25
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

'ಟೊರಾಂಟೋನಗರದ ರಿಚಿ ಅವೆನ್ಯೂ ಪಾರ್ಕ್'

August 17, 2012 - 9:55pm
venkatesh

ಈ ಉದ್ಯಾನ, ನಗರದ ಪಶ್ಚಿಮದಲ್ಲಿರುವ ಡಂಡಾ ಸ್ಟ್ರೀಟ್ (ಪ) ದಲ್ಲಿದೆ. ಹಲವಾರು ಮಕ್ಕಳ ಉದ್ಯಾನಗಳಿವೆ. ಇಲ್ಲಿನ ಮಕ್ಕಳು ತಮ್ಮ ಮನೆಯಿಂದ ಆಟಿಕೆಗಳನ್ನು ತಂದು ಇಲ್ಲೇ ಬಿಟ್ಟುಹೋಗುತ್ತಾರೆ. (ಬಹುಪಾಲು ಜನ) ಪೋಷಕರು ತಮ್ಮ ಮಕ್ಕಳನ್ನು ತಂದು ಬಿಟ್ಟಮೇಲೆ ಅವರಿಗೆ ಪೂರ್ಣ ಸ್ವಾತಂತ್ರ್ಯ ಕೊಡುತ್ತಾರೆ. ಪಕ್ಕದಲ್ಲೇ ಇದ್ದು ಅವರಿಗೆ ನೆರವಾಗುವುದನ್ನು ಬಿಟ್ಟರೆ, ಅತಿ ಮುದ್ದು ಇಲ್ಲವೇ ಇಲ್ಲ. ಬಿದ್ದ ಮಕ್ಕಳು ಅಳದಂತೆ ನಿಗಾವಹಿಸುತ್ತಾರೆ. ಆಟಿಕೆಗಳು ಬೇಕಾದಷ್ಟಿವೆ. ತಮ್ಮ ತಮ್ಮ ಆಸಕ್ತಿ, ಹಾಗೂ ಶಕ್ತಿಯ ಆಧಾರದಮೇಲೆ ಮಕ್ಕಳು ಆಡುತ್ತವೆ. ಅಲ್ಲೇ ಕೂತು ವೀಕ್ಶಿಸುತ್ತಿದ್ದ ನಮಗೆ ಬಹಳ ಮುದಕೊಟ್ಟ ಸ್ಥಾನವಿದು. ಅಲ್ಲೇ ಒಂದು ಬೆಕ್ಕು ಬಂದು ಕೂತಿತ್ತು. ಮಕ್ಕಳ ಸ್ವಭಾವ ಎಲ್ಲಾ ಕಡೆಯೂ ಒಂದೇ ಅಲ್ಲವೇ ? ಅವು ಬಂದು ಬೆಕ್ಕನ್ನು ಪೀಡಿಸುವ ಕೆಲಸ ನಡೆದೇ ಇತ್ತು. ನಾವು ಅದರ ಚಿತ್ರವನ್ನು ತೆಗೆದು ನಮ್ಮಗೆಳೆಯರಿಗೆ ತೋರಿಸುತ್ತಿದ್ದೇವೆ. ಟೊರಾಂಟೋ ಬೆಕ್ಕೆನ್ನುವುದನ್ನು ಬಿಟ್ಟರೆ ಇದರಲ್ಲಿ ವಿಶೇಷವೇನಿದೆ ?!

ಇಲ್ಲ ವಿಶೇಷವಿದೆ. ಈ ದೇಶಗಳಲ್ಲಿ ಮಕ್ಕಳು ಹಾಗೂ ನಾಯಿ-ಬೆಕ್ಕುಗಳಿಗಿರುವ ’ವಿ.ಐ.ಪಿ. ಆದ್ಯತೆ’ ಯಾರಿಗೂ ಇಲ್ಲ ! ಯಾರೋ ಹೇಳಿದ್ದು ಜ್ಞಾಪಕಕ್ಕೆ ಬಂತು. " ಅಮೆರಿಕ ಕೆನಡಾದಲ್ಲಿ ಒಂದು ನಾಯಿಯಾಗಿ ಹುಟ್ಟಬೇಕು" ಎಂದು. ನಾನು ಇದನ್ನು ಒಪ್ಪದಿದ್ದರೂ, ಈ ಪ್ರಾಣಿಗಳ ಅದೃಷ್ಟ ಬಹು ಪ್ರಶಂಸನೀಯವೆನ್ನುವ ಮಾತಿನಲ್ಲಿ ಬಹಳ ಸತ್ಯವಿದೆ ! 

 

 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (4 votes)
To prevent automated spam submissions leave this field empty.