ಈ ಹಾಡು ರಾಜೇಶ್ ಖನ್ನಾರ ಮಾಸ್ಟರ್ ಪೀಸ್ ಚಿತ್ರಗಳಲ್ಲಿ ಮೊದಲನೆಯ ಸಾಲಿನಲ್ಲಿ ನಿಲ್ಲುವಂತಹದ್ದು ಎನ್ನಬಹುದಾದ "ಆನಂದ್(1971)" ಚಿತ್ರದ್ದು. ಈ ಚಿತ್ರ ನನ್ನ "ಆಲ್ ಟೈಮ್ ಫೇವರಿಟ್" ಕೂಡ ಹೌದು. ಹಾಗೆಯೇ, ಮನ್ನಾ ಡೇ ಹಾಡಿರುವ ಈ ಹಾಡು ಕೂಡ. ಈ ಚಿತ್ರ ಅಂದಿನ ಕಾಲದಲ್ಲಿ ಮಾಮಾಲಾಗಿ ಕಾಣಬಹುದಾಗಿದ್ದ ಸೇಡು, ಹಗೆತನ, ರೊಮ್ಯಾಂಟಿಕ್ ಮುಂತಾದ ಧಾಟಿಯ ಚಿತ್ರಗಳನ್ನು ಮೀರಿದ ಚಿತ್ರವಾಗಿತ್ತು. ಒಂದು ರೀತಿಯ "ಆಫ್ ಬೀಟ್" ಎಂದು ಕರೆಯಬಹುದಾದ ಚಿತ್ರ ಕೂಡ ಹೌದು. ಇದರಲ್ಲಿ ಯಾವ ವಿಲನ್ನೂ ಇಲ್ಲ, ಡಿಶುಂ ಡಿಶುಂ ಕೂಡ ಇಲ್ಲ. ಇದೆಲ್ಲದಕ್ಕಿಂತ ಹೊರತಾಗಿ ಹೃಶಿಕೇಶ್ ಮುಖರ್ಜಿ ತನ್ನ ಜೀವನಾನುಭವವನ್ನ ರಾಜೇಶ್ ಖನ್ನಾ ಮೂಲಕ ಕಾಣಲು ಯತ್ನಿಸಿದರನೋ ಅನ್ನಿಸುವಶ್ಚು ಗಾಢ ಭಾವನೆಗಳುಳ್ಳ ಚಿತ್ರ. ಇಡೀ ಜೀವನದ ಫಿಲಾಸಫಿಯನ್ನ ಎಶ್ಟು ಮಧುರವಾಗಿ, ಅರ್ಥಪೂರ್ಣವಾಗಿ, ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆಯಂದರೆ, ಅದನ್ನು ಚಿತ್ರ ನೋಡಿಯೇ ತಿಳಿಯಬೇಕು. ಇನ್ನು ಹಾಡುಗಳ ಬಗ್ಗೆಯಂತೂ ಹೇಳುವ ಹಾಗೇ ಇಲ್ಲ. ಒಂದೊಂದೂ ಮಧುರ, ಅತಿ ಮಧುರ. ಕಹೀ ದೂರ್ ಜಬ್ ದಿನ್ ಢಲ್ ಜಾಯೇ, ಮೈ ತೇರೆ ಲಿಯೇ ಹೀ ಸಾತ್ ರಂಗ್ ಕೆ ಸಪನೆ ಚುನೇ, ಜಿಂದಗಿ ಕೈಸಿ ಹೈ ಪಹೇಲಿ ಹಾಯೆ ಇತ್ಯಾದಿ.
ಆನಂದ್ ಚಿತ್ರದ ವಿಶೇಶಗಳು ಅನೇಕ. ಅಂದಿನ ಕಾಲದ ಸೂಪರ್ ಸ್ಟಾರ್ ರಾಜೇಶ್ ಖನ್ನಾ, ಆನಂತರ ಹಿಂದಿ ಚಿತ್ರರಂಗವನ್ನು ಆಳಿದ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಒಟ್ಟಾಗಿ "ಜಿಗ್ರಿ ದೋಸ್ತ್" ಗಳಾಗಿ ನಟಿಸಿದ್ದು. ರಾಜೇಶ್ ಖನ್ನಾ "ಬಾಬು ಮೊಶಾಯ್" ಎಂದು ಪ್ರೀತಿಯಿಂದ ಕರೆಯುತ್ತಿದ್ದದ್ದು ಆ ಚಿತ್ರ ನೋಡಿದ ಎಲ್ಲರಲ್ಲೂ ಈಗಲೂ ಗುಯ್ ಗುಡುತಿರುತ್ತದೆ. ತೀರಾ ಇತ್ತೀಚಿನ ಹ್ಯಾವೆಲ್ ಫ್ಯಾನ್ ಜಾಹೀರಾತಿನಲ್ಲೂ ಇದನ್ನ ಬಳಸಿಕೊಳ್ಳಲಾಗಿದೆ. ಈ ಜಾಹೀರಾತಿನಲ್ಲಿ ಖನ್ನಾ "ಬಾಬ್ ಮೊಶಾಯ್, ಮೇರಾ ಫ್ಯಾನ್ ಮುಜ್ಸೆ ಕೋಯಿ ನಹಿ ಚೀನ್ ಸಕ್ತಾ" ಎಂದು ತನ್ನ ಫೇಮಸ್ ಸ್ಠೈಲಾದ ಕತ್ತನ್ನ ಅಲುಗಾಡಿಸಿಕೊಂಡು ಹೇಳುವುದು ಈಗಲೂ ಕಣ್ಣ ಮುಂದೆ ಬರುತ್ತದೆ. ಆ ಕಾಲಕ್ಕೆ ಎಲ್ಲರಿಗೂ ಫೇವರಿಟ್ ಆಗಿದ್ದ, ಸುಂದರನಾಗಿದ್ದ ರಾಜೇಶ್ ಖನ್ನಾ ಈ ಜಾಹೀರಾತಿನ ವೇಳೆಗೆ ತನ್ನ ಕೆಟ್ಟ ಜೀವನ ಶೈಲಿ, ಹೆಂಡತಿ ಮಕ್ಕಳಿಂದ ದೂರವಾಗಿ ಒಬ್ಬಂಟಿಯಾಗಿ ಕಾಯಿಲೆಯಿಂದ ನರಳುತ್ತ ಕೃಶವಾಗಿದ್ದ. ಹಿಂದಿ ಚಿತ್ರರಂಗದ ಮೊದಲ ಸೂಪರ್ ಸ್ಟಾರ್ ಎಂದೇ ಎಂದೂ ಕರೆಸಿಕೊಳ್ಳುವ ಖನ್ನಾ ಕೊನೆಯ ದಿನಗಳನ್ನ ಹೀಗೆ ಕಳೆದಿದ್ದು ಮಾತ್ರ ವಿಪರ್ಯಾಸ. ಇದನ್ನೇ ಏನೋ ಆತ ಮುನ್ನೋಡಿ "ಜಿಂದಗಿ ಕೈಸಿ ಹೈ ಪಹೇಲಿ ಹಾಯೆ..." ಎಂದು ಆನಂದ್ ನಲ್ಲಿ ಹಾಡಿದ್ದನೇನೋ ಅನ್ನಿಸುತ್ತೆ. ಆನಂದ್ ಚಿತ್ರಕ್ಕಾಗಿ ರಾಜೇಶ್ ಖನ್ನಾಗೆ ಫಿಲ್ಮ್ ಫೇರ್ ಬೆಸ್ಟ್ ಆಕ್ಟರ್ ಪ್ರಶಸ್ತಿ ಸಿಕ್ಕರೆ, ಅಮಿತಾಭ್ ಗೆ ಬೆಸ್ಚ್ ಸಪೋರ್ಟಿಂಗ್ ಆಕ್ಟರ್ ಪ್ರಶಸ್ತಿ ಸಿಕ್ಕಿತ್ತು. ಆನಂತರ ಇದೇ ಜೋಡಿ ನಮಕ್ ಹರಾಮ್ ನಲ್ಲೂ ನಟಿಸಿತ್ತು. ಆ ಚಿತ್ರದ "ದಿಯೇ ಜಲ್ ತೆ ಹೈ ಫೂಲ್ ಖಿಲ್ ತೆ ಹೈ, ಬಡಿ ಮುಶುಕಿಲ್ ಸೆ ಮಗರ್ ದುನಿಯ ಮೇ ದೋಸ್ತ್ ಮಿಲ್ತೆ ಹೈ" ಸ್ನೇಹದ ಮಹತ್ವವನ್ನು ಎತ್ತಿ ಹಿಡಿಯುವ ಮಧುರ ಗೀತೆ.









ಪ್ರತಿಕ್ರಿಯೆಗಳು
ಉ: "ಜಿಂದಗಿ ಕೈಸಿ ಹೈ ಪಹೇಲಿ ಆಯಿ..."
ಭಾವಪೂರ್ಣ ಶ್ರದ್ಢಾ೦ಜಲಿ...
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.
ಉ: "ಜಿಂದಗಿ ಕೈಸಿ ಹೈ ಪಹೇಲಿ ಆಯಿ..."
.ಶಶಿಕುಮಾರ್ ಅವರೆ,
ಹಿಂದಿ ಚಿತ್ರರಂಗದ ಪ್ರಥಮ ಸೂಪರ್ ಸ್ಟಾರ್ ಬಗ್ಗೆ ಬರೆದಿರುವ ಈ ಸಮಯೋಚಿತ ಮತ್ತು ಮಾಹಿತಿಪೂರ್ಣ ಲೇಖನಕ್ಕೆ ಅಭಿನಂದನೆಗಳು. ದೇವರು ಈ ಸೂಪರ್ ಸ್ಟಾರ್ ನ ಆತ್ಮಕ್ಕೆ ಚಿರಶಾಂತಿಯನ್ನು ನೀಡಲೆಂದು ಪ್ರಾರ್ಥಿಸೋಣ.
ಉ: "ಜಿಂದಗಿ ಕೈಸಿ ಹೈ ಪಹೇಲಿ ಆಯಿ..."
+1
ಆ ಹಾಡೂ ನ0ಗೇ ಬಹೂ ಇಸ್ಟಾ..
\|/
ಉ: "ಜಿಂದಗಿ ಕೈಸಿ ಹೈ ಪಹೇಲಿ ಆಯಿ..."
ಕಭಿ ತೊ ಹಸಾಯೆ, ಕಭಿ ಯೆ ರುಲಾಯೆ..
ಉ: "ಜಿಂದಗಿ ಕೈಸಿ ಹೈ ಪಹೇಲಿ ಆಯಿ..."
ಪ್ರಿಯ ಶ್ರೀಧರ್ ರವರೇ,
ನಮಸ್ಕಾರ. ಹೇಗಿದ್ದೀರಿ? ಸದ್ಯಕ್ಕೆ ನಾವು ಮಾಡಬಹುದಾದದ್ದು ಅದೊಂದೆ. ರಾಜೇಶ್ ಖನ್ನಾ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುವುದು.
ಉ: "ಜಿಂದಗಿ ಕೈಸಿ ಹೈ ಪಹೇಲಿ ಆಯಿ..."
ಶಶಿಕುಮಾರ್ ಅವರೆ,
ಪಾಟೀಲರಂತೆ ತಾವೂ ರಾಜೇಶ್ ಖನ್ನಾ ಬಗ್ಗೆ ಬರೆದ ಲೇಖನ ಬಹಳ ಚೆನ್ನಾಗಿದೆ. ನಟರು ಸಾಯುವುದಿಲ್ಲ. ಅವರು ಅವರ ಚಿತ್ರಗಳ ಮೂಲಕ ಎಂದಿಗೂ ನಮ್ಮ ಕಣ್ಣ ಮುಂದೆ ಇರುವರು.
ಆನಂದ್- ಚಿತ್ರದಲ್ಲಿ ರಾಜೇಶ್ ಅಭಿನಯ ಸೂಪರ್.
>>>ಫೇಮಸ್ ಸ್ಠೈಲಾದ ಕತ್ತನ್ನ ಅಲುಗಾಡಿಸಿಕೊಂಡು ಹೇಳುವುದು....
+೧ ರಾಜೇಶ್ ಖನ್ನಾ ಸ್ಟೈಲ್- ಮರೆಯಲುಂಟೇ?
ಗಣೇಶ.
ಉ: "ಜಿಂದಗಿ ಕೈಸಿ ಹೈ ಪಹೇಲಿ ಆಯಿ..."
ನಮಸ್ಕಾರ ಗಣೇಶ್ ರವರೇ, ರಾಜೇಶ್ ಖನ್ನಾರನ್ನ ನಮ್ಮ ಹಿಂದಿನ ಹಾಗೂ ನಮ್ಮ ಪೀಳಿಗೆಯವರು ಎಂದೂ ಮರೆಯಲು ಸಾಧ್ಯವಿಲ್ಲ. ಯಾಕಂದ್ರೆ, ಅವರ ಚಿತ್ರಗಳು ಸದಾ ನಮ್ಮೊಂದಿಗಿರುತ್ತವೆ.
ಉ: "ಜಿಂದಗಿ ಕೈಸಿ ಹೈ ಪಹೇಲಿ ಆಯಿ..."
ಶಶಿಕುಮಾರ್ ರವರೇ, ವಂದನೆಗಳು. ರಾಜೇಶ ಖನ್ನಾ ವಿಮರ್ಶಿತ ಲೇಖನ ತುಂಬಾ ಚನ್ನಾಗಿದೆ.
ಉ: "ಜಿಂದಗಿ ಕೈಸಿ ಹೈ ಪಹೇಲಿ ಆಯಿ..."
ನಮಸ್ಕಾರ ಲಕ್ಶ್ಮೀಕಾಂತರವರೇ, ನೀವು ನನ್ನ ಬರೆಹ ಮೆಚ್ಚಿದ್ದಕ್ಕೆ ನನ್ನಿ.
ಉ: "ಜಿಂದಗಿ ಕೈಸಿ ಹೈ ಪಹೇಲಿ ಹಾಯೆ..."
ಶಶಿ ಕುಮಾರ ರವರಿಗೆ ವಂದನೆಗಳು,
' ಜಿಂದಗಿ ಕೈಸಿ ಹೈ ಪಹೇಲಿ ಹಾಯೆ ' ಒಂದು ಅತ್ಯುತ್ತಮ ಲೇಖನ,, ರಾಜೇಶ ಖನ್ನಾ ಬಗ್ಗೆ ಅಪ್ಯಾಯಮಾನವಾಗಿ ಬರೆದಿದ್ದೀರಿ. ಒಳ್ಳೆಯ ವಿಮರ್ಶಾತ್ಮಕ ಬರಹ, ಧನ್ಯವಾದಗಳು.
ಉ: "ಜಿಂದಗಿ ಕೈಸಿ ಹೈ ಪಹೇಲಿ ಹಾಯೆ..."
ನಮಸ್ಕಾರ ಪಾಟೀಲರೇ, ತಾವು ನನ್ನ ಬರೆಹ ಮೆಚ್ಚಿದ್ದಕ್ಕೆ ನನ್ನಿ. ಬರೆಯೋದ್ದಕ್ಕೆ ತುಂಬ ಇದೆ. ಆದರೆ, ಆ ದಿನ ರಾಜೇಶ್ ಖನ್ನಾ ತೀರಿಕೊಂಡ ದಿನವಾದ್ದರಿಂದ, ಅಲ್ಲದೆ 5:30ರ ಒಳಗೆ ನನ್ನ ಬರೆಹ ಮುಗಿಸಬೇಕಾದ್ದರಿಂದ ಇಶ್ಟು ಮಾತ್ರ ಬರೆಯಲು ಸಾಧ್ಯವಾಯಿತು. ಮತ್ತೊಮ್ಮೆ ಯಾವಾಗಲಾದರೂ ಬಿಡುವಾದರೆ, ಬರೆಯುವ ಮನಸಾದರೆ, ಬರೆಯುತ್ತೇನೆ.