25
October
2014

ಸಂಪದ - Sampada

'ಹೊಸ ಚಿಗುರು, ಹಳೆ ಬೇರು'

ಚಾರಣದ ಸಂಭ್ರಮ

March 4, 2012 - 10:15pm
ಗಣೇಶ
4.333335

ಚಾರಣ ಹೋಗೋಣ  ಅಂದರೆ ಈಗ ಯಾರೂ ಬರುತ್ತಿಲ್ಲ. ಯುವಕರಿಗೆ ಬರುವ ಮನಸ್ಸಿದ್ದರೂ ಅವರ ತಂದೆ-ತಾಯಿ ಬಿಡುತ್ತಿಲ್ಲ.  ಯಾರೂ ಬರದಿದ್ದರೇನಂತೆ ನಾನು ಹೋಗುವುದು ಹೋಗೋದೇ ಅಂದು, ಮೊನ್ನೆ ಒಂದು ದಿನ ಬೆಳ್ಳಂಬೆಳಗ್ಗೆ ಯಾವ ತಯಾರಿಯೂ ಇಲ್ಲದೇ ಹೊರಟೆನು. ಮಣ್ಣಿನ ದಾರಿ -******************


ಕಲ್ಲಿನ ಗುಡ್ಡೆಯ ಸಮೀಪ ಬಂದಾಗ ಅಲ್ಲೊಂದು ದೇವಸ್ಥಾನ ಕಾಣಿಸಿತು- 


*******************


ಎಡಬದಿಯಲ್ಲಿ ಕಡಿದಾದ ಬಂಡೆಗಲ್ಲುಗಳು- *************ಅದನ್ನು ಹತ್ತಬೇಕಾಗಿಲ್ಲ.


 ಮೆಟ್ಟಲುಗಳ ದಾರಿ ಪಕ್ಕದಲ್ಲಿಯೇ ಇದೆ-


******************


ದೇವಾಲಯಕ್ಕೆ ಬೀಗ. ಹೊರಗಿನಿಂದಲೇ ನಮಸ್ಕರಿಸಿದೆ.


***********************


ಬಂಡೆಗಲ್ಲಿನ ಮೇಲೆ ಕುಳಿತು ದಣಿವಾರಿಸಿಕೊಂಡೆ- 


****************


ಬಂಡೆಗಲ್ಲಿನಿಂದ ಇಳಿದುಕೊಂಡು ಬರುವಾಗ ಪಕ್ಕದಲ್ಲಿ ಒಂದು ಕೊಳವೂ ಕಾಣಿಸಿತು-ಕೊನೆಯ ಚಿತ್ರ ನೋಡುವಾಗ ನಿಮಗೆ ಗೊತ್ತಾಗಿರಬಹುದು. ಚಾರಣವೂ ಇಲ್ಲ. ಏನೂ ಇಲ್ಲ- ಬೆಂಗಳೂರಿನಲ್ಲೇ ಸಂಭ್ರಮ ಇಂಜಿನಿಯರಿಂಗ್ ಕಾಲೇಜ್ ಸಮೀಪ ಇರುವ ಒಂದು ಚಿಕ್ಕ ಕಲ್ಲು ಬಂಡೆ. ಅದರಲ್ಲೊಂದು ಪುಟಾಣಿ ದೇವಾಲಯ. ಟಿ.ವಿಯವರ ಕಣ್ಣಿಗೆ ಬಿದ್ದು, ಅವರು ಕೆಲವು ಪವಾಡಗಳನ್ನು ಸೃಷ್ಠಿಸಿದರೆ ಜನಸಾಗರವೇ ಹರಿದು ಬರಬಹುದು :) ಟಿ.ವಿಯವರು ಬರುವುದಾದರೆ ನನ್ನದೊಂದು ಕತೆ ಹೇಳುವೆ- ದೇವಸ್ಥಾನದೊಳಗೆ ಹೋಗಿಲ್ಲ,ದೇವರಲ್ಲೂ ಬೇಡಿಲ್ಲ, ಅದೇ ದಿನ ಮಗಳು ಎಂಬಿಬಿಎಸ್ ಪಾಸ್ ಎಂದು ರಿಸಲ್ಟ್ ಬಂತು.


-ಗಣೇಶ.


 


 


 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by manju787 on
ಅ೦ಡಾ೦ಡಭ೦ಡ ಬ್ರಹ್ಮಾ೦ಡ ಸ್ವಾಮಿಗಳನ್ನು ಈ ದೇವಾಲಯಕ್ಕೊಮ್ಮೆ ಭೇಟಿ ಕೊಡುವ೦ತೆ ಭಿನ್ನವಿಸೋಣವೇ ಗನೇ’ಸಣ್ಣ’?? :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on
ಹ್ಹ..ಹ್ಹ.. ಇದು ಹಾಗೂ ಉಂಟೇ..ಇತ್ಯಾದಿಗಿಂತ ಸೂಪರ್ ಐಡಿಯಾ. ಶನಿ/ ರಾಹು/ ಕೇತು.. ದೋಷ ಪರಿಹಾರಕ್ಕೆ ಇದೇ ದಾರಿ ಎಂದು ಸ್ವಾಮಿಗಳು ಒಮ್ಮೆ ಹೇಳಿದರಾಯಿತು..ಭಕ್ತ/ಕ್ತೆಯರ ಸಾಲು. ಆದರೆ ಸ್ವಾಮಿಗಳು ಸ್ವಲ್ಪ ಕಾಸ್ಟ್ಲಿ ಮಂಜಣ್ಣ.. :) -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on
ಟಿ.ವಿಯವರ ಕಣ್ಣಿಗೆ ಬಿದ್ದು, ಅವರು ಕೆಲವು ಪವಾಡಗಳನ್ನು ಸೃಷ್ಠಿಸಿದರೆ ಜನಸಾಗರವೇ ಹರಿದು ಬರಬಹುದು :) ಟಿ.ವಿಯವರು ಬರುವುದಾದರೆ ನನ್ನದೊಂದು ಕತೆ ಹೇಳುವೆ- ದೇವಸ್ಥಾನದೊಳಗೆ ಹೋಗಿಲ್ಲ,ದೇವರಲ್ಲೂ ಬೇಡಿಲ್ಲ, ಅದೇ ದಿನ ಮಗಳು ಎಂಬಿಬಿಎಸ್ ಪಾಸ್ ಎಂದು ರಿಸಲ್ಟ್ ಬಂತು. :))) ---------------------------------------------------------------------------------------------------- ಶೀರ್ಷಿಕೆ ಓದಿ ನಂಗೆ!! ನಮ್ಮ ಗಣೇಶ್ ಅಣ್ಣ ಅದ್ಯಾವ ಬೆಟ್ಟಕ್ಕೆ ಚಾರಣ ಹೋಗಿರಬಹುದು? ಆ ಧುರ್ಧೈವೀ ಬೆಟ್ಟ! ಯಾವ್ದೂ? ಅಂತ!! ಅಲ್ಲದೇ ಕಳೆದ ವಾರದಲ್ಲಿ ಎಲ್ಲಿಯೂ ಭೂಕಂಪ ಆದ ಮಾಹಿತಿ .............. ಲ:))) ಆಮೇಲೆ ಪೂರ್ತ ಬರಹ ಓದಿ :))))) ಚೆನ್ನಾಗಿದೆ ಚೆನ್ನಾಗಿದೆ... ನಾ ಮೇಲೆ ಹಾಕಿದ ನಿಮ್ಮದೇ ಸಾಲುಗಳು ಪೂರ್ಣ ಸತ್ಯ... . ನಿಮ್ಮ ಬರಹಗಳ ಹಿನ್ನೆಲೆ ಗಮನ್ಸಿರುವ ನನಗೆ ಒಂದು ವಿಶೇಷತೆ ಗೊತ್ತಾಗಿದೆ???? ಡಿಫರೆಂಟು ಎಲ್ಲರನ್ನ ಸೆಳೆಯೋದು ನಿಮ್ಮನನ್ ಸೆಳೆಯೋಲ , ಆದರೆ ಎಲ್ರಿಗೂ ಸಾಮಾನ್ಯ ಅನ್ನಿಸೋದು ನಿಮಗೆ ಅಸಾಮಾನ್ಯ ಸಂಗತಿ. ಹೀಗಾಗಿ ಬೆಟ್ಟ ಗುಡ್ಡ ಕಲ್ಲು ಮಣ್ಣು ನೀರು ಪಾರು! ಹಕ್ಕಿ ಪಕ್ಕಿ ಹೂವು ಪಾವು ಗಿಡ ಬಳ್ಳಿ ಹು ಳು -ಪಳು ನದಿ ಪದಿ ಇತ್ಯಾದಿ ಬಗ್ಗೆ ಒಳ್ಳೊಳ್ಲೆ ಲೇಖನ ಬರಹ ಬರೆವಿರಿ... ನಿಮ್ಮ ಬರಹದ್ದೊಂದಿಗೆ ನನಗೆ ಈ ಬೆಂಗಳೋರಿನಲ್ಲೇ ಇರುವ ಚಿಕ್ಕ ಪುಟ್ಟ ಬೆಟ್ಟ -ಗುಡ್ಡಗಳ -ಕಲ್ಲುಗಳ ಪರಿಚಯ ಆಯ್ತು.. ಹಾಗೊಂದು ಚಿಕ್ಕ ಬೆಟ್ಟ ನಾ ನೋಡಿದ್ದು - ಬೆಂಗಳೂರಿನ ಕ್ರೈಸ್ಟ್ ಕಾಲೇಜ್ ಸಮೀಪ ಇದೆ ಅಲ್ಲೂ ದೇವಸ್ಥಾನ ವೊಂದಿದೆ... ಅದೇ ನನಗೆ ಹಿಡಿಸಿದ್ದು.... ಶುಭವಾಗಲಿ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on
ಸಪ್ತಗಿರಿವಾಸಿಯವರೆ, >>>ಆ ಧುರ್ಧೈವೀ ಬೆಟ್ಟ! ಯಾವ್ದೂ? ಅಂತ!! ಅಲ್ಲದೇ ಕಳೆದ ವಾರದಲ್ಲಿ ಎಲ್ಲಿಯೂ ಭೂಕಂಪ ಆದ ಮಾಹಿತಿ .............. ಲ:))) -ದೆಹಲಿಯಲ್ಲಿ ಭೂಕಂಪವಾದದ್ದಕ್ಕೂ ನಾನು ಬೆಟ್ಟ ಹತ್ತಿದ್ದಕ್ಕೂ ಸಂಬಂಧ ಕಲ್ಪಿಸಬೇಡಿ. ನಡೆಯುವಾಗ ಸ್ವಲ್ಪ ಉತ್ತರದ ಕಡೆ ಮಾಲಿದೆ ಅಷ್ಟೇ..ಕೂಡಲೇ ಸಾವರಿಸಿಕೊಂಡೆ. ಅದಕ್ಕೇ ಹೆಚ್ಚಿನ ಹಾನಿಯೇನಾಗಿಲ್ಲ. :) ತಮ್ಮ ಮೆಚ್ಚುಗೆಗೆ ಧನ್ಯವಾದಗಳು. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on
:())))))) ನನ್ನ ಗುರುತು ಆನೆ ಸೋಲಿಗೆ ಗಣೇಶ್ ಕಾರಣ ಅಂತ ಮಾಯವತಿ ಹೇಳಿದ್ದು ಸುದ್ಧಿಯೇ ಆಗಿಲ್ಲ!!! ಆನೆ ನಡೆದದ್ದೆ ದಾರಿ- ಮಾತು--- ; ; ; ; ; ; ; ಯಾಕೋ ಸುಳ್ಳಾಯ್ತು ಅನ್ಸುತ್ತೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on
ಸಪ್ತಗಿರಿವಾಸಿಯವರೆ, >>>ಆನೆ ನಡೆದದ್ದೆ ದಾರಿ- ಮಾತು---.....ಯಾಕೋ ಸುಳ್ಳಾಯ್ತು ಅನ್ಸುತ್ತೆ! -ಗಾದೆ ಎಂದೂ ಸುಳ್ಳಾಗೊಲ್ಲ. ಆನೆ ನಡೆದದ್ದೇ ದಾರಿ.. ಆದರೆ ಆನೆಗೆ ಮುಸುಕು ಹಾಕಿ, ಸೈಕಲ್‌ಗೆ ದಾರಿ ಬಿಟ್ಟ, ಇಲೆಕ್ಷನ್ ಕಮಿಷನ್‌ದೇ ತಪ್ಪು. ಈ ಮುಸುಕಿನ ಭಯದಿಂದಲೇನಾ ಉತ್ತರ..ದ ಕಡೆಗೆ ತಲೆನೇ ಹಾಕಿಲ್ಲ. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on
:()))) ಗಣೇಶ್ ಅಣ್ಣ- ನಿಮ್ಮ ಈ ಮಾರುತ್ತರಗಳನ್ನ ನಾ ಈಗಸ್ಟೆ ನೋಡಿದೆ- ಓದಿದೆ ಅದ್ಕೆ ಪ್ರತಿಕ್ರಿಯಿಸುತ್ತಿರುವೆ.... ನಿಮ ಪ್ರತಿಕ್ರಿಯೆಗೆ ನಾ :())))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by abdul on
ಗಣೇಶ್, ನಿಮ್ಮ 'pseudo-ಚಾರಣ' ಚೆನ್ನಾಗಿದೆ. ವೈದ್ಯಕೀಯ ಪಾಸ್ ಮಾಡಿದ್ದಕ್ಕೆ ಮಗಳಿಗೆ ನನ್ನ ಅಭಿನಂದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by smurthygr on
+1
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on
ಅಬ್ದುಲ್ ಮತ್ತು ಶ್ರೀನಿವಾಸ್, ಧನ್ಯವಾದಗಳು. ನಾನು "ನಿಶಾಚರ" ಗಣೇಶನಾಗಲು, ಸಂಪದ ಸೇರ‍ಲು ಪರೋಕ್ಷವಾಗಿ ನನ್ನ ಮಗಳೇ ಕಾರಣ. ಪಿ.ಯು.ಸಿ. ಪರೀಕ್ಷೆ ಸಮಯದಲ್ಲಿ ರಾತ್ರಿ ಬಹಳ ಹೊತ್ತು ಅವಳು ಓದುತ್ತಿದ್ದಳು. ಆವಾಗ ನಾನೂ ಜತೆಯಲ್ಲಿ ಕುಳಿತಿರುತ್ತಿದ್ದೆ. ತೂಕಡಿಕೆ ತಪ್ಪಿಸಲು "ನೆಟ್" ಒಳಗೆ ಹೊಕ್ಕೆ. ನೇರ ಸಂಪದದ ಬಲೆಗೆ ಬಿದ್ದೆ. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on
ಆ ಪುಟ್ಟ ಬೆಟ್ಟ ನೋಡ್ತಾ ಇದ್ರೆ ನನಗು ಅದನ್ನ ಚಾರಣಮಾಡುವಾಸೆ "ಅಂದ ಹಾಗೆ ಅ ಗುಡ್ಡ ಎಲ್ಲಿದೆ?" . . ಅಂತ ಕೇಳೊಲ್ಲ ಬಿಡಿ. ಕೇಳಿದ್ರೆ ನೀವು ನನ್ನನ್ನು ಆ ಗುಡ್ಡ ಸುತ್ತಿಸ್ತೀರೆ ಹೊರ್ತು , ಪ್ರಶ್ನೆಗೆ ಉತ್ತರ್ಸಲ್ಲ ಅಂತ ಗೊತ್ತಿದೆ. ಏನೆ ಆಗಿ ನೀವು ಆ ಬಂಡೆಯ ಮೇಲೆ 'ರಾಮಾಂಜನೇಯ ಯುದ್ದ" ಸಿನಿಮಾದ 'ಉದಯಕುಮಾರ್ ' ಶೈಲಿಯಲ್ಲಿ ಕುಳಿತಿರೊ ಚಿತ್ರವನ್ನು ಹಿಂದಿನಿಂದ ಆದರು ತೆಗೆದು ಹಾಕಬಹುದಿತ್ತು. ಒಳ್ಳೆ ಮಜಾ ಬರೋದು ‍‍_ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on
>>"ಅಂದ ಹಾಗೆ ಅ ಗುಡ್ಡ ಎಲ್ಲಿದೆ?". ಅಂತ ಕೇಳೊಲ್ಲ ಬಿಡಿ. ಕೇಳಿದ್ರೆ ನೀವು ನನ್ನನ್ನು ಆ ಗುಡ್ಡ ಸುತ್ತಿಸ್ತೀರೆ ಹೊರ್ತು , ಪ್ರಶ್ನೆಗೆ ಉತ್ತರ್ಸಲ್ಲ ಅಂತ ಗೊತ್ತಿದೆ. -ಚಕ್ರವ್ಯೂಹವೇ ಲೆಕ್ಕಕ್ಕಿಲ್ಲದ ಪಾರ್ಥಸಾರಥಿಗೆ ಈ ಒಂದೆರಡು ಸುತ್ತು ಯಾವ ಲೆಕ್ಕ? >>>'ರಾಮಾಂಜನೇಯ ಯುದ್ದ" ಸಿನಿಮಾದ 'ಉದಯಕುಮಾರ್ ' ಶೈಲಿಯಲ್ಲಿ ಕುಳಿತಿರೊ ಚಿತ್ರವನ್ನು ಹಿಂದಿನಿಂದ ಆದರು ತೆಗೆದು ಹಾಕಬಹುದಿತ್ತು. ಒಳ್ಳೆ ಮಜಾ ಬರೋದು.. -ರಾಮಾಂಜನೇಯದ ಪೋಸು ಯಾಕೆ? ನೀವು ಬಂದಾಗ ಪಾರ್ಥಾಂಜನೇಯ ಯುದ್ಧನೇ ಮಾಡೋಣ,ಆ ಕಲ್ಲಿನ ಮೇಲೆ. ಆಗ ಇರೋದು ಮಜಾ..:) -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on
:()))) ನಾವ್ ಕಾಯ್ತಿರುವೆವು..............
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by basho aras on
ಫೊಟೋ ಚೆನ್ನಾಗಿದೆ. ಬೀಗ ಹಾಕಿದ ದೇವಸ್ಥಾನದ ದೇವರಿಗೆ ಹೊರಗಿನಿಂದಲೇ ನಮಸ್ಕರಿಸಿ ಮಗಳು ಎಮ್.ಬಿ.ಬಿ.ಎಸ್ ಪಾಸ್ ಆದ ವರ ಪಡೆದಿರಿ. ಇನ್ನು ಒಳಗೆ ಹೋಗಿ ಹರಕೆ ಹೋತ್ತಿದ್ದರೆ ರ‍್ಯಾಂಕ್ ಬರುತ್ತಿದ್ದಳು ಅಂತ ದೇವಸ್ಥಾನದ ಅರ್ಚಕರು ಹೇಳಬಹುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on
ಶೋಭಾ ಅರಸ್ ಅವರೆ, ಮಗಳು ಎಮ್.ಬಿ.ಬಿ.ಎಸ್ ಪಾಸ್ ಆದಳು ಅಷ್ಟೇ. ಎಮ್.ಬಿ.ಬಿ.ಎಸ್ ಪಾಸ್ ಆದ "ವರ" ಪಡೆದಿಲ್ಲಾ :) -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Shreekar on
ವಿಡಂಬನೆ ಎಂದಿನಂತೆ ಚೆನ್ನಾಗಿದೆ. >>>>> "ಎಮ್.ಬಿ.ಬಿ.ಎಸ್ ಪಾಸ್ ಆದ "ವರ" ಪಡೆದಿಲ್ಲಾ :) " ಇನ್ನೂ ಇಂಟ್ ರ್ನ್ ಶಿಪ್ ಮುಗಿಯ ಬೇಕಲ್ಲ. ಅದಾದ ಮೇಲೆ ಎಮ್ ಡಿ ಮಾಡಬೇಡವೇ? ವರಗಳಿಗೇನು ಬರವೇ, ಹುಡುಕಬೇಕಾದರೆ ಹೇಳಿ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on
>>>ಇನ್ನೂ ಇಂಟ್ ರ್ನ್ ಶಿಪ್ ಮುಗಿಯ ಬೇಕಲ್ಲ. ಅದಾದ ಮೇಲೆ ಎಮ್ ಡಿ ಮಾಡಬೇಡವೇ? +೧ >>ವರಗಳಿಗೇನು ಬರವೇ, ಹುಡುಕಬೇಕಾದರೆ ಹೇಳಿ! ನಿಮ್ಮ ಪ್ರೀತಿಗೆ ಧನ್ಯವಾದಗಳು. ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಟ್ವಿಟ್ಟರಿನಲ್ಲಿ ಸಂಪದ