ಮದುವೆ ಕರೆಯೋಲೆ ತಯಾರಿ !!
ಹರಿ : ಹಲೋ ಗಣೇಶ್, ಸ್ವಲ್ಪ ಬಿಡುವು ಮಾಡಿಕೊಂಡು ಟೌನ್‌ಹಾಲ್ ಎದುರು ಬರಲು ಸಾಧ್ಯವೇ ?
ನಾನು : ಅದಕ್ಕೇನಂತೆ.. .. .. ಏನು ವಿಷಯ?
ಹರಿ : ಏನಿಲ್ಲಾ.. .. ಮಹೇಶನಿಗೆ ಕನ್ನಡದಲ್ಲೊಂದು ಮದುವೆ ಕರೆಯೋಲೆ ತಯಾರಿ ಮಾಡೋಣವೆಂದು ನಾವೆಲ್ಲಾ ಇಲ್ಲಿ ಸೇರಿದ್ದೇವೆ.
ಹಂಸಾನಂದಿಯವರು ಗ್ರಹ ನಕ್ಷತ್ರಗಳ ಕಡೆ ಗಮನಿಸುತ್ತಿದ್ದಾರೆ.
ಸುನಿಲ್,ಸವಿತೃ,ವೈಭವ್,ಕನ್ನಡಕಂದ.. ... ಎಲ್ಲಾ ಸೇರಿ ಕನ್ನಡದಲ್ಲಿ ಕರೆಯೋಲೆ ತಯಾರಿ ಮಾಡುತ್ತಿದ್ದಾರೆ..
ನಾನು : ಫೈನ್. ನಾನು ಸಹ ೨ ಕರಡು ಪ್ರತಿ ಬರೆದಿದ್ದೇನೆ.ಅದನ್ನೂ ತರುತ್ತೇನೆ.
ಹರಿ : ಅಯ್ಯೋ..ಬೇಡ ಬೇಡ..ದಯವಿಟ್ಟು ತರಬೇಡಿ.
ಕರೆಯೋಲೆ ಸಾಂಪ್ರದಾಯಿಕವಾಗಿರಬೇಕು ಎಂದು ಹೇಳಿದ್ದರಿಂದ, ಅದನ್ನು ಗಮನಿಸಲು ಒಬ್ಬರು ಹಿರಿಯರು ಬೇಕಿತ್ತು ಅಷ್ಟೇ. ಬೇಗ ಬನ್ನಿ..
ಗಣೇಶ.

- ಗಣೇಶ ರವರ ಬ್ಲಾಗ್
- Login or register to post comments
- 341 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ







RSS:
ಪ್ರತಿಕ್ರಿಯೆಗಳು
ಉ: ಮದುವೆ ಕರೆಯೋಲೆ ತಯಾರಿ !!
ಚೆನ್ನಾಗಿದೆ ರೀ! ನೀವೊಳ್ಳೆ ಹಾಸ್ಯ ಬರಹಗಾರರಾಗಿ ಬೆಳೀತಾ ಇದೀರಾ ದಿನಾ ದಿನಾ
-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/
ಉ: ಮದುವೆ ಕರೆಯೋಲೆ ತಯಾರಿ !!
ಇದು ನಿಜ ಅಂದುಕೊಂಡು ಬೇಸ್ತು ಬಿದ್ರಾ? ಗಣೇಶರಿಗೆ ವಯಸ್ಸಾಗಿರೋದನ್ನ ಹೀಗೆ ಕಥೆ ಹತ್ತಿಸಿ ತಿಳಿಸಿದ್ದಾರೆ ಅನ್ಸತ್ತೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಮದುವೆ ಕರೆಯೋಲೆ ತಯಾರಿ !!
ಹಂಸಾನಂದಿಯವರೆ,
ನನಗೆ ಪ್ರಶಸ್ತಿ ಸಿಕ್ಕಷ್ಟು ಖುಷಿಯಾಗಿದೆ.
ಧನ್ಯವಾದಗಳು,
-ಗಣೇಶ.
ಉ: ಮದುವೆ ಕರೆಯೋಲೆ ತಯಾರಿ !!
ಹ ಹ...
:)
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಮದುವೆ ಕರೆಯೋಲೆ ತಯಾರಿ !!
ರೀ ನಿಮ್ಮ ಕರೆಯೋಲೆಯ ಮಾದರಿಗಳನ್ನು ನನಗೆ ಕಳಿಸಿ...
ಸರಳ ಮತ್ತು ಸಂಪ್ರದಾಯದ ಕರೆಯೋಲೆ ಬರೆಯೋದು ದೊಡ್ಡ ತಲೆ ನೋವಾಗಿದೆ...
ಅದೇನೋ ಸಂಪ್ರದಾಯ ಅಂದರೆ ಗೋಚಲಾಗೇ ಇರಬೇಕಾಗಿದೆ ಅನ್ನಿಸ್ತದೆ
=====================================
ಮಾಯ್ಸ!
ಉ: ಮದುವೆ ಕರೆಯೋಲೆ ತಯಾರಿ !!
>>>ಸರಳ ಮತ್ತು ಸಂಪ್ರದಾಯದ ಕರೆಯೋಲೆ ಬರೆಯೋದು ದೊಡ್ಡ ತಲೆನೋವಾಗಿದೆ...
ಸಂಪ್ರದಾಯ ಸರಳವಾಗಲು ಸಾಧ್ಯವಿಲ್ಲ.
ಅದಕ್ಕೇ ಹೆಚ್ಚಾಗಿ ಗಂಡು ತನ್ನ ಫ್ರೆಂಡ್ಸ್‌ಗಳಿಗೆ ಕೊಡಲು ಸರಳ ಕರೆಯೋಲೆ,
ಗಂಡಿನ ತಂದೆ ಸಾಂಪ್ರದಾಯಿಕ ಕರೆಯೋಲೆ ತಯಾರು ಮಾಡುವರು.
- ಇದಕ್ಕೆಲ್ಲಾ ನಿಮ್ಮ 'ಅಮೂಲ್ಯ ಸಮಯ' ಯಾಕೆ ಕಳಕೊಳ್ಳುತ್ತೀರಿ.
ಮತ್ತೊಂದು ವಿಷಯ-ಈಗಿನ ಕಾಲದವರು ಮದುವೆ ದಿನ,ಸಮಯ,ಸ್ಥಳ,ಹೋಗುವ ರೂಟ್ ಇಷ್ಟೇ ಗಮನಿಸುವುದು.
ಆಶೀರ್ವಾದವೇ ಉಡುಗೊರೆ ಬರೆದಿದ್ದಾರಾ -ಇದನ್ನು ಮುಖ್ಯವಾಗಿ ಹುಡುಕುವರು.
)
ಮದುವೆ,ಹನಿಮೂನ್ ಮುಗಿದ ಮೇಲೆ, ಮುಂದಿನ ಹುಡುಗರಿಗೆ (ದೊಡ್ಡ ಲೈನೇ ಇದೆ
ಸಹಾಯವಾಗಲು ಸಾಂಪ್ರದಾಯಿಕ,ಸರಳ ಕರೆಯೋಲೆ ತಯಾರು ಮಾಡಿದರಾಯಿತು ಬಿಡಿ.
-ಗಣೇಶ.
ಉ: ಮದುವೆ ಕರೆಯೋಲೆ ತಯಾರಿ !!
ಇದನ್ನು ನಿಜ ಅಂದುಕೊಳ್ಳುವವರಿಗಾಗಿ ಮೊದಲು ಒಂದು note ಹಾಕಿ.
ನಿಜ ಅಂದುಕೊಂಡೋರು ಯಾರು ಯಾರು? ಕೈ ಎತ್ತಿ ನೋಡೋಣ!
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಮದುವೆ ಕರೆಯೋಲೆ ತಯಾರಿ !!
ಗಣೇಶರು ಸುಳ್ಳು ಹೇಳ್ತಾರ... ನಂಬಕ್ಕೆ ಆಗಲ್ಲ.. ಕಯ್ ಎತ್ತಿದ್ದೀನಿ.. ಯಾವಾಗ ನೋಡ್ತೀಯ?
=====================================
ಮಾಯ್ಸ!
ಉ: ಮದುವೆ ಕರೆಯೋಲೆ ತಯಾರಿ !!
ಯಾಕೆ ಸಾರ್... ಬರಕ್ಕೆ ಅಷ್ಟೊಂದು ಲೇಟ್ ಮಾಡಿದ್ರಿ?!
ಸವಿತೃ
ಉ: ಮದುವೆ ಕರೆಯೋಲೆ ತಯಾರಿ !!
ಭಯ ಸಾರ್,
ನಿಮ್ಮೆಲ್ಲರದ್ದು.
ಅದಕ್ಕೆ ರಾತ್ರಿ ಲೇಟಾಗಿ ಬಂದೆ.
ಪ್ರತಿಕ್ರಿಯೆ ನೀಡಿದ ಹಂಸಾನಂದಿ,ಹರಿಪ್ರಸಾದ ನಾಡಿಗ್,ಸವಿತೃ, ವೈಭವರಿಗೆ ನನ್ನಿ.
ಗಣೇಶರು ಸುಳ್ಳು ಹೇಳ್ತಾರಾ..ಎಂದು ನನ್ನ ಪರವಾಗಿ ಕಯ್ ಎತ್ತಿದ ಮಹೇಶರಿಗೂ ನನ್ನಿ ನನ್ನಿ.
-ಗಣೇಶ.