18
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

'ಚುಟುಕುಗಳು' (12)

July 22, 2012 - 12:50pm
swara kamath

ಶ್ರೀಯುತ ಹನುಮಂತ ಅನಂತ ಪಾಟೀಲರ ಚುಟುಕು-12

ಜೀವನ ಒಂದು

ಸಂಕೀರ್ಣ ಕೋಟೆ

ಮುಗಿಯದ ಚಕ್ರವ್ಯೂಹ

ಅದು ದಾರಿ ಬಿಟ್ಟು

ಕೊಡುವುದು

ಅಸಮಾನ್ಯ ಶೂರರಿಗೆ

ಧೀರರಿಗೆ

ಈ ಜೀವನ ಗೆಲ್ಲಲು

ಅನೇಕರು ರಕ್ತತರ್ಪಣ

ಕೊಟ್ಟು ನೆಲಕ್ಕೊರಗಿದ್ದಾರೆ

***

ಅಂಗವಿಕಲರೂ

ಸುಂದರ ದಾಂಪತ್ಯ

ನಡೆಸಬಲ್ಲರು

ವಿಕಲತೆ

ನೋಡುವ ಕಣ್ಣುಗಳಲ್ಲಿದೆಯೆ

ಹೊರತು ಪ್ರೀತಿಸುವ

ಹೃದಯಗಳಲ್ಲಿ ಅಲ್ಲ

***

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by venkatb83 on

"ವಿಕಲತೆ ನೋಡುವ
ಕಣ್ಣುಗಳಲ್ಲಿದೆಯೆ
ಹೊರತು ಪ್ರೀತಿಸುವ
ಹೃದಯಗಳಲ್ಲಿ ಅಲ್ಲ"

+1

ಹಿರಿಯರೇ
ಅನ್ಯಥಾ ಭಾವಿಸದಿದ್ದರೆ ನಾ ಒಂದು ಕೇಳುವೆ...

ಅದೊಮ್ಮೆ ನೀವು ಮತ್ತು ಇನ್ನೊಬ್ಬ ಹಿರಿಯರಾದ ಪಾಟೀಲ್ರು ಒಂದೇ ಸಿಸ್ಟಂ ಉಪಯೋಗಿಸುವುದು ಅಂತ ಹೇಳಿದ್ದೀರಿ.. ಆದಾಗಲೇ ಪಾಟೀಲರು ಬಹು ಚುಟುಕಗಳನ್ನು ಬರೆದಿರುವುದರಿಂದ, ಈ ಚುಟುಕವನ್ನು ಅವರು(ಪಾಟೀಲರು) ಬರೆದು ಮತ್ತು ನೀವು ಆಕಾಸ್ಮಾತ್ತಾಗಿ ನಿಮ್ಮ ಲಾಗ್ ಇನ್ ಐ ಡಿ ಮೂಲಕ ಸೇರಿಸಿದಿರಾ?

ಈ ಹೊರತಾಗಿ ಚುಟುಕ ಅಪಾರ ಅರ್ಥ ಹೊಂದಿದೆ.. ಮತ್ತು ಅರ್ಥಪೂರ್ಣವಾಗಿದೆ...ಹಿಡಿಸಿತು....
೨ ನೇ ಚುಟುಕ ಅಂತ್ಯ ನನಗೆ ಸೌಂದರ್ಯ ನೋಡುಗರ ಕಣ್ಣಲಿದೆ ಎಂಬ ಆಂಗ್ಲ ಉಕ್ತಿ ನೆನ್‌ಪಿಸ್ತು...!!

ಶುಭವಾಗಲಿ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by swara kamath on

ಸಪ್ತಗಿರಿ ಅವರೆ ನಮಸ್ಕಾರಗಳು
ಖಂಡಿತವಾಗಿ ನಿಮ್ಮ ಅನಿಸಿಕೆ ಸರಿ,ಅವಸರದಲ್ಲಿ ಅವರ ಪೆನ್ ಡ್ರೈವ್ ನಿಂದ ಕಾಪಿ ಮಾಡಿ ಸಂಪದಕ್ಕೆ ಹಾಕುವಾಗ ಅವರ ಹೆಸರಿಗೆ ಲಾಗ್ ಇನ್ ಆಗದೆ ಈ ಅಚಾತುರ್ಯ ವಾಯಿತು,

ಎಷ್ಟಾದರೂ ಕಾಗೆ ಕಾಗೆಯೆ ಹೊರತು ಕೋಗಿಲೆ ಆಗಲು ಸಾದ್ಯವೆ?

ವಿಶಯ ಗಮನಕ್ಕೆ ಬಂದಾಕ್ಷಣ ಪಾಟೀಲರ ಹೆಸರನ್ನು ಮೇಲೆ ಸೇರಿಸಿದ್ದೇನೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ಕಾಮತರೆ ಇಂತವೆಲ್ಲ ಆಗುತ್ತೆ ಬಿಡಿ ಅವಸರದಲ್ಲಿ
ನಾನು ಒಮ್ಮೆ ಬೇರೆ ಐಡಿಯಲ್ಲಿ ಹಾಕಿ ನಗುವಿಗೆ ಒಳಗಾಗಿದ್ದೆ

ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by swara kamath on

ಪಾರ್ಥ ಅವರೆ,
ತಮ್ಮ ಹಾಗೂ ಶ್ರೀಧರ ಬಂಡ್ರಿ .ಸಪ್ತಗಿರಿ ಮತ್ತು ಪಾಟೀಲರ ಪ್ರತಿಕ್ರಿಯೆಗಳಿಂದ ನನ್ನ ಕ್ಷೋಭೆ ಗೊಂಡ ಮನಸ್ಸಿಗೆ ಕೊಂಚ ಸಮಾಧಾನ ವಾಯಿತು.
ವಂದನೆಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by H A Patil on

ಎನ್ ರಮೇಶ ಕಾಮತರಿಗೆ ವಂದನೆಗಳು

' ಚುಟುಕುಗಳ ' ಕುರಿತು ನಿಮ್ಮ ಪ್ರತಿಕ್ರಿಯೆ ಓದಿದೆ, ಈ ಅಚಾತುರ್ಯ ಎಲ್ಲರಿಗೂ ಆಗುವಂತಹುದೆ, ನೀವು ಬಹಳ ಸೂಕ್ಷ್ಮ ಮತಿಗಳು ನನಗೆ ಗೊತ್ತು, ಆದರೆ <<< ಎಷ್ಟಾದರೂ .........ಆಗಲು ಸಾಧ್ಯವೆ ? >>> ಎಂದು ನೀವು ಬರೆದುದನ್ನು ನೋಡಿ ವಿಷಾದ ವಾಯಿತು. ನೀವು ಅಷ್ಟು ಬೇಸರಪಟ್ಟುಕೊಳ್ಳಬೇಕಾದ ಪ್ರಮೇಯವಿಲ್ಲ. ನೀವು ಆ ವಿಷಾದ ರಾಗದಿಂದ ಹೊರಬನ್ನಿ, ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by swara kamath on

ಪಾಟೀಲರಿಗೆ ನಮಸ್ಕಾರಗಳು
ತಾವು ಬರೆದ ಸಮಾಧಾನದ ನುಡಿಗಳಿಂದ ವಿಕ್ಷಿಪ್ತ ಗೊಂಡ ಮನಸ್ಸು ತಿಳಿಯಾಯಿತು.
ವಂದನೆಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by H A Patil on

ಸಪ್ತಗಿರಿಯವರಿಗೆ ವಂದನೆಗಳು

' ಚುಟುಕುಗಳ ' ಕುರಿತು ನಿಮ್ಮ ಪ್ರತಿಕ್ರಿಯೆ ಓದಿದೆ, ಈ ಬಗ್ಗೆ ಕಾಮತರ ಸ್ಪಷ್ಟೀಕರಣಕ್ಕೆ ಪ್ರತಿಕ್ರಿಯಿಸಿದ್ದೇನೆ. ಇದು ತಾಂತ್ರಿಕ ದೋಷದಿಂದಾದುದು, ಚುಟುಕುಗಳ ಮೆಚ್ಚುಗೆಗೆ ಧನ್ಯವಾದಗಳು,

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

ಹಿರಿಯರೆ ಅನ್ಯಥ ಭಾವಿಸದಿರಿ...

ನೀವೆನೂ ಸಾಮನ್ಯರಲ್ಲ , ಅಪರೂಪದ ಛಿತ್ರ ಮತ್ತು ಮಾಹಿತಿ ನೀಡುವಿರಿ..
ಅವರು(ಪಾಟೀಲರು) ಕವನ ಕ್ಛೆತ್ರ್ದಲ್ಲಿ ನೀವ್ ಈ ಛಿತ್ರ ಬರಹ ಕ್ಛೆತ್ರದಲಿ ಪ್ರವೀಣರು...

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by H A Patil on

ಸಪ್ತಗಿರಿಯವರಿಗೆ ವಂದನೆಗಳು

ಕಾಮತರಿಗೆ ನೀವು ಬರೆದ ಪ್ರತಿಕ್ರಿಯೆ ಓದಿದೆ, ಅವರು ಒಳ್ಳೆಯ ಬರಹಗಾರರು ಕೂಡ, ಅವರು ಕವನ ಲೇಖನಗಳನ್ನು ಬರೆಯಬಲ್ಲ ಸಾಮರ್ಥ್ಯ ಅವರಿಗಿದೆ, ಬರೆಯಲು ಮನಸು ಮಾಡೆಬೇಕಷ್ಟೆ. ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by swara kamath on

ನಿಮ್ಮ ಅಭಿಮಾನದ ಮಾತಿಗೆ ನನ್ನ ನಮನಗಳು ಸಪ್ತಗಿರಿ ಅವರೆ.
ವಂದನೆಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chikku123 on

ಚೆನ್ನಾಗಿದೆ ಸರ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by H A Patil on

ಚೇತನ ಕೋಡುವಳ್ಳಿಯವರಿಗೆ ವಂದನೆಗಳು, ಚುಟುಕುಗಳ ಮೆಚ್ಚುಗೆಗೆ ಧನ್ಯವಾದಗಳು..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

ಕಾಮತ್ ಸರ್ ಮತ್ತು ಹನುಮಂತ ಪಾಟೀಲ್ ಸರ್,
ಯಾರು ಪ್ರಕಟಿಸಿದರೇನು, ಕವಿತೆಗಳು ಒಳ್ಳೆಯ ಸಂದೇಶವನ್ನು ಸಾರುತ್ತಿವೆ.
ಇಬ್ಬರೂ ಹಿರಿಯರಿಗೆ ವಂದನೆಗಳು,
ಶ್ರೀಧರ್ ಬಂಡ್ರಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by swara kamath on

ನಿಜ ಶ್ರೀಧರ ಅವರೆ,ಪಾಟೀಲರ ಚುಟುಕು ಗಳಾಗಲಿ,ಕವನಗಳಾಗಲಿ ಅರ್ಥಪೂರ್ಣವಾಗಿರುತ್ತವೆ.
ವಂದನೆಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.