July 9, 2012 - 12:35pm
ಕಾಲವೆಂದರೆ
ಒಂದು ಜೀವಿಯ ಹುಟ್ಟಿನಿಂದ
ಪ್ರಾರಂಭವಾಗಿ
ಸಾವಿನಲ್ಲಿ ಮುಕ್ತಾಯ ಗೊಳ್ಳುವ
ಕ್ರಿಯೆ ಮಾತ್ರ ಅಲ್ಲ
ಅದೊಂದು ನಿರಂತರ
ಜೀವನ ಪ್ರವಾಹ
***
ಆಕಾಶದುದ್ದ
ರೆಕ್ಕೆ ಬಿಚ್ಚಿ ಹಾರಿದರೂ
ಹದ್ದು ಹದ್ದೆ
ಗರುಡ ಗರುಡನೆ
ಸಮೀಕರಣ ಅಸಾಧ್ಯ
***
ಭಾವಗಳು ಅರಳಿ
ಸೂಕ್ಷ್ಮ ಪ್ರತಿಮೆಗಳಾಗಿ
ರೂಪ ಪಡೆಯುವುದೆ
ಕವನಗಳ ಹುಟ್ಟು
***
ಬ್ಲಾಗ್ ವರ್ಗಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಚುಟುಕುಗಳು(9)
ಪಾಟೀಲರಿಗೆ ವಂದನೆಗಳು,
<<ಕಾಲವೆಂದರೆ
ಒಂದು ಜೀವಿಯ ಹುಟ್ಟಿನಿಂದ
ಪ್ರಾರಂಭವಾಗಿ
ಸಾವಿನಲ್ಲಿ ಮುಕ್ತಾಯ ಗೊಳ್ಳುವ
ಕ್ರಿಯೆ ಮಾತ್ರ ಅಲ್ಲ
ಅದೊಂದು ನಿರಂತರ
ಜೀವನ ಪ್ರಭಾವ>>
ಕಾಲದ ಕುರಿತು ತಮ್ಮ ಅನಿಸಿಕೆ ಮೆಚ್ಚುಗೆ ಅಯಿತು.
ಚುಟುಕು ಕವನಗಳ ಸರಣಿ ಹೀಗೆ ಮುಂದುವರೆಯಿಲಿ.
ಉ: ಚುಟುಕುಗಳು(9)
ಎನ್ ರಮೇಶ ಕಾಮತರಿಗೆ ವಂದನೆಗಳು
ಚುಟುಕುಗಳ ಕುರಿತು ಅದರ ಸಾಲುಗಳನ್ನು ನಮೂದಿಸಿ ಬರೆದೆ ಪ್ರತಿಕ್ರಿಯೆ ನೋಡಿ ಸಂತಸವಾಯಿತು, ಈ ಸರಣಿ ಬರೆಯುವಾಗ ಈ ಪ್ರಾಕಾರವನ್ನು ಸಂಪದಿಗರು ಮೆಚ್ಚುವರೆ ಎಂಬ ಆತಂಕವಿತ್ತು, ನಿಮ್ಮೆಲ್ಲ ಸಂಪದಿಗರ ಮೆಚ್ಚುಗೆ ನನಗೆ ಬರೆಯಲು ಪ್ರೇರಣೆ, ಧನ್ಯವಾದಗಳು..
ಉ: ಚುಟುಕುಗಳು(9) : ಹಿರಿಯರೆ
ಹಿರಿಯರೆ
3 ಛುಟುಕಗಳು ಸಖತ್...
2 ನೆದು ಅರ್ಠಪುರ್ಣ..
\|/
ಉ: ಚುಟುಕುಗಳು(9) : ಹಿರಿಯರೆ
ಸಪ್ತಗಿರಿ ಯವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿದೆ, ಚುಟುಕುಗಳ ಮೆಚ್ಚುಗೆಗೆ ಧನ್ಯವಾದಗಳು.
ಉ: ಚುಟುಕುಗಳು(9)
ಕಾಲವೆಂದರೆ
ಒಂದು ಜೀವಿಯ ಹುಟ್ಟಿನಿಂದ
ಪ್ರಾರಂಭವಾಗಿ
ಸಾವಿನಲ್ಲಿ ಮುಕ್ತಾಯ ಗೊಳ್ಳುವ
ಕ್ರಿಯೆ ಮಾತ್ರ ಅಲ್ಲ
ಅದೊಂದು ನಿರಂತರ
ಜೀವನ ಪ್ರಭಾವ
ಕಾಲವೆಂದರೆ ಜೀವಿಯ ಹುಟ್ಟಿಗಿಂತ ಮೊದಲು ಇತ್ತು ಸಾವಿನ ನಂತರವು ಇರುತ್ತದೆ
ಹಾಗಾಗೆ ಅದು ಅನಂತ , ಆದಿ ಅಂತ್ಯವಿಲ್ಲದ ಒಂದು ಭಾವ.
ಸೂರ್ಯ ಚಂದ್ರ ಭೂಮಿಗಿಂತ ಬಹು ಮುಂಚಿನಿಂದ ಇದ್ದು ಇವರೆಲ್ಲರ ನಂತರವು ಇರುವ ಅರ್ಥವೆ ಆಗದ ಭಾವ.
ಉ: ಚುಟುಕುಗಳು(9)
ಪಾರ್ಥ ಸಾರಥಿ ಯವರಿಗೆ ವಂದನೆಗಳು
ನಿಮ್ಮ ಪ್ರತಿಕ್ರಿಯೆ ಸರಿ ಕಾಲ ಅನಂತ, ಮೆಚ್ಚುಗೆಗೆ ಧನ್ಯವಾದಗಳು