November 15, 2011 - 10:21am
ದೇಹವೇ ನಾನೆನುವ ಭ್ರಮೆಯನು ಬಿಡು ಮರುಳೆ
ಉಸಿರು ನಿಲ್ಲಲಾಕ್ಷಣವೆ ನಶಿಪುದು ಕಾಯ ಕೂಡಲೆ
ಮನಸು,ಬುದ್ದಿಗಳೆ ನಾನೆಂಬುದದುವು ಮೂಡತೆಯು
ಕಾಯವಳಿಯಲದರೊಂದಿಗಳಿವ ತರಂಗಗಳು ಅವು
ದೇಹದ ಸುಖವೆಂಬುದದು ಕ್ಷಣಿಕ ಸುಖವಾಗಿಹುದು
ದೇಹ ನಾನಲ್ಲೆಂಬರಿವೆ ಶಾಶ್ವತ ಸುಖವೆನಿಸುವುದು
ಮನಸ ನಿಗ್ರಹಿಸುವುದಕೆ ಎಲ್ಲ ಸಾಧನೆಗಳ ಪಥವು
ಮನಸ ಲಯಗೊಳಿಸು ಅದುವೆ ಸಮಾದಿ ಸ್ಥಿತಿಯು
ನಾನಾರೆಂಬುದನು ಅರಿಯಬೇಕು ನೀ ಒಳಗಣ್ಣ ತೆರೆಯುತಲಿ
ಎಲ್ಲರೊಳಗಿಹ ಪರಮಾತ್ಮ ಶ್ರೀನರಸಿಂಹ ನಾನೆಂಬ ರೂಪದಲಿ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: "ನಾನು" ಯಾರೆಂಬರಿವು (ಶ್ರೀ ನರಸಿಂಹ 13)
ಸಮಾನ ವಿಚಾರಿ ಸತೀಶರಿಗೆ ನಮಸ್ತೆ. ಭಾವ ಸುಂದರವಾಗಿ ಹೊರಹೊಮ್ಮಿದೆ.
ಹಿಂದೆ ಇರಲಿಲ್ಲ ಮುಂದೆ ಇರದೀ ದೇಹ
ಈಗಿರುವ ದೇಹಕರ್ಥ ಬಂದುದು ಹೇಗೆ|
ಶುದ್ಧ ಬುದ್ಧಿಯಲಿ ನೋಡೆ ತಿಳಿದೀತು ನಿನಗೆ
ಅಂತರಾತ್ಮನ ಕರೆಯು ಕೇಳಿಪುದು ಮೂಢ||
ಉ: "ನಾನು" ಯಾರೆಂಬರಿವು (ಶ್ರೀ ನರಸಿಂಹ 13)
ಹೃದಯ ಸ್ಪರ್ಶಿ ಪ್ರತಿಕ್ರಿಯೆಗೆ ಧನ್ಯವಾದಗಳು ನಾಗರಾಜ್ ರವರೇ
...ಸತೀಶ್
ಉ: "ನಾನು" ಯಾರೆಂಬರಿವು (ಶ್ರೀ ನರಸಿಂಹ 13)
ದೇಹ ನಾನಲ್ಲ ಉಸಿರು ನಾನಲ್ಲ ಮನಸು ಬುದ್ದಿಗಳು ನಾನಲ್ಲ ...
ಎನ್ನುವ ನೀವು
ನಾನು ಎ0ಬುದೆ ಸುಳ್ಳು ಎನ್ನುವ ನಾಗರಾಜರು
ನಡುವೆ 'ನಾನು' ಎ೦ಬ ಈ ಭಾವ ಹೊತ್ತ ನಾವು
ನಮ್ಮನ್ನು ಕಾಯಬೇಕು ಅ ನರಸಿ0ಹ ರೂಪಿಯಾದ ಮೂಡ
ಪಾರ್ಥಸಾರಥಿ
ಉ: "ನಾನು" ಯಾರೆಂಬರಿವು (ಶ್ರೀ ನರಸಿಂಹ 13)
:)))
ಉ: "ನಾನು" ಯಾರೆಂಬರಿವು (ಶ್ರೀ ನರಸಿಂಹ 13)
ಶ್ರೀನರಸಿಂಹನನ್ನು ನಂಬಿ ಶರಣಾದರೆ ಸಾಕು ನಿಮ್ಮ ಹಿಂದೆಯೆ ಇದ್ದು ಕಾಯುತ್ತಾನೆ ಧನ್ಯವಾದಗಳೊಂದಿಗೆ
...ಸತೀಶ್
ಉ: "ನಾನು" ಯಾರೆಂಬರಿವು (ಶ್ರೀ ನರಸಿಂಹ 13)
ಸತೀಶ್ ರವರಿಗೆ
ನಾನು ಇರುವ ತನಕ ಮೋಕ್ಷಕೆ ದಾರಿಯಿಲ್ಲ ನಾರಸಿ೦ಹ
ನೀಳಾ
ಉ: "ನಾನು" ಯಾರೆಂಬರಿವು (ಶ್ರೀ ನರಸಿಂಹ 13)
ನಿಮ್ಮ ಮಾತು ನಿಜ "ನಾನು" ಎನ್ನುವುದು ಇರುವ ತನಕ ಮೋಕ್ಷವಿಲ್ಲ ಆದರೆ "ನಾನು " ಯಾರೆಂಬುದು ತಿಳಿದೊಡನೆ ಮೋಕ್ಷ ಸಿಕ್ಕಂತೆ ಧನ್ಯವಾದಗಳೊಂದಿಗೆ
...ಸತೀಶ್
ಉ: "ನಾನು" ಯಾರೆಂಬರಿವು (ಶ್ರೀ ನರಸಿಂಹ 13)
>> ನಿಮ್ಮ ಮಾತು ನಿಜ "ನಾನು" ಎನ್ನುವುದು ಇರುವ ತನಕ ಮೋಕ್ಷವಿಲ್ಲ ಆದರೆ "ನಾನು " ಯಾರೆಂಬುದು ತಿಳಿದೊಡನೆ ಮೋಕ್ಷ ಸಿಕ್ಕಂತೆ<<
``ಏನಿಲ್ಲದೆ ಎಲ್ಲವಾಗಿದೆ`` ಅದೇ ಈ ``ನಾನು``.
ಮೊನ್ನೆ ವಾಕ್ಪಥದ ಕೊನೆಯಲ್ಲಿ ಶ್ರೀ ರಘು ಅವರು ಹೇಳಿದ ಆ ಪದ ನೆನಾಪಾಯ್ತು.
ಅರ್ಥಗರ್ಭಿತ ಕವನ.
ದನ್ಯವಾದಗಳು
ರಾಮಮೋಹನ
ಉ: "ನಾನು" ಯಾರೆಂಬರಿವು (ಶ್ರೀ ನರಸಿಂಹ 13)
>> ಏನಿಲ್ಲದೆ ಎಲ್ಲವಾಗಿದೆ << ಎಲ್ಲವು ಈ ಪದದಲ್ಲಿಯೇ ತುಂಬಿದೆ ಧನ್ಯವಾದಗಳೊಂದಿಗೆ
....ಸತೀಶ್