ಪರೀಕ್ಷೆ ತಯಾರಿ.. -ಗಣೇಶ
‘ಪರೀಕ್ಷೆ ಸಮಯ. ಉಳಿದೆಲ್ಲಾ ವಿಷಯ ಬಿಟ್ಟು ಓದಿನ ಕಡೆ ಗಮನವಿರಬೇಕು. ...’ ಕಳೆದ ವರ್ಷ ಇದೇ ತಿಂಗಳ ಸುರುವಿಗೆ ಮಕ್ಕಳಿಗೆ ಬುದ್ಧಿ ಹೇಳಿ ಕೆಲಸಕ್ಕೆ ಹೋದೆ.
ಸಂಜೆ ಬರುವಾಗ ಮಕ್ಕಳು ಪುಸ್ತಕ ಬಿಡಿಸಿಟ್ಟು ಕೂತಿದ್ದರು. ಆದರೆ.. ನೋಟ ಮಾತ್ರ ಟಿ.ವಿ.ಯೊಳಗೆ. ಬೇರೆ ದಾರಿಯಿಲ್ಲದೇ ಮನೆಯಾಕೆಯನ್ನು ಒಪ್ಪಿಸಿ ಕೇಬಲ್ ಕನೆಕ್ಷನ್ ತೆಗೆಸಿದೆ.
ಮಾರನೇದಿನ ಸಂಜೆ ಬರುವಾಗ ಮಕ್ಕಳು ಕೋಣೆಯಲ್ಲಿ ಓದುತ್ತಾ ಇದ್ದರು.. ವೀಕ್, ಫಿಲ್ಮ್ ಫೇರ್! ನನಗೆ ಟೈಮ್ ಪಾಸ್‌ಗೆ ಓದಲೆಂದು ತಂದಿಟ್ಟಿದ್ದರೆ, ಅವರು ಓದಿ ಟೈಮ್ ವೇಸ್ಟ್ ಮಾಡುತ್ತಿದ್ದರು. ಅಂದಿನಿಂದ ಮ್ಯಾಗಜಿನ್‌ಗಳು ಬಂದ್.
೩ನೇ ದಿನ ಮಕ್ಕಳು ಓದಿನಲ್ಲಿ ಮಗ್ನ. ನನಗೆ ರೇಡಿಯೊ, ಟಿ.ವಿ., ಪತ್ರಿಕೆಗಳಿಲ್ಲದೇ ಸಮಯ ಕಳೆಯುವುದೇ ಕಷ್ಟವಾಯಿತು. ಹೆಂಡತಿಗೆ ಸಹಾಯ ಮಾಡಲು ಅಡುಗೆ ಮನೆಗೆ ಹೊಕ್ಕೆ. ಅದಕ್ಕಿಂತ ವೇಗವಾಗಿ ಹೊರಬರಬೇಕಾಯಿತು. ಪುಣ್ಯಕ್ಕೆ ಮಿಕ್ಸಿ ಶಬ್ದ ಜೋರಾಗಿತ್ತು.
ಮೆಲ್ಲ ಕಂಪ್ಯೂಟರ್ ಆನ್ ಮಾಡಿ, ಶಬ್ದ ಮ್ಯೂಟ್ ಮಾಡಿ, ಗೇಮ್ ಆಡಲು ಸುರುಮಾಡಿದೆ. ‘ಯೆಲ್ಲೋವನ್ನು ಶೂಟ್ ಮಾಡಿ ಅಪ್ಪ. ತ್ರೀ ಹಂಡ್ರೆಡ್ ಪಾಯಿಂಟ್ಸ್ ಸಿಗುತ್ತದೆ.’ ಬೆನ್ನ ಹಿಂದೆ ಮಕ್ಕಳು+ಸಲಹೆ ರೆಡಿ. ಕಂಪ್ಯೂಟರ್‌ನಿಂದ ಎಲ್ಲಾ ಗೇಮ್ಸ್ ತೆಗೆದೆ.
ನಾಲ್ಕನೇ ದಿನ ಇಂಟರ್‌ನೆಟ್‌ನೊಳಗೆ ನುಗ್ಗಿದೆ. ಮಕ್ಕಳು ನೆಟ್ ಹೊರಗಿಂದ ಇಣುಕಲು ಸುರು.
ಬೇರೆ ದಾರಿ ಕಾಣದೇ ಕನ್ನಡಕ್ಕೆ ಮೊರೆ ಹೋದೆ. ‘ಕನ್ನಡಾ ಆ..’ಎಂದು ಕಂಪ್ಯೂಟರ್ ಬಳಿ ಬರುವುದು ನಿಲ್ಲಿಸಿದರು.

- ಗಣೇಶ ರವರ ಬ್ಲಾಗ್
- Login or register to post comments
- 231 hits
- Email this blog





RSS:
ಪ್ರತಿಕ್ರಿಯೆಗಳು
ಉ: ಪರೀಕ್ಷೆ ತಯಾರಿ.. -ಗಣೇಶ
ನಿಜ, ಈಗಿನ ಹುಡುಗ್ರು ತುಂಬಾ"sharpಉ, talentedಉ, cuteಉ, intelligentಉ" ಎಲ್ಲಾ.
ನನ್ ಮೊಬೈಲ್ನಲ್ಲಿ ಯಾವ್ ಹಾಡಿದೆ ಅಂತ ನೋಡೋಕೆ ತಗೊಂಡವರು ಬರೀ ಕನ್ನಡ ಹಾಡು ಇದಾವೆ ಅಂತ ವಾಪಸ್ ಕೊಟ್ಟು ಬಿಡ್ತಾರೆ.
ಅದೂ ಒಂಥರಾ ಒಳ್ಳೇದೇ ಆಯ್ತು.
ಉ: ಪರೀಕ್ಷೆ ತಯಾರಿ.. -ಗಣೇಶ
ಒಂದು ಕ್ಷಣ ಪಕ್ಕದ ಮನೆ ಹುಡುಗನ ಕೈಗೆ ನನ್ನ ಮೊಬೈಲ್ ಸಿಕ್ಕಿದ ತಪ್ಪಿಗೆ
೯೦ ರೂ ಖೋತಾ ಆಯ್ತು. ಜತೆಗೆ ಒಂದು ತಿಂಗಳು ಕ್ರಿಕೆಟ್ ಸುದ್ದಿ ನೋಡೋ ಶಿಕ್ಷೆ.
ಈ ಶಾರ್ಪು....ಇತ್ಯಾದಿ ಹುಡುಗರು ಮನೆಗೆ ಬಂದಾಗ ಮೊಬೈಲ್ ಮೊದಲು ಎತ್ತಿಡಿ.
ಗಣೇಶ.