ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › ಗಣೇಶ ರವರ ಬ್ಲಾಗ್

ಕರ್ನಾಟಕದಲ್ಲಿ ಹುಟ್ಟಬಾರದಿತ್ತು..

January 27, 2008 - 4:06pm — ಗಣೇಶ

ವಿಶ್ವದ ಶ್ರೇಷ್ಠ ಸ್ಪಿನ್ನರ್ ಗಳಾದ ಚಂದ್ರಶೇಖರ್,ಹಾಗೂ ಪ್ರಸನ್ನರನ್ನು ನೋಡಿದ ನಾವು ಕುಂಬ್ಲೆಯನ್ನು ಸ್ಪಿನ್ನರ್ ಎಂದು ಒಪ್ಪಲು ರೆಡಿಯಿರಲಿಲ್ಲ.
ಹೆಚ್ಚಿನ ಬಾರಿ ಅನಗತ್ಯ ಕಾರಣಕ್ಕೆ ಟೀಮಿನಿಂದ ಹೊರಹಾಕಿದಾಗಲೂ ನಮಗೆ ಬೇಸರ ಅಗಲಿಲ್ಲ.
ರಾಜು,ಕಾರ್ತಿಕ್,ಹರಭಜನ್..ರ ಭಜನೆ ಮಾಡುತ್ತಿದ್ದೆವು ಹೊರತು ಕುಂಬ್ಲೆ ಇರಬೇಕಿತ್ತು ಎಂದು ಒಮ್ಮೆಯೂ ಹೇಳಿರಲಿಲ್ಲ.
ಇಂಡಿಯಾದ ಕ್ಯಾಪ್ಟನ್ ಆಗಿ ಕುಂಬ್ಲೆಯನ್ನು ಆರಿಸಿದಾಗಲೂ 'ಧೋನಿ'ಆದರೆ ಒಳ್ಳೆಯದಿತ್ತು ಎಂದೆವು.
ಏಟು ಬಿದ್ದಾಗಲೂ ಮುಖಕ್ಕೆ ಪಟ್ಟಿ ಕಟ್ಟಿ ಬೌಲಿಂಗ್ ಗೆ ಇಳಿದ,
ಪಾಕಿಗಳ ವಿರುದ್ಧ ಹತ್ತು ವಿಕೆಟ್ ಒಂದೇ ಇನ್ನಿಂಗ್ಸ್ ನಲ್ಲಿ ತೆಗೆದ,
ಆಸ್ಸಿಗಳನ್ನು ನಡುಗಿಸುತ್ತಿರುವ ಕುಂಬ್ಲೆಗೆ
ಕರ್ನಾಟಕದ ಜನತೆಯ ನೀರಸ ವರ್ತನೆಯಿಂದ ಬೇಸರವಾಗಲಿಲ್ಲವೆ?
ಕರ್ನಾಟಕದಲ್ಲಿ ಹುಟ್ಟಬಾರದಿತ್ತು ಎಂದು ಒಮ್ಮೆಯೂ ಹೇಳಿಲ್ಲ ಏಕೆ?

  • ಕ್ರಿಕೆಟ್
~.~
  • ಗಣೇಶ ರವರ ಬ್ಲಾಗ್
  • Login or register to post comments
  • 338 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 28, 2008 - 11:27am — madhava_hs

ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು..

madhava_hs's picture

ಹೌದು, ’ಕುಂಬ್ಳೆ ಕರ್ನಾಟಕದಲ್ಲಿ ಹುಟ್ಟಬಾರದಿತ್ತು’. ಇಂತಹ ನಿರಭಿಮಾನಿ ಕನ್ನಡಿಗರ ನಡುವೆ ಹುಟ್ಟಬಾರದಿತ್ತು ಎಂದು ಕೆಲವು ಬಾರಿ ಅನ್ನಿಸುತ್ತದೆ.
ಅದೇ ಶ್ರೀಶಾಂತ್ ನನ್ನು ನೋಡಿ. ಒಬ್ಬ ಮಲೆಯಾಳಿ ತಂಡದಲ್ಲಿ ಸೇರ್ಪಡೆಯಾದನೆಂದು ಮಲೆಯಾಳಿಗಳು ಎಷ್ಟು ಸಂಭ್ರಮಿಸಿದರು?. ಅವನನ್ನು ಅಟ್ಟಾಡಿಸಿಕೊಂಡು ಹೋಗಿ ಬಹಳಷ್ಟು ಕಮರ್ಷಿಯಲ್ ಗಳಿಗೆ ಬುಕ್ ಮಾಡಿದರು. ಬೆಂಗಳೂರಿನಲ್ಲಿರುವ ಎಲ್ಲ ಮಲಯಾಳೀ ಡೆವೆಲಪರ್ಸ್, ಜ್ಯೂಯೆಲರ್ಸ್ ಗಳ ಜಾಹೀರಾತುಗಳಿಗೂ ಆತನೇ ರೂಪದರ್ಶಿ.
ಕುಂಬ್ಳೆಯನ್ನು ನೋಡಿ. ಕೇಳುವವರಿಲ್ಲ. ನಾಳೆ ಅವನನ್ನು ಟೀಮ್ ನಿಂದ ಕೈಬಿಟ್ಟರೂ ಒಂದು ಸಾಂಕೇತಿಕ ಪ್ರತಿಭಟನೆಯಾಗುವುದಿಲ್ಲ.
ದಾದಾನನ್ನು ಟೀಂ ನಿಂದ ಬಿಟ್ಟಾಗ ಬೆಂಗಾಲಿಗಳು ಎಷ್ಟು ಪ್ರತಿಭಟನೆ ನಡೆಸಿಬಿಟ್ಟರು. ಅದಲ್ಲವೇ ಅಭಿಮಾನ..

ಎಷ್ಟಾದರೂ ಕನ್ನಡಿಗರು ಹರಿದಾಸರ ಅನುಯಾಯಿಗಳಲ್ಲವೇ? ’ಇಟ್ಟಾಂಗೆ ಇರುವೆನೋ ಹರಿಯೇ..’ ಎಂಬ ಮನೋಭಾವದವರು !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 28, 2008 - 12:49pm — mahesha

ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು..

mahesha's picture

Smiling

"ಎಷ್ಟಾದರೂ ಕನ್ನಡಿಗರು ಹರಿದಾಸರ ಅನುಯಾಯಿಗಳಲ್ಲವೇ? "

ಕನ್ನಡಿಗರಲ್ಲಿ ಹೆಚ್ಚು ಮಂದಿ ಲಿಂಗಾಯತರು ಮತ್ತು ಒಕ್ಕಲಿಗರು!! ಹರಿಯ ದಾಸರು ಅಬ್ಬಬ್ಬ ಅಂದ್ರೆ ೧%! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 28, 2008 - 2:21pm — madhava_hs

ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು..

madhava_hs's picture

ಮಹೇಶರೆ, ನಾನು ಇಲ್ಲಿ ಹರಿದಾಸರನ್ನು ಉದಾಹರಿಸಿದ್ದು ಅವರ (ಕನ್ನಡಿಗರ) ಹೃದಯ ವೈಶಾಲ್ಯತೆಯನ್ನು ಸಮೀಕರಿಸಲಿಕ್ಕಾಗಿಯೇ ಹೊರತು ಜಾತಿ ಲೆಕ್ಕಾಚಾರಕ್ಕಾಗಿ ಅಲ್ಲ.

ಎಲ್ಲೋ ಒಂದು ಕಡೆ ಕನ್ನಡಿಗರ ಹೃದಯ ವೈಶಾಲ್ಯತೆಯೇ ಅವರ ದುರ್ಬಲತೆಯಾಗುತ್ತಿದೆಯೇ? ಅದನ್ನೇ ಬೇರೆಯವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆಯೆ?. ರೈಲ್ವೆ ನೇಮಕಾತಿ ದ್ರೋಹ, ಕಾವೇರಿ ನೀರು, ಶಾಸ್ತ್ರೀಯ ಸ್ಥಾನಮಾನ, ಬೆಳಗಾವಿ ಎಲ್ಲದರಲ್ಲೂ ಕನ್ನಡಿಗ ಮಲತಾಯಿ ಮಗನೇ!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 28, 2008 - 3:15pm — mahesha

ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು..

mahesha's picture

ತುಸು.. ನಿಮ್ಮ ಸಾಲುಗಳನ್ನು ನೀವೇ ಓದಿರಿ.. !!

ಕನ್ನಡಿಗರಲ್ಲಿರುವ ’ಪುಣ್ಯಕೋಟಿ’ ಬುದ್ದಿ, ಕನ್ನಡನಾಡನ್ನಾಳಿದ ಜೈನ ಮತ್ತು ಲಿಂಗಾಯತ ದೊರೆಗಳಿಂದ...

ಸತ್ಯ/ದಿಟವೆಂಬುದೇ ಮೇಲು ಎಂಬುದು ಜೈನರ ಮಾತು. ತಾವು ನಂಬಿದ ದರ್ಮ( ದರ್ಮಕ್ಕಾಗಿ ಸುಳ್ಳು ಹೇಳಬೋದು, ನೆಂಟರನ್ನು ಕೊಲ್ಲಬೋದು ) ಅನ್ನೋದು ವೈದಿಕರ ನಂಬಿಕೆ.

ಗೋವಿನ ಹಾಡಿನ ಹಿಂದೆ ಇರುವ ದಿಟವಾದ ಅನಿಸು, ಜೈನರದ್ದು.. ಬಗವದ್ಗೀತೆಯಂತೆ ನೆಂಟರನ್ನಾದರೂ ಕೊಂದು, ರಾಜ್ಯಪಡೆ ಅಂತ ಅಲ್ಲ....

ಬಾಹುಬಲಿ ಮುಂತಾದವರು ಇದಕ್ಕೆ ಮಾದರಿ!!

ನಾನು ಕೂಡ ಸಿದ್ದಾಂತದ ಬಗ್ಗೇ ಹೇಳಿದ್ದು ಜಾತಿಯ ಬಗ್ಗಲ್ಲ.!!

ಒಟ್ರಾಸೆ.. ಕನ್ನಡಿಗರ ಮೆದುತನ ನಮ್ಮಾಳಿದ ’ಜೈನ’ ಅರಸುಗಳು ಬಿತ್ತಿಹೋದ ಗುಣವೇ ಹೊರತು.. ಬಳಿಕ ಬಂದವರಿಂದಲ್ಲ.!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 28, 2008 - 6:14pm — ಸಂಗನಗೌಡ

ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು..

ಸಂಗನಗೌಡ's picture

ಕುಂಬ್ಳೆ ಬಗ್ಗೆ ಹಲವರಲ್ಲಿ ಹೆಮ್ಮೆಯಂತೂ ಇದೆ. ಅದನ್ನು ನಾವು ಬೆಂಗಾಲಿಗಳಂತೆ ಬೀದಿಗಿಳಿದು ತೋರಿಸಿರಲಿಕ್ಕಿಲ್ಲ. ಆದರೆ ಇಂಡಿಯಾ ಟೀಮಿನಲ್ಲಿ ಒಂದೊಮ್ಮೆ ಕರ್ನಾಟಕ ಕಲಿಗಳೇ ಬಹುಪಾಲು ಇದ್ದದ್ದು ದಿಟ. 2003 ರ ವಲ್ಡ್ ಕಪ್‍ನಲ್ಲಿ ’ಬಾಲ್ ಎಸಿ ಮಗ’ , ’ಕಮಾನ್ ಬಿಡಬೇಡ’ ಇಂತ ಕೂಗುಗಳನ್ನು ಕೇಳಿ ನಲಿದಿದ್ದೆವು.
ಕುಂಬ್ಳೆಗೆ ಸಚಿನ್ ತರ ಎಲ್ಲ ಕಡೆಯಿಂದಲು ಬೆಂಗಲ ಇದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 29, 2008 - 10:41am — roshan_netla

ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು..

roshan_netla's picture

ಕರ್ನಾಟಕದಿಂದ ಬಂದಿರೊ ಕ್ರಿಕೇಟ್ ಪ್ರತಿಬೆಗಳಿಗೆ ಲೆಖ್ಖವಿಲ್ಲ.. ವಿಶ್ವಪ್ರಸಿದ್ದ ಆಟಗಾರರೇ ಕಮ್ಮಿ ಅಂದರೆ ಹತ್ತಕ್ಕಿಂತ ಮೇಲು. ಆದರೆ ಕೇರಳ ಬಂಗಾಳದಿಂದ ಬಂದಿರುವವರು ಏಸ್ಟು ಮಂದಿ? ಅದಕ್ಕೆ ಗಂಗೂಲಿ ತಂಡದಿಂದ ಹೊರಬಿದ್ದರೆ ಬೆಂಗಾಲಿಗಳು ಚಡಪಡಿಸುವುದು ಗಂಗುಲಿ ಹೊದರೆ ಇನ್ನೊಬ್ಬ ಬೆಂಗಾಲಿ ಅಲ್ಲಿ ಇಲ್ಲ. ಕೇರಳದವರು ಸಂಭ್ರಮಿಸುವುದು ಇದೇ ಕಾರಣಕ್ಕೆ.. ಅಪರೂಪಕ್ಕೊಬ್ಬ ಕ್ರಿಕೇಟ್ ಕಲಿ ಅಲ್ಲಿಂದ ಬಂದಿದ್ದಾನೆ ಅಂತ. ಮತ್ತೆ ಕುಂಬ್ಳೆ ಸಾದನೆ ಮಾಡಿದಾಗಲೆಲ್ಲಾ ಕರ್ನಾಟಕ ಆತನಿಗೆ ಸನ್ಮಾನ ಮಾಡಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 29, 2008 - 1:03pm — csomsekraiah

ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು..

csomsekraiah's picture

ಪ್ರೀತಿಯ ಮಹೇಶ್, ಭಗವದ್ಗೀತೆ ನೆಂಟರನ್ನಾದರೂ ಕೊಂದು ರಾಜ್ಯ ಪಡೆ ಎಂದು ಹೇಳಿದೆ ,ಎಂದು ಎಷ್ಟೊಂದು ಸರಳೀಕರಿಸಿ ತಿಳಿಸಿಬಿಟ್ಟಿದ್ದೀರಿ . ಭಗವದ್ಗೀತೆಯಲ್ಲಿ ವೈದಿಕ ವಿರೋಧಿ ನಿಲುವುಗಳಿರುವುದನ್ನೂ ದಯವಿಟ್ಟು ಗಮನಿಸಿ. ಒಂದು ಕಾವ್ಯವನ್ನು ಬರಿಯ ಅವರಿವರ ಹೇಳಿಕೆಗಳ ಮೇಲೆಯೇ ಜರಿಯುತ್ತಾ ಕುಳಿತರೆ ,ನಮಗೆ ಅದು ದಕ್ಕುವುದಾದರೂ ಹೇಗೆ ?ಭಗವದ್ಗೀತೆಯಂತಹ ಒಂದು ಗ್ರಂಥ ಯಾವುದೇ ಸೀಮಿತ ಮತ ಪಂಥಗಳಿಗೆ ದಕ್ಕುವಂತಹುದಲ್ಲ ,ಅದು ಹಿಂದೂಗಳ ಪವಿತ್ರ ಗ್ರಂಥ ಎನ್ನುವ ಮಾತೂ ಸಹ ಸುಳ್ಳು .ಅದಕ್ಕೆ ಯಾವುದೇ ಮತದ ಬೇಲಿಗಳಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 29, 2008 - 1:52pm — mahesha

ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು..

mahesha's picture

"ಭಗವದ್ಗೀತೆಯಲ್ಲಿ ವೈದಿಕ ವಿರೋಧಿ ನಿಲುವುಗಳಿರುವುದನ್ನೂ ದಯವಿಟ್ಟು ಗಮನಿಸಿ. "
ಇದರ ಬಗ್ಗೆ ಬಿಡಿಸಿ ತಿಳಿಸಿ...

ತುೞಿಲು/ನಮಸ್ತೆ..

ಬಗವದ್ಗೀತೆಯ ಪ್ರಾರ್ತನೆಯ ಒಂದು ಶ್ಲೋಕ ಹಿಂಗಿದೆ.

"ಸರ್ವೋಪನಿಷದೋ ಗಾವೋ ದೋಗ್ಧಾ ಗೋಪಾಲನಂದನ:
ಪಾರ್ಥೋ ವತ್ಸಃ ಸುಧೀರ್ಭೋಕ್ತಾ ದುಗ್ಧಂ ಗೀತಾಮೃತಂ ಮಹತ್"

ಉಪನಿಶತ್ತುಗಳು ಎಂಬ ಆಕಳಿಂದ ದನಕಾವರ ಮಗನಾದ ಸಿರಿ ಕ್ರುಶ್ಣನು, ಕರೆದ ’ಗೀತ’ ಎಂಬ ಹಿರಿದಾದ ಅಮರ್ದುವನ್ನು ಅರ್ಜುನನು ಸವಿದವನಾದನು.

ಇನ್ನೊಂದು ಶ್ಲೋಕ
’ಅದ್ವೈತಾಮೃತ ವರ್ಷಿಣೀಂ ಭಗವತೀಂ’ ( ಅದ್ವಯ್ತದ ಮಳೆಗರೆಯುವುದು )

ಭಗವದ್ಗೀತೆಯು ಒಂದು ಮತದ ಹೊತ್ತಿಗೆಯೇ.... ಆತ್ಮವೇ ಇಲ್ಲ ಅನ್ನೋ ಮತಕ್ಕೆ ಎದುರಾದುದು ಅಲ್ವ!

ತಲೆಬಾಗಿ ನನ್ನಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 29, 2008 - 4:11pm — Sunil Jayaprakash

ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು..

Sunil Jayaprakash's picture

ಮಹೇಶ ಸಿ.ಸೋಮಶೇಖರಯ್ಯನವರು ಬರೆದಿದ್ದ ಕೆಲವೊಂದು ಬರಹಗಳನ್ನು ಇಲ್ಲಿ ನೋಡು, ಭಗವದ್ಗೀತೆಯಲ್ಲಿ ಯಜ್ಞ ಮತ್ತು ಅದರ ಅರ್ಥ (೧), ಭಗವದ್ಗೀತೆಯಲ್ಲಿ ಯಜ್ಞ ಮತ್ತು ಅದರ ಅರ್ಥ (೨)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 30, 2008 - 12:09am — ಗಣೇಶ

ಉ: ಕರ್ನಾಟಕದಲ್ಲಿ ಹುಟ್ಟಬಾರದಿತ್ತು..

ಗಣೇಶ's picture

ಮಾಧವ,ಮಹೇಶ,ಸಂಗನಗೌಡ,ರೋಶನ್,ಸೋಮಶೇಖರಯ್ಯನವರಿಗೆ ನನ್ನಿ.
ಕನ್ನಡಿಗರು ಕುಂಬ್ಲೆಯ (ಮೌನ) ಅಭಿಮಾನಿಗಳು-ಸಂಶಯವೇ ಇಲ್ಲ.
ಪ್ರಶಸ್ತಿ ಕೊಟ್ಟಿದ್ದಾರೆ,ರಸ್ತೆಗೆ ಹೆಸರು ಕೊಟ್ಟಿದ್ದಾರೆ-ಒಪ್ಪಿದೆ.
ನಿನ್ನೆ ಮೊನ್ನೆ ಕಣ್ಣುಬಿಟ್ಟ ನಟನಿಗೆ ತೋರಿಸುವ ಅಭಿಮಾನದ ಕಾಲಂಶವನ್ನೂ ನಾವು ೬೦೦ ವಿಕೆಟ್ ಗಡಿದಾಟಿದ ಕುಂಬ್ಲೆಗೆ ತೋರಿಸುವುದಿಲ್ಲ.
ಕುಂಬ್ಲೆಯನ್ನು ನಾಳೆ ಬೇಕಾದರೆ ಟೀಮಿನಿಂದ ತೆಗೆದು,ಅಜಿತ್ ಅಗರ್ಕರನ್ನು ಸೇರಿಸಿಯಾರು.ಸಿಲೆಕ್ಟರ್ ಗಳಿಗೆ ಆಯ್ಕೆಗೆ ಬೇರೆ ಆಪ್ಷನ್ ಇಲ್ಲದೇ ಇದ್ದಾಗ ಅನಿವಾರ್ಯವಾಗಿ ಕನ್ನಡನಾಡಿನವರನ್ನು ಆಯ್ಕೆ ಮಾಡುವರು.ಆಪ್ಷನ್ ಸಿಕ್ಕ ಕೂಡಲೇ ಚೆನ್ನಾಗಿ ಆಡುತ್ತಿದ್ದ ಕೀರ್ಮಾನಿಯನ್ನು ತೆಗೆದುದು ನೆನಪಿಲ್ಲವೆ?
ಡ್ರಾವಿಡ್ ನಾಯಕ ಪದವಿ ಬಿಟ್ಟಾಗ, ತೆಂಡುಲ್ಕರ್ ಬೇಡ ಎಂದು ಹೇಳಿದ್ದರಿಂದ ಅನಿವಾರ್ಯವಾಗಿ ಕುಂಬ್ಲೆಗೆ ನಾಯಕ ಪಟ್ಟ ಕೊಟ್ಟರು.ಬೇರೆಯವರು ಕ್ಯಾಪ್ಟನ್ ಆಗಿರುತ್ತಿದ್ದರೆ ಕುಂಬ್ಲೆಯನ್ನು ಆಸ್ಟ್ರೇಲಿಯಾದ ಒಂದೆರಡು ಟೆಸ್ಟಲ್ಲಾದರು ಹೊರಗಿಡುತ್ತಿದ್ದರು.ಮನ ಬಂದಂತೆ ಟೀಮಿನಿಂದ ತೆಗೆಯದಿರುತ್ತಿದ್ದರೆ ಕುಂಬ್ಲೆಯೂ ಈಗ ಮುರಳಿಯ ಜತೆ ೭೦೦ ಗಡಿ ದಾಟುತ್ತಿರಲಿಲ್ಲವೆ?
-ಗಣೇಶ.
ಸೋಮಶೇಖರಯ್ಯನವರೆ,
ಕರ್ನಾಟಕ ಅಥವಾ ಕನ್ನಡತನ ೧,೨ ಲೇಖನ ಚೆನ್ನಾಗಿದೆ.
-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕರ್ನಾಟಕದಲ್ಲಿ ಹುಟ್ಟಬಾರದಿತ್ತು..
  • ಕರ್ನಾಟಕ ಕ್ರಿಕೆಟ್ - ೨
  • ಸ್ಲೆಡ್ಜಿಂಗ್ ಕಪ್-೨೦೦೭, ಫೈನಲ್ಸ್
  • ಕರ್ನಾಟಕ ಕ್ರಿಕೆಟ್ - ೮
  • ರಾಜ್ಯದ ವಿರುದ್ಧ ಷಡ್ಯಂತ್ರ ರೂಪಿಸಿದವರಿಗೆ ಸುಪ್ರೀಮ್ ಕೋರ್ಟ್ ಜಾಮೀನು.
Syndicate content

ಲೇಖಕರು

ಗಣೇಶ's picture

ಪರಿಚಯ

ಕನ್ನಡ ಬಲು ಇಷ್ಟ
ಇಂಗ್ಲೀಷ್/ಕಂಪ್ಯೂಟರ್ ಸ್ವಲ್ಪ ಕಷ್ಟ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಶರಣರ ಸಾವನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
  • ಮಿಂಚಿನ ಓಟ
  • ಸಿಟಿಯ ಮೇಲಣ ಗುಳ್ಳೆ
  • ಕುಮಾರವ್ಯಾಸ ಭಾರತ
  • ಬನವಾಸಿ ಆಸುಪಾಸಿನ ಕನ್ನಡ
  • ಬಾರೋ ಸಾಧನಕೇರಿಗೆ...
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿವಾಸ ವೀ. ಬ೦ಗೋಡಿ
    ಉ: ಇಂಟರ್ನೆಟ್ ಗಾಗಿ ಏನೆಲ್ಲ (೨)
    July 24, 2008 - 11:18am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:46am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:40am
  • mahesha
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:37am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:34am
  • mahesha
    ಉ: ಭಾಷಾಲ್ಪಸಂಖ್ಯಾತರಿಗೆ ಮುಖ್ಯಮಂತ್ರಿಗಳ ಆಯವ್ಯಯದ ಕೊಡುಗೆ
    July 24, 2008 - 10:25am
  • shaamala
    ಉ: ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
    July 24, 2008 - 10:23am
  • keerthi2kiran
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 10:07am
  • kannadakanda
    ಉ: ಪೞಗು, ಪೞೆ(ಹೞೆ)
    July 24, 2008 - 9:52am
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 9:50am
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 53 ಅತಿಥಿಗಳು ಆನ್ಲೈನ್ ಇರುವರು.


ನಿನ್ನ ದೊಡ್ಡ ನೆರಳನ್ನು ನೋಡಿ ಹೆದರುವ ಅಥವಾ ಭಯ ಪಡುವ ಕಾರಣವಿಲ್ಲ. ಅದು ನಿನ್ನ ಗುಲಾಮ. ನಿನ್ನ ಆಜ್ಞೆಯಂತೆ ನಡೆಯುತ್ತದೆ. ನೀನು ನಿಂತರೆ ಅದೂ ನಿಲ್ಲುವುದು, ನೀನು ಕುಳಿತರೆ ಅದೂ ಕುಳಿತುಕೊಳ್ಳುವುದು.

— --- ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator