ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ › Sampada Blogs › ಗಣೇಶ ರವರ ಬ್ಲಾಗ್

ಸಂಗೀತಾ..ಆಹಾ..ಉಹೂಂ

November 27, 2008 - 11:56pm — ಗಣೇಶ

ಈಗಿನ ಮಕ್ಕಳು ಟಿ.ವಿ., ಕಂಪ್ಯೂಟರ್, ಸಿನೆಮಾ, ಸ್ಕೂಲ್, ಕ್ರಿಕೆಟ್‌ಗಳ ನಡುವೆಯೂ ಹಾಡು, ನೃತ್ಯ ಇತ್ಯಾದಿಗಳಲ್ಲಿ ಪರಿಣತರಾಗುವುದನ್ನು ನೋಡುವಾಗ ಸಂತೋಷವಾಗುತ್ತದೆ.

ನಾನೂ ಸಂಗೀತಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದೆ! Instalmentನಲ್ಲಿ...

ಕರಾವಳಿ ಜಿಲ್ಲೆಯಲ್ಲಿ ಜನ ನೂರು ಸಲ ‘ದೇವಿ ಮಹಾತ್ಮೆ’ ಯಕ್ಷಗಾನ ನೋಡಿದರೂ ‘ನಾಳೆ ಮಂಗಳೂರಲ್ಲಿ ದೇವಿ ಮಹಾತ್ಮೆ ಇದೆಯಂತೆ’ ಎಂದರೆ ಪುನಃ ನೋಡಲು
ಹೊರಡುತ್ತಿದ್ದರು. ಯಕ್ಷಗಾನ ನೋಡಿ ಬಂದು ಎರಡು ದಿನವಾದರೂ ‘ಚಂಡೆ ಶಬ್ದ’ ಕಿವಿಯಲ್ಲಿ ಗುಂಯ್‌ಗುಟ್ಟುತ್ತಿರುತ್ತದೆ.

ನಾನೂ ಚಂಡೆ ಕಲಿಯಲು ಹೊರಟೆ. ಉತ್ತಮ ಗುರುವೂ ಸಿಕ್ಕಿದರು. ಎರಡು ದಪ್ಪದ ಕೋಲು (ಚಂಡೆ ಕೋಲುಗಳಲ್ಲ-ಮುಷ್ಠಿಯಲ್ಲಿ ಹಿಡಿಯಲು ಆಗದಷ್ಟು ದೊಡ್ಡದು) ಕೈಯಲ್ಲಿ ಕೊಟ್ಟು, ಒಗೆಯುವ ಕಲ್ಲ ಮೇಲೆ ಗೋಣಿಹಾಸಿ, ‘ಕಿ ಟ ತ ಕಿ ಟ ತ’ ಎಂದು ಬಾರಿಸಲು ಹೇಳಿದರು. ಎಷ್ಟು ಬಾರಿಸಿ ತೋರಿಸಿದರೂ ಅವರಿಗೆ ಸಮಾಧಾನವಾಗದು. ಇನ್ನೂ ಉರುಳಬೇಕು ಎನ್ನುತ್ತಿದ್ದರು. ದಿನಗಳುರುಳಿತು ಅಷ್ಟೇ..

ನಂತರ ಶಾಸ್ತ್ರೀಯ ಸಂಗೀತ ಕಲಿಯಲು ಸೇರಿದೆ...
‘ಸಸ ರಿರಿ ಗಗ ಮಮ..’ ಸುತ್ತಮುತ್ತಲೂ ಹುಡುಗಿಯರು ಜಾಸ್ತಿಯಾದರು. ನನ್ನ ಸಂಗೀತ ಕೇಳಲು ಅಲ್ಲಾ.. ಕಲಿಯಲು ಬಂದವರು. ಸ್ವರಗಳು ಕಂಠದಲ್ಲೇ ಸಿಕ್ಕಿಕೊಂಡವು.

ಯಸ್.ಪಿ.ಬಿ.ಯವರು ಶಾಸ್ತ್ರೀಯ ಸಂಗೀತ ಕಲಿಯದೇ ‘ಶಂಕರಾಭರಣ’ ಸಿನೆಮಾದ ಹಾಡು ಹಾಡಲಿಲ್ಲವೆ. ನನಗೂ ಯಾಕಾಗಬಾರದು? ಕ್ಯಾಸೆಟ್ ತಂದು ಹಾಡಲು ಸುರುಮಾಡಿದೆ-
‘ಶಂಕರಾ..ಭರಣಮೂ.. ..
(ಶಂಕರ ಇದ್ದ ಬದ್ದ ಉಳಿದಿದ್ದ ಆಭರಣವೆಲ್ಲಾ ಕಿತ್ತು ಬಿಸುಟದ್ದು ಆಗಲೇ ಎಂದು ‘ಗಣೇಶ’ಪುರಾಣ ಭಾಗ ಒಂದರಲ್ಲಿ ಇದೆ )

‘ವಾಹ್ ತಾಜ್’ ಕಾಲ. ತಬ್ಲಾ ಮೋಡಿಗೆ ಒಳಗಾದೆ. ವಾರದಲ್ಲಿ ಒಂದು ದಿನ ಪರ ಊರಿಂದ ಬಂದು ತಬ್ಲಾ ಕ್ಲಾಸ್ ತೆಗೆದುಕೊಳ್ಳುತ್ತಿದ್ದ ಗುರುಗಳ ಬಳಿ ಕಲಿಯಲು ಸೇರಿದೆ.
ತಿಂಗಳು ನಾಲ್ಕಾದರೂ ‘ದಾ ದಿನ್ ದಾ ದಾ ತಿನ್ ತಾ’ ದಿಂದ ಮುಂದೆ ಹೋಗಲೇ ಇಲ್ಲ.
ಗುರುಗಳಿಗೆ ತಿಳಿಯದಂತೆ ಸೀನಿಯರ್‌ನಿಂದ ಮುಂದಿನ ಪಾಠಗಳನ್ನು ಕಲಿತು ಬಾರಿಸುತ್ತಿದ್ದೆ.
ಹೀಗೆ ಒಮ್ಮೆ ಬಾರಿಸುತ್ತಿರುವಾಗ ಗುರುಗಳು ಬಂದುದು ಗೊತ್ತೇ ಆಗಲಿಲ್ಲ. ಬಹಳ ಮೆಚ್ಚಿದರು!
ಹೋಗುವಾಗ ‘ನೀನು ಜಾಣ. ನಿನಗೆ ಗುರುವಿನ ಅಗತ್ಯವೇ ಇಲ್ಲ. ನಾಳೆಯಿಂದ..’ಅಂದರು. Sad

ಕಲಿಯುವ ಹಠವಿದ್ದರೆ ಯಾವ ವಾದ್ಯವಾದರೇನು? ಇನ್ನೊಂದು ಕಡೆ ಕೊಳಲು ಕಲಿಯಲು ಸೇರಿದೆ. ‘ಗ ಗ ಪಾ ಪ ದ ಪ ಸಾ ಸ’ ಬಾರಿಸಲು ಕಲಿತೆ. ಈ ಸಲ ಕಳೆದ ಬಾರಿಯ ತಪ್ಪು ಮಾಡಲಿಲ್ಲ. ಪುನಃ ಪುನಃ ಅದನ್ನೇ ಪರ್ಫೆಕ್ಟ್ ಮಾಡಲು ಬಾರಿಸುತ್ತಲೇ ಇದ್ದೆ.
ಪಾಪ ‘ಗಗ ಪಾಪ’ ಕೇಳಿ ಕೇಳಿ ಸಾಕಾದ ಮನೆಯವರೆಲ್ಲಾ ಸಂಚು ಮಾಡಿ ‘ಸ್ಕೂಲ್ ಪರೀಕ್ಷೆ ಮುಗಿಯಲಿ, ಮತ್ತೆ ಕಲಿ’ ಎಂದರು. ಅಲ್ಲಿಗೆ ಕೊಳಲನ್ನು ಗೋಡೆಯ ಮೊಳೆಗೆ
ನೇ(ಣು)ತು ಹಾಕಿದೆ.
ಯಾವುದೋ ಒಂದು ನೆವನ ಮಾಡಿ ಸಂಗೀತವಾಗಲಿ, ವಾದ್ಯಸಂಗೀತವಾಗಲಿ ನನ್ನನ್ನು ಒಂದು ತರಹ ‘ಅಸ್ಪೃಶ್ಯ’ನಂತೆ ದೂರ ತಳ್ಳಿತು. ಇದರಿಂದ ರೋಸಿ ಹೋದ ನಾನು ಮತಾಂತರ ಮಾಡಬೇಕೆಂದಿದ್ದೇನೆ. ಮೈಕೈಲಿ ಯಾಕ್ಷನ್..ಮೈಕೆಲ್ ಜಾಕ್ಸನ್ ಸಂಗೀತ ಕಲಿಯೋಣ ಎಂದಿದ್ದೆ..
ಅವನೂ ಮತಾಂತರ ಮಾಡಿದ..

ನನ್ನಿಂದ ತಪ್ಪಿಸಿಕೊಳ್ಳಲ್ಲಿಕ್ಕಾ? ಎಲ್ಲಾ ರೀತಿಯ ಸಂಗೀತಕ್ಕೂ ನಾನು ಅಸ್ಪೃಶ್ಯನೇ Sad ?

-ಗಣೇಶ.

  • ಲಲಿತ ಬರಹ
~.~
  • ಗಣೇಶ ರವರ ಬ್ಲಾಗ್
  • Login or register to post comments
  • 318 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 28, 2008 - 8:30am — savithasr

ಉ: ಸಂಗೀತಾ..ಆಹಾ..ಉಹೂಂ

savithasr's picture

ಗಣೇಶ್,
ಕಲೆ ಎಲ್ಲರನ್ನೂ ಕೈ ಬೀಸಿ ಕರೆಯತ್ತೆ....ಕೆಲವರನ್ನೇ ಆರಿಸಿಕೊಳ್ಳತ್ತಂತೆ.....ಅದ್ರಲ್ಲಿ ಒಬ್ಬಿಬ್ಬರಿಷ್ಟೇ ಒಲಿಯತ್ತಂತೆ. ಇದು ಎಲ್ಲರೂ ಹೇಳೋದು...

ಆದರೆ ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ಪ್ರತಿಭೆ ಅವರಿಗೆ ಗೊತ್ತಿಲ್ಲದೆ ಅಡಗಿಕೊಂಡಿರತ್ತೆ...ಯಾಕಂದ್ರೆ ಪ್ರತಿಯೊಬ್ಬರೂ ಬಹಳ ಯುನೀಕ್ Smiling ಹೀಗೆ ಸುಪ್ತವಾಗಿರೋ ಪ್ರತಿಭೆಯನ್ನ ಗುರುತಿಸೋಕ್ಕೆ ನಿಮ್ಮ ಟ್ರಯಲ್ & ಎರರ್ ಮೆಥಡ್ ಒಳ್ಳೇ ವಿಧಾನ.
ಕಡೆ ಪಕ್ಷ ಒಳ್ಳೇ ಹಾಡುಗಾರರಾಗದೇ ಹೋದ್ರೂ...ಒಳ್ಳೆ ಕೇಳುಗರಂತೂ ಆಗ್ತೀವಾ..
ಒಳ್ಳೇ ಚಿತ್ರಗಾರಾಗದೆ ಹೋದ್ರೂ ಒಳ್ಳೆ ನೋಡುಗರಾಗ್ತೀವಾ..
ಒಳ್ಳೇ ಪಾಕ ಪ್ರವೀಣರಾಗದೆ ಹೋದ್ರೂ ಹೊಸ ರುಚಿಯನ್ನ ಆಸ್ವಾದಿಸುವವರಾಗ್ತೀವಾ..Smiling
ಪ್ರಯತ್ನ ಮುಂದುವರೆಸಿ...ನಿಮಗೊಲಿಯುವ ಕಲೆ ಸಿಗುವವರೆಗೂ, ನನ್ನ ಟ್ರಯಲ್ಗಳು ನೆನಪಾದವು Smiling
-ಸವಿತ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 28, 2008 - 11:15pm — ಗಣೇಶ

ಉ: ಸಂಗೀತಾ..ಆಹಾ..ಉಹೂಂ

ಗಣೇಶ's picture

ನಿಜ ಮೇಡಮ್,

ಕೆಲವು ಸಂಗೀತ ಕಾರ್ಯಕ್ರಮಗಳಲ್ಲಿ ನೋಡಿದ್ದೇನೆ. ಪಕ್ಕದವರೊಡನೆ ಮಾತನಾಡುವುದು, ಗಟ್ಟಿಯಾಗಿ ತಾಳಬಡಿಯುವುದು,ಜತೆಯಲ್ಲಿ ಹಾಡುವುದು,ಎಡೆಯಲ್ಲಿ ಚಪ್ಪಾಳೆ ತಟ್ಟುವುದು.. ಒಳ್ಳೆ ಕೇಳುಗರಲ್ಲ.
ಸರಿಯಾಗಿ ಒಂದು ಸೊನ್ನೆ ಬಿಡಿಸಲು ಬರುವುದಿಲ್ಲ, ಚಿತ್ರದ ಬಗ್ಗೆ ಕೆಟ್ಟದಾಗಿ ಕಮೆಂಟು ಮಾಡುವರು.
ಅಡುಗೆ ಮಾಡಿದ ಮನೆಯಾಕೆಗೆ/ತಾಯಿಗೆ ಒಂದು ಮೆಚ್ಚುಗೆ ಮಾತು ಕೆಲವರ ಬಾಯಲ್ಲಿ ಬರುವುದಿಲ್ಲ.
ಮನೆ ಕುರ್ಚಿ ಬಿಟ್ಟರೆ ಆಫೀಸ್ ಕುರ್ಚಿಯಲ್ಲಿ ಕುಳಿತು ಮಾತ್ರ ಗೊತ್ತಿರುವವರು ಸಮಾಜದ ಬಗ್ಗೆ ನೂರೆಂಟು ಮಾತಾಡುವರು.

ಒಳ್ಳೆ ಕೇಳುಗ,ಒಳ್ಳೆ ನೋಡುಗ.. ಆಗೋಣ.

-ಗಣೇಶ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 28, 2008 - 8:41am — srinivasps

ಉ: ಸಂಗೀತಾ..ಆಹಾ..ಉಹೂಂ

srinivasps's picture

ಗಣೇಶರೇ....

ಹಹ್ಹ ! ಚೆನ್ನಾಗಿದೆ! Smiling

ಮತಾಂತರಿಸಿದ ಜಾಕ್ಸನ್‍ನಿಂದ ಕಲಿತ, ಮೈ ಕೈ ಝಾಡಿಸುವ ಆಕ್ಶನ್‍ಗೆ, ನಿಮ್ಮ ಮಡದಿಯ ರಿಯಾಕ್ಶನ್ ಹೇಗಿದೆ ಅಂತ ಹೇಳಿ?

ನೀವು ನುಡಿಸಿ ಪಕ್ಕಕ್ಕೆ ಎಸೆದ ಕೊಳಲಿನ ಅಳುವ ಶಬ್ದ ಕೇಳುತ್ತಿದೆ Sticking out tongue ಅದು ಯಾಕ್ರೀ ಅಷ್ಟೊಂದು ಗೋಳು ಹೊಯ್ಕೊಂಡ್ರೀ ಅದನ್ನಾ?
ಮುಂದೆ ಯಾವ ವಾದ್ಯವನ್ನು ಗೋಳು ಹೊಯ್ಯಲು ಹೊಂಚು ಹಾಕಿದ್ದೀರಿ? Eye-wink
Smiling

ಹೀಗೆ ಹಾಸ್ಯ ಲೇಖನ ಮುಂದುವರೆಸಿ Smiling ಚೆನ್ನಾಗಿದೆ...

--ಶ್ರೀ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 28, 2008 - 10:21pm — ಗಣೇಶ

ಉ: ಸಂಗೀತಾ..ಆಹಾ..ಉಹೂಂ

ಗಣೇಶ's picture

ಶ್ರೀ,

ನಿಮ್ಮ ಹತ್ತಿರ ಮುಚ್ಚುಮರೆ ಯಾಕೆ.

ನಾನು ಒಬ್ಬನೇ ಡ್ಯಾನ್ಸ್ ಮಾಡಿದರೆ ಏನು ಚಂದ.

ಜಾಕ್ಸನ್ ಬೇಡ, ಸರೋಜ್ ಖಾನ್ ಡ್ಯಾನ್ಸ್‌ಗಾದರೂ ಕುಣಿಯೋಣು ಬಾರಾ ಎಂದು ನನ್ನಾಕೇನ ಕೇಳಿದ್ದಕ್ಕೆ- 'ಸೊಂಟ ನೋವಾದರೆ ನೀವೇ ಅಡುಗೆ ಮಾಡಬೇಕು' ಎಂದಳು...
ಡ್ಯಾನ್ಸೂ..ಕ್ಯಾನ್ಸಲ್ಲು. Sad

ಇನ್ನು ಕೊಳಲಿನ ಸೊಕ್ಕು ನೋಡಿ. ನಿಮ್ಮಲ್ಲಿಗೂ ದೂರು ತಂದಿತಾ!?
ಇನ್ನೊಮ್ಮೆ ಬಂದರೆ ಅದನ್ನೇ ತಿರುಗಿಸಿ ಬಾರಿಸಿ.

-ಗಣೇಶ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 28, 2008 - 10:53pm — srinivasps

ಉ: ಸಂಗೀತಾ..ಆಹಾ..ಉಹೂಂ

srinivasps's picture

Smiling ಕೊಳಲು ಮತ್ತೆ ಈ ಕಡೆ ಬಂದ್ರೆ ಸರಿಯಾಗಿ ವಿಚಾರಿಸಿಕೊಳ್ತೀನಿ ಬಿಡಿ Smiling

ಡ್ಯಾನ್ಸ್ ಕೂಡ ಕ್ಯಾನ್ಸಲ್ ಅಂತ ಕೇಳಿ ಬೇಜಾರಾಯ್ತು...

--ಶ್ರೀ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 28, 2008 - 9:13am — Sunil Jayaprakash

ಉ: ಸಂಗೀತಾ..ಆಹಾ..ಉಹೂಂ

Sunil Jayaprakash's picture

ಈ ರೀತಿ ಎಲ್ಲ ಯೋಚ್ನೆ ಮಾಡೋದು ಬಿಟ್ಟುಬಿಟಿ, ಹಾಯಾಗಿ, ಇತ್ತೀಚೆಗೆ ತೋಪೆದ್ದ, ಒಂದು ಸಿನಿಮಾದ ಒಂದು ಹಾಡು ಕೇಳಿ.

ಮೈಕೆಲ್ ಜಾಕ್ಸನ್ ಮೈಮೇಲೆ ಬಂದು,
ನೂರಾರು ವಯ್ಲಿನ್ ಒಟ್ಟಿಗೆ ಕುಯ್ದು,
ಹತ್ತಾರು ಡ್ರಮ್ಸು ದಬದಬ ಬಡಿದು,
ಥೌವ್ಸೆಂಡ್ಸ್ ವೋಲ್ಟ್ಸು ವೋಲ್ಟೇಜ್ನೊಂದಿಗೆ
ಕಾಮಣ್ಣ ಬಂದವ್ನೋ, ಮೈಮೇಲ್ ಕಾಮಣ್ಣ ಬಂದವ್ನೋ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 28, 2008 - 10:46pm — ಗಣೇಶ

ಉ: ಸಂಗೀತಾ..ಆಹಾ..ಉಹೂಂ

ಗಣೇಶ's picture

Smiling
ಸುನಿಲ್,
ನಿಮ್ಮ ವಯಲಿನ್ ಕಲಿಕೆ ಎಲ್ಲಿವರೆಗೆ ಮುಟ್ಟಿತು?

ಬೇಗ ಕಲಿತು ಪ್ರೋಗ್ರಾಂ ಕೊಡುವಂತಾಗಲಿ. ನಾನು ಮೊದಲ ಸಾಲಲ್ಲಿ ಹಾಜರ್. ಸಾರಿ..
ಮೊದಲ ಸಾಲು ವಿ.ಐ.ಪಿ.ಗಳಿಗಲ್ವಾ? ಎರಡನೇ ಸಾಲಲ್ಲಿ.

-ಗಣೇಶ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 28, 2008 - 9:25am — shreekant.mishrikoti

ಉ: ಸಂಗೀತಾ..ಆಹಾ..ಉಹೂಂ

shreekant.mishrikoti's picture

ನಿಮ್ಮ ಬರಹದ ಶೈಲಿ ತುಂಬಾ ಚೆನ್ನಾಗಿದೆ.
ಇನ್ನಷ್ಟು ಬರೀರಿ .

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 28, 2008 - 9:43am — mahesha

ಉ: ಸಂಗೀತಾ..ಆಹಾ..ಉಹೂಂ

mahesha's picture

Smiling

ನನ್ನಿ
-ಮಹೇಶ

ನನ್ನ ಕವನಗಳು
http://maaysa.wordpress.com/

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 28, 2008 - 10:28am — anil.ramesh

ಉ: ಸಂಗೀತಾ..ಆಹಾ..ಉಹೂಂ

anil.ramesh's picture

ಗಣೇಶರೇ,
ತುಂಬಾ ಚೆನ್ನಾಗಿದೆ.

ಹೀಗೇ ಮುಂದುವರೆಸಿ.

-ಅನಿಲ್.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 28, 2008 - 12:41pm — palachandra

ಉ: ಸಂಗೀತಾ..ಆಹಾ..ಉಹೂಂ

palachandra's picture

Laughing out loud

ತುಂಬಾ ಖುಷಿ ಆಯ್ತು ಓದಿ, ಬಹಳ ಚೆನ್ನಾಗಿ ಬರ್ದಿದೀರ, ಸಂಗೀತ ಒಲೀದೆ ಇದ್ರೆ ಏನಂತೆ ಸಾಹಿತ್ಯ ಒಲೀತಾ ಇದ್ಯಲ್ಲ..

ನಿಮ್ಮ ಬರಹ ಓದಿ ನಾನು ೪ ವರ್ಷ ಮೄದಂಗ ಕಲ್ತು ಬಿಟ್ಟಿದ್ದು (ಬಿಟ್ಟಾಯ್ತು Smiling) ನೆನಪಿಗೆ ಬಂತು..
--
PaLa

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 28, 2008 - 11:28pm — ಗಣೇಶ

ಉ: ಸಂಗೀತಾ..ಆಹಾ..ಉಹೂಂ

ಗಣೇಶ's picture

>>>ಸಂಗೀತ ಒಲೀದೆ ಇದ್ರೆ ಏನಂತೆ ಸಾಹಿತ್ಯ ...

ಅಯ್ಯೋ ಸಾರ್,
ಸಂಗೀತವಾದರೂ ಹಗಲು ರಾತ್ರಿ ಕೇಳುತ್ತಾ ಬಂದಿದ್ದೇನೆ. ಒಲೀಬೇಕಿತ್ತು. ಒಲೀಲಿಲ್ಲ. ಬಿಡಿ..
ನೀವೆಲ್ಲಾ ಎಷ್ಟೊಂದು ಓದಿ ತಿಳಕೊಂಡಿದ್ದೀರಿ.
ನಾನೋ ಚಿಕ್ಕಂದಿನಲ್ಲಿ ಸ್ಕೂಲ್ ಪುಸ್ತ್ಕಕ, ಬೆಳೀತಿದ್ದಾಗ ಮಹೇಶ ಹೇಳಿದ ಕೆಲಸಗಳು Smiling, ಈಗ ದಿನಪತ್ರಿಕೆ,ಮನೆಪತ್ರಿಕೆ,ಮದುವೆ ಪತ್ರಿಕೆಗಳಷ್ಟೆ ನನ್ನ ಓದು.. ಸಾಹಿತ್ಯ.
ಬ್ಲಾಗ್ ಒಲೀತಾ ಇದೆ ಅಂದರೆ ಸ್ವಲ್ಪ ಮಟ್ಟಿಗೆ ಒಪ್ಪಬಹುದು.

-ಗಣೇಶ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 28, 2008 - 5:24pm — mowna

ಉ: ಸಂಗೀತಾ..ಆಹಾ..ಉಹೂಂ

mowna's picture

ಗಣೇಶ್ ಅವರೆ,

ಸಂಗೀತ ಕಲೆಯುವ ನಿಮ್ಮ ಪ್ರಯತ್ತ ಮುಂದುವರೆಸಿ, ಇಲ್ಲದಿದ್ದರೆ ನಮಸ್ಕಾರ, ನಮಸ್ಕಾರ, ನಮಸ್ಕಾರ, ನಮಸ್ಲಾರ.... ಎಂದು ಕಾಮಿಡಿ ಟೈಮ್ ಗಣೇಶರಾಗಿ ಸರಿನಾ!!!!!! Laughing out loud

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 28, 2008 - 6:34pm — ಸಂಗನಗೌಡ

ಉ: ಸಂಗೀತಾ..ಆಹಾ..ಉಹೂಂ

ಸಂಗನಗೌಡ's picture

ನಗು ಉಕ್ಕಿಸುವ ಬರಹ... Smiling
ನಲಿವಾಯಿತು ಗಣೇಶರೇ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 28, 2008 - 11:11pm — gurubaliga

ಉ: ಸಂಗೀತಾ..ಆಹಾ..ಉಹೂಂ

gurubaliga's picture

ಎಡ್ಡೆ ಆತಂಡ್ ಗಣೇಸೇರೆ. ಸೊಲ್ಮೆ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
November 28, 2008 - 11:53pm — ಗಣೇಶ

ಉ: ಸಂಗೀತಾ..ಆಹಾ..ಉಹೂಂ

ಗಣೇಶ's picture

ಬಾಳಿಗೆರೆ,
ಎಂಚ ಉಳ್ಳರ್?(ಹೇಗೆ ಇದ್ದೀರಿ?)-ತುಳು ಕಲಿಯುವವರಿಗಾಗಿ-ಕುಶಲವೇ ಎಂದು ಕನ್ನಡದಲ್ಲಿ ಕೇಳುವ ಹಾಗೆ.
ಸೊಲ್ಮೆ.

ಪ್ರತಿಕ್ರಿಯೆ ನೀಡಿದ ಸಂಗನಗೌಡ್ರು,ನವನೀತ,ಅನಿಲ್,ಮಹೇಶ್, ಶ್ರೀ, ಶ್ರೀಕಾಂತ್,ಸುನಿಲ್,ಪಾಲಚಂದ್ರ, ಸವಿತಾರಿಗೆ ಹಾಗೂ ಗುರೂಜಿಗೂ ನನ್ನಿ, ಸೊಲ್ಮೆ.
-ಗಣೇಶ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡದಲ್ಲಿ ಹಿಂದುಸ್ತಾನಿ ಸಂಗೀತ ಸಾಹಿತ್ಯದ ಕೊರತೆ
  • Sangita Madurya
  • ನನ್ನ ಮೃದಂಗಾಭ್ಯಾಸ
  • ಸಂಗೀತ ಪಾಠದ ಮೊದಲ ಗೀತೆ
  • ಶಿವಮಣಿ ಎಂಬ ಅದ್ಭುತ ಪ್ರತಿಭೆ
Syndicate content

ಲೇಖಕರು

ಗಣೇಶ's picture

ಪರಿಚಯ

ಕನ್ನಡ ಬಲು ಇಷ್ಟ
ಇಂಗ್ಲೀಷ್/ಕಂಪ್ಯೂಟರ್ ಸ್ವಲ್ಪ ಕಷ್ಟ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
  • ಬಹು - ಭಾಷಾ - ತಮಾಷಾ!!!
  • ಚಂದ್ರ ಚೆಲ್ಲುವ ಬೆಳದಿಂಗಳು
  • ನಗುವ ನಯನ, ಮಧುರ ಮೌನ
  • ವೈಕುಂಠ ಏಕಾದಶಿ
  • ಜೀವ ಉಳಿಸಿದ ಬೋಸ್ ಹೆಡ್ ಫೋನ್ !!
  • ಸ್ನೇಹಮಿಲನ ಹಾಜರಾತಿ
  • ಒಲವಿಲ್ಲದೆ
  • ** ಹರೆಯದ ಹೊರೆ **
  • ವಿಶ್ವದ ಅತ್ಯಂತ ಬಲಿಷ್ಠ ಬಾಲಿಕೆ : ವಾರ್ಯಾ ಅಕುಲೋವಾ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 10:27am
  • venkatesh
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 10:10am
  • ಅರವಿಂದ್
    ಉ: ನಗುವ ನಯನ, ಮಧುರ ಮೌನ
    January 8, 2009 - 10:04am
  • venkatesh
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 10:02am
  • karthik
    ಉ: ಬಹು - ಭಾಷಾ - ತಮಾಷಾ!!!
    January 8, 2009 - 9:56am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:33am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:32am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:31am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:29am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:29am
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 132 ಅತಿಥಿಗಳು ಆನ್ಲೈನ್ ಇರುವರು.


ಸಿಂಹಕ್ಕೆ ಮೃಗಗಳು ಅಭಿಷೇಕವನ್ನಾಗಲೀ ಸಂಸ್ಕಾರವನ್ನಾಗಲೀ ಮಾಡುವುದಿಲ್ಲ. ತನ್ನ ಪರಾಕ್ರಮದಿಂದ ತಾನೇ ಸಂಪಾದಿಸಿಕೊಂಡ ಸಂಪತ್ತುಳ್ಳ ಅದಕ್ಕೆ ಮೃಗರಾಜಪದವಿ ತಾನಾಗಿಯೇ ಬರುತ್ತದೆ.

— ಹಿತೋಪದೇಶ, ಸುಹೃದ್ಭೇದ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator