ಗುಣಿತಾಕ್ಷರ - ಕನ್ನಡ ವ್ಯಾಕರಣ - ಒಂದಿಷ್ಟು ತಿಳಿಯೋಣ

ಗುಣಿತಾಕ್ಷರ - ಕನ್ನಡ ವ್ಯಾಕರಣ - ಒಂದಿಷ್ಟು ತಿಳಿಯೋಣ

ಚಿತ್ರ

ಕನ್ನಡ ವ್ಯಾಕರಣ - ಒಂದಿಷ್ಟು ತಿಳಿಯೋಣ

 

ಗುಣಿತಾಕ್ಷರಗಳು  ಹಾಗು ಸಂಯುಕ್ತಾಕ್ಷರಗಳು 

ಗುಣಿತಾಕ್ಷರ :

ವ್ಯಂಜನಗಳಿಗೆ ಸ್ವರಗಳು ಸೇರಿದಾಗ ಗುಣಿತಾಕ್ಷರಗಳಾಗುತ್ತವೆ

ಪ್ರತಿಯೊಂದು ಸ್ವರಕ್ಕೂ ಒಂದು ಚಿಹ್ನೆ ಇದ್ದು ವ್ಯಂಜನದೊಂದಿಗೆ ಈ ಚಿಹ್ನೆ ಸೇರಿ ಗುಣಿತಾಕ್ಷರದಂತೆ ಬರೆಯಬಹುದು. ಕ ಎಂಬುದು ವ್ಯಂಜನಾಕ್ಷರಗಳಲ್ಲಿ ಮೊದಲಿನ ಅಕ್ಷರ ಹಾಗಾಗಿ ವ್ಯಂಜನಗಳಿಗೆ ಸ್ವರಗಳನ್ನು ಸೇರಿಸುವ ಕ್ರಮಕ್ಕೆ 'ಕಾಗುಣಿತ' ಎಂದು ಕರೆಯಬಹುದಾಗಿದೆ

ಉದಾ := ಅ ಆ ಇ ಈ ಉ ಊ ಋ ೠ ಎ ಏ ಐ ಒ ಓ ಔ ಅಂ ಅಹ:

ಈ ಸ್ವರಗಳು   ಕ್ ಕಾರವನ್ನು ಸೇರಿದಾಗ  ಕ ಕಾ ಕಿ ಕೀ ಕೃ ಕೄ ಕೆ ಕೇ ಕೈ ಕೊ ಕೋ ಕೌ ಕಂ ಕ: ಆಗುತ್ತದೆ

ಹೀಗೆಯೆ ಎಲ್ಲ ವ್ಯಂಜನಗಳು ಗುಣಿತಾಕ್ಷರಗಳಾಗುತ್ತವೆ. ಇವನ್ನು ಬರೆದು ಅಭ್ಯಾಸ ಮಾಡಬಹುದು

ಸಂಯುಕ್ತಾಕ್ಷರಗಳು :-

ವ್ಯಂಜನಗಳಿಗೆ ಸ್ವರ ಸೇರಿದಾಗ ಗುಣಿತಾಕ್ಷರವಾಗುವಂತೆ

ವ್ಯಂಜನಗಳಿಗೆ   ವ್ಯಂಜನಗಳೇ ಸೇರಿದಾಗ ಸಂಯುಕ್ತಾಕ್ಷರವಾಗುತ್ತದೆ

ಇವನ್ನು ಒತ್ತಕ್ಷರ ಎಂದೂ ಕರೆಯಬಹುದು

ಒಂದು ವ್ಯಂಜನಕ್ಕೆ ಅದೇ ವ್ಯಂಜನ ಸೇರಿದಾಗ ಬರುವ ಒತ್ತಕ್ಷರವನ್ನು ಸ್ವಜಾತೀಯ ಸಂಯುಕ್ತಾಕ್ಷರವೆಂದು ಕರೆಯಬಹುದು

ಉದಾಹರಣೆ ಗಮನಿಸಿ : ಅಕ್ಕ  , ಅಪ್ಪ  , ಅಮ್ಮ  ಅಣ್ಣ , ಹಗ್ಗ , ಅಟ್ಟ , ಅಡ್ಡ , ಕದ್ದ , ಅನ್ನ, ಹಬ್ಬ

ಹಾಗೆ ಒಂದು ವ್ಯಂಜನಕ್ಕೆ ಮತ್ತೊಂದು ವ್ಯಂಜನ ಒತ್ತಾಗಿ ಬಂದಾಗ, ವಿಜಾಯೀಯ ಸಂಯುಕ್ತಾಕ್ಷರವೆನಿಸುತ್ತದೆ

ಉದಾಹರಣೆ: ಪುಸ್ತಕ, ವ್ಯಾಕರಣ, ಆಶ್ಚರ್ಯ  ಇತ್ಯಾದಿ...

Rating
Average: 3.3 (24 votes)