21
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ದೇಹವೆನ್ನುವ ಮಾಯೆ (ಶ್ರೀನರಸಿಂಹ 11)

October 24, 2011 - 10:46am
sathishnasa
ಕಳೆದು ಹೋಗುತಿಹುದಾಯುಷ್ಯ ದೇಹದಾರೈಕೆಯಲಿ
ದೇಹವನೇ  ತಾನೆಂದು  ಭ್ರಮಿಸುತ  ಮೂಡತೆಯಲಿ
ಶಾಶ್ವತವಲ್ಲದ  ದೇಹವಿದೆಂಬುದನು   ಮರೆಯುತಲಿ
ಲೌಕಿಕದಿ ಮುಳುಗಿಹೆವು ಸುಖ ಪಡೆವ ಬ್ರಾಂತಿಯಲಿ
 
ದೇಹವೆಂಬುದು  ಭವಸಾಗರದಲಿ  ದೋಣಿಯ ತೆರದಿ
ಮನಸು, ಬುದ್ದಿಗಳು ಆದ ನಡೆಸುವ ಹುಟ್ಟಿನೋಪಾದಿ
ದೇವ ನೀಡಿರುವ ಈ ದೇಹ  ಸಾಧನೆಗಾಗಿಯೆ ಎಂದು
ಹೊರಗಿಲ್ಲ ಸುಖ, ನೆಮ್ಮದಿ ಕಾಣು ನೀ ಒಳಗೆ ಬಂದು
 
ಬಾಳ್ವೆಯ  ನಡೆಸಬೇಕು  ಕೆಸರಿನಲುದ್ಬವಿಪ  ಕಮಲ ನೀನಾಗಿ
ನಂಬು ಭವದ ಸಾಗರ ದಾಟಿಸುವ ಶ್ರೀನರಸಿಂಹ ಅಂಬಿಗನಾಗಿ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by sumangala badami on

<< ದೇಹವೆಂಬುದು ಭವಸಾಗರದಲಿ ದೋಣಿಯ ತೆರದ
ಮನಸು, ಬುದ್ದಿಗಳು ಆದ ನಡೆಸುವ ಹುಟ್ಟಿನೋಪಾದಿ

ದೇವ ನೀಡಿರುವ ಈ ದೇಹ ಸಾಧನೆಗಾಗಿಯೆ ಎಂದು

ಹೊರಗಿಲ್ಲ ಸುಖ, ನೆಮ್ಮದಿ ಕಾಣು ನೀ ಒಳಗೆ ಬಂದು>>

ಈ ಸಾಲುಗ‌ಳು ಬ‌ಹ‌ಳ ಇಷ್ಟ‌‌ವಾಯ್ತು
ದೇಹ‌ದ‌ ಮಾಯೆಯ‌ ಬ‌ಗೆಗಿನ‌ ವಿವ‌ರ‌ನೆ ಸು0ದ‌ರ‌ವಾಗಿದೆ ಸ‌ತೀಶ್ ಅವ‌ರೆ :)
ದೀಪಾವ‌ಳಿ ಹ‌ಬ್ಬ‌ದ‌ ಹಾರ್ದಿಕ‌ ಶುಭಕಾಮ‌ನೆಗ‌ಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathishnasa on

ಧನ್ಯವಾದಗಳೊಂದಿಗೆ ನಿಮಗೂ ದೀಪಾವಳಿ ಹಬ್ಬದ ಶುಭಾಶಯಗಳು ಸುಮಂಗಲಾ ರವರೇ
.....ಸತೀಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathishnasa on

ಧನ್ಯವಾದಗಳು ಚೇತನ್ ರವರೇ
...ಸತೀಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

ಸತೀಶ್
ಗಹನ ವಿಚಾರಗಳನ್ನು ಸರಳ ಸು0ದರ ಕಾವ್ಯದಲ್ಲಿ ನಿರೂಪಿಸುತ್ತಿದ್ದೀರ, ಹೀಗೆ ಸಾಗಲಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathishnasa on

ಶ್ರೀ ನರಸಿಂಹನ ಪ್ರೇರಣೆಯಂತೆ ಮುಂದುವರಿಸುತ್ತೇನೆ ಶ್ರೀಧರ್ ರವರೇ, ಧನ್ಯವಾದಗಳೊಂದಿಗೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathishnasa on

ನಿಮ್ಮ ಹೃದಯ ಸ್ಪರ್ಶಿ ಪ್ರತಿಕ್ರಿಯೆಗೆ ಧನ್ಯವಾದಗಳು ನಾಗರಾಜ್ ರವರೇ
...ಸತೀಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.