ನಗೆಹನಿಗಳು ( ಹೊಸವು ?) - 36 ನೇ ಕಂತು

ನಗೆಹನಿಗಳು ( ಹೊಸವು ?) - 36 ನೇ ಕಂತು

( ಇಂಗ್ಲೀಷ್ ನ ಜೋಕುಗಳ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮಗಾಗಿ ಕನ್ನಡಿಸುತ್ತಿದ್ದೇನೆ )
****
ಸೇಲ್ಸ್‌ಮನ್ ಗಳ ಮಾತು
- ಹೇಗೆ ನಡೆಯುತ್ತಿದೆ ನಿನ್ನ ಕೆಲಸ ? ಹೊಸ ಆರ್ಡರುಗಳು ಸಿಗುತ್ತಿವೆಯೇ ?
- ಆರ್ಡರುಗಳಿಗೇನಯ್ಯಾ ಕೊರತೆ ? ದಿನಾಲೂ ಸಿಗುತ್ತವೆ , ಧಂಡಿಯಾಗಿ , ನನ್ನ ಹೆಂಡತಿಯಿಂದ !
****
-ನಿಮ್ಮ ಫ್ಯಾಕ್ಟರಿ ಬೆಂಕಿಗೆ ಆಹುತಿ ಆದದ್ದು ವಿಷಾದನೀಯ. ಅದರಲ್ಲಿ ಏನು ಉತ್ಪಾದನೆ ಮಾಡುತ್ತಿದ್ದಿರಿ ?
- ಬೆಂಕಿ ಆರಿಸುವ fire extinguishers ಗಳನ್ನು
****
- ಹೇಗೆ ಅವನು ಇಷ್ಟೊಂದು ಹಣ ಗಳಿಸಿದ ?
- ದೇವರಿಗೇ ಗೊತ್ತು.
- ಅದಕ್ಕೇ ಅವನಿಗೆ ದೇವರಲ್ಲಿ ತುಂಬಾ ಭಯ, ಭಕ್ತಿ !
****
- debtor ಅಂದರೆ ಏನು , ಅಪ್ಪ ?
- ಸಾಲ ಮಾಡಿದವನು
- ಮತ್ತೆ ಕ್ರೆಡಿಟರ್ ಅಂದರೆ ?
- ಸಾಲ ವಾಪಸ್ ಬರುತ್ತದೆ ಅಂತ ತಿಳಿದವನು !

Rating
No votes yet