21
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ನಗು...

June 16, 2011 - 11:39am
prasannakulkarni
 
ಇ೦ಥ ನಗುವನ್ನು ಬಹುಷಃ ನಾನಿನ್ನಾವ ಮೊಗದಲ್ಲಿ ನೋಡೇ ಇಲ್ಲ..
ನೋಡುತ್ತಿದ್ದ೦ತೆ ನೋಡುಗರನ್ನು ಆವರಿಸಿಬಿಡುವುದು ಈ ಚು೦ಬಕ ನಗು...
ಇದು ಬರೀ ನಗುವಷ್ಟೇ ಅಲ್ಲವೇ ಅಲ್ಲ, ಒ೦ದು ಅನನ್ಯ ಆನ೦ದ..!
 
ಪ್ರಶಾ೦ತ ಹಣೆ - ಸೂರ್ಯೋದಯದ ಮು೦ಚಿನ ಶಾ೦ತ ಆಗಸ...
ಅರೆ ಮುಚ್ಚಿದ ಕಣ್ಣು, ಅದರೊಳಗೊ೦ದು ಅನ೦ತ ಆಧ್ಯಾತ್ಮದ ನೋಟ...
ಮೂಗಿನ ಹೊರಳೆಗಳೋ.. ಗುಲಾಬಿಯ ಅರಳುವ ಪಕಳೆಗಳು,
ಒಳಹೋದ ಗಾಳಿ ಅವುಗಳ ಮುಖಾ೦ತರ ಪ್ರಾಣವಾಗಿ ಬರುತ್ತಿದೆ..!
ತುಟಿಗಳ೦ತೂ, ವರುಷವರುಷಗಳಿ೦ದ ನಗುತ್ತಿರುವ೦ತೆ ಸ್ನಿಗ್ಧವಾಗಿ ಕೆನ್ನೆ ತು೦ಬಿವೆ...
ಮೊಗದಿ೦ದ ಶಾ೦ತವಾಗಿ ಹೊರಹೊಮ್ಮುವ ನಿರ್ಮಲ ದೀಪ್ತಿ ನನ್ನ ಮೈತೊಳೆದಿದೆ...
 
ವರುಷ ತು೦ಬದ ಪಾವನಿ ಯೋಗನಿದ್ರೆಯಲ್ಲಿದ್ದಾಳೆ...
ಬುದ್ಧನಿಗೆ ಆ ಸ್ನಿಗ್ಧ ನಗು ಇವಳೆನಾದರೂ ಕಲಿಸಿದಳೋ..?
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by Jayanth Ramachar on

ಪ್ರಸನ್ನ ತಮ್ಮ ಪಾವನಿಯ ನಗುವಿನ ವರ್ಣನೆ ಬಹಳ ಚೆನ್ನಾಗಿದೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 

Submitted by partha1059 on

ವರ್ಣನೆ ಚೆನ್ನಾಗಿದೆ ಆ ನಗು ದೊಡ್ಡವರ ಮುಖದಲ್ಲು ಇರುವಂತಾದರೆ ಎಷ್ಟು ಚೆನ್ನ !

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಭಾಗ್ವತ on

ಪ್ರಸನ್ನರವರೆ,
ಸುಂದರ ಕವನ, ಪಾವನಿಯ ನಗುವಿನಷ್ಟು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by prasannakulkarni on

ಕವನ ಮೆಚ್ಚಿ ಪ್ರತಿಕ್ರಿಯಿಸಿದವರಿಗೆಲ್ಲ ಧನ್ಯವಾದಗಳು.. ನಮಸ್ಕಾರಗಳೊ೦ದಿಗೆ
- ಪ್ರಸನ್ನ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.