January 12, 2012 - 11:54pm
ಕೆಲವು ದಿನಗಳ ಹಿಂದೆ ನಮ್ಮ ಕೋಣೆಯಿಂದ ಕಂಡ ಈ ಬೆಳಗಿನ ನೋಟವನ್ನು ನನ್ನ ಹೆಂಡತಿ ಸೆರೆಹಿಡಿದಾಗ, ಅದರ ಬಗ್ಗೆ ಬರೆದ ಒಂದು ಕುಸುಮ ಷಟ್ಪದಿ ಇಲ್ಲಿದೆ :
ಮಾರ್ಗಶಿರ ಕಳೆದಾಯ್ತು
ಚಿಗುರೆಲ್ಲ ಮರೆಯಾಯ್ತು
ಮುಗುಳುನಗೆ ಹೇಗಿಂದು ಕಂಡಿತಿಲ್ಲಿ?
ಆಗಸದಿ ಕುಣಿದಿಹುದು
ಹೊಂಗಿರಣ ನೇಸರನ
ಮುಗಿಲಿನಾ ಚಿತ್ತಾರ ರಂಗವಲ್ಲಿ!
-ಹಂಸಾನಂದಿ
ಚಿತ್ರ ಕೃಪೆ: Poornima's Clicks
ಸರಣಿ:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:










ಪ್ರತಿಕ್ರಿಯೆಗಳು
ಉ: ಚಳಿಗಾಲದಲೊಂದು ಮುಂಬೆಳಗು
ಕವನ ಹಾಗು ಚಿತ್ರ
ಎರಡು ಸುಂದರ
-ಪಾರ್ಥಸಾರಥಿ
ಉ: ಚಳಿಗಾಲದಲೊಂದು ಮುಂಬೆಳಗು
ಧನ್ಯವಾದಗಳು ಪಾರ್ಥಸಾರಥಿ ಅವರೆ