~
ಬಜ್ಜಿ-ಶ್ರೀಶಾಂತ್
ಪೆಟ್ಟು ತಿಂದುದು ಶ್ರೀಶಾಂತ್, ಹೊಡೆದ ಹರ್ಭಜನ್ ‘ಬಜ್ಜಿ’ ಹೇಗಾದ?
‘ಹರ್’ಭಜನ್ ಸತತ ಸೋಲಿನಿಂದ ‘ಹಾರ್’ಭಜನ್ ಆಗಿ, ಶ್ರೀಶಾಂತ್‌ಗೆ ‘ಹಾರರ್’ ಭಜನ್ ಆಗಿ ಮಾರ್ಪಟ್ಟದ್ದು ಬಹಳ ಬೇಸರದ ಸಂಗತಿ.
ಚಳಿಗಾಲದಲ್ಲಿ ‘ಬಜ್ಜಿ’ ಎಲ್ಲರಿಗೂ ಇಷ್ಟ.ಬೇಸಿಗೆಯಲ್ಲಿ ಯಾರಿಗೂ ಬೇಡ. ಅದಕ್ಕೆ ೨ ತಿಂಗಳ ಹಿಂದೆ ಕ್ರಿಕೆಟ್ ಮಂಡಳಿ ಬಜ್ಜಿ ಬೆಂಗಾವಲಿಗಿದ್ದು, ಈಗ ಬ್ಯಾನ್ ಮಾಡಲು ರೆಡಿಯಾಗಿದೆ.
ಮುಂಬೈ ಇಂಡಿಯನ್ಸ್ ಇತ್ತೀಚೆಗೆ ನಡೆಸಿದ ಗಲಾಟೆಗೂ, ಮುಂಬೈ ಇಂಡಿಯನ್ಸ್ ತಂಡದ ನಾಯಕನ ವರ್ತನೆಗೂ ಸಂಬಂಧವಿದೆಯೋ?
ನಿಷೇಧ ಹೇರುವ ಕಠಿಣ ಕ್ರಮದ ಬದಲು ಹರ್‌ಭಜನ್ ನಾಯಕತ್ವದಲ್ಲಿ ‘ಇಂಡಿಯನ್ ಡೆವಿಲ್ಸ್’ ತಂಡ ರಚಿಸಿ wwf fight ಗೆ ಕಳುಹಿಸಿದರಾಗದೇ?(ಕಲಿ ಕೈಯಲ್ಲಿ ಜಜ್ಜಿಸಿ, ನಿಜಕ್ಕೂ ಬಜ್ಜಿ ಆದಾಗ ಏರಿದ ಮದ ತಣ್ಣಗೆ ಇಳಿಯುವುದು)
ಅಕರಾಳವಿಕರಾಳ ಮುಖ ಮಾಡುವ ಆಕ್ರಮಣಕಾರಿ ಮನೋಭಾವದ ಆಟಗಾರನ ಹೆಸರು- --ಶ್ರೀ ‘ಶಾಂತ’.ಆಹಾ., ಸಿನಿಮಾದಲ್ಲಿ ಬೇರೆ ಆಕ್ಟ್ ಮಾಡಲಿದ್ದಾನಂತೆ-ವಿಲನ್ ಬೇರೆ ಬೇಕಾಗಿಯೇ ಇಲ್ಲ.
-ಗಣೇಶ.

- ಗಣೇಶ ರವರ ಬ್ಲಾಗ್
- Login or register to post comments
- 312 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ


RSS: