ದರ್ಪದ ಸಂಕೇತ
ಖಾಕಿ ಬಟ್ಟೆ ದರ್ಪದ ಸಂಕೇತ. ಬ್ರಿಟಿಷರ ಬಳುವಳಿ. ಬ್ರಿಟಿಷರು ಹೋಗುವಾಗ ತಮ್ಮ ದೌರ್ಜನ್ಯವನ್ನು ಪೋಲೀಸರು, ರಾಜಕಾರಣಿಗಳು, ಕೋರ್ಟ್‌ಗಳಿಗೆ ಬಿಟ್ಟು ಹೋಗಿದ್ದಾರೆ. ನ್ಯಾಯಕ್ಕಾಗಿ ಹೋರಾಡುತ್ತಿರುವ ಬಡ ರೈತನ ಮೇಲೆ ರೌಡಿಗಳಿಗಿಂತ ಕಡೆಯಾಗಿ ದೊಣ್ಣೆ ಬೀಸುತ್ತಿದ್ದಾರಲ್ಲಾ- ಇವರ ಟೊಪ್ಪಿ ಕೆಳಗೆ ಇರುವುದು, ಅದೇ ಬ್ರಿಟಿಷರ ಕಾಲದ ತುಕ್ಕು ಹಿಡಿದ ಮೆದುಳು.
ಪ್ರಕೃತಿ, ರಾಜಕಾರಣಿ, ಕೋರ್ಟ್, ಪೋಲೀಸರನ್ನೆಲ್ಲಾ ಎದುರಿಸಿ ನಿಂತಿರುವ ರೈತನಿಗೆ ನೂರಾನೆ ಬಲ ಬರಲಿ ಎಂದು ಹಾರೈಸುವ
(೨೦೦೨ರ ಸೆಪ್ಟೆಂಬರ್ ತಿಂಗಳಲ್ಲಿ ಜಲಾಶಯಗಳಲ್ಲಿ ನೀರೇ ಇಲ್ಲದಾಗ, ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವ ವಿಷಯದಲ್ಲಿ ರೈತರು ಪ್ರತಿಭಟಿಸಿದರು.ಆಗ ರೈತರ ಮೇಲೆ ನಡೆಸಿದ ಪೋಲೀಸರ ದೌರ್ಜನ್ಯವನ್ನು ವಿರೋಧಿಸಿ, ಮೇಲಿನ ಬರಹವನ್ನು ವಿಜಯ ಕರ್ನಾಟಕದ ವಾಚಕರ ವಿಜಯಕ್ಕೆ ಬರೆದಿದ್ದೆ.)
ನಿನ್ನೆ ಪುನ: ಟಿ.ವಿ.ಗಳಲ್ಲಿ ನೀವು ನೋಡಿರಬಹುದು-
ನೈಸ್ ಯೋಜನೆಗೆ ಸಂಬಂಧಿಸಿದ ಉನ್ನತ ಮಟ್ಟದ ಸಭೆಗೆ ಆಹ್ವಾನಿಸಿಲ್ಲ ಎಂದು ಆರೋಪಿಸಿ ಹೆಮ್ಮಿಗೆಪುರ ಬಳಿಯ ನೈಸ್ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ "ಕೆಲ ರೈತ"ರ ಮೇಲೆ "ನೂರಾರು" ಪೊಲೀಸರು ಲಾಠಿ ಪ್ರಹಾರ ಮಾಡಿದ್ದನ್ನು. ಕೆಲವರು ಕುಸಿದು ಬಿದ್ದರೂ ಬಿಡದೆ ಸುತ್ತುವರಿದು ಮನಬಂದಂತೆ ಚಚ್ಚಿದರು.
ಜಮೀನು ಕಳಕೊಂಡ ಒಬ್ಬ ರೈತ ಪ್ರತಿನಿಧಿಯನ್ನು ಸಭೆಗೆ ಆಹ್ವಾನಿಸಿದ್ದರೆ ಸರಕಾರಕ್ಕೆ ಏನು ತೊಂದರೆಯಾಗುತ್ತಿತ್ತು? ದೇವೇಗೌಡರ ಮೇಲಿನ ಸಿಟ್ಟನ್ನು ರೈತರ ಮೇಲೆ ತೀರಿಸಬೇಕಾ?
ಸರಕಾರದ ಪ್ರೋತ್ಸಾಹ ಇಲ್ಲದಿದ್ದರೆ, ದನಕ್ಕೆ ಹೊಡೆದಂತೆ ಹೊಡೆಯಲು ಪೋಲೀಸರಿಗೆ ಧೈರ್ಯ ಬರುತ್ತಿತ್ತಾ? (ಒಬ್ಬ ಪೋಲೀಸ ಬೂಟುಗಾಲಲ್ಲಿ ಒದೀತಿದ್ದ...)
ಮುಖ್ಯ ಮಂತ್ರಿಗೆ ಟಿ.ವಿಯವರು ವಿಚಾರಿಸಿದಾಗ, ನನಗದರ ಮಾಹಿತಿ ಇಲ್ಲ ಎಂದರು.
ಮಾಹಿತಿ ಇಲ್ಲದ್ದು ಒಳ್ಳೆಯದಾಯ್ತು- ಇಲ್ಲದಿದ್ದರೆ ರೈತನ ಹೆಸರಲ್ಲಿ ಇನ್ನಷ್ಟು ಕಣ್ಣೀರು ಹರಿಸುತ್ತಿದ್ದರು.
ಅಂದಹಾಗೆ ಈ ರಾಜಕಾರಣಿಗಳಲ್ಲಿ ಅನ್ನ ತಿನ್ನುವವರು ಒಬ್ಬರಾದರೂ ಇದ್ದಾರಾ?
-ಗಣೇಶ.









ಪ್ರತಿಕ್ರಿಯೆಗಳು
ಉ: ರೈತರೋ..ದನಗಳೋ?
ನೆಗಿಲು ಹೊತ್ತ ರೈತ
ಹೊಟ್ಟಿಗಿಲ್ಲದೆ ಸಾಯ್ತಾ
ಉ: ರೈತರೋ..ದನಗಳೋ?
<<ಮುಖ್ಯ ಮಂತ್ರಿಗೆ ಟಿ.ವಿಯವರು ವಿಚಾರಿಸಿದಾಗ, ನನಗದರ ಮಾಹಿತಿ ಇಲ್ಲ ಎಂದರು.>>
ನಿನ್ನೆ ಸದಾನಂದ ಗೌಡ ರಾಜೀನಾಮೆ ವಿಷಯ ಕೂಡ ತನ್ನ ಗಮನಕ್ಕೆ ಬಂದಿಲ್ಲ ಅಂದಿದ್ದಾರೆ.
ಮುಖ್ಯಮಂತ್ರಿಗಳಿಗೆ ಖುದ್ದಾಗಿ ವಾರ್ತಾಪತ್ರಿಕೆಗಳನ್ನು ಓದಲು ಅಥವಾ ಸುದ್ದಿವಾಹಿನಿಗಳನ್ನು ವೀಕ್ಷಿಸಲು ಸಮಯಾವಕಾಶ ಇಲ್ಲದೇ ಇರಬಹುದು. ಆದರೆ, ಮುಖ್ಯಮಂತ್ರಿಗಳಿಗೆ ಸಲಹೆಗಾರರು ಇರ್ತಾರೆ. ಅವರು ಇಂತಹ ಮಾಹಿತಿಗಳನ್ನು ನೀಡಬೇಕಾದುದು ಕರ್ತವ್ಯವಲ್ಲವೇ? ಗೊತ್ತಿಲ್ಲ ಅನ್ನೋದೇ ದೊಡ್ಡ ಕೆಲಸ ಈತ ಮಾಡ್ತಿರೋದು. ಗೊತ್ತಾದ ಕೂಡ್ಲೇ ನೀವು ಹೇಳಿದಹಾಗೆ ಕಣ್ಣೀರು ಇಳಿಸ್ತಾರೆ.
ಉ: ರೈತರೋ..ದನಗಳೋ?
ತ್ಮೀಯ
ದಕ್ಷಿಣ ಭಾರತದಲ್ಲಿ ಮೊದಲನೆ ಬಾರಿಗೆ ಅದರಲ್ಲೂ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ವಹಿಸಿಕೊ೦ಡಾಗ ಇದ್ದ ನಿರೀಕ್ಷೆಗಳು ಅಕಾಶದಷ್ಟು
ಸ೦ಘ ಪರಿವಾದದ ಆದರ್ಶಗಳನ್ನು ಶಿಸ್ತನ್ನು ಮೈಗೂಡಿಸಿಕೊ೦ಡ ಪಕ್ಷ ಎ೦ದು ಹೆಮ್ಮೆಯಿ೦ದ ಬೀಗುತ್ತಿದ್ದ ಪಕ್ಷ ಎ೦ದು ಬಳ್ಳಾರಿ ಗಣಿದೊರೆಗಳ ತೆಕ್ಕೆಗೆ ಬಿತ್ತೋ ಅ೦ದೇ ಸರ್ವನಾಶವಾಯ್ತ
ದುಡಿಗೆ ಸಚಿವರನ್ನು ಕೊ೦ಡುಕೊ೦ಡಾಗ ಅದರ ಶಿಸ್ತು ಆದರ್ಶ ಮಣ್ಣುಪಾಲಾಯ್ತು. ರೇಣುಕಾಚಾರ್ಯ ಹಾಲಪ್ಪನ೦ಥವನ್ನು ಪಕ್ಷದಿ೦ದ ಹೊರಹಾಕದೆ ಪಕ್ಷದ ನೀತಿಗೆ ಕೆಸರು ಮೆತ್ತಿಸಿಕೊ೦ಡಿತು.
ರೈತರ ಮೇಲಿನ ಗೋಲೀಬಾರ್, ಅಧಿಕಾರಕ್ಕಾಗಿ ಕಣ್ಣೀರು ತಲೆಹಿಡುಕತನ ಎಲ್ಲವೂ ಪಕ್ಷದ ಹೆಸರನ್ನು ಮತ್ತು ಕಮಲದ ದಳಗಳನ್ನು ಒ೦ದೊ೦ದೇ ಕಿತ್ತುಹಾಕುತ್ತಾ ಬ೦ದವು.
ನಿಷ್ಟಾವ೦ತ ಪ್ರಾಮಾಣಿಕ ಸಚಿವರನ್ನು ಯಾರದೋ ಬ್ಲಾಕ್ ಮೇಲ್ ಗೆ ಒತ್ತಡಕ್ಕೆ ಒಳಗಾಗಿ ಕಿತ್ತು ಹಾಕಿದಾಗ ಪಕ್ಷ ಬಳ್ಳಾರಿ ಹಿಡಿತದಲ್ಲಿದೆ ಎ೦ಬುದು ಪೂರ್ತಿ ಸ್ಪಷ್ಟವಾಯ್ತು. ನಮ್ಮ ಪ್ರದಾನ ಮ೦ತ್ರಿಯವರನ್ನು
ಕೈಗೊ೦ಬೆ , ಕೀಲುಗೊ೦ಬೆ, ಸ್ವ೦ತಿಕೆ ಇಲ್ಲದವನು ಎ೦ದೆಲ್ಲಾ ಹೇಳುವ ನಾವು ನಮ್ಮ ಮುಖ್ಯಮ೦ತ್ರಿಯವರನ್ನೂ ಹೀಗೇ ಹೇಳಬೇಕಾಗುತ್ತೆ.
ನೈಸ್ ಸಭೆಯಲ್ಲಿ ರೈತರಿಗೆ ಅವಕಾಶ ಕೊಡಲಿಲ್ಲ. ಭೂಮಿ ರೈತರದ್ದು ಅವರನ್ನು ಬಿಟ್ಟು ಸಭೆ ಮಾಡುವುದೆ೦ದರೆ ಅದಕ್ಕೆ ಅರ್ಥವಿದೆಯೇ?.ಅದೂ ಅಲ್ಲದೆ ಅವರಿಗೆ ಲಾಠಿಯಿ೦ದ ಅದು ಮಿರಿದ ಮೇಲೆ ಕೈಗೆ ಸಿಕ್ಕ ಕಬ್ಬಿಣದ ಸರಳುಗಳಿ೦ದ ಹೊಡೆದಿದ್ದಾರ೦ತ (ವಿಕ ದಲ್ಲ ಬ೦ದಿದ್ದು)
ಇಷ್ಟು ಸಾಕು. ಇನ್ನೆ೦ದೂ ಬಿಜೆಪಿ ಅಧಿಕಾರಕ್ಕೆ ಬರದು .
ಹರಿ
ಉ: ರೈತರೋ..ದನಗಳೋ?
ಡಿವೈಎಸ್ ಪಿ ಒಬ್ಬ ರೈತನೊಬ್ಬನಿಗೆ ಕಬ್ಬಿಣದ ರಾಡ್ ನಿಂದ ಹೊಡೆದಾಗ ಮೈಯೆಲ್ಲಾ ಕುದಿಯುತ್ತಿತ್ತು. ಆಗ ರಯತರು ಕೆಲವೇ ಮಂದಿ ಇದ್ದರು ಅಸಹಾಯಕರಾಗಿದ್ದರು. ಅದೇ ಅವರು ದೊಡ್ಡ ಸಂಖ್ಯೆಯಲ್ಲಿ ಇದ್ದಿದ್ದರೆ ಪೊಲೀಸರ ಪಿಚ್ಚರ್ ಬಿಟ್ಟಿರುತ್ತಿತ್ತು. ಇದು ಇಷ್ಟಕ್ಕೆ ನಿಲ್ಲುವಂತಹುದಲ್ಲ. ಮತ್ತೆ ನಿಶ್ಚಿತವಾಗಿ ಮುಂದುವರೆಯುತ್ತದೆ. ಗಣೇಶ್ ಧನ್ಯವಾದಗಳು.
ಉ: ರೈತರೋ..ದನಗಳೋ?
+೧
ಉ: ರೈತರೋ..ದನಗಳೋ?
ವಿನಾಶಕಾಲೇ....
ಉಪ್ಪು ತಿಂದವರು ನೀರು ಕುಡಿಯುತ್ತಾರೆ ಗಣೇಶಣ್ಣ.ಇವ್ರು ಈಗ ಸಿಕ್ಕಿರೋ ಕುರ್ಚಿಯ ವಾರಂಟಿ ೫ ವರ್ಷ ಮಾತ್ರ ಅನ್ನೋದನ್ನ ಮರೆತು ನಡೆಯುತಿದ್ದಾರೆ.ಕುರ್ಚಿ ಮುರಿದು ಕೆಳಗೆ ಬಿದ್ದ ಮೇಲೆ ಮತ್ತಿನ್ನೆಂದು ಅವ್ರ ಕೈಗೆ ಅದು ಸಿಗುವುದೇ ಇಲ್ಲ ಅನ್ನುವ ಸತ್ಯ ಮರೆತು ಬಿಟ್ಟಿದ್ದಾರೆ.
>>ಪ್ರಕೃತಿ, ರಾಜಕಾರಣಿ, ಕೋರ್ಟ್, ಪೋಲೀಸರನ್ನೆಲ್ಲಾ ಎದುರಿಸಿ ನಿಂತಿರುವ ರೈತನಿಗೆ ನೂರಾನೆ ಬಲ ಬರಲಿ ಎಂದು ಹಾರೈಸುವ
ನನ್ನ ಹಾರೈಕೆಯು ಇದೆ.
ಉ: ರೈತರೋ..ದನಗಳೋ?
ಪ್ರಕೃತಿ ರೈತನಿಗೆ ಇದಿರು ನಿಂತಿಲ್ಲ. ತಪ್ಪಾಯ್ತೆಂದು ಕ್ಷಮೆ ಕೇಳಿದರೆ ಆಕೆ ರೈತನ ಬೆನ್ನಿಗಿರುತ್ತಾಳೆ. ಹಾಳಾದ್ದು... ಉಳಿದವರೇ ರೈತನ ಪಾಲಿಗೆ ಕಂಟಕರು.
ಉ: ರೈತರೋ..ದನಗಳೋ?
ತಿನ್ನುತ್ತಾನೆ ರಾಜಕಾರಣಿಯೂ ಅನ್ನ
ಅದರಲ್ಲಿ ಬೆರೆಸುತ್ತಾನೆ
ಭ್ರಷ್ಟಾಚಾರದ ಸಂಬಾರು
ಜನರ ರಕ್ತದ ಉಪ್ಪಿನಕಾಯಿ
ಗರಿಗರಿ ನೋಟುಗಳ ಪಲ್ಯ
ಭೂರಿ ಭೋಜನ ಮಾಡಿ ಬೆಳೆಯುವುದು ಅವನ ಹೊಟ್ಟೆ
ನಂಬಿದ ಜನರ ಬಾಳು ಬರೀ ಲೋಳಲೊಟ್ಟೆ
ಉ: ರೈತರೋ..ದನಗಳೋ?
ರೇಪ್ ಕೇಸಲ್ಲಿ ಅರಸ್ಟ್ ಆಗಿ ಜೈಲಲ್ಲಿರಬೇಕಾದ ಮಂತ್ರಿಯನ್ನು ಮರ್ಯಾದೆಯಿಂದ ಆಸ್ಪತ್ರೆಯಲ್ಲಿ ಬಿಟ್ಟು ಕಾವಲು ಕಾಯುತ್ತಾರೆ..
ರೌಡಿಗಳನ್ನು ಬಂಧಿಸುವಾಗಲೂ,ಜನ್ಮಾಂತರದ ಫ್ರೆಂಡ್ಸ್‌ಗಳಂತೆ ಜತೆ ನಿಂತು ಟಿ.ವಿ.ಗೆ ಪೋಸ್ ಕೊಡುತ್ತಾರೆ..
ಹೊಟ್ಟೆಗಿಲ್ಲದೆ ಸಾಯ್ತಾ ಇರುವ ರೈತ(>>shreeshum)ನ ಮೇಲೆ ಇವರ ದರ್ಪ...
ಬೆಂಗಳೂರ ಸ್ಟೇಡಿಯಂನಲ್ಲಿ ಬಾಂಬ್ ಇಟ್ಟವರನ್ನು ಅತಳ ವಿತಳ ಸುತಳ ಎಲ್ಲೇ ಇದ್ದರೂ ಬಂಧಿಸುವೆ ಎಂದವರು ಈಗ ಅತಳದಲ್ಲಿ ಇದ್ದಾರಾ? ಅಥವಾ ಸುತಳ ತಲುಪಿದ್ದಾರಾ ಗೊತ್ತಿಲ್ಲ!
ಆಸು ಹೆಗ್ಡೆಯವರೆ, ಮುಖ್ಯಮಂತ್ರಿಗಳು+ ಸಲಹೆಗಾರರು ಮಂಗಳ/ಬುಧ/ಗುರು.. ಗ್ರಹದವರಿಂದ ಬಂಡವಾಳ ಕರ್ನಾಟಕದಲ್ಲಿ ಹೂಡುವ ಬಗ್ಗೆ ತಯಾರಿಯಲ್ಲಿದ್ದಾರೆ.
ರೈತರ ವಿಷಯಕ್ಕೆ ಬಂದರೆ ಎಲ್ಲಾ ಪಕ್ಷಗಳು ಒಂದೇ.....
ರೈತರು ರಸ್ತೆ ತಡೆ ಮಾಡುವ ಬಗ್ಗೆ ಜನತಾದಳದ ಲೀಡರ್‌ಗಳಿಗೆ ಗೊತ್ತಿರಲಿಲ್ಲವಾ? ಒಂದೆರಡು ಅವರ ಪಕ್ಷದ ರಾಜಕಾರಣಿಗಳನ್ನು ಕಳುಹಿಸಬಾರದಿತ್ತೆ? ಲಾಠೀ ಚಾರ್ಜ್ ಆಗಲಿ,ನಂತರ ನಾವು ಕಣ್ಣೀರು ಹರಿಸುವ ಎಂದು ಕಾದಿದ್ದರು.
ಪ್ರತಿಕ್ರಿಯೆ ನೀಡಿದ shreeshum,ಆಸು, ಹರೀಶ್, ಸುರೇಶ್, ರಾಕೇಶ್, ಸಂತೋಶ್ ರಿಗೆ ಗಣೇಶ್‌ನ ನನ್ನಿ.
ಉ: ರೈತರೋ..ದನಗಳೋ?
(೨೦೦೨ರ ಸೆಪ್ಟೆಂಬರ್ ತಿಂಗಳಲ್ಲಿ ಜಲಾಶಯಗಳಲ್ಲಿ ನೀರೇ ಇಲ್ಲದಾಗ, ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವ ವಿಷಯದಲ್ಲಿ ರೈತರು ಪ್ರತಿಭಟಿಸಿದರು.ಆಗ ರೈತರ ಮೇಲೆ ನಡೆಸಿದ ಪೋಲೀಸರ ದೌರ್ಜನ್ಯವನ್ನು ವಿರೋಧಿಸಿ, ಮೇಲಿನ ಬರಹವನ್ನು ವಿಜಯ ಕರ್ನಾಟಕದ ವಾಚಕರ ವಿಜಯಕ್ಕೆ ಬರೆದಿದ್ದೆ.)
>>> ನಾ ತಪ್ಪದೆ ಓಡುತ್ತಿದೆ.. ಆದರೆ ಈಗಿನಸ್ತು ನೀವು ..ರಿಂದ ಗಮನಿಸಿರಲಿಲ್ಲ...
ನಿಮ್ಮ ರೈತರ ಬಗೆಗಿನ ಕಾಳಜಿ ಅಭಿನಂದನೀಯ..
ರಾಜಕಾರಣಿಗಳು ಅನ್ನ ತಿನ್ನೋಲ್ಲ.....!
ಮತ್ತೆ;
;
;
;
;
ರೈಸ್ !
ಹಾಗೂ ಮಣ್ಣು (ಅದಿರು) :)
ಉ: ರೈತರೋ..ದನಗಳೋ?
:) :)
ಮಣ್ಣು ಅದಿರು ತಿಂದರೂ, ಈ ನೆಲದ ಮಣ್ಣಿನ ಅದಿರಿನ ಒಳ್ಳೆ ಗುಣವಿರುತ್ತಿತ್ತು.. :)
-ಗಣೇಶ.
ಉ: ರೈತರೋ..ದನಗಳೋ?
ಗಣೇಶರೆ ಹಾಗು ಸಪ್ತಗಿರಿಯವರೆ
ನೀವಿಬ್ಬರು ಅರ್ದರಾತ್ರಿಯಲ್ಲಿ ಸಂಭಾಷಣೆ ನಡೆಸಿ ನಮ್ಮನ್ನೆಲ್ಲ ವಂಚಿರನ್ನಾಗಿಸುತ್ತಿದ್ದೀರಿ
ಅಹಾ ಎಂತ ಸಂಬಾಷಣೆ !
ರಾಜಕಾರಣಿ ಹೇಳಿದನಂತೆ
ನನಗೆ ರೈತ್ರ ಕಷ್ಟ ಕಂಡು ಕರುಳು ಮಿಡಿಯುತ್ತಿದೆ
ನಾನು ಮೂರುದಿನದಿಂದ ಊಟವನ್ನೆ ಮಾಡಿಲ್ಲ
ಮತ್ತೆ;
.
.
.
.
ದಿನಕ್ಕೆ ಮೂರು ಸಲ
ಬರೀ ಟಿಪನ್
ಪಾರ್ಥಸಾರಥಿ
ಉ: ರೈತರೋ..ದನಗಳೋ?
ಮಣ್ಣು ಅದಿರು ತಿಂದರೂ, ಈ ನೆಲದ ಮಣ್ಣಿನ ಅದಿರಿನ ಒಳ್ಳೆ ಗುಣವಿರುತ್ತಿತ್ತು.. :)
-ಗಣೇಶ.
>>>> ಡಾಕ್ಟ್ರೆ ,ಅದೂ ಸರೀನೆ .....
ಗಣೇಶರೆ ಹಾಗು ಸಪ್ತಗಿರಿಯವರೆ
ನೀವಿಬ್ಬರು ಅರ್ದರಾತ್ರಿಯಲ್ಲಿ ಸಂಭಾಷಣೆ ನಡೆಸಿ ನಮ್ಮನ್ನೆಲ್ಲ ವಂಚಿರನ್ನಾಗಿಸುತ್ತಿದ್ದೀರಿ
ಅಹಾ ಎಂತ ಸಂಬಾಷಣೆ !
ರಾಜಕಾರಣಿ ಹೇಳಿದನಂತೆ
ನನಗೆ ರೈತ್ರ ಕಷ್ಟ ಕಂಡು ಕರುಳು ಮಿಡಿಯುತ್ತಿದೆ
ನಾನು ಮೂರುದಿನದಿಂದ ಊಟವನ್ನೆ ಮಾಡಿಲ್ಲ
ಮತ್ತೆ;
.
.
.
.
ದಿನಕ್ಕೆ ಮೂರು ಸಲ
ಬರೀ ಟಿಪನ್
ಪಾರ್ಥಸಾರಥಿ
ನೀವಿಬ್ಬರು ಅರ್ದರಾತ್ರಿಯಲ್ಲಿ ಸಂಭಾಷಣೆ ನಡೆಸಿ ನಮ್ಮನ್ನೆಲ್ಲ ವಂಚಿರನ್ನಾಗಿಸುತ್ತಿದ್ದೀರಿ
>>>ಸಕಲರಿಗೂ ತುಂಬು 'ಹೃದಯದ ಸ್ವಾಗತ' ಆದರೆ ಯಾರು ಅಸ್ತೋತ್ತಲ್ಲಿ ನಮನ್ನ ಸೇರಿ 'ಚಾಟ್ 'ಮಾಡೋಕೆ ರೆಡಿ ಇಲ್ವೆ:)
ನಿಮಗೆ ಗೊತ್ತೇ? ನಾವು ಅರ್ಧ ರಾತ್ರಿ ಬೆಳಗ್ಗೆ ಗಂಟ ಎದ್ದಿರೋದರೀ0ದ ನನನ್ ಮತ್ತು ಗಣೇ ಸಣ್ಣ ಅವ್ರ ಏರಿಯ ದಲಿ 'ಕಳ್ಳತನ- ದರೋಡೆ '
ಉಹೂ ಒಂದೂ ಇಲ್ಲ :)
ರಾಜಕಾರಣಿ ಹೇಳಿದನಂತೆ
ನನಗೆ ರೈತ್ರ ಕಷ್ಟ ಕಂಡು ಕರುಳು ಮಿಡಿಯುತ್ತಿದೆ
ನಾನು ಮೂರುದಿನದಿಂದ ಊಟವನ್ನೆ ಮಾಡಿಲ್ಲ
ಮತ್ತೆ;
.
.
.
.
ದಿನಕ್ಕೆ ಮೂರು ಸಲ
ಬರೀ ಟಿಪನ್
>>>>ಗುರುಗಳೇ ಒಳ್ಳೆ ಚೋಕು :)