20
June
2013

ಅಕ್ಕಾ..ಅಕ್ಕಾ..ನಾನೂ ಬತ್ತೀನಿ...

August 21, 2008 - 11:44pm
ಗಣೇಶ
ಅಕ್ಕ ಸಮ್ಮೇಳನಕ್ಕೆ ನಮ್ಮ ರಾಜಕಾರಣಿಗಳು ಮಜ ಮಾಡಲು ಹೋಗುತ್ತಾರೆಂದು ಪ್ರಚಾರ ಮಾಡುತ್ತಿದ್ದಾರೆ. ಯಾವ ಒಳ್ಳೆಯ ಕೆಲಸ ಮಾಡಲು ಹೊರಡುವಾಗಲೂ ಅಡ್ಡಕಾಲಿಡುವುದು ಕೆಲವರ ಅಭ್ಯಾಸ. ನಿಜ ಸಂಗತಿ ಅದಲ್ಲ.. ಹತ್ತಿರ ಬನ್ನಿ.. ಗುಟ್ಟಿನ ವಿಚಾರ.. ಇನ್ನೂ ಹತ್ತಿರ ಬನ್ನಿ.. ಶ್.. ಬುಶ್‌ಗೆ ಕೇಳಿಸೀತು. ಅಪರೇಷನ್!! ಹೌದೂ. ‘ಆಪರೇಷನ್ ಅಕ್ಕ’!! ಇವರು ಏನೇ ಮಾಡಿದರು ಅದರ ಹಿಂದೆ ಒಂದು ತರ್ಕವಿದೆ, ಒಂದು ಪ್ಲಾನ್ ಇದೆ, ಒಂದು ಕುತಂತ್ರವಿದೆ- ಒಲಿಂಪಿಕ್ಸ್‌ನಲ್ಲಿ ನಾವು ೨-೩ ಪದಕ ಪಡೆಯಲು ತಿಣುಕುತ್ತಿರುವಾಗ, ಅದ್ಯಾರೋ ಅಮೆರಿಕಾದ ‘ಮೈಕೆಲ್ ಪೆಲ್ಪ್ಸ್’ ಚಿನ್ನದ ಮೇಲೆ ಚಿನ್ನ ಗೆಲ್ಲುತ್ತಿದ್ದಾನಂತೆ. ನಮ್ಮ ‘ಧಣಿ’ಗಳಿಗೆ ಸಾಧ್ಯವಾಗದ್ದು ಎನೂ ಇಲ್ಲ. ಆ ಆಜಾನುಬಾಹು Phelpsನ್ನು ಎತ್ತಾಕೊಂಡು ಬರಲು helpಗೆ ಇಷ್ಟೊಂದು ಮಂದಿಯನ್ನು ಕಳುಹಿಸುತ್ತಿರುವುದು ಅಷ್ಟೇ. ನೋಡಿ ಮುಂದಿನ ಒಲಿಂಪಿಕ್ಸ್‌ಗೆ “ಪೆಲ್ಪ್ಸ್ ಫ್ರಂ ಇಂಡಿಯಾ” !! -ಗಣೇಶ.
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.