20
June
2013

ದಂತದ ಗೊಂಬೆ.....

July 5, 2012 - 10:41am
gopaljsr

ಮಂಜ ಮತ್ತು ಸುಧೀರ್ ಇಬ್ಬರ ಮನೆ ಅಕ್ಕ-ಪಕ್ಕ ಇತ್ತು. ಇಬ್ಬರು ಒಂದೇ ಸಮಯದಲ್ಲಿ ಮದುವೆಗೆಂದು ಹೆಣ್ಣು ಹುಡುಕುತ್ತಿದ್ದರು. ಒಂದು ದಿವಸ ಮಂಜ ಒಂದು ಹೆಣ್ಣು ನೋಡುವ ಶಾಸ್ತ್ರ ಇತ್ತು.ಸಂಜೆ ಸುಧೀರ್ ನ ಅಮ್ಮ ಹೆಣ್ಣು ಹೆಂಗಿತ್ತು ಎಂದು ಮಂಜನನ್ನು ವಿಚಾರಿಸಿದರು. ಅದಕ್ಕೆ ಮಂಜ ಹುಡುಗಿ ದಂತದ ಗೊಂಬೆ ಹಾಗೆ ಇದ್ದಳು, ಸೌಂದರ್ಯ ದೇವತೆ ಆದರೆ, ನನಗೆ ಅವಳ ಖರ್ಚನ್ನು ತೂಗಿಸಲು ಆಗುವುದಿಲ್ಲ ಎಂದ. ಹಾಗೇನಾದರು ಮದುವೆ ಆದರೆ, ಒಂದು ಬ್ಯಾಂಕ್ ಲೂಟಿ ಮಾಡಬೇಕು ಅಷ್ಟೇ ಅಂದ. ಅಲ್ಲೇ ಇದ್ದ ಸುಧೀರ್ ಸುಮ್ಮನಿರದೆ ಹಾಗಾದರೆ, ನನಗೆ ಅವಳನ್ನು ತೋರಿಸು ಎಂದ. ಏಕೆಂದರೆ, ಸುಧೀರ್ ನಿಗೆ ತಲೆ ಇಲ್ಲದಿದ್ದರೂ ತಲೆತಲಾಂತರದಿಂದ ಬಂದ ಅಸ್ತಿಗೇನು ಕಡಿಮೆ ಇರಲಿಲ್ಲ. ಅದನ್ನು ಕೇಳಿದ ಅವರ ಅಮ್ಮ ಇದೇನೋ? ಕಪಿ ಚೇಷ್ಟೆ ಎಂದು ಬೈದರು. ಬೈದರೂ ಬೆಂಬಿಡದ ಬೇತಾಳದಂತೆ ಕಾಡಿ ಅವರ ಮನೆ ವಿಳಾಸ ಮತ್ತು ಕುಂಡಲಿ ಕೇಳಿ ಪಡೆದ. ಹೆಣ್ಣು ಗಂಡಿನ ಮನೆಯಲ್ಲೇ ನೋಡುವ ಶಾಸ್ತ್ರ ಇದ್ದರು, ಅವರಿಗೆ ಕರೆ ಮಾಡಿ ನಾವೇ ಹೆಣ್ಣು ನೋಡಲು ಬರುತ್ತೇವೆ ಎಂದು ಶಾಸ್ತ್ರಕ್ಕೆ ಶಸ್ತ್ರ ಚಿಕಿತ್ಸೆ ಮಾಡಿ, ಅವರ ಅಮ್ಮ ಬೇಡವೆಂದರೂ ಕೇಳದೆ ಹೇಳಿದ. ಅವರ ಮನೆಯವರು ಬರುವವರನ್ನು ಬೇಡವೆನ್ನಲು ಆಗದೆ ಬನ್ನಿ ಎಂದರು. ಸುಧೀರ್ ನ ಖುಷಿಗೆ ಪಾರವೇ ಇರಲಿಲ್ಲ. ಎಲ್ಲರಿಗೂ ಬೇಡ ಬೇಡ ಎಂದರು ಕೇಳದೆ ಪಾರ್ಟಿ ಕೊಡಿಸಿದ್ದ. ಎಲ್ಲರು ನನ್ನ ಸುಲವಾಗಿ ದೇವರಲ್ಲಿ ಪ್ರಾರ್ಥಿಸಿ ಎಂದು ಕುಡಿದ ಅಮಲಿನಲ್ಲಿ ವಿನಂತಿಸಿದ್ದ. ಮಂಜ ಸುಧೀರನಿಗೆ ಹಣ್ಣು ತೆಗೆದು ಕೊಂಡು ಹೋಗು ಎಂದು ಹೇಳಿದ್ದ.

ಮರುದಿನ ಎಲ್ಲರೂ ಮಂಜನ ಸಮೇತವಾಗಿ ಹೆಣ್ಣಿನ ಮನೆಗೆ ಹೆಣ್ಣು ನೋಡಲು ಹೋಗಿದ್ದಾಗಿತ್ತು. ನಾವು ಹೋಗಿರುವಷ್ಟು ಜನರನ್ನು ನೋಡಿ ಹೆಣ್ಣಿನ ಮನೆಯವರು ಗಾಬರಿ ಆಗಿದ್ದರು. ನಾವು ನಿಶ್ಚಿತಾರ್ಥ ಮುಗಿಸಿಕೊಂಡೆ ಹೋಗುತ್ತೇವೆ ಎಂದು ತಿಳಿದುಕೊಂಡಿದ್ದರು. ಸುಧೀರ ಹೆಣ್ಣು ನೋಡಿ ನಾಚಿ ನೀರಾಗಿದ್ದ. ಹೆಣ್ಣು ನಿಜವಾಗಿಯು ದಂತದ ಗೊಂಬೆ ಹಾಗೆಯೇ ಇದ್ದಳು. ಅವಳ ಸಿಂಗಾರ ಕೂಡ ಅಷ್ಟೇ ಭರ್ಜರಿ ಆಗಿತ್ತು. ಸುಧೀರ ಮರು ಮಾತಿಲ್ಲದೆ ಒಪ್ಪಿ ಬಿಟ್ಟ. ಮದುವೆ ನಿಶ್ಚಿತಾರ್ಥ ಕೂಡ ನಿರ್ಧರಿಸಿದರು. ಆದರೆ ಹೆಣ್ಣಿನ ತಂದೆ ನಿಮ್ಮ ಬಳಗ ತುಂಬಾ ದೊಡ್ಡದು ಎಂದು ಕಾಣುತ್ತೆ ಎಂದರು. ಹಾಗೇನಿಲ್ಲ ಮಾವಾ ಇವರೆಲ್ಲಾ ನನ್ನ ಗೆಳೆಯರು ಎಂದು ಹೇಳಿ ಸುಮ್ಮನಾಗಿಸಿದ್ದ.

ಒಂದು ದಿನ ಸುಧೀರ ಅವಳನ್ನು ಭೇಟಿಯಾಗಲು ಹೋಗುತ್ತಿದ್ದೇನೆ. ಏನು? ಮಾತನಾಡಬೇಕು ಹೇಳು ಎಂದು ಮಂಜನ ತಲೆ ತಿಂದಿದ್ದ. ಹೋಗಿ ಅವಳ ಹೆಸರು ಕೇಳಬೇಡ ಎಂದ. ಅದಕ್ಕೆ ಸುಧೀರ ನನಗೇನು ಅಷ್ಟು ತಲೆ ಇಲ್ಲವೇ ಅವಳ ಹೆಸರು ಪ್ರತಿಮಾ ಅದು ನನಗೆ ಗೊತ್ತು. ಮತ್ತೆ ಏನಾದರು ಹೇಳು ಎಂದು ಕೇಳಿದ್ದ. ಮಂಜ ಅವನಿಗೆ ಭೀತಿಯಿಂದ ವರ್ತಿಸಬೇಡ, ನಿನ್ನ ಹೆಸರು ಸುಧೀರ ನೆನಪಿರಲಿ ಎಂದು ತಾಕೀತ್ ಮಾಡಿದ್ದ. ಮತ್ತು ಒಂದು ಚಾಕಲೇಟ್ ತೆಗೆದುಕೊಂಡು ಹೋಗು ಎಂದು ಹೇಳಿದ್ದ. ಮರುದಿನ ಸುಧೀರನ ತುಟಿಗೆ ದೊಡ್ಡದಾದ ಗಾಯ ಆಗಿತ್ತು. ಏನೋ? ಇದು ಎಂದು ಕೇಳಿದರೂ ಯಾರಿಗೂ ಹೇಳಲಿಲ್ಲ.

ಮದುವೆ ನಿಶ್ಚಿತಾರ್ಥ ದಿವಸ ಮಂಜ ಸುಧೀರನಿಗೆ ಟೀ-ಶರ್ಟ್ ಹಾಕಿಕೋ ಎಂದು ಹೇಳಿದ್ದ. ಸುಧೀರ ಮಂಜನ ಮಾತಿನಂತೆ ಟೀ-ಶರ್ಟ್ ಹಾಕಿಕೊಂಡು ಮಣೆ ಮೇಲೆ ಕೂಡುತ್ತಿದ್ದಾಗ, ಎಲ್ಲರೂ ಸುಧೀರನನ್ನು ನೋಡಿ ನಗಲು ಶುರು ಮಾಡಿದರು. ಏಕೆಂದರೆ? ಸುಧೀರ್ ಬನಿಯನ್ನು ತೋಳು ಅವನ ಟೀ-ಶರ್ಟ್ ಕಿಂತ ದೊಡ್ಡದು ಇತ್ತು. ಅದನ್ನು ನೋಡಿ ಕೆಳ ಮಾರಿ ಮಾಡಿ ಕುಳಿತಿದ್ದ ಹೆಣ್ಣು ಕೂಡ ನೋಡಿ ನಕ್ಕಾಗ, ನಮಗೆ ಅವಳ ನಿಜವಾದ ದಂತ ದರ್ಶನ ಆದ ಮೇಲೆ, ದೂರ ದೂರ ಇರುವ ದೊಡ್ಡ ಚೂಪಾದ ದಂತಿ ಪಂಕ್ತಿಗಳು. ಸುಧೀರನಿಗೆ ಏನಾಗಿತ್ತು? ಎಂದು ಗೊತ್ತಾಗಿತ್ತು. ಆದರೆ ಇದರಲ್ಲಿ ಪಾಪ ಮಂಜನದು ಏನು? ತಪ್ಪು ಇರಲಿಲ್ಲ, ಏಕೆಂದರೆ ಅವನಿಗೆ ಆ ವಿಷಯ ತಿಳಿದಿದ್ದೆ ಅವಾಗ. ಸುಧೀರ್ ತಲೆ ಎತ್ತುವ ಧೈರ್ಯ ಮಾಡಲಿಲ್ಲ. ಕಡೆಗೆ ಮಂಜ ಅವನಿಗೆ ಟೀ-ಶರ್ಟ್ ಹೇಳಿದ್ದೆ ತಪ್ಪಾಯಿತು ಎಂದೆನಿಸಿ, ಅವನಿಗೆ ಶರ್ಟ್ ಹಾಕಿಕೊಂಡು ಬರಲು ಹೇಳಿದ. ಮತ್ತೆ ನಿಶ್ಚಿತಾರ್ಥ ಮುಗಿಸಿದರು. ಆಗ ಮದುಮಗಳ ತಂದೆ ನಾವು ನಮ್ಮ ಪುಟ್ಟಿಯನ್ನು ತುಂಬಾ ಪ್ರೀತಿಯಿಂದ ಬೆಳೆಸಿದ್ದೇವೆ. ಏನೂ ಕಡಿಮೆ ಮಾಡಿಲ್ಲ. ಚೆನ್ನಾಗಿ ನೋಡಿಕೋ ಎಂದು ಹೇಳಿದರು.

ಮದುವೆ ಆಗುವವರೆಗೂ ನಾವು ಸುಧೀರನಿಗೆ "ಪ್ರತಿಮಾ ಚುಂಬನಂ ದಂತ ಭಗ್ನಂ" ಮತ್ತು ಅವನೇ ಅವಸರ ಮಾಡಿಕೊಂಡು ಅಪಘಾತ ಮಾಡಿಕೊಂಡ ಎಂದು ತುಂಬಾ ದಿವಸ ಅವನ ತುಟಿ ನೋಡಿ ಕಾಡಿದ್ದೆವು. ಆದರೂ ಏನು ಮಾಡಲು ಸಾಧ್ಯವಿರಲಿಲ್ಲ ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಸುಮ್ಮನೆ ಇದ್ದ. ಮದುವೆ ವಿಚಾರವಾಗಿ ಅವನ ಮಾವ ಬಂದಾಗ, ನನ್ನ ಹಲಕಟ ಮಾವ ಬಂದಿದ್ದ ಎಂದು ಹಲ್ಲು ಕಡಿಯುತ್ತಿದ್ದ.ಅದನ್ನು ತಿಳಿದು ಅವನ ಮಾವ ಅವಳ ಹಲ್ಲುಗಳನ್ನ ಸರಿ ಮಾಡಿಸಿದ್ದರು.

ಮದುವೆಯಲ್ಲಿ ಅವಳು ಪ್ರತಿ ಮಾತಿಗೂ ನಗುತ್ತಿದ್ದಳು. ಮದುವೆ ಆದ ಮೇಲೆ ತಿಳಿಯಿತು ಅವರ ಅಪ್ಪ ಅವಳಿಗೆ ಚಿಕ್ಕವಳಿದ್ದಾಗ ತುಂಬಾ ಚಾಕ್ಲೇಟ್ ತಂದು ಕೊಡುತ್ತಿದ್ದರು. ಅದಕ್ಕೆ ಹಲ್ಲುಗಳು ಬೇಗನೆ ಹುಳುಕು ಆಗಿ ಬಿದ್ದು, ದೊಡ್ಡವಾಗಿ ಬಂದಿದ್ದವು ಎಂದು.ಈಗ ಮಂಜನನ್ನು ದಿನವು ಹೊಗಳುತ್ತಾ ಇರುತ್ತಾನೆ. ಮತ್ತು "ಹೇ...ಚಿನ್ನದ ಬೊಂಬೆಯಲ್ಲಾ, ದಂತದ ಬೊಂಬೆಯಲ್ಲಾ...ಬುದ್ಧಿ ಇರುವ ಬೊಂಬೆಯೂ... ಕಾಲವು ಕುಣಿಸಿದಂತೆ.., ಅ ವಿಧಿ ಏಣಿಸಿದಂತೆ.., ಅಡುವ ಸಮಯದಗೊಂಬೆ ಮಾನವ.."ಅನ್ನುವ ಬದಲು ಅಡುವ ಸಮಯದ ಗೊಂಬೆ ಮಾವನ ಎಂದು ಹಾಡುತ್ತ ಅವಳ ಕೈಯಲ್ಲಿ ಆಡುವ ಸಮಯದ ಗೊಂಬೆ ಆಗಿದ್ದಾನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by venkatb83 on

ದಂತದ ಗೊಂಬೆಯ ದಂತ ಪಂಕ್ತಿ ......!!

/\ /\ /\ /\...:())))

ಬರಹ ಮುದ ನೀಡಿತು... ಕಲ್ಪ್ಸಿಕೊಂಡು ನಕ್ಕಿದ್ದೇ ನಕ್ಕಿದ್ದು...

ಪಾಪ....!! ಗಂಡು.....:((

ಶುಭವಾಗಲಿ..
\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ಗೋಪಾಲ್‌ಜಿ,
"ದಂತ"ದ ಗೊಂಬೆ ಸೂಪರ್. ಪ್ರ.. ಚುಂ.. ತುಟಿಭಗ್ನಂ. :(
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chikku123 on

:) :) ಪಾಪ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

ಕುಲಕರ್ಣಿಗಳೇ ಅರ್ಥವಾಯಿತು ಬಿಡಿ ಇದು ದಂತದ ಗೊಂಬೆಯ "ಭಾರೀ.....ಮುತ್ತು" ಹೆಚ್ಚಿನ ವಿವರಗಳಿಗೆ ಗಣೇಶ್ ಅವರನ್ನು ಸಂಪರ್ಕಿಸಿ. ಭೇಟಿಯಾಗುವ ಸಮಯ ರಾತ್ರಿ 12.00 ಘಂಟೆಯಿಂದ 2.00 ಘಂಟೆಯವರೆಗೆ ಮಾತ್ರ :))

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ವ್ಹಾ ಶ್ರೀಧರ್ ಜೀ, :) :)
ಸಪ್ತಗಿರಿವಾಸಿಯವರು "ದಂತದ"ಗೊಂಬೆಯಂತಹ ಹೆಣ್ಣೇ ಬೇಕು ಎಂದು ಕವನ ಬರೆದಿದ್ದರು! :)
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

ಇನ್ನೂ ಸಿಕ್ಕಿಲ್ಲ>>>......!!

ಸಿಗುವಳೇ?..

ಗೊತ್ತಿಲ್ಲ>>>

ಹಾಗದ್ರೆ ಅವತ್ ಬರೆದದ್ದು...??

ಜಾತಕ ಕೂಡೀ ಬರಲಿಲ್ಲ.....:((((
\
ಸೋ ಅನ್ವೆಷ್ಹಣೇ ಮು0ದುವರೆದಿದೆ......!!

...ಭ‌ ಮಧ್ಯ ರಾತ್ರೀ,ಬೇಳಗೂ....!!

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ಗೋಪಾಲರ ಕತೆ ಓದಿದ ಮೇಲೂ "ದಂತದ"ಗೊಂಬೆ ಬೇಕು ಅಂತೀರಲ್ಲಾ. :)
ನಿಮ್ಮಿಷ್ಟದ ಸುಂದರ ಹೆಣ್ಣೇ ಸಿಗಲಿ.
ಶುಭರಾತ್ರಿ.
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

ಯಾವುದೇ ತರಹದ ಹುಡುಗಿ ಸಿಕ್ಕಿದರೂ ಕೂಡ ಅದು ಅಂ.ಭಂ. ಆಶೀರ್ವಾದ? :))

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

:()))

ಜೀ. ಅವರು(ಗಣೇಶ್ ಅಣ್ಣ) ಆಶೀರ್ವಾದವನ್ನು ಸಹಾ ಬ್ಲೂ ಟೂತ್ ನಲ್ಲಿಯೇ ಅಂದರೆ ಅದೃಶ್ಯರಾಗಿಯೇ ನೀಡುವರು... ರಾಮ ಮೋಹನ ಅವರನ್ ಕೇಳೋಣ ಅವರು ಅವರಿಗೆ ಕಾಲ್ ಮಾಡಿದ್ದರೆ(ಮಾಡಿರೋಲ್ಲ...!!) ಗಣೇಶ್ ಅಣ್ಣ ಅವರ ನಂಬರ್ ತೆಗೆದುಕೊಂಡು......
ಣ....!!

ನನ್ನಿ

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ಸಪ್ತಗಿರಿವಾಸಿಯವರೆ,
>>>ರಾಮ ಮೋಹನ ಅವರನ್ ಕೇಳೋಣ ಅವರು ಅವರಿಗೆ ಕಾಲ್ ಮಾಡಿದ್ದರೆ(ಮಾಡಿರೋಲ್ಲ...!!) ಗಣೇಶ್ ಅಣ್ಣ ಅವರ ನಂಬರ್ ತೆಗೆದುಕೊಂಡು......
ಣ....!!
-ನಾನು ರಾಮಮೋಹನರು, ಪಾರ್ಥಸಾರಥಿಯವರೊಂದಿಗೆ ದಿನವೂ ಮಾತನಾಡುತ್ತಿರುತ್ತೇನೆ...
ಹೋಗಲಿ..ನಾನೇ ಫೋನ್ ನಂಬರ್ ಕೊಡುವೆನು..!
.. .. .. .. ..
ಎಸ್ಸೆಲ್ಸಿಯಲ್ಲಿ ನನಗೆ ಕನ್ನಡ, ಹಿಂದಿ, ಇಂಗ್ಲೀಷ್, ಸಮಾಜ, ವಿಜ್ಞಾನದಲ್ಲಿ ಸಿಕ್ಕಿದ ಮಾರ್ಕ್‌ಗಳು..ನೆನಪಿಡಲು ಸುಲಭ ಎಂದು ಆ ನಂಬರ್ ಸಿಲೆಕ್ಟ್ ಮಾಡಿದೆ. :)
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

ನಾನು ರಾಮಮೋಹನರು, ಪಾರ್ಥಸಾರಥಿಯವರೊಂದಿಗೆ ದಿನವೂ ಮಾತನಾಡುತ್ತಿರುತ್ತೇನೆ...
ಹೋಗಲಿ..ನಾನೇ ಫೋನ್ ನಂಬರ್ ಕೊಡುವೆನು..!
.. .. .. .. ..
"ಎಸ್ಸೆಲ್ಸಿಯಲ್ಲಿ ನನಗೆ ಕನ್ನಡ, ಹಿಂದಿ, ಇಂಗ್ಲೀಷ್, ಸಮಾಜ, ವಿಜ್ಞಾನದಲ್ಲಿ ಸಿಕ್ಕಿದ ಮಾರ್ಕ್‌ಗಳು..ನೆನಪಿಡಲು ಸುಲಭ ಎಂದು ಆ ನಂಬರ್ ಸಿಲೆಕ್ಟ್ ಮಾಡಿದೆ. :)
-ಗಣೇಶ."

125
100
100
100
100= 525....!!

ನಿಮ್ಮ ಬರಹಗಳನ್ನು ಮತ್ತು ಜ್ನಾನವನ್ನು ಗಮನಿಸಿದ ನ0ಗೆ ಅನ್ನಿಸುತ್ತೆ ನಿವ್ ಅಸ್ತಸ್ತು ಮಾರ್ಕ್ಸ್ ತೆಗೆದಿರಬೆಕು...
ಹಾಗಾಗಿ ಅದು ಫೊನ್ ನಮ್ಬರ್ ಆಗಲು ಸಾಧ್ಯವೆ ಇಲ್ಲ...:()))
ಈಗ ನಾ ಒನ್ದು ಕೆಲ್ಸ ಮಾಡುವೆ....??
ಇಡಿ ಬೆ0ಗಳುರಿನ ಫೊನ್ ಡೈರೆಕ್ತ್ರಿ ಹುಡುಕಿ‍ ಇಲ್ಲವೆ ನಮ್ಮ ಗುರುಗಳಿಗೆ ವಿನನ್ತಿಸಿಕೊನ್ಡು ನಿಮ್ಮ ಅಡ್ದ್ರೆಸ್ಸ್ ಪತ್ತೆ ಹಛ್ಹುವೆ... ಕಾರಣ‌
ಗುರುಗಳು ಕೆಲ್ಸ ಮಾಡುವುದು ಬಿ ಎಸ್ ಎನ್ ಲ್ಲ್ ನಲ್ಲಿ...!! ಮತ್ತು ನಿವ್ ಎಲ್ಲಿಗೆ ಶಿಫ್ತ್ ಆದರು ನಿವ್ ಬಿ ಎಸ್ ಎನ್ ಲ್ಲ್ ಕನೆಕ್ಛನ್ ಉಪಯೊಗಿಸುವುದರಿನ್ದ ಅಡ್ದ್ರೆಸ್ಸ್ ಸಿಗುವುದು...!!

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

ಸಪ್ತಗಿರಿಗಳೇ,
ನಿಮ್ಮ ಸಾಹಸವನ್ನು ಓದುತ್ತಿದ್ದರೆ ನನಗೆ ಯಂಡಮೂರಿ ವಿರೇಂದ್ರನಾಥರ "ಬೆಳದಿಂಗಳ ಬಾಲೆ" ಕಾದಂಬರಿ ನೆನಪಿಗೆ ಬಂತು. ಅಂದ ಹಾಗೆ ನೀವು ಅವರ ಅಂಗೈಯ್ಯನ್ನು ನೋಡಬೇಕೆಂದರೆ ಅವರು ಕರ್ಣಕುಂಡಲ ಹೂವಿನ ಒಂದು ಲೇಖನ ಬರೆದಿದ್ದಾರೆ. ಅದರಲ್ಲಿ ಅವರ ಕೈಯ್ಯಲ್ಲಿ ಆ ಗಿಡದ ಕಾಯಿ ಮತ್ತು ಬೀಜಗಳನ್ನು ಬೇರ್ಪಡಿಸಿದ ಚಿತ್ರವಿದೆ. ಕೊಂಡಿಯನ್ನು ನೀವೇ ಹುಡುಕಿಕೊಳ್ಳಿ; ಎಷ್ಟೇ ಆಗಲಿ ನೀವು ಅವರ ಹಳೆಯ ಬರಹಗಳನ್ನೆಲ್ಲಾ ಜಾಲಾಡುತ್ತಿದ್ದೀರಲ್ಲಾ ಆದ್ದರಿಂದ ಇಷ್ಟು ಕ್ಲ್ಯೂ ಸಾಕೆಂದುಕೊಳ್ಳುತ್ತೇನೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ಶ್ರೀಧರ್‌ಜಿ ಮತ್ತು ಸಪ್ತಗಿರಿವಾಸಿಯವರೆ,
>>...ಮತ್ತು ನಿವ್ ಎಲ್ಲಿಗೆ ಶಿಫ್ತ್ ಆದರು ನಿವ್ ಬಿ ಎಸ್ ಎನ್ ಲ್ಲ್ ಕನೆಕ್ಛನ್ ಉಪಯೊಗಿಸುವುದರಿನ್ದ ಅಡ್ದ್ರೆಸ್ಸ್ ಸಿಗುವುದು...!!
-ಎಲ್ಲಿಗೆ ಶಿಫ್ಟ್ ಆದರೂ ಹಿಂಬಾಲಿಸಲು "ವೊಡಾಫೋನ್" ಅಲ್ಲ. ಬಿಎಸ್‌ಎನ್‌ಎಲ್! ಅದು ಕಾಟು ನಾಯಿ ತರಹ..ಅದರ ಹಿಂದೇ ನಾವು ಓಡಬೇಕು. :)
ಗುರುಗಳಿಗೆ ಕಷ್ಟ ಬೇಡ-ಅವರು ಹೊಸ ಕತೆ ಬರೆಯಲಿ. ನಾನು.........
ಸಪ್ತಗಿರಿವಾಸಿಯವರು "ದಂತದಗೊಂಬೆ"ಯ ವರಿಸುವಾಗ ಹಾಜರಾಗುವೆ! :)
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ಗಣೇಶರೆ
ಕಾಟು ನಾಯಿ ?
ಅದು ಕಾಟು ನಾಯಲ್ಲ ’ಕಟ್ಟಿದ ನಾಯಿ’ ಕುತ್ತೆಗೆಗೆ ಬೆಲ್ಟ್ ಕಟ್ಟಿದ ನಾಯಿ..
ಬೆಳಗೊಮ್ಮೆ ವಾಕಿಂಗ್ ಕರೆದು ಕೊಡುಹೋಗಿ ಅವನು ... ಎಂದ ಕಡೆ ಮಾಡಿ ಅವನೊಡನೆ ಎಳೆದಾಡಿಕೊಂಡು ನಡೆದಾಡುವ ’ ಕಟ್ಟಿದ ನಾಯಿ’ , ನಾಯಿ ಕುತ್ತಿಗೆಗೆ ಕಟ್ಟಿದ ಬೆಲ್ಟ್ ನ ಇನ್ನೊಂದು ಅಗೋಚರ ತುದಿ ಮಾತ್ರ ದೆಹಲಿಯ ಯಾವದೊ ರಸ್ತೆಯಲ್ಲಿದೆ.
ಹಾಗೆ ಅದು ವೋಡಪೋನಿನ ನಾಯಿಯಂತೆ ವಾರಕೊಮ್ಮೆ ಸ್ನಾನ ಮಾಡಿಸಿ ಕೂದಲು ಕತ್ತರಿಸಿ ಪೌಡರ್ ಹಾಕಿ ಸಾಕುವ ಯಜಮಾನನಿಗೆ ಬೇಕಾದ ’ಮುದ್ದು’ ನಾಯಿಯು ಅಲ್ಲ , ಹುಡುಗನ ಹಿಂದೆ ಓಡುವ ’ಸ್ವಾತಂತ್ರ್ಯ” ಇಲ್ಲ.
ಎಲ್ಲವು ಅನುಭವ ಗ್ರಾಹ್ಯ

’ಅವರು ಹೊಸ ಕತೆ ಬರೆಯಲಿ’
ಅದೇಕೊ ಒಳಗಿದ್ದ ಕತೆಗಳೆಲ್ಲ ಮುಗಿತು ಹೋಯಿತು ಅನ್ನಿಸುತ್ತಿದೆ.

ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

"ಆವರು "ದಂತದಗೊಂಬೆ"ಯ ವರಿಸುವಾಗ ಹಾಜರಾಗುವೆ! :)

ಹೌದ? ಗಣೆಶ್ ಅಣ್ನ ?
ಸರಿ

ನೋಡೂವಾ...

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

"ಅಂದ ಹಾಗೆ ನೀವು ಅವರ ಅಂಗೈಯ್ಯನ್ನು ನೋಡಬೇಕೆಂದರೆ ಅವರು ಕರ್ಣಕುಂಡಲ ಹೂವಿನ ಒಂದು ಲೇಖನ ಬರೆದಿದ್ದಾರೆ. ಅದರಲ್ಲಿ ಅವರ ಕೈಯ್ಯಲ್ಲಿ ಆ ಗಿಡದ ಕಾಯಿ ಮತ್ತು ಬೀಜಗಳನ್ನು ಬೇರ್ಪಡಿಸಿದ ಚಿತ್ರವಿದೆ. ಕೊಂಡಿಯನ್ನು ನೀವೇ ಹುಡುಕಿಕೊಳ್ಳಿ; ಎಷ್ಟೇ ಆಗಲಿ ನೀವು ಅವರ ಹಳೆಯ ಬರಹಗಳನ್ನೆಲ್ಲಾ ಜಾಲಾಡುತ್ತಿದ್ದೀರಲ್ಲಾ ಆದ್ದರಿಂದ ಇಷ್ಟು ಕ್ಲ್ಯೂ ಸಾಕೆಂದುಕೊಳ್ಳುತ್ತೇನೆ."

ಜಿ
ಅದನ್ನು ನಾ ಓದಿರುವೆ...!!

ಈಗ ಗುರುಗಳ ಹಾಗೆ ನನಗು ಒನ್ದು ಸಮ್ಶಯ ಬನ್ತು????

ಅದು ಅವರದೆ(ಗಣೆಶ್ ಅಣ್ನ ) ಕೈ ‍ಹಸ್ತ ಅನ್ತ ಹೇಗೆ ನಮ್ಬೊದು??....!!

ಆದರು ಪ್ರಯತ್ನಿಸುವೆ...

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ಸಪ್ತಗಿರಿ
ಯಾವುದೆ ವಿಷಯದ ಬಗ್ಗೆ ಅತಿಯಾಗಿ ತಲೆಕೆಡಿಸಿಕೊಳ್ಳಬಾರದು ಅಲ್ವೆ. ಹಾಗೆ ಗಣೇಶರ ಪತ್ತೆ ಹಚ್ಚುವಿಕೆಯ ಬಗ್ಗೆ ಸಹ. ಸಮಯ ಬಂದಾಗ ಖಂಡೀತ ಅವರೆ ನಿಮ್ಮ ಎದುರಿಗೆ ಬರುತ್ತಾರೆ !. ಅವರೆ ಹೇಳಿದ್ದಾರೆ ನಿಮಗೆ ದಂತದ ಗೊಂಬೆ ಸಿಕ್ಕಾಗಿ ಬರುವನೆಂದು. ನೀವು ಮದುವೆಗೆ ಅವರನ್ನು ಅಹ್ವಾನಿಸಿ, ಯಾವುದೋ ರೀತಿಯಲ್ಲಿ ನಿಮ್ಮನ್ನು ಸಂಪರ್ಕಿಸುತ್ತಾರೆ.

ಡೈರಕ್ಟರಿ ಹುಡುಕಲು ಹೋಗಬೇಡಿ. ಡೈರಕ್ಟರಿಯಲ್ಲಿ ಇಲ್ಲದ ಪೋನ್ ನಂಬರ್ ಗಳು ಇರುತ್ತವೆ. 'u' group

ಅಲ್ಲದೆ ಅಗೋಚರವಾಗಿ ಇರಬೇಕು ಅನ್ನುವುದು ಅವರ ಇಷ್ಟ. ಅದಕ್ಕೆ ನಾವು ಏಕೆ ಅಡ್ಡಿ ಪಡಿಸುವುದು !

ಹಾಗು ಬೇಕು ಅಂದರೆ ಮತ್ತೊಂದು ಕ್ಲೂ ಕೊಡುವೆ, ಅವರ 'ಆಕ್ಸಿಡೆಂಟ್ ' ಗಮನಿಸಿ,
ಸಿದಾ ಪುತ್ತೂರು ಊರಿಗೆ ಹೋಗಿ, ಅಲ್ಲಿಂದ ಅನೆಗುಂಡಿಯ ರಸ್ತೆಯಲ್ಲಿ ನಡೆಯಿರಿ, ಒಂದು ತಿರುವು ಇರುತ್ತದೆ ಅಲ್ಲಿ ಸದಾ ಆಕ್ಸಿಡೇಂಟ್ ಗಳು ಆಗುತ್ತಲೆ ಇರುತ್ತವೆ (ಇಂಟರ್ ನೆಟ್ ಗಮನಿಸಿ). ಅಲ್ಲಿ ಹೋಗಿ ಎರಡು ತಿಂಗಳ ಹಿಂದೆ ಆದ ಒಂದು ಕಾರ್ ಹಾಗು ಬಸ್ ಆಕ್ಸಿಡೆಂತ್ ಬಗ್ಗೆ ವಿಚಾರಿಸಿ. ಯಾರಾದರು ಖಂಡೀತ ಹೇಳೂತ್ತಾರೆ !

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

"ಹಾಗು ಬೇಕು ಅಂದರೆ ಮತ್ತೊಂದು ಕ್ಲೂ ಕೊಡುವೆ, ಅವರ 'ಆಕ್ಸಿಡೆಂಟ್ ' ಗಮನಿಸಿ,
ಸಿದಾ ಪುತ್ತೂರು ಊರಿಗೆ ಹೋಗಿ, ಅಲ್ಲಿಂದ ಅನೆಗುಂಡಿಯ ರಸ್ತೆಯಲ್ಲಿ ನಡೆಯಿರಿ, ಒಂದು ತಿರುವು ಇರುತ್ತದೆ ಅಲ್ಲಿ ಸದಾ ಆಕ್ಸಿಡೇಂಟ್ ಗಳು ಆಗುತ್ತಲೆ ಇರುತ್ತವೆ (ಇಂಟರ್ ನೆಟ್ ಗಮನಿಸಿ). ಅಲ್ಲಿ ಹೋಗಿ ಎರಡು ತಿಂಗಳ ಹಿಂದೆ ಆದ ಒಂದು ಕಾರ್ ಹಾಗು ಬಸ್ ಆಕ್ಸಿಡೆಂತ್ ಬಗ್ಗೆ ವಿಚಾರಿಸಿ. ಯಾರಾದರು ಖಂಡೀತ ಹೇಳೂತ್ತಾರೆ !"

ಗುರುಗಳೇ ಇದನ್ನು ಮಾದುವೆ......!!

ಏಗೇಗ ಆರ್ ಟೀ ಓ ನವರೂ ಅಪಘಾತ ಇತ್ಯಾದಿ ವಿವರವನ್ನು ಮತ್ತು ಆನ್ಲೈನ್ನಲ್ಲಿ ಗಾಡೀ ಅದರ ಮಾಲಿಕನ ಬಗ್ಗೆ ವಿವರ ನೀಡೂವರೂ..

!1

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ಪಾರ್ಥಸಾರಥಿಯವರೆ ಮತ್ತು ಸಪ್ತಗಿರಿವಾಸಿಯವರೆ,
ಹೀಗೆ ಕ್ಲೂ ಹುಡುಕುತ್ತಾ ಹೋಗಿ ಒಂದು ದಿನ ಪತ್ತೆ ಹಚ್ಚೇ ಬಿಡುವಿರಿ. :) ಬಸ್ಸಿಗೆ ಹಾನಿ,ಪ್ರಾಣ ಹಾನಿಯಾಗದ್ದರಿಂದ ಕೇಸ್ ಆಗಿಲ್ಲ, ಆರ್‌ಟಿಓ ತನಕ ತಲುಪಿಲ್ಲ. ಆದರೆ ಹೋಗಿ, ಯಾಕೆ ಅಲ್ಲಿ ಆಗಾಗ ಆಕ್ಸಿಡೆಂಟ್ ಆಗುವುದು ಎಂಬುದನ್ನು ಪತ್ತೆಹಚ್ಚಿದರೆ ಒಳಿತೇ.
ಸಪ್ತಗಿರಿವಾಸಿಯವರೆ,
>>ದಂತದಂತಹ ಚಲುವೆ!
ಕಾಲ ಕೂಡಿ ಬಂದಾಗ ಎಲ್ಲಾ ಸಾಧ್ಯ. ಮೈಬಣ್ಣಕ್ಕಿಂತ ಗುಣ ನೋಡಿ ಎಂದು ಉಪದೇಶ ಕೊಡಲಾರೆ. ಈ ಕಾಲದಲ್ಲಿ ಮೈ ಬಣ್ಣನೂ ಮುಖ್ಯ. . ಗುಡ್‌ಲಕ್.
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

"ಮೈಬಣ್ಣಕ್ಕಿಂತ ಗುಣ ನೋಡಿ ಎಂದು ಉಪದೇಶ ಕೊಡಲಾರೆ. ಈ ಕಾಲದಲ್ಲಿ ಮೈ ಬಣ್ಣನೂ ಮುಖ್ಯ. . ಗುಡ್‌ಲಕ್.
-ಗಣೇಶ."

ಗಣೆಶ್ ಅಣ್ನ ಮದುವೆ ಅನ್ನೊದು ಒನ್ದೆ ಸಾರಿ, ಯಾರಿಗ್ಗೊತ್ತು ಅಧ್ರುಸ್ತ ಸಖತ್ ಆಗಿದ್ದರೆ ದ0ತದ ಹೆಣ್ನೆ ಸಿಗಬಹುದು....!!

ಯೊಛಿಸಬೆಡಿ ನಾ ಆರ್ ಟಿ ಒ ಗೆ ಹೊಗೊಲ್ಲ.......

ಆದರೆ ಒನ್ದು ದಿನ ನಿವ್ ನನಗೆ ಸಿಗುವಿರಿ... ನಿವೆ ನಿವಾಗಿ...!!

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ಅದು ಹಾಗಲ್ಲ ಸಪ್ತಗಿರಿಯವರೆ
ಕನ್ನಡ 70‍ ರಿಂದ 99
ಹಿಂದಿ 15 ರಿಂದ 50
ಇಂಗ್ಲೀಷ್ 35 ರಿಂದ 99
ಸಮಾಜ 35 ರಿಂದ 99
ವಿಜ್ನಾನ 35 ರಿಂದ 99

ಕನ್ನಡ+ಹಿಂದಿ+ಇಂಗ್ಲೀಷ್+ಸಮಾಜ+ವಿಜ್ನಾನ = ಗಣೇಶರ ಪೋನ್ ನಂಬರ್

ಈ ರೀತಿ ಹತ್ತು ಸಂಖ್ಯೆಯ ಕಾಂಬಿನೇಷನ್ ಟ್ರೈ ಮಾಡಿ
ಬರೆದುಕೊಂಡು ರಿಂಗ್ ಮಾಡ್ತಾ ಇರಿ
ಎಂದಾದರು ಒಂದು ದಿನ ಗಣೇಶರು ಪೋನ್ ನಲ್ಲಿ ಸಿಗಬಹುದು
:)))))

ಒಟ್ಟು ಕಾಂಬಿನೇಶನ್ ಸರಿಸುಮಾರು 288356250 ನಂಬರ್ ಗಳು

=ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

ಗುರುಗಳೆ-
ನಾ ಏರ್ಟೆಲ್-ವೋದ-ಡೊಕೋಮೋ ಇನ್ನಿತರ ಯಾವುದೇ ಮೊಬೈಲ್ ಆಪರೇಟರ್ ಗಳ ಮಾಲೀಕನಾದರೂ ಅಸ್ತು ಸಾರಿ ರಿಂಗ್ ಮಾಡಿ ಟ್ರೈ ಫೈಂಡ್ ಮೆಥಡ್ ಉಪಯೋಗಿಸೋಲ್ಲ...!! ಅಬ್ಬಾ ಆಗ ಬರುವ ಬಿಲ್ಲು ಎತ್ತಲು....:((

ಆದರೆ ಮನಸ್ಸು ಮಾಡಿದರೆ ನೀವಂತೂ ಅವರ ಅಡ್ಡ್ರೆಸ್ಸು ಫೋನ್ ನಂಬರ್ ಕಂಡು ಹಿಡಿಯಬಹುದು..... ಅಲ್ಲವೇ?....
ನಾ ಅಥವಾ ಇನ್ಣಾರರಾದರೂ ಮನಸ್ಸು ಮಾಡಿದರೆ ಸಮಯ ವ್ಯಯಿಸಿದರೆ ಆನ್‌ಲೈನ್ ನಲ್ಲಿ ಗಣೇಶ್ ಹೆಸರಿನ ಹಲವು ಅಡ್ಡ್ರೆಸ್ಸು ಫೋನ್ ನಂಬರ್ ಹುಡುಕಬಹುದು... ಆದರೆ ಅದು ಸಮುದ್ರ ಹಿಂಗಿಸಿ ಚಿನ್ನ ಹುಡುಕಿದಂತೆ...!!

ಗಣೇಶ್ ಅಣ್ಣ.... ದೊಡ್ಡ ಮನಸ್ಸು ಮಾಡಿ....?????
......ರ?

ಗುರುಗಳೆ ಪ್ರತಿಕ್ರಿಯೆಗೆ ನನ್ನಿ

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ಅವರ ನಿಜವಾದ ಹೆಸರು ಗಣೇಶ ಎಂದೆ ಇದೆ ಎಂದು ನಿಮಗೆ ಗ್ಯಾರಂಟಿಯ ???

ಸಪ್ತಗಿರಿ ಹಾಗೆ ನಿಮ್ಮ ಹಳೆಯ ಬರಹವೊಂದರ ನನ್ನ ಪ್ರತಿಕ್ರಿಯೆ ಇದೆ ಗಮನಿಸಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

ಅದು ನಿಜವೆ.....!

ಆದರು ಅವರು, ಅವರ ಹೆಸರು ಸಹ ...........ಲ್ಲ ಬಿಡಿ....

ನನ್ನ ಹಳೆಯ ಬರಹದ ನಿಮ್ಮ ಪ್ರತಿಕ್ರಿಯೆ ಗಮನಿಸಿ ಅದ್ಕೆ ಮಾರುತ್ತರಿಸಿರುವೆ...
ಗುರುಗಳೆ
ವನ್ದನೆಗಳು...

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

:))

ನಿಮ್ಮ ಮಂಜ ಅಂತು ಹೇಗೊ ಬಚಾವಾದ !
ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chitradurga Chetan on

ಚೆನ್ನಾಗಿ ಮೂಡಿ ಬಂದಿದೆ ಕುಲಕರ್ಣಿಯವರೆ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

ಗೋಪಾಲರೆ,
ಪ್ರತಿಕ್ರಿಯೆ ಪೂರ್ತಿ "ದಂತ"ದಂತಹ ಹೆಣ್ಣು ಬೇಕು ಎಂದು ಎಲ್ಲರ (ಜೀ,ಗುರುಗಳು..)ಬಳಿ ಸಪ್ತಗಿರಿವಾಸಿ ಗೋಗರೆಯುತ್ತಿದ್ದಾರೆ. :) ನಿಮ್ಮ ಕತೆಯಲ್ಲಿರುವ"ದಂತ"ದ ಹುಡುಗಿಯಂತಹವಳನ್ನು ಎಲ್ಲಿಂದಾದರೂ ಹುಡುಕಿ ತೋರಿಸಿ ಪುಣ್ಯಕಟ್ಟಿಕೊಳ್ಳಿ ಮಾರಾಯರೆ.. :)
ಪಾರ್ಥಸಾರಥಿಯವರೆ,
>>>ಅದು ಕಾಟು ನಾಯಲ್ಲ ’ಕಟ್ಟಿದ ನಾಯಿ’ ಕುತ್ತೆಗೆಗೆ ಬೆಲ್ಟ್ ಕಟ್ಟಿದ ನಾಯಿ..
:) :)
>>>ಅದೇಕೊ ಒಳಗಿದ್ದ ಕತೆಗಳೆಲ್ಲ ಮುಗಿತು ಹೋಯಿತು ಅನ್ನಿಸುತ್ತಿದೆ.
-ಹಾಗಿದ್ದರೆ ಹೊಸ ವಿಶಿಷ್ಟ ಕತೆ ಬರಲಿದೆ..ಕಾಯುತ್ತೇನೆ.
>>>ಕನ್ನಡ 70‍ ರಿಂದ 99, ಹಿಂದಿ 15 ರಿಂದ 50, ಇಂಗ್ಲೀಷ್ 35 ರಿಂದ 99, ಸಮಾಜ 35 ರಿಂದ 99, ವಿಜ್ನಾನ 35 ರಿಂದ 99..
ಒಟ್ಟು ಕಾಂಬಿನೇಶನ್ ಸರಿಸುಮಾರು 288356250 ನಂಬರ್ ಗಳು
ವ್ಹಾ..ಲೆಕ್ಕಾಚಾರ..ಮೆಚ್ಚಿದೆ.
>>>ಅವರ ನಿಜವಾದ ಹೆಸರು ಗಣೇಶ ಎಂದೆ ಇದೆ ಎಂದು ನಿಮಗೆ ಗ್ಯಾರಂಟಿಯ ???
ಗಣೇಶ/ಗಣೇಸಣ್ಣ/ಅಂ...ಸ್ವಾಮಿ/ತಿಂ..ಸ್ವಾಮಿ
ಸಪ್ತಗಿರಿವಾಸಿಯವರೆ,
>>ಅಸ್ತು ಸಾರಿ ರಿಂಗ್ ಮಾಡಿ ಟ್ರೈ ಫೈಂಡ್ ಮೆಥಡ್ ಉಪಯೋಗಿಸೋಲ್ಲ...!! ಅಬ್ಬಾ ಆಗ ಬರುವ ಬಿಲ್ಲು ಎತ್ತಲು....:((
-ಸುಲಭ. ಎಲ್ಲರಿಗೂ ಮಿಸ್‌ ಕಾಲ್ ಮಾಡಿ. :)
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

"ಎಲ್ಲರಿಗೂ ಮಿಸ್‌ ಕಾಲ್ ಮಾಡಿ. :)
-ಗಣೇಶ."

ಇದು ಆಗಬಹುದು... ...!! ಆದರೂ....

ದ0ತದ ಬಣ್ಣದ ಹೆಣ್ಣೂ....ಇರುವಳೇ?????

ಸಿಗುವಳೇ?......!!

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopaljsr on

ಪ್ರತಿಕ್ರಿಯಿಸಿದ ಎಲ್ಲರಿಗು ವಂದನೆಗಳು ಮತ್ತು ಧನ್ಯವಾದಗಳು...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.