23
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ತೋಚಿದ್ದು- ಗೀಚಿದ್ದು.......!!

April 15, 2012 - 2:09pm
venkatb83

ಆಗಸದಿ  ಮೀನುಗೋ ನಕ್ಚತ್ರವ ನೋಡಿ

ಖುಷಿ ಪಡಿ
ಕೈ ಚಾಚಿ ಬಾಚಿಕೊಳ್ಳ ಹೋಗಬೇಡಿ!!
ಕೈಗೆ ಸಿಗದೆ ಆದೀತು ನಿರಾಶೆ!!
 
ತಂಗಾಳಿಯ ಆಸ್ವಾದಿಸಿ
ಅದೇ ನನ್ನದಾಗಲಿ ಎಂಬ ಸ್ವಾರ್ಥ ಬೇಡ!!
ಉಸಿರು ಕಟ್ಟಿ ಹೋದೀತು!!
 
ಸಿಗಬಹುದು-ಸಿಕ್ತಾರೆ ಅನ್ನೋ ಕಲ್ಪನೆ ಇರಲಿ
ಹಾಗೆ ಸಿಕ್ಕದೇ ಹೋದರೆ,
 ಹೋದರೆ ಹೋಗಲಿ ಬಿಡಿ ಎಂಬ ಭಾವ ಇರಲಿ!!
 
ಸಿಕ್ತಾರೆ ಅನ್ನೋ ಕಲ್ಪನೆಯೂ
ಸಿಗದಿರೆ ,ಹೋದರೆ ಹೋಯ್ತು
ಅನ್ನೋ ಭಾವವೂ 
 
ಮನದಲಿ ಛಲವೂ
ಮೈನಲ್ಲಿ ಬಲವೂ
ಆದ್ಕಾಗಿ ಗುರಿಯೂ ಇರಲಿ!!

===================
 
ಚಿತ್ರ ಮೂಲ:
 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by kavinagaraj on

ಭಾವಸುಂದರ!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

ಹಿರಿಯರೇ
------------------------------
ಭಾವಸುಂದರ!!
------------------------------

ನಾ ಧನ್ಯ!!

ತಮ್ಮ ಪ್ರತಿಕ್ರಿಯೆಗೆ ವಂದನೆಗಳು....

ಶುಭವಾಗಲಿ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by geethavision on

ಸಪ್ತಗಿರಿವಾಸ ರವರೇ,

ನೀವು ನನ್ನ ಪುಟ್ಲಿಂಗು ಪ್ರಸಂಗಕ್ಕೆ ನೀಡಿರುವ ಸುದೀರ್ಘ ಪ್ರತಿಕ್ರಿಯೆಯಿಂದಾಗಿ ನಿಮ್ಮ ಕುರಿತು ತಿಳಿಯುವ ಕುತೂಹಲವಾಯಿತು. ನಾ ಅರಿತಂತೆ ಸಪ್ತಗಿರಿವಾಸ ನಿಮ್ಮ ನಿಜ ನಾಮಧೇಯವಾಗಿರದು. ಒಂದುವೇಳೆ ಅದೇ ನಿಮ್ಮ ನಿಜನಾಮವಾಗಿದ್ದರೆ ತುಂಬಾ ಸಂತೋಷ. ತಮ್ಮ ವ್ಱುತ್ತಿಗೂ ಪ್ರವ್ಱುತ್ತಿಗೂ ವ್ಯತ್ಯಾಸವಿದ್ಧಾಗ್ಯೂ ಅದರಣೀಯ, ಅನುಕರಣೀಯ. ನಿಮ್ಮ ಕವನ ಸೊಗಸಾಗಿದೆ. ತೋಚಿದ್ದೇ ಇಷ್ಟು ಸ್ವಾರಸ್ಯವಾಗಿದ್ದ್ರೆ ಇನ್ನು ಸೋಚಿಸಿದ್ದು ಹ್ಯಾಗಿದ್ದೀತು ಎಂಬ ಆಲೋಚನೆ ನನ್ನದು. ಮುಂದುವರೆಸಿ, ಶುಭವಾಗಲಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by nanjunda on

ಸಪ್ತಗಿರಿವಾಸರವರೇ,
ತೋಚಿದ್ದೇ ಗೀಚಿ ಚೆನ್ನಾಗಿದೆ. ತೋಚಿದ್ದೆಲ್ಲಾ ಗೀಚಿರಿ. ವಾಸ್ತವವಲ್ಲವೆಂದು ಕಲ್ಪಿಸದಿದ್ದರೆ ಹೇಗೆ, ಸಿಕ್ಕರೆ ಸಿಗಲಿ. ಸಿಗದಿದ್ದರೆ ಏನಂತೆ ಎಂಬ ಭಾವ ಮಾತ್ರ ವಾಸ್ತವವಾಗಿಯೂ ಅಳವಡಿಸಿಕೊಳ್ಳಬೇಕಾದುದು. ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

ಸಿಗದಿದ್ದರೆ ಏನಂತೆ ಎಂಬ ಭಾವ ಮಾತ್ರ ವಾಸ್ತವವಾಗಿಯೂ ಅಳವಡಿಸಿಕೊಳ್ಳಬೇಕಾದುದು.

----------------------------------------------------------------------------------------------

ನಂಜುಂಡ ಅವ್ರೆ
ಎಂತಹ ಒಳ್ಳೆಯ ಮಾತು ಹೇಳಿದಿರಿ...

ಅದನ್ನು ಅಳವಡಿಸಿಕೊಂಡರೆ ಜೀವನ ಸರಾಗ..

ತಮ್ಮ ಪ್ರತಿಕ್ರಿಯೆಗೆ ವಂದನೆಗಳು...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

ಎಂ.ಎಸ್. ಮುರಳಿಧರ್ ಅವ್ರೆ

--------------------------------------------------------------------------
ನಾ ಅರಿತಂತೆ ಸಪ್ತಗಿರಿವಾಸ ನಿಮ್ಮ ನಿಜ ನಾಮಧೇಯವಾಗಿರದು.
---------------------------------------------------------------------------
:())

ನನ್ನ ಹೆಸರು ವೆಂಕಟೇಶ....
ಬರಹನಾಮವನ್ನ ಸಪ್ತಗಿರಿವಾಸಿ ಅಂತ ಇಟ್ಟುಕೊಂಡೆ...

ಪುಟ್ಲಿಂಗು ಪ್ರಸಂಗದಲ್ಲಿ ನೀವ್ ಬರೆದ ಯೋಚನಾ ಧಾಟಿ ಹಿಡಿಸಿತು...
ಮತ್ತು ಅದರಲ್ಲಿರುವುದು ನಿಜ ಕೂಡ.. ಹಣ್ಣ ಅವ್ರ ಹೆಸರು ಹೇಳಿ ಜಯಕಾರ ಹಾಕಿ ಮನೆಗೆ ಹೋದ ಜನ ಆಮೇಲೆ ಎಲ್ಲಿ ಹೋದರು? ಮತ್ತೇಕೆ ಅದೇ ಸಂಖ್ಯೆಯಲ್ಲಿ ಸೇರಲಿಲ್ಲ? ಸೇರುತ್ತಿಲ್ಲ? ಅದೇ ಸೋಜಿಗ....!!

----------------------------------------------------------------------------------------------------------

ತೋಚಿದ್ದೇ ಇಷ್ಟು ಸ್ವಾರಸ್ಯವಾಗಿದ್ದ್ರೆ ಇನ್ನು ಸೋಚಿಸಿದ್ದು ಹ್ಯಾಗಿದ್ದೀತು ಎಂಬ ಆಲೋಚನೆ ನನ್ನದು.
----------------------------------------------------------------------------------------------------------

ನಿಮಗೊಂದು ಹೇಳಲೇ?

ಈ ಮೇಲಿನ ಬರಹದ ಸಾಲುಗಳು ಹುಟ್ಟಿದ್ದು 'ತೋಚಿದ್ದಕ್ಕೆ' ಮಾತ್ರ ಅಲ್ಲ, ಮೊನ್ನೆ ನಮ್ಮ ಹಳ್ಳಿ ಗೆ ಹೋಗಿದ್ದಾಗ 'ಅನಿರೀಕ್ಷಿತ' ವಿದ್ಯಮಾನವೊನ್ದಕ್ಕೆ ನಾನೇ ಸಾಕ್ಷಿ ಆಗಬೇಕಾಯ್ತು..
ಅದನ್ನ ನಾ ಊಹಿಸಿರಲೇ ಇಲ್ಲ...
ಒಂಥರ ಮಾನಸಿಕ ಆಘಾತ ಆಗಿ ಆ ಬಗ್ಗೆಯೇ ಒಂದು ಕಥೆಯನ್ನೋ ಇನ್ನೇನೋ ಬರೆಯಬೇಕು ಅಂದುಕೊಂಡು ಏನು ಬರೆಯಲೂ ಆಗದೆ ಅತ್ತ ಕಥೆಯೂ ಇತ್ತ ಕವನವೂ ಅಲ್ಲದ ಈ ಬರಹ ಹುಟ್ಟಿತು....
ಇದನ್ನೂ ಓದಿ ಮೆಚ್ಚಿದ ನಿಮಗೆ ನನ್ನ ಧನ್ಯವಾದಗಳು...

>>> ನಿಮಗೆ ಇದೇನೂ ಅರ್ಥ ಆಗದೆ ಇದ್ದರೆ ಈ ಕೆಳಗಿನ ನನ್ನ ಬರಹಗಳನ್ನ ಓದಿ...
ಲಿಂಕ್ ಕೊಟ್ಟಿರುವೆ..

http://sampada.net/%...

ಮೇಲಿನ ಕಥೆಯ ನಾಯಕ-ನಾಯಕಿ

'ಹೀಗೆ' ಇದ್ದರೆ ಹೇಗೆ? ಅಂತ ಬರೆದದ್ದು ಈ ಕೆಳಗಿನ ಲಿಂಕುಗಳಲಿದೆ..

http://sampada.net/%...

http://sampada.net/%...

http://sampada.net/%...

http://sampada.net/%...

http://sampada.net/%...

ನಿಮ್ಮ ಪ್ರತಿಕ್ರಿಯೆ ನನಗೆ ಟಾನಿಕ್ ತರಹ..
.ಹುಮ್ಮಸ್ಸು ಉತ್ಸಾಹ ಉಕ್ಕಿಸ್ತುತ್ತಿದೆ...

ಶುಭವಾಗಲಿ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ಸಪ್ತಗಿರಿಯವರೆ
ಏಕೆ ನಿರಾಸೆಯ ದ್ವನಿ
ಪ್ರಪಂಚದಲ್ಲಿ ಯಾವುದು ನಮ್ಮದಾಗುವ ತನಕ ನಮ್ಮದಲ್ಲ
ಕೆಲವೊಮ್ಮೆ ನಮದಾದ ಮೇಲು ನಮ್ಮದಲ್ಲ
ವಾಸ್ತವದಲ್ಲಿ ನಮ್ಮದೆನ್ನುವುದು ಯಾವುದು ಇಲ್ಲ.
ಆದರು
ನಮ್ಮದೆಂದು ಭಾವಿಸಿದಲ್ಲಿ ಎಲ್ಲವು ನಮ್ಮದೆ

ಶುಭವಾಗಲಿ
** ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

ಏಕೆ ನಿರಾಸೆಯ ದ್ವನಿ
----------------------------

ಗುರುಗಳೆ

ನೀವ್ ಹೇಳಿದ್ದು ಸ್ಸರಿ!! ನಿರಾಶೆಯ ಭಾವ ಬರಹದಲ್ಲಿ ಗೋಚರಿಸುತ್ತಿದೆ ಅದೇ ಸತ್ಯ...

ಆದರೆ ಯಾಕೆ ? ಅಂತ ಮುಂದೆ ನಾ ಬರೆಯೋ ಒಂದು ಬ್ಲಾಗ್ ಬರಹದಲ್ಲಿ ಹೇಳುವೆ...

--------------------------------------------------------------------------------------------

ಪ್ರಪಂಚದಲ್ಲಿ ಯಾವುದು ನಮ್ಮದಾಗುವ ತನಕ ನಮ್ಮದಲ್ಲ
ಕೆಲವೊಮ್ಮೆ ನಮದಾದ ಮೇಲು ನಮ್ಮದಲ್ಲ
ವಾಸ್ತವದಲ್ಲಿ ನಮ್ಮದೆನ್ನುವುದು ಯಾವುದು ಇಲ್ಲ.
ಆದರು
ನಮ್ಮದೆಂದು ಭಾವಿಸಿದಲ್ಲಿ ಎಲ್ಲವು ನಮ್ಮದೆ

-----------------------------------------------------

ನೀವ್ ಹೇಳಿದ ಆ ನಾಲ್ಕು ಸಾಲುಗಳಲ್ಲಿ ಅಪರಿಮಿತ ಅರ್ಥ ಇದೆ.. ಸಂತೈಸುವ ಶಕ್ತಿ ಇದೆ..

.ಗುರುಗಳೆ..ತಮ ಪ್ರತಿಕಿಯೆಗೆ ವಂದನೆಗಳು..

ಶುಭವಾಗಲಿ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

ಸಪ್ತಗಿರಿಗಳೇ,
ನನಗೇನೋ ಇದರಲ್ಲಿ ಆಧ್ಯಾತ್ಮಿಕ ಎಳೆಯೊಂದು ಸಿಕ್ಕಿತು.
"ಕರ್ಮಣ್ಯೇವಾಧಿಕಾರಸ್ಥೇ ಮಾ ಫಲೇಷು ಕದಾಚನ" ಎನ್ನುವ ಭಗವದ್ಗೀತೆಯ ಹೇಳಿಕೆ ನಿಮ್ಮ ಕವನ ಪ್ರತಿಬಿಂಬಿಸುತ್ತಿದೆ. ನಿಮಗೆ ತೋಚಿದ್ದು ಸರಿಯಾಗಿಯೇ ಗೋಚರಿಸಿದೆ, ಅಭಿನಂದನೆಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

ಶ್ರೀಧರ್ ಜೀ

ಈ ಸಣ್ಣ ಬರಹ ನಿಮಗೆ ಆ ಅರ್ಥಾವತ್ತಾದ ನುಡಿ ಮುತ್ತ ("ಕರ್ಮಣ್ಯೇವಾಧಿಕಾರಸ್ಥೇ ಮಾ ಫಲೇಷು ಕದಾಚನ" ಎನ್ನುವ ಭಗವದ್ಗೀತೆಯ ಹೇಳಿಕೆ) ನೆನಪಿಸಿತು ಅಂದ್ರೆ ಅದ್ಕಿಂತ ಬೇಕೇ?

ಈ ಬರಹ ಹುಟ್ಟಿದ್ದು ಬರೀ ತೋಚಿದ್ದಕ್ಕೆ ಮಾತ್ರ ಅಲ್ಲ, ಮೊನ್ನೆ ನಾ ಹಳ್ಳಿ ಗೆ ಹೋದಾಗ ಆದ ಒಂದು ಅನಿರೀಕ್ಷಿತ ಘಟನೆಯಿಂದ..
ಆ ಬಗ್ಗೆ ಮುಂದೆ ನನ್ನ ಬ್ಲಾಗ್ ಬರಹ ಬರಲಿದೆ..

ತಮ್ಮ ಪ್ರತಿಕಿಯೆಗೆ ವಂದನೆಗಳು..

ತಮ್ಮ

"ಯೋಗ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಮಾಲೆ

ತುಂಬಾ ಚೆನ್ನಾಗಿ ಮೂಡಿ ಬರುತಿದೆ..

ಅದು ಯಾವುದೇ ಆಡೆ - ತಡೆ ಇಲ್ಲದೇ ಮುಂದುವರೆಯಲಿ...
ಶುಭವಾಗಲಿ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hvravikiran on

ತಂಗಾಳಿಯ ಆಸ್ವಾದಿಸಿ
ಅದೇ ನನ್ನದಾಗಲಿ ಎಂಬ ಸ್ವಾರ್ಥ ಬೇಡ!!
ಉಸಿರು ಕಟ್ಟಿ ಹೋದೀತು!!

ನಿಜ ಸಪ್ತಗಿರಿವಾಸಿಗಳೆ, ಅತಿ ಆಸೆ ಮತ್ತು ಮಿತಿ ಮೀರಿದ ಸ್ವಾರ್ಥ ಎರಡೂ ಮಾನವನ ಅವಸಾನದ ಮುನ್ನುಡಿ. ....
ಉತ್ತಮ ನಿರೂಪಣೆ.
ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

ರವಿ ಕಿರಣ್

ತಮ್ಮ ಪ್ರತಿಕ್ರಿಯೆಗೆ ಮತ್ತು ಅನಿಸಿಕೆಗೆ ವಂದನೆಗಳು....

ಶುಭವಾಗಲಿ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathishnasa on

ತೋಚಿದನ್ನು ಗೀಚಿದಾಗಲೆ ಇಂತಹ ಸುಂದರ ಕವನ ಹೊರಹೊಮ್ಮಲು ಸಾಧ್ಯ ನಿಮ್ಮ ಕವನ ಓದಿದ ಮೇಲೆ ಡಿ ವಿ ಜಿ ಯವರ ಮಂಕುತಿಮ್ಮನ ಕಗ್ಗದ ಸಾಲುಗಳು ನೆನಪಾದವು
" ಇರುವ ಭಾಗ್ಯವ ನೆನೆದು
ಬಾರೆನೆಂಬುದ ಬಿಡು
ನೆಮ್ಮದಿಗಿದೆ ದಾರಿ ಮಂಕುತಿಮ್ಮ"
.....ಸತೀಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

ನಿಮ್ಮ ಕವನ ಓದಿದ ಮೇಲೆ ಡಿ ವಿ ಜಿ ಯವರ ಮಂಕುತಿಮ್ಮನ ಕಗ್ಗದ ಸಾಲುಗಳು ನೆನಪಾದವು
-------------------------------------------------------------------------------------------------------

ಸತೀಶ್ ಅವ್ರೆ

ಈ ಪುಟ್ಟ ಬರಹದಲಿ -ದಿಂದ ನಿಮಗೆಲ್ಲ (ನಿಮಗೆ ಮತ್ತು ಶ್ರೀಧರ್ ಜೀ ಅವ್ರಿಗೆ) ಹಲ ಮಹನೀಯರ ಅನುಭವದ ನುಡಿ ಮುತ್ತುಗಳು ನೆನಪಿಗೆ ಬಂದಿವೆ ಅದು ನನಗೆ ಸಂತಸ ತಂದಿದೆ..

ತಮ್ಮ ಪ್ರತಿಕ್ರಿಯೆಗೆ ವಂದನೆಗಳು...

ಶುಭವಾಗಲಿ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by bhalle on

ಸಪ್ತಗಿರಿಯವರೇ
ಇದು ನನ್ನ ಅನಿಸಿಕೆ ಮಾತ್ರ
ಕೈ ಚಾಚಿದಾಗ‌ ಸಿಗ‌ದೇ ಇರುವುದ‌ಕ್ಕೆ ಸ್ಟೂಲಿನ‌ ಮೊರೆ ಹೋಗ‌ಬೇಕಾಗುತ್ತದೆ
ಈ ಸ್ಟೂಲ್ ಎಂಬುವುದು ಆಯಾ ಸಂಧರ್ಬಕ್ಕೆ ಬದಲಾಗುತ್ತದೆ
ನಮ್ಮೆಲ್ಲ ಪ್ರಯತ್ನ ಮೀರಿದಾಗ ತಂತಾನೆ ಅದು ತನ್ನದಲ್ಲ ಅದಕ್ಕೇ ದಕ್ಕಲಿಲ್ಲ ಎಂಬ ಭಾವ ಮೂಡುತ್ತದೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Premashri on

ಉತ್ತಮ ಕವನ.
ಸಿಗಲು ಎಲ್ಲಾ ಪ್ರಯತ್ನ ಮಾಡಬೇಕು.ಸಿಗದಿರೆ ಇರುವ ಭಾಗ್ಯವ ನೆನೆಯಬೇಕು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

ಸಿಗಲು ಎಲ್ಲಾ ಪ್ರಯತ್ನ ಮಾಡಬೇಕು.ಸಿಗದಿರೆ ಇರುವ ಭಾಗ್ಯವ ನೆನೆಯಬೇಕು.

-------------------------------------------------------------------------------------------
ಪ್ರೇಮ ಎಸ್ ಅವ್ರೆ.

ಹೌದವ್ದು-
ನಿಜ....

ತಮ್ಮ ಪ್ರತಿಕ್ರಿಯೆಗೆ ವಂದನೆಗಳು....

ಶುಭವಾಗಲಿ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

ಕೈ ಚಾಚಿದಾಗ‌ ಸಿಗ‌ದೇ ಇರುವುದ‌ಕ್ಕೆ ಸ್ಟೂಲಿನ‌ ಮೊರೆ ಹೋಗ‌ಬೇಕಾಗುತ್ತದೆ

---------------------------------------------------------------------------------------

:()))

ಭಲ್ಲೇ ಅವ್ರೆ-

ಭಲೇ- ಭಲೇ!!

ಹಾಸ್ಯಾತ್ಮಕವಾಗಿದ್ದು ಅರ್ಥಪೂರ್ಣವಾಗಿ ಪ್ರತಿಕ್ರಿಯಿಸಿದ್ದೀರಿ.....

ತಮ್ಮ ಪ್ರತಿಕ್ರಿಯೆಗೆ ವಂದನೆಗಳು

ಶುಭವಾಗಲಿ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chikku123 on

ಚೆನ್ನಾಗಿದೆ ಸಪ್ತಗಿರಿಯವ್ರೆ

ಆದ್ರೆ
<ಸಿಕ್ತಾರೆ ಅನ್ನೋ ಕಲ್ಪನೆಯೂ
ಸಿಗೋಲ್ಲ ಅನ್ನೋ ವಾಸ್ತವವೂ

ಆದ್ಕಾಗಿ ಗುರಿಯೂ ಇರಲಿ!!> ಕನ್ಫ್ಯೂಶನ್ ಇದೆ ಇದ್ರಲ್ಲಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

ಆದ್ರೆ
<ಸಿಕ್ತಾರೆ ಅನ್ನೋ ಕಲ್ಪನೆಯೂ
ಸಿಗೋಲ್ಲ ಅನ್ನೋ ವಾಸ್ತವವೂ

ಆದ್ಕಾಗಿ ಗುರಿಯೂ ಇರಲಿ!!> ಕನ್ಫ್ಯೂಶನ್ ಇದೆ ಇದ್ರಲ್ಲಿ
-----------------------------------------------------------------

ಚೇತನ್ ಅಕ ಚಿಕ್ಕು!

ಅದ್ಕೆ ಇದನ್ನ ತೋಚಿದ್ದು ಗೀಚಿದ್ದು!! ಅಂತ ಹೆಸರಿಸಿದ್ದು....

ಇದು ಕಥೆಯೂ ಅಲ್ಲ ಕವನವೂ ಅಲ್ಲ ಯಾವ ವಿಧದ್ದು ಅಂತ ತೀರ್ಮಾನಿಸಲು ಆಗದೆ ಗೊಂದಲ ಆಗಿ ಆ ಶೀರ್ಷಿಕೆ ಕೊಟ್ಟು ಸಂಪದಕ್ಕೆ ಸೇರಿಸಿದೆ...!

ನನಗೂ ನೀವ್ ಹೇಳಿದ ಆ ಸಾಲುಗಳ ಬಗ್ಗೆ ಹಾಗ್ ಅನ್ನಿಸಿದೆ...!!

ಅದನ್ನ ಯಾರಾದರೂ ಬೇರೆ ರೀತಿ ತಿದ್ದಿದರೆ ಅದನ್ನ ನಾ ಸೇರಿಸುವೆ...

>>> ಸಧ್ಯಕ್ಕೆ ಹೀಗೆ ತಿದ್ದಿರುವೆ- ಸರೀನ?

ತಮ್ಮ ಪ್ರಾಮಾಣಿಕ ಪ್ರತಿಕ್ರಿಯೆಗೆ ವಂದನೆಗಳು...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chikku123 on

ನನಗನಿಸಿದ್ದು ನಾನು ಹೇಳ್ದೆ ನಿಮಗೆ ಸರಿ ಇತ್ತೇನೋ!!!
ಈಗ ಸರಿ ಇದೆ ನನಗೆ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.