವೇ! (ಹಗಲು ಕಡಿಮೆ ಅಲ್ವ?! ..ಅತ್ವ?? ;) )
ಉ: ಕದನ ಕುತೂಹಲ
ಗಣೇಸಣ್ಣಾ :
ಈಗಲೂ ನಮಗೆ (at least ನನಗೆ) ಕದನ ಕುತೂಹಲ ಸ್ವಲ್ಪವೂ ಬಿಟ್ಟಿಲ್ಲ.
ಬ್ಲಾಗ್ ಲೋಕದಲ್ಲಿ ಚಟುವಟಿಕೆ ಶುರು ಮಾಡಿದ್ದೇ URA Vs SLB ಹೊಡೆದಾಟದಿಂದ.
ಹಳೇ ಸಂಪದದಲ್ಲಿನ ಜಗಳಗಂಟರನ್ನು ಈಗಲೂ misss ಮಾಡ್ಕೊಳ್ತೀದೀವಿ.
ಅಮೇರಿಕ, ಯುರೋಪ್ ದೇಶಗಳು ಜಗತ್ತಿನಲ್ಲೆಲ್ಲ ಕದನಗಳಿಗೆ ಉತ್ತೇಜನ ಕೊಡುವುದು, ಹೊಸ ಜಗಳಗಳನ್ನು ಹೂಡುವುದು ಏಕೆಂದಿರಿ? ತಮ್ಮ defence industryಗಳು ಇನ್ನಷ್ಟು ಕೊಬ್ಬಿ ಬೆಳೆಯಲಿ ಎಂದಲ್ಲವೇ?
ನಿಮ್ಮ ಕದನಕುತೂಹಲದಿಂದ ಎಂತಹ ಮೂಲಭೂತ ಸತ್ಯ ಕಂಡಿತು ನೋಡಿ.
ಉ: ಕದನ ಕುತೂಹಲ
>> "ಶಾಂತಿ ಬಗ್ಗೆ ಆಸಕ್ತಿ,ಕುತೂಹಲ ಬಂದುದು ಮದುವೆ ವಯಸ್ಸಿಗೆ ಬಂದಾಗಲೇ.. :) "
- ಯಾರು ಸಾರ್ ಆ ಶಾಂತಿ? :)
ಉ: ಕದನ ಕುತೂಹಲ
ನೀವೆಲ್ಲರೂ ಯಾರು ಶಾಂತಿ? ಅಂತಾ ಕೇಳಿ ಗಣೇಶ್ ಅವರ ಮನೆಯಲ್ಲಿ ಮತ್ತೊಂದು ಕದನದ ಕಹಳೆ ಊದಲು ಅವಕಾಶ ಮಾಡಿಕೊಡುತ್ತಿದ್ದೀರಿ! ಗಣೇಶ್ ಸರ್, ‘ಶಾಂತಿ’ ಬಗ್ಗೆ ಕದನವಾದರೆ ಅದನ್ನು ಕೂಡ ಬರೆಯಿರಿ, ಓದಲು ಉತ್ಸುಕಳಾಗಿದ್ದೇನೆ.
ಉ: ಕದನ ಕುತೂಹಲ
ಡಿಸ್ಕೋ?? :P
ಉ: ಕದನ ಕುತೂಹಲ
ಗಣೇಶರೇ
ಸ್ವಾರಸ್ಯವಾಗಿದೆ.
ಒಂದು ಡೌಟು. <<ಶಾಂತಿ ಬಗ್ಗೆ ಆಸಕ್ತಿ,ಕುತೂಹಲ ಬಂದುದು ಮದುವೆ ವಯಸ್ಸಿಗೆ ಬಂದಾಗಲೇ.. :)>>
ಈ ಶಾಂತಿ ಯಾರೆಂಬುದು ತಿಳಿಯಬಹುದೇ :)
ನಾರಾಯಣ
ಉ: ಕದನ ಕುತೂಹಲ
ಸಖತ್ ಆಗಿದೆ.. ಶಾಂತಿ ಬಗ್ಗೆ ಕುತೂಹಲ ಏನೋ ಸರಿ, ಆದರೆ ಮದುವೆ ಆಗೊವಾಗ್ಲೆ ಬರಬೇಕೇ? ಕಾಲೇಜು ದಿನಗಳಲ್ಲಿ ಯಾವ ಶಾಂತಿಯೂ ಸಿಗಲಿಲ್ಲವೊ ಏನೋ ಪಾಪ!
ಪ್ರೀತಿಯಿಂದ...... ರವಿಕಿರಣ್
ಉ: ಕದನ ಕುತೂಹಲ
ಸಂಪದಿಗರಲ್ಲಾಗಲೇ ಶಾಂತಿಯ ಹೆಸರೇ ಅಶಾಂತಿ ಎಬ್ಬಿಸಿದ ಹಾಗಿದೆ.
ಕದನಕುತೂಹಲಿ೧೨೩ಯವರ ಕುತೂಹಲ ಕೆರಳು ವಷ್ಟರ ಮಟ್ಟಿಗೆ!
:-)
ಉ: ಕದನ ಕುತೂಹಲ
ನನ್ನ ಮೇಲ್ಯಾಕೆ ರೀ ಕಣ್ಣು ನಿಮಗೆ? ಇಲ್ಲೊಂದು ಕದನ ಶುರು ಮಾಡೋ ಪ್ಲಾನಾ? ನಿಮಗ್ಯಾರಿಗೂ ಕುತೂಹಲವಾಗ್ತಿಲ್ಲವೇ ಯಾರಿರಬಹುದು ಶಾಂತಿ ಅಂತಾ? ನನಗೆ ಕುತೂಹಲವಿರುವುದು ಶಾಂತಿ ಬಗ್ಗೆ ಮನೆಯಲ್ಲಿ ಗೊತ್ತಾಗಿ ಆದ ಕದನದ ಬಗ್ಗೆ ;-) ಅದ್ರಲ್ಲೂ ಬೇರೆ ಉರಿಯೋ ಬೆಂಕಿಗೆ ತುಪ್ಪ ಸುರಿಯುವ ಹಾಗೆ ರಾಘವ ಅವ್ರು ಡಿಸ್ಕೋ ಅಂತಾ ಬೇರೆ ಸೇರಿಸ್ತಿದ್ದಾರೆ :-)
ಉ: ಕದನಕುತೂಹಲಿ123
<<ನನ್ನ ಮೇಲ್ಯಾಕೆ ರೀ ಕಣ್ಣು ನಿಮಗೆ?>>
<<ನಿಮಗ್ಯಾರಿಗೂ ಕುತೂಹಲವಾಗ್ತಿಲ್ಲವೇ ಯಾರಿರಬಹುದು ಶಾಂತಿ ಅಂತಾ?>>
ನಿಮ್ಮ ಮೇಲೆ ಸ್ವಘಟ್ಟಿಯಾಣೆಗೂ ನನಗೆ ಕಣ್ಣಿಲ್ಲ. ಆದರೆ ಇಂಚರ123 ಹೆಸರು ಕಂಡಾಗ ಆ ಹೆಸರಿನಡಿಯಲ್ಲಿ ಬರುವ ಬರಹ, ಪ್ರತಿಕ್ರಿಯೆಗಳನ್ನು ಕುತೂಹಲ sorry ಆಸಕ್ತಿಯಿಂದ ಓದುತ್ತೇನೆ, ಕೇವಲ ಓದಿನ ಆನಂದಕ್ಕಾಗಿ.
ಗಣೇಶರು ಇರಿಸಿದ ಹೊಸ ಹೆಸರು ಕದನಕುತೂಹಲಿ123 ಇಂಚರ123ದಷ್ಟೇ ಇಂಪಾಗಿದೆ ಎಂದು ಮಾತ್ರ ಹೇಳಬಲ್ಲೆ.
ಇನ್ನು ಶಾಂತಿ ಅಥವಾ ಡಿಸ್ಕೋಶಾಂತಿ ಯಾರಿರಬಹುದು ಎಂದು ನನಗೆ "ಸ್ಪಘೆಟ್ಟಿ"ಯಾಣೆಗೂ ಕುತೂಹಲವಿಲ್ಲ - ಎದುರು ಬಂದರೆ ನೋಡಿಯೇನು, ಅಷ್ಟೇ.
:-)
ಶಾಂತಿಯ ಹೆಸರಿರಲಿ ಇಲ್ಲದಿರಲಿ, ಗಣೇಶರ ನವಿರಾದ ಹಾಸ್ಯಬರಹಗಳು ನಮ್ಮ ಮನಸ್ಸಿನಲ್ಲಿರುವ ಅ-ಶಾಂತಿಯನ್ನು ಇಲ್ಲವಾಗಿಸಿವೆ, ಇಲ್ಲಿಯವರೆಗೆ.
ಉ: ಕದನಕುತೂಹಲ
ಶಾಂತಿ ಶಾಂತಿ ಶಾಂತಿ
(ಕ್ರಿಯಾಪದ ಕ್ರಿಯಾಪದ ಕ್ರಿಯಾಪದ)
ಏನೋ ನಿಮ್ಮೆಲ್ಲರ ಅನುಗ್ರಹದಿಂದ ನಮ್ಮ ಮನೆಯಲ್ಲಿ "ಶಾಂತಿ" ನೆಲಸಿದೆ. :(
ಶಾಂತಿ ಕಾಲದಲ್ಲೂ ಬರುವ ಮಿಸೈಲ್ ದಾಳಿ ತಪ್ಪಿಸಲು ’ಡಿಸ್ಕೊ’ನೂ ಮಾಡುತ್ತಿದ್ದೇನೆ.
ಶ್ರೀಕರ,
>>>ಇನ್ನು ಶಾಂತಿ ಅಥವಾ ಡಿಸ್ಕೋಶಾಂತಿ ಯಾರಿರಬಹುದು ಎಂದು ...- ಎದುರು ಬಂದರೆ ನೋಡಿಯೇನು, ಅಷ್ಟೇ
--ತಪ್ಪಿಯೂ ನೋಡಬೇಡಿ. (ಶಾಂತಿ ಶಬ್ದಕ್ಕೇ ಎಷ್ಟು ಶಕ್ತಿ ಇದೆ ಎಂದು ನಿಮಗೆ ಗೊತ್ತಿಲ್ಲ)
*****
ಪ್ರತಿಕ್ರಿಯೆ ನೀಡಿ ಮೆಚ್ಚಿದ ಇಂಚರ123(ಕದನಕುತೂಹಲಿ123 ಹೆಸರಿಟ್ಟದ್ದು ನಾನಲ್ಲ-ಶ್ರೀಕರ.), ಸವಿತೃ, ಉಮೇಶ್,ರಾಘವ,ನಾರಾಯಣ,ಶ್ರೀಕರ, ರವಿಕಿರಣರಿಗೆ ನನ್ನಿ.
-ಗಣೇಶ.
ಉ: ಕದನಕುತೂಹಲಿ123
ಇದಕ್ಕೆಲ್ಲಾ ಸ್ವಘಟ್ಟಿಯಾಣೆ ಯಾಕ್ರೀ ಶ್ರೀಕರ ಅವ್ರೇ! ನೋಡಿ ಗಣೇಶ್ ಅವರು ಹೇಗಾದ್ರೂ ಮಾಡಿ ನಮ್ಮಿಬ್ಬರ ಕದನವನ್ನು ಕುತೂಹಲದಿಂದ ಎದುರು ನೋಡುತ್ತಿದ್ದಾರೆ ;-) ನೀವಂತೆ ನನಗೆ ಹೆಸರಿಟ್ಟದ್ದು ಕದನ ಕುತೂಹಲಿ ೧೨೩ ಅಂತಾ.
ಉ: ಕದನಕುತೂಹಲಿ123
<<ಇದಕ್ಕೆಲ್ಲಾ ಸ್ವಘಟ್ಟಿಯಾಣೆ ಯಾಕ್ರೀ ...>>
ಸ್ವಘಟ್ಟಿ ಚರಿತಾಮೃತದಲ್ಲಿ ಸ್ವಘಟ್ಟಿಯ ದಿವ್ಯ ನಾಮವನ್ನು ದಿನಕ್ಕೆ ನೂರು ಬಾರಿ ಸ್ಮರಿಸಿದರೆ ದಿವ್ಯ, ಶಾಂತಿ ಎಂಬುದಾಗಿ ಹೇಳಲ್ಪಟ್ಟಿದೆ ಎಂದು ಓದಿದವರು ಹೇಳುತ್ತಾರೆ.
ಆದ್ದರಿಂದ ಸಣ್ಣ ಅವಕಾಶ ಸಿಕ್ಕಿದರೂ ಸಾಕು ಸ್ವಘಟ್ಟಿಯ ಹೆಸರು ಹೇಳುತ್ತೇನೆ. ಸಾಧ್ಯವಾದರೆ ನೀವೂ ಮಾಡಿನೋಡಿ ಎಂದು ಇನ್ನೊಮ್ಮೆ ಸ್ವಘಟ್ಟಿಯನ್ನು ಸ್ಮರಿಸಿ ನಿಮ್ಮಲ್ಲಿ ವಿನಂತಿಸುತ್ತೇನೆ.
<<ನೀವಂತೆ, ನನಗೆ ಹೆಸರಿಟ್ಟದ್ದು ಕದನ ಕುತೂಹಲಿ ೧೨೩ ಅಂತಾ.>>
ಹೆಸರು ಯಾರಿಟ್ಟದ್ದು ಎಂಬುದು ಮುಖ್ಯವಲ್ಲ. ಅದು ಸರಿಯಾದ ಹೆಸರು ಎಂದಾದರೆ ಸಾಕು, ಅಲ್ಲವೇ?
ಕದನ ಕುತೂಹಲಿ ಅನ್ನುವುದು ಸ್ತ್ರೀಲಿಂಗ ಮಾತ್ರವಲ್ಲ ಪುಲ್ಲಿಂಗಕ್ಕೂ ಹೊಂದುತ್ತದೆ, ಆದ್ದರಿಂದ ಈ ಹೆಸರು ಸಮಾನ ಅಭಿರುಚಿಯ ನಮ್ಮಿಬ್ಬರಿಗೂ ಅನ್ವಯವಾಗುತ್ತದೆ ಎಂದು ನನ್ನ ಅನಿಸಿಕೆ.
ಅಂದ ಹಾಗೆ ಹೊಸ ಜಗಳಗಳು, ಭಿನ್ನಾಭಿಪ್ರಾಯಗಳು, ಮಾರಾಮಾರಿ ಕದನಗಳು ಇವೆಲ್ಲ ಇಲ್ಲದೆ ಹೊಸ ಸಂಪದ ಕಳೆಗುಂದಿ, ಓದುಗರ ಸಂಖ್ಯೆ ಕ್ಷೀಣಿಸಿದೆ ಎಂದು ಕಾಣುತ್ತದೆ ಅಲ್ಲವೇ? :-)
ಎಲ್ಲದಕ್ಕೂ ಸ್ವಘಟ್ಟಿಯ ಕೃಪೆ ಬೇಕೇಬೇಕು.
ಕದನಕ್ರತ್, ಕದನಪರಿಹಾರಿ ಎಂಬ ಮಾತು ಸ್ವಘಟ್ಟಿಯ ಚರಿತಾಮೃತದಲ್ಲಿ ಇದೆ ಎನ್ನುತ್ತಾರೆ ಸ್ವಘಟ್ಟಿಯ ಘಟ್ಟಿಭಕ್ತರು.
ಕದನಗಳನ್ನು ಹುಟ್ಟಿಸುವವನೂ ಅವನೇ, ಕದನಗಳನ್ನು ಪರಿಹರಿಸುವವನೂ ಅವನೇ!
ನೀವು, ನಾವೆಲ್ಲಾ ತೊಗಲುಬೊಂಬೆಗಳು ಮಾತ್ರ ಎಂದು ಸ್ವಘಟ್ಟಿದಾಸರು ಹಾಡಿದ್ದಾರಂತೆ!
ಉ: ಕದನಕುತೂಹಲ
>>> ಎಲ್ಲದಕ್ಕೂ ಸ್ವಘಟ್ಟಿಯ ಕೃಪೆ ಬೇಕೇಬೇಕು...ಕದನಗಳನ್ನು ಪರಿಹರಿಸುವವನೂ ಅವನೇ!
-ನಮ್ಮ ಮನೆಯ ಕದನ ನಿಲ್ಲುವತನಕ
ಬಿಡೆನು ನಿನ್ನಯ ಕಿಡ್ನಿಯಾ..ಎಂದು ಭಜಿಸಲಾ?
ಅಥವಾ ಹಿರಿಯನಾದುದರಿಂದ ನಾ ಚಾಮಿಯನ್ನೇ ನಂಬಲೇ?
-ಗಣೇಶ.
ಉ: ಕದನಕುತೂಹಲ
<<ಬಿಡೆನು ನಿನ್ನಯ ಕಿಡ್ನಿಯಾ..ಎಂದು ಭಜಿಸಲಾ? ಅಥವಾ ಹಿರಿಯನಾದುದರಿಂದ ನಾ ಚಾಮಿಯನ್ನೇ ನಂಬಲೇ?>>
ಎರಡೂ ಮಾಡಬೇಡಿ.
ನಿಮ್ಮ ಬರಹಗಳ ಅಭಿಮಾನಿಗಳಾದ ನಮಗೆ ನಿರಾಶೆಯಾಗದಂತೆ, ನಿಮ್ಮ ಕದನವನ್ನು ಮುಂದುವರಿಸಿ ಹಾಗೂ ಸಂಪದದಲ್ಲಿ ಕದನದ ಪ್ರಗತಿಯ ವರದಿಗಳನ್ನು ಪ್ರಕಟಿಸುತ್ತಾ ಇರಿ.
ಇನ್ನೂ ಉತ್ತಮವೆಂದರೆ, ಶ್ರೀಮತಿಯವರನ್ನು ಸಂಪದಕ್ಕೆ ಪರಿಚಯಿಸಿ, ಕದನವನ್ನು ಸಂಪದದ ಪುಟಗಳಲ್ಲೇ public ಆಗಿ ಕಾದಾಡುವುದು.
ಉ: ಕದನಕುತೂಹಲ
<ಇನ್ನೂ ಉತ್ತಮವೆಂದರೆ, ಶ್ರೀಮತಿಯವರನ್ನು ಸಂಪದಕ್ಕೆ ಪರಿಚಯಿಸಿ, ಕದನವನ್ನು ಸಂಪದದ ಪುಟಗಳಲ್ಲೇ public ಆಗಿ ಕಾದಾಡುವುದು>
ಈ ಮಾತಿಗೆ ನನ್ನ ಸಂಪೂರ್ಣ ಸಹಮತ :-)
ಉ: ಕದನಕುತೂಹಲ
<ಇನ್ನೂ ಉತ್ತಮವೆಂದರೆ, ಶ್ರೀಮತಿಯವರನ್ನು ಸಂಪದಕ್ಕೆ ಪರಿಚಯಿಸಿ, ಕದನವನ್ನು ಸಂಪದದ ಪುಟಗಳಲ್ಲೇ public ಆಗಿ ಕಾದಾಡುವುದು>
ಈ ಮಾತಿಗೆ ನನ್ನ ಸಂಪೂರ್ಣ ಸಹಮತ :-)
-ಈ ಮಾತಿಗೆ ನನ್ನದೂ ಸಂಪೂರ್ಣ ಸಹಮತವಿದೆ. :( :(
-ಗಣೇಶ.
ಉ: ಕದನಕುತೂಹಲಿ123
ಶ್ರೀಕರ್, ನೀವು ಹೇಳಿದ್ದು ನಿಜ, ಹೊಸ ಸಂಪದ, ಹೊಸ ಕದನಗಳಿಲ್ಲದೆ ಸ್ವಲ್ಪ ಮಟ್ಟಿಗೆ ಕಳೆಗುಂದಿದೆ :-) ನಾನು ಕದನ ಕುತೂಹಲಿ ೧೨೩ ಆದರೆ ನೀವು ೪೫೬ ಆಗಿ :-)
ಉ: ಕದನಕುತೂಹಲಿ123
ನಾನೀಗಾಗಲೇ ಶ್ರೀಮಾನ್ 420 ಆಗಿದ್ದೇನೆ.
ಉ: ಕದನಕುತೂಹಲಿ123
ಹೇಳೋಣವೆಂದುಕೊಂಡಿದ್ದೆ. ಆದರೆ ಮತ್ತೊಮ್ಮೆ ಕದನವಾಗಬಾರದೆಂದು ಹೇಳಲಿಲ್ಲ :-)
ಉ: ಕದನ ಕುತೂಹಲ
:D
ಗಣೇಶಣ್ಣ ಕದನ ಮುಂದುವರೆಸಿ, ಆಲ್ ದಿ ಬೆಸ್ಟ್ ;)
ಉ: ಕದನ ಕುತೂಹಲ
ಇಲ್ಲಿ ಕದನವೆಲ್ಲಿದೆ ರಾಕೇಶಾ..
ಎಲ್ಲಾ ಒನ್ ವೇ..
ಭಾರತ ಸರ್ಕಾರ ಪಾಕಿಸ್ಥಾನಕ್ಕೆ ಎಚ್ಚರಿಸುವಂತೆ ನಾನೂ.."ಮ್ ಮ್..ನೋಡು, ಬೇಡ..ನಾನು ಸುಮ್ಮನಿರೋದಿಲ್ಲಾ..." ಅಂತೀನಿ ಅಷ್ಟೇ :(
-ಗಣೇಶ.
ಉ: ಕದನ ಕುತೂಹಲ
ನಿಮ್ಮಲೇಖನವೂ ಅದಕ್ಕೆ ತಕ್ಕದಾದ ಪ್ರತಿಕ್ರಿಯೆಗಳೂ ಅದಕ್ಕೆ ನಿಮ್ಮ ಪ್ರತಿಕ್ರಿಯೆಗಳೂ ತುಂಬಾ ಚೆನ್ನಾಗಿವೆ
ಉ: ಕದನ ಕುತೂಹಲ
ಚೆನ್ನಾಗಿದೆ. ಆದರೆ youtube ನ ಕೊಂಡಿ ಇದ್ದರೆ ಇನ್ನೂ ಚೆನ್ನಾಗಿರೋದು.
ಉ: ಕದನ ಕುತೂಹಲ
ಶ್ರೀನಿವಾಸ್,
>>youtube ನ ಕೊಂಡಿ ಇದ್ದರೆ ಇನ್ನೂ ಚೆನ್ನಾಗಿರೋದು.
-ಮನೆಜಗಳಕ್ಕಾಗಿಯೇ ಕನ್ನಡದ ೩-೪ ಚಾನಲ್ಗಳು ಇವೆಯಲ್ಲಾ...
ಶ್ರುತಿ/ಲಕ್ಷ್ಮಿ/ತಾರಾ/ಮಾಳವಿಕರಲ್ಲಿ ಯಾರ ಪ್ರೋಗ್ರಾಂನಲ್ಲಿ ಕದನ ಮಾಡುವುದೆಂದು ನಮ್ಮೊಳಗೆ ಇನ್ನೂ ಇತ್ಯರ್ಥವಾಗಿಲ್ಲ.
ಆದ ಕೂಡಲೆ ತಿಳಿಸುವೆ.
-ಗಣೇಶ.