ನಾನು ಓದನ್ನು ನಿಲ್ಲಿಸ್ಬೇಕು ಅಂತ ಅಂದ್ಕೊಳ್ತಲೇ ಈ ಮೂರು ತಿಂಗಳಲ್ಲಿ ವಿಶ್ವಕಥಾಕೋಶದ ೨೧ ಸಂಪುಟ ಓದಿದೆ.
ಅಲ್ಲಿನ ಕಥೆಗಳು ಕೆಲವು ತುಂಬಾ ಚೆನ್ನಾಗಿದ್ದವು. ಜೀವಮಾನ ಮರೆಯದಂತಹ ಕತೆಗಳು ಕೆಲವು. ಈಗಾಗಲೇ ಕನ್ನಡಕ್ಕೆ ಅನುವಾದವಾಗಿ ಓದಿದ್ದ ಕೆಲವು ಕತೆಗಳು - ಫ್ರೆಂಚ್ ಭಾಶೆಯ 'ಕೊನೆಯ ಪಾಠ', 'ನಿಗೂಢ ಸೌಧ' ಮತ್ತೆ ಭೆಟ್ಟಿಯಾದವು. 'ಕತ್ತಲಲ್ಲಿ ಹುಟ್ಟಿತೊಂದು ಭಾಶೆ' ಬಹುಕಾಲ ನೆನಪಿನಲ್ಲಿ ಉಳಿವ ಚಮತ್ಕಾರೀ ಕತೆ . ಈ ವಿಶ್ವಕಥಾಕೋಶದೊಂದಿಗಿನ ಬೋನಸ್ ಎಂದರೆ ಜಗತ್ತಿನ ಬೇರೆ ಬೇರೆ ಭಾಗಗಳ ರಾಜಕೀಯ , ಸಾಮಾಜಿಕ, ಸಾಹಿತ್ಯಿಕ, ಸಾಂಸ್ಕೃತಿಕ ಇತಿಹಾಸದ ಪರಿಚಯ ಕೊಡುವ ಮುನ್ನುಡಿಗಳು! . ಇಪ್ಪತ್ತೈದು ವರ್ಷದ ಹಿಂದಿನ ಈ ಸಂಪುಟವನ್ನು ಮರುಮುದ್ರಣ ಮಾಡುವಾಗ ಈ ನಡುವೆ ಆದ ಬೆಳವಣಿಗೆಗಳನ್ನು ಸೇರಿಸಿ ( ಉದಾ ಬರ್ಲಿನ್ ಗೋಡೆ ಕೆಳಗುರುಳಿದ್ದು, ಅಮೇರಿಕದೊಂದಿಗೆ ಸೆಣೆಸುತ್ತಿದ್ದ ಬಲಾಢ್ಯ ಸೋವಿಯತ್ ಒಕ್ಕೂಟ ಒಡೆದು ನುಚ್ಚುನೂರಾದದ್ದು) ಅಪ್ಡೇಟ್ ಮಾಡಿದ್ದರೆ ಚೆನ್ನಾಗಿರುತ್ತಿತ್ತು.
'ಪಾಚಿ ಕಟ್ಟಿದ ಪಾಗಾರ' ಎಂಬ ದೊಡ್ಡ ಗಾತ್ರದ ಕಾದಂಬರಿ , ಗಣೇಶಯ್ಯನವರ ಕನಕಮುಸುಕು,ಕರಿಸಿರಿಯಾನ , ಆ ಟೇಲ್ ಅಫ್ ಟು ಸಿಟೀಸ್ ನ ಕನ್ನಡ ಸಂಗ್ರಹಾನುವಾದ ಓದಿದ್ದಾಯಿತು.
(ಅಂದ ಹಾಗೆ ಒಂದು ಸಣ್ಣ ಅನಿಸಿಕೆ- ಬಾಲಿಶ ಅನ್ನಬಹುದೇನೋ, ಈ 'ಟೇಲ್ ಅಫ್ ಟು ಸಿಟೀಸ್', ಹಿಂದೆ ಓದಿದ ಸುಮಾರು ಸಾವಿರ ಪುಟದ 'ಗಾನ್ ವಿಥ್ ದ ವಿಂಡ್' ಮತ್ತು ೩೦೦ ಪುಟಗಳ ಗ್ರಾಮಾಯಣ ಓದುವದು ಸ್ವಲ್ಪ ಕಠಿಣವೇ ಆಯಿತು . ಪಾತ್ರಗಳ ಸ್ವಭಾವ , ವೇಶಭೂಷಣಗಳಾಗಲೀ , ಅವುಗಳ ಮನಸ್ಸಿನ ಒಳತೋಟಿಯಾಗಲೀ ಇಲ್ಲ, A , B , C ಯಂತಹ ಏನನ್ನೂ ಬಿಟ್ಟು ಕೊಡದ ಪಾತ್ರಗಳ ಹೆಸರು ಬೇರೆ! A ಯು ಹೀಗೆ ಮಾಡಿದನು, Bಯು ಅಲ್ಲಿಗೆ ಹೋದನು , C ಯು ಹೀಗೆ ಎಂದನು . ಮತ್ತೆ B ಯು ಹೀಗೆ , ಮತ್ತೆ ಅದಾವನೋ X ಹಾಗೆ . ಆ A ಯು ಹೀಗೆ ... ಎಂದೆಲ್ಲ ಕತೆ ಇದ್ದರೆ ಓದುವವರ ಕಷ್ಟ ಹೇಳಲಾಗದು. )
ಸೀಡೀಯಿಂದ ಎರಡು ವರ್ಷಗಳ ಅಪರಂಜಿ, ಮೂರು ವರ್ಷಗಳ ಕೊರವಂಜಿ ಹಾಸ್ಯ ಪತ್ರಿಕೆಗಳ ಸಂಚಿಕೆಗಳನ್ನು ಓದಿದ್ದಾಯಿತು.
ಆರಂಭಿಕ ಕೊರವಂಜಿ ಸಂಚಿಕೆಗಳು ೧೯೪೨-೪೫ ಕ್ಕೆ ಸೇರಿದ್ದವು . ಅದರಲ್ಲಿ ಸುವಿಖ್ಯಾತ ವ್ಯಂಗ್ಯ ಚಿತ್ರಕಾರ , ಹೆಮ್ಮೆಯ ಕನ್ನಡಿಗ ಆರ್ ಕೆ ಲಕ್ಷ್ಮಣ್ ಅವರ ಆರಂಭಿಕ ವ್ಯಗ್ಯಚಿತ್ರಗಳನ್ನು , ಅಂದಿನ ಕಾಲದ ಜಾಹಿರಾತುಗಳನ್ನು , ಸಿನಿಮಾ ಜಾಹಿರಾತುಗಳನ್ನು ನೋಡಬಹುದು , ಜತೆ ಜತೆಗೇ ಅಂದಿನ ಸಮಾಜ , ಎರಡನೇ ಮಹಾಯುದ್ಧ , ರೇಷನ್ ಯುಗ , ಅಭಾವ ಯುಗದ ಪರಿಚಯ ಹೊಂದಬಹುದು!
ಸದ್ಯಕ್ಕೆ ಕಣ್ಣ ಮುಂದೆ 'ಶೋಧ' ಪತ್ತೇದಾರಿ ಕಥೆಗಳ ಸಂಕಲನ , ಚಾರ್ಮಿನಾರ್, ಸತ್ಯಜಿತ್ ರೇ ಕಥೆಗಳು, ಗಣೇಶಯ್ಯನವರದೇ ಚಿತಾದಂತ , ೪೦ ವರ್ಶಗಳ ಅಪರಂಜಿ ಮತ್ತು ಕೊರವಂಜಿ ಇವೆ !
ಬಹುದಿನಗಳಿಂದ ನನ್ನ ಓದಿನ ಅಪ್ಡೇಟ್ ಕೊಟ್ಟಿರಲಿಲ್ಲ. ಈಗ ಸಮಯ ಕೂಡಿ ಬಂತು. ಕೊಟ್ಟಿದ್ದೇನೆ!









ಪ್ರತಿಕ್ರಿಯೆಗಳು
ಉ: ನನ್ನ ಇತ್ತೀಚಿನ ಓದು- ಒಂದು ಅಪ್ಡೇಟ್
ಎಷ್ಟೊಂದು ಓದುತ್ತೀರಿ ನೀವು. ನನಗೆ ಅಸೂಯೆ ಆಗುತ್ತೆ.
ಉ: ನನ್ನ ಇತ್ತೀಚಿನ ಓದು- ಒಂದು ಅಪ್ಡೇಟ್
ಅ.....................ಬ್ಬಾ.......................
ಮಿಶ್ರಿಕೋಟಿಯವರೆ,
"ಕೋಟಿ" ಪುಸ್ತಕ ಓದಬೇಕೆಂದು ಟಾರ್ಗೆಟ್ ಇಟ್ಟುಕೊಂಡಿದ್ದೀರೋ ಹೇಗೆ? :)
ನಾನೂ ಓದಬೇಕೆಂದು ಇಟ್ಟುಕೊಂಡಿದ್ದೇನೆ...ಒಂದು ವಾರದಿಂದ ಪೇಪರ್..ಸಮಯವೇ ಸಿಗುತ್ತಿಲ್ಲ ಅಂತ ಅಲ್ಲ..ಮತ್ತೆ ಓದುವ ಅಂತ ಮುಂದೆ ಹಾಕುತ್ತಿರುವೆನು. :)
ನಿಮ್ಮ ಓದಿಗೆ ಜೈ.
-ಗಣೇಶ.
ಉ: ನನ್ನ ಇತ್ತೀಚಿನ ಓದು- ಒಂದು ಅಪ್ಡೇಟ್
ಅಪ್ ಡೇಟ್ ಗಾಗಿ ಧನ್ಯ ವಾದಗಳು.
ಅಪರಂಜಿ, ಕೊರವಂಜಿಯ ಸೀಡಿ ಎಲ್ಲಿ ಸಿಗುತ್ತದೆ ಹೇಳಬಹುದೇ?
ಉ: ನನ್ನ ಇತ್ತೀಚಿನ ಓದು- ಒಂದು ಅಪ್ಡೇಟ್
ಶ್ರೀಕಾರರೇ
ನಾನು ಜಯನಗರದಲ್ಲಿರುವ ಟೋಟಲ್ ಕನ್ನಡ ಡಾಟ್ ಕಾಂ ಮಳಿಗೆಯಲ್ಲಿ ಖರೀದಿ ಮಾಡಿದೆ. ಸಪ್ನ ಮುಂತಾದ ಬೇರೆ ಮಳಿಗೆಗಳಲ್ಲಿಯೂ ಸಿಗಬಹುದು. ಅಪರಂಜಿಮ್ಯಾಗ್ ತಾಣದಲ್ಲಿಯೂ ಅಥವಾ ಅಲ್ಲಿರುವ ಡೌನ್ಲೋಡ್ ಮಾಡಬಹುದಾದ ಸಂಚಿಕೆಗಳಲ್ಲಿಯೂ ಮಾಹಿತಿ ಸಿಗುವದು.
ಉ: ನನ್ನ ಇತ್ತೀಚಿನ ಓದು- ಒಂದು ಅಪ್ಡೇಟ್
ಶ್ರೀಕಾಂತ್, ನಿಮ್ಮ ಓದು ನಮ್ಮಲ್ಲೂ ಓದುವ ಸ್ಫೂರ್ತಿ ಮೂಡಿಸಲಿ.
ಉ: ನನ್ನ ಇತ್ತೀಚಿನ ಓದು- ಒಂದು ಅಪ್ಡೇಟ್
ನಾನು ಹಿಂದೊಮ್ಮೆ ಗಾನ್ ವಿದ್ ದಿ ವಿಂಡ್ ಓದಲು ಪ್ರಯತ್ನಿಸಿದ್ದೆ. ಅರ್ಧದಷ್ಟು ಪುಸ್ತಕ ಓದಿದ್ದೆ. ಆಮೇಲೆ ಏನಾಯಿತಪ್ಪಾ ಅಂದರೆ ಅಚಾನಕ್ ಆಗಿ ಕೊನೆಯ ಪುಟ ಓದಿದೆ. ಇಡೀ ಕಥೆ ಅರ್ಥವಾಯಿತು ಅಂತ ಅಂದ್ಕೊಂಡ್ಬಿಟ್ಟೆ. ಮತ್ತೆ ಪೂರ್ತಿ ಓದಲು ಹೋಗಲೇ ಇಲ್ಲ :-)
ಉ: ನನ್ನ ಇತ್ತೀಚಿನ ಓದು- ಒಂದು ಅಪ್ಡೇಟ್
ನಿಮ್ಮ ಹೆಸರನ್ನು ಈಗ ಶ್ರೀಕಾಂತ್ ಕೋಟಿಮಿಶ್ರಿ,' ಎನ್ನಬಹುದೇನೋ ! ನನಗೆ ಗೊತ್ತು ನೀವು ಓದುವುದರಲ್ಲಿ ಮಾಹಿರರು, ಎಂದು. 'ಮೈಸೂರ್ ಅಸೋಸಿಯೇಶನ್ ಲೈಬ್ರರಿ ,' ನಿಮ್ಮ ಆವಶ್ಯಕತೆಗಳನ್ನು ಪೂರೈಸಲಿ, ಎಂದು ಹಾರೈಸುತ್ತೇನೆ ...
ಉ: ನನ್ನ ಇತ್ತೀಚಿನ ಓದು- ಒಂದು ಅಪ್ಡೇಟ್
ಹೀಗೇ ಮುಂದೆ ಸಾಗಲಿ ಓದು, ನಿಲ್ಲಿಸೋ ಮಾತಾಡಬೇಡಿ :)
ಉ: ನನ್ನ ಇತ್ತೀಚಿನ ಓದು- ಒಂದು ಅಪ್ಡೇಟ್
ಸುನಿಲ್,
'ಗಾನ್ ವಿತ್ ದ ವಿಂಡ್ ' ಚಿತ್ರನೋಡಿ ಖುಷಿಪಡಿ !
3 ಗಂಟೆ ೪೪ ನಿ.ಗಳ 'ಈ ಪ್ರೇಮ ದೃಶ್ಯ ಕಾವ್ಯ' ದಲ್ಲಿ ಪಾಲ್ಗೊಂಡ ಪ್ರೇಮ ಪಕ್ಷಿಗಳು, 'ಕ್ಲಾರ್ಕ್ ಗೆಬಲ್' ಗಾಗೂ 'ವಿವಿಏನ್ ಲೀ' !. ೧೯೩೯ ರಲ್ಲಿ ನಿರ್ಮಾಣಗೊಂಡು ಪ್ರದರ್ಶಿತವಾದ ಅತ್ಯಂತ ಜನಪ್ರಿಯ ಹಾಲಿವುಡ್ ಚಿತ್ರವಿದು. 'ವಿಕ್ಟರ್ ಫ್ಲೆಮಿಂಗ್,' ಇದರ ನಿರ್ಮಾಪಕ. 'ಅಮೇರಿಕಾದ ಫಿಲಂ ಸೊಸೈಟಿಯ ಚಿತ್ರನಿರ್ಮಾಣದ ಇತಿಹಾಸದಲ್ಲಿ ೬ ನೆಯ ಅತ್ಯುತ್ತಮ ಚಿತ್ರವೆಂಬ ಹೆಗ್ಗಳಿಕೆ', ಗೆ ಪಾತ್ರವಾಗಿತ್ತು ! (ಆಗಿನ ಪ್ರಕಾರ) ನಾನೂ ನೋಡಿ ಆನಂದಿಸಿದ್ದೇನೆ !