ಈಗಿನಂತೆ 2 ಸದಸ್ಯರು ಮತ್ತು 98 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

"ಭೂಮಿಗುದುರಿತೆ ಜೀವ? ಮತ್ತು ಇತರ ಪ್ರಶ್ನೆಗಳು" ಕೃತಿ ಲೋಕಾರ್ಪಣೆ
guruve's picture
Guruprasad D N
19
Jun
2011
ಲೇಖನ

 ಕೊಳ್ಳೇಗಾಲ ಶರ್ಮ ಅವರ "ಭೂಮಿಗುದುರಿತೆ ಜೀವ? ಮತ್ತು ಇತರ ಪ್ರಶ್ನೆಗಳು" ಕೃತಿ ಲೋಕಾರ್ಪಣೆ ಮತ್ತು ಪೆನ್ ಸರ್ಕಲ್ ಗೌರವಾರ್ಪಣೆ

...

ಪ್ರತಿಕ್ರಿಯೆಗಳು: 1
ಹಿಟ್ಸ್ : 356
’ಶೈನಾ ಕೈಬರಹದ ಪತ್ರಿಕೆ,’ ನನ್ನ ಮೇಲೆ ಮೋಡಿ ಮಾಡಿತು!
venkatesh's picture
Venkatesh/ವೆಂಕಟೇಶ್/ಹೊರಂಲವೆಂ
16
Dec
2009
ಪುಟ

...

ಪ್ರತಿಕ್ರಿಯೆಗಳು: 3
ಹಿಟ್ಸ್ : 1,215
ಅಭಿವ್ಯಕ್ತಿ ಸ್ವಾತಂತ್ರ್ಯ...ಮತ್ತಷ್ಟು
abdul's picture
ಅಬ್ದುಲ್ ಲತೀಫ್ ಸಯ್ಯದ್
12
Mar
2010
ಪುಟ
ಹಿಂದೂ ದೇವರುಗಳನ್ನು ವಿಲಕ್ಷಣವಾಗಿ ಚಿತ್ರಿಸಿ ಹುಸೇನ್ ತನ್ನ ದೇಶ ವನ್ನು ಕಳೆದುಕೊಂಡರು. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನಾವು ಪೂಜಿಸುವ, ಆದರಿಸುವ, ನಮ್ಮ ಬದುಕಿನಲ್ಲಿ...
ಪ್ರತಿಕ್ರಿಯೆಗಳು: 8
ಹಿಟ್ಸ್ : 1,221
'ಕೊಟ್ಟ ಭಾಷೆಗೆ ತಪ್ಪಲಾರೆನು'- ಪುಣ್ಯಕೋಟಿಯ ಕುರಿತು ಇನ್ನೊಂದು ಲೇಖನ .
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
10
Jul
2006
ಬ್ಲಾಗ್ ಬರಹ
ಪುಣ್ಯಕೋಟಿ ಗೋವಿನ ಕಥೆ ನಮಗೆಲ್ಲ ಮಕ್ಕಳ ಕಥೆಯಾಗಿ ಗೊತ್ತು. ನಮ್ಮೆಲ್ಲರ ಮೆಚ್ಚಿನದೂ ಆಗಿದೆ. ಆದರೆ ಅದಕೆ ಹೆಚ್ಚಿನ ಅರ್ಥಗಳು ಇವೆಯೇ ? ಶ್ರೀ ಪಿ. ಲಂಕೇಶರು ತಮ್ಮ ಗದ್ಯ...
ಪ್ರತಿಕ್ರಿಯೆಗಳು: 3
ಹಿಟ್ಸ್ : 1,381
ಕುವೆಂಪುರವರ ಒಂದು ಪ್ರಬಂಧ - ಬೇಟೆಗಾರರು ಕಬ್ಬಿಗರಾದ ಪ್ರಸಂಗ
hpn's picture
ಹರಿ ಪ್ರಸಾದ್ ನಾಡಿಗ್
20
Sep
2006
ಪುಟ
ಕಾಡಿನಲ್ಲಿ ಒಂದು ರಾತ್ರಿ ಕಳೆಯುವ ಸೌಭಾಗ್ಯ ದೊರೆತರೆ ಆ ಅನುಭವವನ್ನು ಹೇಗೆ ಹಂಚಿಕೊಳ್ಳುತ್ತೀರಿ? ಅಲ್ಲಿ ನೀವು ಅನುಭವಿಸಿದ ಪ್ರಕೃತಿಯ ಸಿರಿ, ಮನದ ವಿಕೃತಿ, ಭಯ, ಇವೆಲ್ಲವನ್ನೂ ಹೇಗೆ...
ಪ್ರತಿಕ್ರಿಯೆಗಳು: 2
ಹಿಟ್ಸ್ : 1,828
ನೆನಪಿನ ಚಿತ್ರಕಲಾ ಶಾಲೆ: ಭಾಗ ೨೫ -- ’ವೀರಾ ವೇಷ’
anilkumar's picture
ಎಚ್.ಎ. ಅನಿಲ್ ಕುಮಾರ್
23
Nov
2011
ಲೇಖನ

 

...

ಪ್ರತಿಕ್ರಿಯೆಗಳು: 0
ಹಿಟ್ಸ್ : 81
ಬಾ ಇಲ್ಲಿ ಸಂಭವಿಸು ....
shekar_bc's picture
chandrashekar b c
22
Aug
2011
ಲೇಖನ

 

 "ಇಲ್ಲಿ ಬಾ ಸಂಭವಿಸು ಇಂದೆನ್ನ ಹೃದಯದಲಿ,

ನಿತ್ಯವೂ ಅವತರಿಪ ಸತ್ಯಾವತಾರ!" 

      ಎಂದು ಮಹಾಕವಿ ಕುವೆಂಪು ಆ...
ಪ್ರತಿಕ್ರಿಯೆಗಳು: 5
ಹಿಟ್ಸ್ : 425
ಅಸಾಮಾನ್ಯ ದರ್ಜಿ -೧
uniquesupri's picture
ಸುಪ್ರೀತ್.ಕೆ.ಎಸ್
06
Apr
2010
ಪುಟ

ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ರಾಜನೆಂದ ಮೇಲೆ ಆಳುವುದಕ್ಕೆ ಒಂದು ರಾಜ್ಯವಿರಲೇ ಬೇಕಲ್ಲವೇ? ಸುಭೀಕ್ಷವಲ್ಲದಿದ್ದರೂ ದಾರಿದ್ಯ್ರ ಕಾಣದ ರಾಜ್ಯವೂ ಒಂದಿತ್ತು....

ಪ್ರತಿಕ್ರಿಯೆಗಳು: 12
ಹಿಟ್ಸ್ : 1,248
'ಸಂಪದ ಶ್ರಾವ್ಯ' ಈಗ ಗೂಗಲ್ ಆಂಡ್ರಾಯ್ಡ್ ಮಾರ್ಕೆಟ್ ನಲ್ಲಿ
ನಿರ್ವಹಣೆ's picture
ಸಂಪದ ನಿರ್ವಹಣೆ ತಂಡ
12
Nov
2011
ಲೇಖನ

ಕನ್ನಡದ ಮೇರು ಸಾಹಿತಿ, ಚಿಂತಕರ ಸಂದರ್ಶನಗಳಿರುವ ಆಂಡ್ರಾಯ್ಡ್ ಅಪ್ಲಿಕೇಶನ್ ಈಗ ಆಂಡ್ರಾಯ್ಡ್ ಮಾರ್ಕೆಟ್ ನಲ್ಲಿ ಲಭ್ಯ!

ಕನ್ನಡದ ಮೊಟ್ಟ ಮೊದಲ ಸಂದರ್ಶನಗಳ...

ಪ್ರತಿಕ್ರಿಯೆಗಳು: 1
ಹಿಟ್ಸ್ : 393

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಗ್ರಾಮಾಯಣ ಕಾದಂಬರಿ ಮತ್ತು ಬಾಳಿನ ಉದ್ದೇಶ

ಗ್ರಾಮಾಯಣ ಕಾದಂಬರಿ ಮತ್ತು ಬಾಳಿನ ಉದ್ದೇಶ

ರಾವಬಹಾದ್ದೂರರ 'ಗ್ರಾಮಾಯಣ'ದ ಹೆಸರು ಅಲ್ಲಲ್ಲಿ ಕೇಳಿದ್ದೆ. ಸುಮಾರು ಒಂದು ವರುಷದ ಹಿಂದೆ ಧಾರವಾಡದ ಪುಸ್ತಕದ ಅಂಗಡಿಯಲ್ಲಿ ಅದು ಕಂಡಾಗ ಓದೋಣ ಅಂತ ಖರೀದಿಸಿದ್ದೆ. ಮುಂಬೈಗೆ ಪುಸ್ತಕ ಹೊತ್ತುಕೊಂಡು ಯಾಕೆ ಬರೋದು, ಅಲ್ಲೇ ಇರಲಿ. ಧಾರವಾಡಕ್ಕೆ ಹೋದಾಗ ಓದಿದರಾಯಿತು ಅಂತ ಅಲ್ಲೇ  ಬಿಟ್ಟಿದ್ದೆ. ಮೂರು ತಿಂಗಳಿಗೊಮ್ಮೆ ಮೂರ್ನಾಲ್ಕು ದಿನ ಧಾರವಾಡಕ್ಕೆ ಹೋಗುವೆನಾದರೂ , ಅಲ್ಲಿ ಒಂದಿಷ್ಟು ಸಮಯ ಸಿಗುವದಾದರೂ, ಓದಲು ಪ್ರಯತ್ನಿಸಿದೆನಾದರೂ ಪೂರ್ತಿ ಓದಲಾಗಿರಲಿಲ್ಲ. ಒಂದು ಊರಿನ ಕತೆ ಇದು.  ಪಾತ್ರಗಳು ಬಹಳ. ಮುಖ್ಯಪಾತ್ರಗಳು ಯಾವವು ? ಮೂರನೇ ಒಂದು ಭಾಗ ಓದಿದರೂ  ಕಥೆಯ ಮುಖ್ಯ ವಿಷಯ ಅಥವಾ ಕೇಂದ್ರ  ಯಾವದು ಗೊತ್ತಾಗಲಿಲ್ಲ.ಹಾಗಾಗಿ ಓದಿ ಮುಗಿಸಲು ಯಾವದೇ ಅವಸರ ಅನಿಸಲಿಲ್ಲ. ಹಾಗಾಗಿ ಕಾದಂಬರಿಯನ್ನು ಅಲ್ಲೇ ಬಿಟ್ಟಿದ್ದೆ.  ಮತ್ತೆ ಧಾರವಾಡಕ್ಕೆ ಹೋದಾಗಲೆಲ್ಲ ಅದನ್ನು ಕೈಗೆತ್ತಿಕೊಂಡು ಓದಲು ಪ್ರಯತ್ನಿಸುತ್ತಿದ್ದೆ. ಅಂತೂ ಅರ್ಧಕ್ಕೂ ಹೆಚ್ಚು ಭಾಗದ ನಂತರ ಕಥೆಯು   ಒಬ್ಬ ಬ್ರಿಟಿಷ ಅಧಿಕಾರಿ,  ಮತ್ತೆ ಒಬ್ಬ ಮುಸ್ಲಿಂ ಅಧಿಕಾರಿ, ಒಬ್ಬ ಸಣ್ಣ ರಾಜನ ಪ್ರವೇಶವಾದಂತೆ  ಆಸಕ್ತಿಕರವಾಯಿತು. ಮುಂದೆ ಓದಿಸಿಕೊಂಡು ಹೋಯಿತು.

ಇದಕ್ಕೆ   ಪ್ರಸಿದ್ಧ ವಿಮರ್ಶಕ  ಕೀರ್ತಿನಾಥ ಕುರ್ತಕೋಟಿಯವರು ಮುನ್ನುಡಿಯನ್ನು ಬರೆದಿದ್ದಾರೆ. ಇರಲಿ. ಈಗ ಈ ಪ್ರಸಿದ್ಧ ಕಾದಂಬರಿಯ ಕೊನೆಯ ಪುಟದ ಒಂದು ಭಾಗವನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿದೆ.


    ದಾದಾನಿಗೆ ದುಃಖ ತಡೆಯಲಿಲ್ಲ. ಚಿಮಣಾಳ ದುರ್ಮರಣ , ಬಾಳಾಚಾರ್ಯರ ಸಾವು, ಲಕ್ಷ್ಮಣ ಪರದೇಶಿಯಂತೆ ಬೇರೆ ಊರು ಸೇರಿದ್ದು ಇವು ಅವನ ವೈಯಕ್ತಿಕ ದುಃಖಗಳಾಗಿದ್ದವು. ಅವುಗಳನ್ನು  ನೆನೆದು ಕಣ್ಣೀರು ಸುರಿಸಹತ್ತಿದ."ಯಾರ ಸಲುವಾಗಿ ಬದುಕಬೇಕಾಗೇತಿ, ಹೇಳು ಕರಿಯಪ್ಪಾ ? " ಎಂದು ಗೋಳಾಡಿದ.
    "ಹುಚ್ಚ ಅದೀ ನೋಡು ದಾದಾ. ನಾ ಊರಿಂದ ಬರೂದರಾಗ ನನ್ನ ಹೇಣತಿ, ಮೂರು ಮಕ್ಕಳು ಸತ್ತು ಹೋದರಂತ ಕೇಳಿದರೂ ನಾ  ನಿನ್ಹಾಂಗ ಹುಚ್ಚಾಗಲಿಲ್ಲ. ಮನಶ್ಯಾ ಇರೂತನಾ ಸಾಯತೀನಿ ಅಂತ ಅನಬಾರದು ನೋಡು.  ಇದ್ದಾಗ ಸತ್ತಾಂಗ ಇರಬಾರದು ನೋಡು. ನಾ ಇರೊಮಟಾ  ತ್ವಾಟಾ ಸಾಗಮಾಡಿ, ಧಣೇರ ಸೇವಾ ಮಾಡೂದುಲ್ಲs? ಹಾಂಗs  ನೀನೂ ಇರಬೇಕು. ಆಚಾರೆಪ್ಪಹೇಳತಿದ್ದರು, 'ದೇವರು ಜನ್ಮಾ ಕೊಟ್ಟಾಗ ನಮ್ಮಿಂದ ಏನೋ ಕೆಲಸ ಆಗ ಬೇಕಾಗಿರತೈತಿ ಅಂತ ಕೊಟ್ಟಿರತಾನು. ಯಾರ ಕೆಲಸಾನೂ ದೇವರಿಗೆ ಬ್ಯಾಡಾಗೂದುಲ್ಲ', ಸಾಯಾಕs ನಾವು ಹುಟ್ಟಿದ್ದರ, ಈಟ ದಿನಾ ಬಾಳೇ ಯಾಕ ಮಾಡಬೇಕು? ಏಳ , ಏಳ " ಎಂದು ಎಲ್ಲಿಲ್ಲದ ಅಕ್ಕರತೆಯಿಂದ ಎಬ್ಬಿಸಿದ.



ಹೌದೂ , ಆದರ ನನ್ನಿಂದ ಆಗಬೇಕಾದ ಕೆಲಸ ಏನೋ ? ಅದನ್ನ ತಿಳಕೊಳ್ಳೋದು ಹೆಂಗ ?

 

Average: 5 (2 votes)
229 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
ಸುಮ ನಾಡಿಗ್'s picture
09
Feb
2012
11:27

ಉ: ಗ್ರಾಮಾಯಣ ಕಾದಂಬರಿ ಮತ್ತು ಬಾಳಿನ ಉದ್ದೇಶ

ನಮಸ್ತೆ!
ಪುಸ್ತಕದ ಮುಖಪುಟದ scan ಇಲ್ಲಿ ಹಾಕಬಹುದೆ?

swara kamath's picture
09
Feb
2012
11:58

ಉ: ಗ್ರಾಮಾಯಣ ಕಾದಂಬರಿ ಮತ್ತು ಬಾಳಿನ ಉದ್ದೇಶ

ಸುಮ ಅವರೆ ವಂದನೆಗಳು.

'ಗ್ರಾಮಯಣ' ಪುಸ್ತಕದ ಮುಖಪುಟದ ಸ್ಕಾನ್ ಹಾಕಿದರೆ ತಪ್ಪೇನು? ಓದುಗರು ಇದರ ಬಗ್ಗೆ ಇನ್ನಷ್ಟು ಆಸಕ್ತರಾಗಬಹುದು.

shreekant.mishrikoti's picture
09
Feb
2012
12:20

ಉ: ಗ್ರಾಮಾಯಣ ಕಾದಂಬರಿ ಮತ್ತು ಬಾಳಿನ ಉದ್ದೇಶ

ಇಂಟರ್ನೆಟ್ಟಿನಲ್ಲಿ ಹುಡುಕಿದಾಗ ಸಿಕ್ಕದ್ದು ‍ ಈ ಮುಖಪುಟದ ಚಿತ್ರ
http://www.kannadast...

Rohit's picture
09
Feb
2012
11:38

ಉ: ಗ್ರಾಮಾಯಣ ಕಾದಂಬರಿ ಮತ್ತು ಬಾಳಿನ ಉದ್ದೇಶ

ಈ ಪುಸ್ತಕವು ’ಅಂಕಿತ’ ದವರಿಂದ ೨೦೦೦ರಲ್ಲಿ ಪುನರ್ ಮುದ್ರಣಗೊಂಡಿದೆ.

swara kamath's picture
09
Feb
2012
11:51

ಉ: ಗ್ರಾಮಾಯಣ ಕಾದಂಬರಿ ಮತ್ತು ಬಾಳಿನ ಉದ್ದೇಶ

ಶ್ರೀಕಾಂತ ಅವರೆ,
ನಾನು ಸಹ ಒಂದು ವರ್ಷದ ಕೆಳಗೆ 'ಗ್ರಾಮಯಣ 'ಕಾದಂಬರಿ ಓದಿ ತುಂಬಾ ಮನಸ್ಸಿಗೆ ಹಚ್ಚಿಕೊಂಡಿದ್ದೆ.ಕಾದಂಬರಿಯಲ್ಲಿನ ಪಾತ್ರಗಳ ಗುಂಗಿನಿಂದ ಹೊರ ಬರಲು ಅನೇಕ ದಿನಗಳು ಹಿಡಿಸಿದವು. ಈಗ ನನ್ನನ್ನು ಮತ್ತೊಮ್ಮೆ ಆ ದಿನಗಳಿಗೆ ಎಳೆದೊಯ್ದಿದ್ದೀರಿ.
ವಂದನೆಗಳು.

H A Patil's picture
09
Feb
2012
6:51

ಉ: ಗ್ರಾಮಾಯಣ ಕಾದಂಬರಿ ಮತ್ತು ಬಾಳಿನ ಉದ್ದೇಶ

ಶ್ರೀಕಾಂತ ಮಿಶ್ರಿಕೋಟಿ ಯವರಿಗೆ ವಂದನೆಗಳು

ನಿಮ್ಮ " ಗ್ರಾಮಾಯಣ ಕಾದಂಬರಿ ಮತ್ತು ಬಾಳಿನ ಉದ್ದೇಶ " ಬರಹ ಓದಿದೆ, ಕೊನೆಗೆ ರಾವ್ ಬಹದ್ದೂರರ ಬರಹದ ಒಂದು ಸ್ಯಾಂಪಲ್ ಕೊಟ್ಟಿದ್ದೀರಿ. ನಾನು ಈ ಕಾದಂಬರಿಯನ್ನು ಓದಿದ್ದು 1969 ರಲ್ಲಿ, ಇದು ನನ್ನನ್ನು ಬಹಳ ಆಕರ್ಷಿಸಿದ ಕಾದಂಬರಿ, ಇದು ಗುಣಮಟ್ಟದಲ್ಲಿ ಕಾನೂರು ಹೆಗ್ಗಡತಿ, ಮರಳಿ ಮಣ್ಣಿಗೆ, ಮುಂತಾದ ಕೃತಿಗಳ ಸಾಲಿನಲ್ಲಿ ನಿಲ್ಲುವ ಕೃತಿ. ಇದರ ಭಾಷಾ ಸೊಗಡು ಗಟ್ಟಿಯಾದ ಕಥಾ ಹಂದರ ಒಟ್ಟಿನಲ್ಲಿ ಇದೊಂದು ಅತ್ಯತ್ತಮ ಕೃತಿ. ಧನ್ಯವಾದಗಳು

uniquesupri's picture
09
Feb
2012
9:44

ಉ: ಗ್ರಾಮಾಯಣ ಕಾದಂಬರಿ ಮತ್ತು ಬಾಳಿನ ಉದ್ದೇಶ

ಹೌದೂ , ಆದರ ನನ್ನಿಂದ ಆಗಬೇಕಾದ ಕೆಲಸ ಏನೋ ? ಅದನ್ನ ತಿಳಕೊಳ್ಳೋದು ಹೆಂಗ ?

ಇದಕ್ಕೆ 'ಗ್ರಾಮಾಯಣ'ದ ನೀವು ನೀಡಿದ ಪ್ಯಾಸೇಜಿನಲ್ಲೇ ಉತ್ತರವಿರುವಂತಿದೆ.

ನಾ ಇರೊಮಟಾ ತ್ವಾಟಾ ಸಾಗಮಾಡಿ, ಧಣೇರ ಸೇವಾ ಮಾಡೂದುಲ್ಲs? ಹಾಂಗs ನೀನೂ ಇರಬೇಕು.

ಅಂಥ ಉತ್ತರ ನಮಗೆ ಸಾಲದು ಅನ್ನಿಸುತ್ತದೆ.‌ ಅಲ್ಲವೇ?

ಸುಮರವರು ಹೇಳಿದಂತೆ ಪುಸ್ತಕದ ಮುಖಪುಟದ ಚಿತ್ರ ಹಾಕಿ ಈ ಬರಹವನ್ನ 'ಪುಸ್ತಕ ವಿಮರ್ಶೆ' ಎಂದು ಟ್ಯಾಗ್ ಮಾಡಿದರೆ ಒಂದು ಒಳ್ಳೆಯ ಪುಸ್ತಕದ ಕುರಿತು ಮಾಹಿತಿ, ವಿಚಾರಪೂರ್ಣ ಪ್ರತಿಕ್ರಿಯೆಗಳು ಹುಡುಕುವವರಿಗೆ ಸುಲಭವಾಗಿ ದೊರೆಯುತ್ತದೆ.

venkatesh's picture
13
Feb
2012
6:04

ಉ: ಗ್ರಾಮಾಯಣ ಕಾದಂಬರಿ ಮತ್ತು ಬಾಳಿನ ಉದ್ದೇಶ

ಹೌದೂ , ಆದರ ನನ್ನಿಂದ ಆಗಬೇಕಾದ ಕೆಲಸ ಏನೋ ? ಅದನ್ನ ತಿಳಕೊಳ್ಳೋದು ಹೆಂಗ ? ಕಾದಂಬರಿಯಲ್ಲಿ ಬರುವ ಈ ಮಾತಿನ ಎಳೆಗಳು ನಮ್ಮೆಲ್ಲರನ್ನೂ ಒಮ್ಮೆ ನಮ್ಮ ನಮ್ಮ ಮೈನ ಜಿಗಿಟಿಕೊಂಡು ಖಾತ್ರಿಮಾಡಿಕೊಳ್ಳಬೇಕನ್ನಿಸಿದರೆ ಆಶ್ಚರ್ಯವೇನಲ್ಲ. ಅಗಧಿ ಚಲೋ ಓದು !