21
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಚಿತ್ರಸಂತೆ ಇನ್ನೂ ನೆನಪಾಗುತ್ತಿದೆ

June 11, 2011 - 8:22pm
sasi.hebbar


ಚಿತ್ರಸಂತೆಯು ಬೆಂಗಳೂರಿನ ಒಂದು ಅಪರೂಪದ ಅನುಭವ ಎನ್ನಲೇಬೇಕು. ಆ ದಿನ ಕ್ಲಿಕ್ಕಿಸಿದ ಚಿತ್ರಗಳನ್ನು ನೋಡುತ್ತಿದ್ದಂತೆ, ಒಂದು ಪೂರ್ತಿ ರಸ್ತೆಯನ್ನು ಅಂದು ಕಲಾವಿದರ ಮತ್ತು ಕಲಾಪ್ರೇಮಿಗಳ ವಶಕ್ಕೆ ಕೊಟ್ಟದ್ದು ಅದ್ಭುತ ಎನಿಸಿತು. ಕುಮಾರಪಾರ್ಕ್ ರಸ್ತೆಯಲ್ಲಿ ಅಂದು ಜನ,ಜನ,ಡೊಳ್ಳು ಕುಣಿತ, ಚಿತ್ರಗಳ ರಾಶಿ. ಪಟ ಕುಣಿತ. ಆ ದಿನದ ಬಿಸಿಲು ಬಿರುಸಾಗಿರಲಿಲ್ಲ, ಪೂರ್ತಿ ಬಣ್ಣ ಬಣ್ಣವಾಗಿತ್ತು! ಕಲಾವಿದರ ಪಾಲಿಗೆ ಹಬ್ಬ, ಕಲಾಪ್ರೇಮಿಗಳಿಗೂ ಹಬ್ಬ, ಉಚಿತವಾಗಿ ಅಪರೂಪದ ಚಿತ್ರಗಳನ್ನು ನೋಡುವ ಅವಕಾಶ. ಈ ಮಧ್ಯೆ ಹಣ್ಣು ಮಾರುವ ಗಾಡಿಯನ್ನು ನಿಲ್ಲಿಸಿಕೊಂಡಿದ್ದ ಮಹಿಳೆಯೂ ಒಂದು ಚಿತ್ರದ ಚೌಕಟ್ಟಿನಲ್ಲಿ ಸೆರೆಯಾದಳು! ಕುದುರೆಯ ಚಿತ್ರವನ್ನು ರಚಿಸಿ ರಸ್ತೆಯ ಪಕ್ಕ ಇಟ್ಟುಕೊಂಡಿದ್ದ ಕಲಾವಿದರೊಬ್ಬರು ಮಾತ್ರ ತನ್ನ ಚಿತ್ರವನ್ನು ಕ್ಲಿಕ್ಕಿಸಲು ಅವಕಾಶ ನೀಡಲಿಲ್ಲ, ಹೊರತು ಬೇರಾರೂ ಎಷ್ಟು ಚಿತ್ರ ತೆಗೆದರೂ ಸುಮ್ಮನಿದ್ದರು. ಆ ವರ್ಣಮಯ ಬಿಸಿಲಿನಲ್ಲಿ ಕಳೆದ ಎರಡು ಗಂಟೆ, ಎರಡು ನಿಮಿಷದಂತೆ ಕಳೆದು ಹೋಯ್ತು ! ಮುಂದಿನ ವರ್ಷ ಪೂರ್ತಿ ದಿನ ಇಲ್ಲಿ ಕಳೆಯಬೇಕು ಎಂದು ನಾವು ಮಾತನಾಡಿಕೊಂಡು, ವಾಪಸಾದೆವು. ಆ ದಿನ ಕ್ಲಿಕ್ಕಿಸಿದ ಕೆಲವು ಚಿತ್ರಗಳನ್ನು ನಿಮಗೆ ತೋರಿಸಲೇ ಬೇಕು ಎಂದು ಇಲ್ಲಿ ಜೋಡಿಸಿರುವೆ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by ಸುಮ ನಾಡಿಗ್ on

ಚಿತ್ರ ಸಂತೆಯ ಚಿತ್ರಗಳು ಚೆನ್ನಾಗಿ ಮೂಡಿ ಬಂದಿವೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hpn on

ಶಶಿಧರ್, ಚಿತ್ರಸಂತೆ ನಿಜಕ್ಕೂ ಅಪರೂಪದ ಅನುಭವ.

ಕಲಾವಿದರಿಗೆ ತಮ್ಮ ಕಲೆಯೇ ಬ್ರೆಡ್ ಎಂಡ್ ಬಟ್ಟರ್. ಅವರ ಕೃತಿಗಳ ಚಿತ್ರ ತೆಗೆದು ಯಾರದ್ದು ಎಂದೂ‌ ಹೇಳದೆ ಇಂಟರ್ನೆಟ್ಟಿನಲ್ಲಿ ಹಾಕಿಬಿಟ್ಟರೆ ಕಲಾವಿದ ಪಟ್ಟ ಶ್ರಮಕ್ಕೆ ಸರಿಯಾಗದು. ಫೋಟೋ ತೆಗೆಯಲು ಬಿಡದ ಕಲಾವಿದರ ಮನಸ್ಸು ಅರ್ಥ ಆಗುವಂಥದ್ದೆ.

ಕಳೆದ ವರ್ಷದ ಚಿತ್ರಸಂತೆಯಲ್ಲಿ ನಾನು ಕೆಲವು ತೆಗೆದ ಫೋಟೋಗಳು ಇಲ್ಲಿವೆ:
http://www.flickr.co...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sasi.hebbar on

ನಿಜ, ನಾಡಿಗರೆ. ಚಿತ್ರವನ್ನು ಕ್ಲಿಕ್ಕಿಸಲು ಅವಕಾಶ ನೀಡದ ಆ ಕಲಾವಿದರ ಕುರಿತು ನನಗೆ ಗೌರವವಿದೆ. ಬೇಸರವಂತೂ ಖಂಡಿತಾ ಇಲ್ಲ. ಅಲ್ಲಿನ ಸುಂದರ ಕಲಾಕೃತಿಗಳ ಕೆಲವು ಫೋಟೋಗಳು ನನ್ನ ಬಳಿ ಇದ್ದರೂ, ಕಲಾವಿದರ ಹೆಸರು ಗೊತ್ತಿಲ್ಲದೇ, ಅದನ್ನು ಅಪ್ಲೋಡ್ ಮಾಡಿದರೆ ಅಸಮಂಜಸವೆಂದು, ಸುಮ್ಮನಾಗಿರುವೆ. ಧನ್ಯವಾದಗಳು, ನಿಮಗೆ ಮತ್ತು ಸುಮಾ ನಾಡಿಗ್ ಅವರಿಗೆ. -ಶಶಿಧರ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.