ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › ಗಣೇಶ ರವರ ಬ್ಲಾಗ್

ಯು ಮಿ ಔರ್ ಹಮ್

May 21, 2008 - 11:44pm — ಗಣೇಶ

ಮನೆ ಬಳಿ ಕುಳಿತಿದ್ದ ವೃದ್ಧರೊಬ್ಬರು ಇದ್ದಕ್ಕಿದ್ದಂತೆ ಬೆಳಗ್ಗೆ ನಾಪತ್ತೆಯಾಗಿದ್ದಾರೆ. ಸುಮಾರು ೮೫ ವರ್ಷದ ವೃದ್ಧರ ಫೋಟೋದೊಂದಿಗೆ ಪೇಪರ್‌ನಲ್ಲಿ ಬಂದ ವರದಿಯನ್ನು ಓದಿದೆ. ಒಳ ಮನಸ್ಸು ಹೇಳಿತು- ಸೊಸೆ ಕಾಟ ತಪ್ಪಿಸಲು ಮನೆ ಬಿಟ್ಟು ಹೋಗಿರಬೇಕು. ಪಾಪ...

ಮುಂದಿನ ಪುಟದಲ್ಲಿ ಮತ್ತೊಂದು ಸುದ್ದಿ- ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ೭೦ ವಯಸ್ಸಿನ ವೃದ್ಧೆಯೊಬ್ಬರು ನಾಪತ್ತೆಯಾಗಿದ್ದಾರೆ. (ವೃದ್ಧೆ ಕಾಟ ತಪ್ಪಲು, ರೈಲು ಹತ್ತಿಸಿ ಮನೆಯವರು ಹಿಂದೆ ಬಂದಿರಬಹುದು -ಈಗಿನ ನಮ್ಮ ಯೋಚನೆ/ ತೀರ್ಮಾನಗಳೇ ಈ ತರಹ ಇರುತ್ತದೆ.)

ವರದಿಯ ಕೊನೆಯಲ್ಲಿ ಇವರು ಮರೆವು ಕಾಯಿಲೆಯಿಂದ ಬಳಲುತ್ತಿದ್ದರು ಎಂದಿತ್ತು.

೨ ವಾರ ಮೊದಲು ‘U me aur hum’ ಸಿನೆಮಾ ನೋಡಿದ್ದೆ. ಇದರಲ್ಲಿ ಕಾಜೋಲ್ ಮರೆವು ರೋಗದಿಂದ ಬಳಲುತ್ತಿದ್ದಳು. ಹೆಚ್ಚಿನ ಸಮಯ perfect ಇರುತ್ತಿದ್ದಳು. ಒಮ್ಮೆಲೆ ಎಲ್ಲಾ ಮರೆತು ಏನೂ ಅಂದರೆ ಏನೂ ಗೊತ್ತಿಲ್ಲದೇ ರಸ್ತೆ ಮಧ್ಯ ನಿಲ್ಲುತ್ತಿದ್ದಳು. ತನಗೆ ಎಲ್ಲಿ ಹೋಗಬೇಕು, ಎಲ್ಲಿಂದ ಬಂದೆ ಗೊತ್ತೇ ಇಲ್ಲ!
ತನ್ನ ಗಂಡ ಎದುರಿಗೆ ಬಂದರೂ ಅಪರಿಚಿತಳಂತೇ ಇರುತ್ತಿದ್ದಳು.

ಮಗುವನ್ನು ನೀರಿನ ತೊಟ್ಟಿಯಲ್ಲಿ ಸ್ನಾನಕ್ಕೆ ಕುಳ್ಳಿರಿಸಿ, ನೀರು ಬಿಡುವವರೆಗೆ ಸರಿ ಇದ್ದವಳು ನಂತರ ಏನೂ ಗೊತ್ತಿಲ್ಲದವಳಂತೆ ನಿಂತೇ ಇರುವಳು. ಅಬ್ಬಾ..

ಸಿನಿಮಾದಲ್ಲಿ ಆದ್ದರಿಂದ ಆಯ್ತು. ಹೀರೋ ರಕ್ಷಣೆಗೆ ಬಂದ.
ಕತೆ ಸುಖಾಂತ್ಯವಾಯಿತು.

ಇದೇ ‘ಅಲ್ಜೀಮರ್ಸ್ ಕಾಯಿಲೆ’-Alzheimer’s disease.

ಅಜಯ್ ದೇವಗನ್ ತನ್ನ ನಿರ್ಮಾಣದ ಸಿನಿಮಾಕ್ಕೆ ಈ ಕತೆ ಆಯ್ಕೆ ಮಾಡಿಕೊಂಡುದ್ದಕ್ಕೆ ಮೆಚ್ಚಬೇಕು.
ಬ್ಲಾಕ್, ತಾರೆ ಜಮೀನ್ ಪರ್, ಯು ಮಿ ಔರ್ ಹಮ್, ಸಿನಿಮಾಗಳು- ಒಂದೊಂದು ಕಾಯಿಲೆ ಬಗ್ಗೆ,- ಕಾಯಿಲೆಯಿಂದ ಬಳಲುವವರಿಗೆ ಅವರ ಮನೆಯವರು/ಸಮಾಜ ಯಾವ ರೀತಿ ಸಹಾಯ ಮಾಡಬೇಕು ಎಂಬ ಬಗ್ಗೆ ಜನ ಸಾಮಾನ್ಯರಿಗೆ ಅರ್ಥವಾಗುವಂತೆ ಹೇಳಿದೆ.

ಈ ಅಲ್ಜೀಮರ್ಸ್ ಕಾಯಿಲೆ ಜಗತ್ತಿನಾದ್ಯಂತ ಅಂದಾಜು ೨೪ ಮಿಲಿಯದಷ್ಟು ಜನರನ್ನು ಬಾಧಿಸಿದೆ. ಸದ್ಯಕ್ಕೆ ಇದಕ್ಕೆ ಸರಿಯಾದ ಔಷಧಿಯೇ ಇಲ್ಲವಂತೆ.
ಹೆಚ್ಚಾಗಿ ಇದು ೬೫ ವರ್ಷ ಮೇಲ್ಪಟ್ಟವರಿಗೆ ಬಾಧಿಸುವುದು.
ಜಗತ್ತನ್ನೇ ತನ್ನ ಮುಷ್ಠಿಯಲ್ಲಿಟ್ಟ ಅಮೆರಿಕಾದ ಅಧ್ಯಕ್ಷ ರೊನಾಲ್ಡ್ ರೇಗನ್‌ನ್ನೇಬಳಲಿಸಿದ ವ್ಯಾಧಿಯಿದು.

ಬ್ಲಾಗ್‌ನ ಮೊದಲಲ್ಲಿ ವೃದ್ಧರ ಮನೆಯವರ ಬಗ್ಗೆ ಕೆಟ್ಟದ್ದಾಗಿ ಯೋಚಿಸಿದಕ್ಕೆ ಕ್ಷಮೆ ಇರಲಿ. ಅವರ ಮರೆವಿನ ಕಾಯಿಲೆ ಬೇಗನೆ ಗುಣವಾಗಲಿ.

-ಗಣೇಶ.

  • ಅಲ್ಜೀಮರ್ಸ್ ಕಾಯಿಲೆ
  • ಯು ಮಿ ಔರ್ ಹಮ್ ಹಿಂದಿ ಸಿನೆಮಾ
~.~
  • ಗಣೇಶ ರವರ ಬ್ಲಾಗ್
  • Login or register to post comments
  • 624 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 22, 2008 - 12:14am — hamsanandi

ಉ: ಯು ಮಿ ಔರ್ ಹಮ್

hamsanandi's picture

alziemers ಬಗ್ಗೆ ಮಲೆಯಾಳಂ ನಲ್ಲಿ ಒಂದು ಬಹಳ ಒಳ್ಳೇ ಚಿತ್ರ ಬಂದಿದೆಯಂತೆ. ಅಂತೆ ಯಾಕಂದ್ರೆ, ನಾನು ನೋಡಿಲ್ಲ. ಮೋಹನ್ ಲಾಲರ ಸಿನೆಮಾ.

"ತನ್ಮಾತ್ರ" ಎನ್ನುವ ಪದ ಕೊಟ್ಟು ಗೂಗಲಿಸಿ. ಕೆಲವಾರು ಪ್ರಶಸ್ತಿಗಳೂ ಇದಕ್ಕೆ ಬಂದವು ಎಂದು ನೆನಪು.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 25, 2008 - 8:14pm — ಗಣೇಶ

ಉ: ಯು ಮಿ ಔರ್ ಹಮ್

ಗಣೇಶ's picture

ಹಂಸಾನಂದಿಯವರೆ,
ತನ್ಮಾತ್ರ ಸಿನೆಮಾದ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು. ಗೂಗಲ್‌ನಲ್ಲಿ ಇದರ ಬಗ್ಗೆ ಓದಿದೆ. ಹೀರೋ(ಮೋಹನ್‌ಲಾಲ್)ಗೇ ಈ ಕಾಯಿಲೆ ಬಂದುದರಿಂದ ಕತೆಯ ಕೊನೆ ಹೇಗೆ ಮಾಡುವರು ಎಂಬ ಕುತೂಹಲವಾಯಿತು. ಈವತ್ತು VCD ತಂದು ನೋಡಿದೆ.
ಗಂಡ,ಹೆಂಡತಿ, ಇಬ್ಬರು ಮಕ್ಕಳು-ಸುಖವಾಗಿದ್ದ ಸಂಸಾರ-ಈ ಅಲ್ಜೀಮರ್ಸ್ ಕಾಯಿಲೆಯಿಂದ ಹೇಗೆ ಬಳಲುತ್ತದೆಯೆಂದು ಮನಮುಟ್ಟುವಂತೆ ನಿರೂಪಿಸಿದ್ದಾರೆ.
ಧನ್ಯವಾದಗಳು,
ಗಣೇಶ.

ಅಲ್ಜೀಮರ್ಸ್ ರೋಗದ ಬಗ್ಗೆ ಇನ್ನಷ್ಟು-

ಈ ರೋಗ ಬಂದಾಗ ಬಳಲುವುದು/ಒದ್ದಾಡುವುದು ಅವರ ಮನೆಯವರು.
(ರೋಗ ಬಂದವರಿಗೆ ಏನೂ ಗೊತ್ತಿರುವುದಿಲ್ಲವಲ್ಲ)

‘ನೆಂಟರೊಂದಿಗೆ ಊಟಕ್ಕೆ ಕುಳಿತವರು ಇದ್ದಕ್ಕಿದ್ದಂತೆ ಎದ್ದು, ಅವರೆಲ್ಲರ ಊಟದ ಎಲೆಗಳನ್ನ ಮೆಟ್ಟಿಕೊಂಡೇ ಹೊರಬಂದ್ರು. ಎಲ್ಲೆಂದರಲ್ಲಿ ಮೂತ್ರ/ಮಲ ವಿಸರ್ಜಿಸುವರು. ತಪ್ಪಿ ಬಾಗಿಲು ತೆರೆದಿಟ್ಟರೆ-ಜನ ನಾಪತ್ತೆ. ಎಷ್ಟೋ ರಾತ್ರಿ ನಿದ್ರೆ ಇಲ್ಲದೇ ಹುಡುಕಿದ್ದುಂಟು. ಹಗಲು ರಾತ್ರಿ ಒಬ್ಬರಲ್ಲ ಒಬ್ಬರು ಅವರ ಮೇಲೆ ಕಣ್ಣಿಟ್ಟಿರಬೇಕು. ಕೊನೇ ವರ್ಷ ನರಕದಲ್ಲಿದ್ದಂತೆ, ಯಾವ ವೈರಿಗೂ ಈ ರೋಗ ಬರಬಾರದು..’ ಎಂದೊಬ್ಬರು ಹೇಳಿದರು.
ಜಗತ್ತಿನ ಮಿಲಿಯಗಟ್ಟಲೆ ಮನೆಗಳವರು ಹೀಗೆ ಒದ್ದಾಡುತ್ತಿರಬಹುದು. ಆದಷ್ಟು ಬೇಗ ಅಲ್ಜೀಮರ್‌ಸ್ ಕಾಯಿಲೆ ಪೂರ್ತಿ ಗುಣವಾಗುವಂತಹ ಔಷಧಿ ಬರಲಿ.

-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 25, 2008 - 11:38pm — hpn

ಉ: ಯು ಮಿ ಔರ್ ಹಮ್

hpn's picture

ಮಲಯಾಳ ಸಿನಿಮಾದಲ್ಲಿ ಎಂದಿಗೂ ಪ್ರಯೋಗಗಳು ಹೆಚ್ಚು! Smiling
'ಆಪ್ತಮಿತ್ರ'ದ ಕಥೆ ಮೂಲತಃ ಒಂದು ಮಲ್ಯಾಳಂ ಸಿನಿಮಾದ್ದು. ತಮಾಷೆಯೆಂದರೆ ಪ್ರಿಯದರ್ಶನ್ ಬಾಲಿವುಡ್ ನಲ್ಲಿ ಕೆಲವು ವರ್ಷಗಳಿಂದ ತರುತ್ತಿರುವ ಸಿನಿಮಾಗಳಿಗೆ ಕಥೆಗಳು ಸಿಕ್ಕಿರೋದೂ ಮಲ್ಯಾಳಂ ಪ್ರಯೋಗಗಳಿಂದಲೇ. ಅದರಲ್ಲಿ ಹಲವು ಸಿಕ್ಕಾಪಟ್ಟೆ ದುಡ್ಡು ಮಾಡಿವೆ.

ಕನ್ನಡದಲ್ಲು ಇಂತಹ ಪ್ರಯೋಗಗಳು ಸುಮಾರು ಆಗಿವೆ (ಇತ್ತೀಚೆಗಷ್ಟೇ ಸಿನಿಮಾಗಳು cliche ಆದಂತಿರುವುದು).
ಅಲ್ಜೀಮರ್ಸ್ ಭಾರತದ ಮಟ್ಟಿಗೆ ತಿಳುವಳಿಕೆಯಲ್ಲಿ ಹೊಸತು.

ನಾನು ವಿಕಿಪೀಡಿಯದಲ್ಲಿ active ಆಗಿದ್ದಾಗ ಇಂಥದ್ದೇ ಹಲವು ಖಾಯಿಲೆಗಳ ಬಗ್ಗೆ ಓದಿದ್ದುಂಟು. ಏನೇನೋ ಚಿತ್ರ ವಿಚಿತ್ರ ಮನಸಿನ ಖಾಯಿಲೆಗಳೂ ಇವೆ! ಅಂಥದ್ದೊಂದು ಇಲ್ಲಿದೆ ನೋಡಿ:
http://en.wikipedia.org/wiki/Asperger%27s_syndrome
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 26, 2008 - 10:05am — hamsanandi

ಉ: ಯು ಮಿ ಔರ್ ಹಮ್

hamsanandi's picture

ಮಲೆಯಾಳಮ್ ಸಿನೆಮಗಳು ಕನ್ನಡಕ್ಕಿಂತ ಮೈಲುಗಟ್ಟಲೆ ಮುಂದಿವೆ ..

ಆಪ್ತಮಿತ್ರ - ಮಣಿಚ್ಚಿತ್ತ್ರತ್ತಾೞು ಎನ್ನುವ ಚಿತ್ರದ ರಿಮೇಕ್. ಆ ಸಿನೆಮಾ ೧೯೯೨ ರ ಸುಮಾರಲ್ಲಿ ತೆರೆಕಂಡಿತ್ತು. ಹಾಡುಗಳು ಬಹಳ ಚೆನ್ನಾಗಿದ್ದವು.

ಇನ್ನು ಆಲ್ಜಿಮರ್ಸ್ ವಿಷಯಕ್ಕೆ ಬಂದರೆ - ನನ್ನ ಸ್ವಂತ ಅನುಭವಕ್ಕೆ ಬಂದ ಕೆಲವು ವಿಷಯಗಳನ್ನು ಕೆಲ ಕಾಲದ ಹಿಂದೆ ಇಲ್ಲಿ ಬರೆದಿದ್ದೆ:

http://neelanjana.wordpress.com/2007/11/06/when-there-is-no-yesterday/

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 26, 2008 - 10:25am — mahesha

ಉ: ಯು ಮಿ ಔರ್ ಹಮ್

mahesha's picture

"ಮಲಯಾಳ ಸಿನಿಮಾದಲ್ಲಿ ಎಂದಿಗೂ ಪ್ರಯೋಗಗಳು ಹೆಚ್ಚು! Smiling"
ಹುವುದವುದು...

ಮಳಯಾಳಿ ಸಿನಿಮದ ಪ್ರಯೋಗಗಳು ನಮ್ಮೂರಲ್ಲೆಲ್ಲ ಬಲ್ ಪೇಮಸ್ಸು..!! Smiling ( ಸ್ಮಯ್ಲಿಯ ಒಳಗುಟ್ಟು.. Smiling )

ಮಣಿಚಿತ್ರತಾೞುವಿನ ಸಿಡಿ ಇದೆ ನನ್ನ ಬಳಿ... ನನಗೆ ಅದು ಆಪ್ತಮಿತ್ರದಶ್ಟು ಹಿಡಿಸಲಿಲ್ಲ.!! ಆಪ್ತಮಿತ್ರದ ಕೊನೆ ಮಣಿಚಿತ್ರತಾೞುವಿನ ಕೊನೆಗಿಂತ ಬೇಱೆಯಾಗಿದೆ.

ಮಳಯಾಳಿ ಸಿನಿಮಕ್ಕಿಂತ/ಸಮ ನಮ್ಮ ಕನ್ನಡ ಸಿನಿಮದಲ್ಲೂ ಹೊಸತು ಹೆಚ್ಚಿದೆ. ಇಲ್ಲದೇ ಹೋದರೆ ಕಾಸರವಳ್ಳಿ ಪ್ರತಿವರ್ಶ ಪ್ರಶಸ್ತಿ ಹೊಡೀತಿರಲಿಲ್ಲ.

ಆದರೆ ಮಳಯಾಳಿ ಸಿನಿಮ ತೆಲುಗು, ತಮಿಳಿಗಿಂತ ಹದವಾಗಿ ಸಹ್ಯವಾಗಿ ಇರ್ತದೆ.. ಅವರು ನಮ್ಮ ಹಾಗೆ ಮರ್ಯಾದೆ/ಮಿತಿಗೆ ಬೆಲೆ ಕೊಡೋ ಮಂದಿ ಅನ್ನಿಸ್ತದೆ.
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 26, 2008 - 12:52pm — hpn

ಉ: ಯು ಮಿ ಔರ್ ಹಮ್

hpn's picture

ಮಳಯಾಳಿ ಸಿನಿಮದ ಪ್ರಯೋಗಗಳು ನಮ್ಮೂರಲ್ಲೆಲ್ಲ ಬಲ್ ಪೇಮಸ್ಸು..!! Smiling

ಬೇರೆ ಎಲ್ಲೋ ಹೋಗಿಬಿಟ್ಟಿ ಕಣಯ್ಯ. (ಓದುಗರಿಗೆ: ನಾನು ಹೇಳಿದ್ದು ಸಿನಿಮಾ ಮಟ್ಟಿಗೆ ನಡೆದಿರುವ ಪ್ರಯೋಗಗಳ ಬಗ್ಗೆ. ಮಹೇಶ ಅದನ್ನೆಲ್ಲಿಗೋ ಎತ್ತಿಕೊಂಡು ಹೋದ).
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 26, 2008 - 12:55pm — mahesha

ಉ: ಯು ಮಿ ಔರ್ ಹಮ್

mahesha's picture

ಅದೊಂದು ಜೋಕೋ...

ನಾನು ಮಳಯಾಳಂ ಸಿನಿಮ ನೋಡ್ತೀನಿ.. ಮೋಹನ ಲಾಲ್ ಸಿನಿಮ ಹೆಚ್ಚು.
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 25, 2008 - 11:16pm — hpn

ಉ: ಯು ಮಿ ಔರ್ ಹಮ್

hpn's picture

ಗಣೇಶರೆ,

ಅಜಯ್ ದೇವಗನ್ ತೆಗೆದಿರೋ "You me aur Hum" ಹಾಲಿವುಡ್ ನ "The Notebook" ಎಂಬ ಚಿತ್ರದ ಶುದ್ಧ ಕಾಪಿ! ಕಾಪಿ ಮಾಡೋದನ್ನೂ ಸರಿಯಾಗಿ ಮಾಡಿಲ್ಲ Sticking out tongue
ನಾಯಕಿಗೆ ಇರುವ ಈ ಖಾಯಿಲೆಯೇ ಮೂಲ ಕಥೆಯ ಜೀವಾಳವಾಗಿದ್ದರಿಂದ ಕಥೆಯ ಜೊತೆ ಖಾಯಿಲೆಯನ್ನೂ ಎಳೆದಿದ್ದಾರೆ ಅಷ್ಟೆ.

ನೀವು ಪಟ್ಟಿ ಮಾಡಿರುವ ಮೂರು ಚಿತ್ರಗಳಲ್ಲಿ ಬಹುಶಃ ತಾರೆ ಝಮೀ ಪರ್ ಒಂದೇ ಸ್ವಂತದ ರಿಸರ್ಚ್/ಶ್ರಮ ಹಾಕಿ ರೆಡಿ ಮಾಡಿರುವ ಸ್ಕ್ರಿಪ್ಟು!
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 26, 2008 - 8:18pm — harshab

ಉ: ಯು ಮಿ ಔರ್ ಹಮ್

harshab's picture

ಇಂಗ್ಲೀಷ ಚಿತ್ರ, "50 First Dates", ಅಂಥ ಯಾವಾಗೋ ನೋಡಿದ್ದೆ. ಬಹಳ ಚೆನ್ನಾಗಿತ್ತು. ಈ ಚಿತ್ರ ಅದರ ಥರನೇ ಇದೆ ಅನ್ಕೊತೀನಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 22, 2008 - 9:31pm — ಗಣೇಶ

ಉ: ಯು ಮಿ ಔರ್ ಹಮ್

ಗಣೇಶ's picture

ಹರಿ,ಹಂಸಾನಂದಿ,ಹರ್ಷ,ಮಹೇಶ Smiling ರಿಗೆ ನನ್ನಿ.

ನೀವು ಹೇಳಿದ The Note Book ಮತ್ತು 5o First Dates ಸಿನೆಮಾದ ವಿಸಿಡಿ ನೋಡ ಬೇಕೆಂದಿದ್ದೆ. ಈ ಸಂಡೇಯೂ ಆಗಲಿಲ್ಲ.

ನಿನ್ನೆಯ Bangalore Mirror ಪತ್ರಿಕೆಯಲ್ಲಿ (ಪೇಜ್ ೧೧) ಒಂದು ವರದಿ ಓದಿದೆ-
ಬಡ, ವಯಸ್ಸಾದವರಿಗಾಗಿ 'ಸಂಧ್ಯಾಕಿರಣ' ಎಂಬ ಒಂದು ಡೇ ಕೇರ್‍ ಸೆಂಟರ್ ನಡೆಸುತ್ತಾರಲ್ಲ. ಅಲ್ಲೇ ಡಿಮೆನ್ಷಿಯಾದಿಂದ ನರಳುವವರಿಗಾಗಿ ೨೦ ಬೆಡ್‌ನ ಒಂದು ಡೇ ಕೇರ್ ಸೆಂಟರ್ ಸುರುಮಾಡುವರಂತೆ.

Alzheimer's and Related Disorders Society of India (ARDSI), ತನ್ನ ೧೪ನೇ National Conference ನ್ನು IISc ನಲ್ಲಿ ಸೆಪ್ಟೆಂಬರ್ ೨೭,೨೮ ರಂದು ನಡೆಸುವುದು.

-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮರೆವು
  • ಕನ್ನಡಕ್ಕೆ ಕಾಯಿಲೆ diglossia
  • ಕ್ರೂಟ್ಸರ್ ಸೊನಾಟಾ ಅಧ್ಯಾಯ ಹದಿನಾರು
  • ಕ್ರೂಟ್ಸರ್ ಸೊನಾಟಾ ಅಧ್ಯಾಯ ಹದಿನಾರು
  • ಕಾಯಿಲೆಗಳ ಬಗ್ಗೆ ಒ೦ದಿಷ್ಟು...
Syndicate content

ಲೇಖಕರು

ಗಣೇಶ's picture

ಪರಿಚಯ

ಕನ್ನಡ ಬಲು ಇಷ್ಟ
ಇಂಗ್ಲೀಷ್/ಕಂಪ್ಯೂಟರ್ ಸ್ವಲ್ಪ ಕಷ್ಟ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಶರಣರ ಸಾವನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
  • ಮಿಂಚಿನ ಓಟ
  • ಸಿಟಿಯ ಮೇಲಣ ಗುಳ್ಳೆ
  • ಕುಮಾರವ್ಯಾಸ ಭಾರತ
  • ಬನವಾಸಿ ಆಸುಪಾಸಿನ ಕನ್ನಡ
  • ಬಾರೋ ಸಾಧನಕೇರಿಗೆ...
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿವಾಸ ವೀ. ಬ೦ಗೋಡಿ
    ಉ: ಇಂಟರ್ನೆಟ್ ಗಾಗಿ ಏನೆಲ್ಲ (೨)
    July 24, 2008 - 11:18am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:46am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:40am
  • mahesha
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:37am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:34am
  • mahesha
    ಉ: ಭಾಷಾಲ್ಪಸಂಖ್ಯಾತರಿಗೆ ಮುಖ್ಯಮಂತ್ರಿಗಳ ಆಯವ್ಯಯದ ಕೊಡುಗೆ
    July 24, 2008 - 10:25am
  • shaamala
    ಉ: ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
    July 24, 2008 - 10:23am
  • keerthi2kiran
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 10:07am
  • kannadakanda
    ಉ: ಪೞಗು, ಪೞೆ(ಹೞೆ)
    July 24, 2008 - 9:52am
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 9:50am
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 45 ಅತಿಥಿಗಳು ಆನ್ಲೈನ್ ಇರುವರು.


ಕಿವುಡುತನ ತಪ್ಪೀತೆ ರನ್ನಕುಂಡಲದಿಂದ? |
ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? ||
ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ |
ಜವರಾಯ ಸಮವರ್ತಿ -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator