21
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ನಾಳ್ಯಾರೋ, ನಾವ್ಯಾರೋ?

August 12, 2012 - 8:23am
hariharapurasridhar

ಪ್ರತಿಕ್ಷಣ ಮಯಂ ಕಾಲಃ ಕ್ಷೀಯಮಾಣೋ ನ ಲಕ್ಷ್ಯತೇ ।
ಆಮಕುಂಭ ಇವಾಂಭಃಸ್ಥೋ ವಿಕೀರ್ಣೋ ನ ವಿಭಾವ್ಯತೇ ॥

ಪ್ರತಿ ಕ್ಷಣದಲ್ಲಿಯೂ ಸಹ ನಮ್ಮ ಆಯುಸ್ಸು ಕಳೆಯುತ್ತಿದ್ದರೂ ಗೊತ್ತಾಗುವುದಿಲ್ಲ,ಹಸಿಯಾದ ಮಡಿಕೆಯು ನೀರಿನಲ್ಲಿ ಕರಗುತ್ತಿದ್ದರೂ ಗೊತ್ತಾಗುವುದಿಲ್ಲ. ಅದಕ್ಕೆ ಅಲ್ಲವೆ ಆಯುರ್ನಶ್ಯತಿ ಪಶ್ಯತಾಂ ಪ್ರತಿದಿನಂ ಯಾತಿ ಕ್ಷಯಮ್ ಯೌವ್ವನಂ ಎಂದು ಆದಿಶಂಕರರು ಹೇಳಿದ್ದು. ಪ್ರತಿದಿನವೂ ವೃದ್ಧತ್ವ ಪಡೆಯುತ್ತಿದ್ದರೂ ನಮ್ಮ ಗತಿಸಿದ ಬಗ್ಗೆ ಅಲೋಚಿಸಲಾರೆವು.

ನನ್ನ ಮಾತು:

ಈ ಸೂಕ್ತಿ ಎಷ್ಟು ಸೊಗಸಾಗಿದೆ, ಹೌದು, ಇಷ್ಟು ಆಯಸ್ಸನ್ನು ಕಳೆದಿದ್ದೇವೆ ನಾವು ಸಮಾಜಕ್ಕೆ ಮಾಡಿದ್ದೆಷ್ಟು? ಸಮಾಜದಿಂದ ಪಡೆದಿದ್ದೆಷ್ಟು? ನಿಜವಾಗಿ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳ ಬೇಕಲ್ಲವೇ? ಈ ಸೂಕ್ತಿ ನನ್ನ ದೃಷ್ಟಿಯಲ್ಲಿ ಎಳೆಯರಿಗಿಂತಲೂ ಪ್ರೌಢರಿಗೆ ಹೆಚ್ಚು ತಾಕಬೇಕು. ಹಿಂದಿದ್ದಷ್ಟು ದಿನ ಮುಂದೆ ಇರುವುದು ಗೊತ್ತಿಲ್ಲ. ನಾಳ್ಯಾರೋ, ನಾವ್ಯಾರೋ? ಎಂಬ ಮಾತಿದೆ. ಯಮನ ಧೂತರು ಬಂದು ಸೆಳೆಯುವಾಗ ನಾನು ಇನ್ನೂ ಏನೋ ಮಾಡಬೇಕೆಂದಿರುವೆ, ಸ್ವಲ್ಪ ತಾಳು, ಎಂದರೆ ಅವ ತಾಳಲಾರ. ಇಂದು ಬದುಕಿದ್ದೇವೆ. ಇಂದೇ ಈಗಲೇ ನಾವೇನಾದರೂ ಸಮಾಜಮುಖಿ ಕಾರ್ಯದಲ್ಲಿ ನಮ್ಮನ್ನು ತೊ ಡ ಗಿಸಿಕೊಂಡು ಬಿಡಬೇಕಲ್ಲವೇ?
ಮತ್ತೆ ಹೇಳುವೆ...ನಾಳ್ಯಾರೋ? ನಾವ್ಯಾರೋ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by kavinagaraj on

ಆದರ್ಶನ ಆ ಕ್ರಿಯೆ 'ಒಳಗಿನಿಂದ' ಬಂದದ್ದಾದ್ದರಿಂದ ಆತ ಯಶಸ್ವಿಯಾದ! ಉತ್ತಮ ನೀತಿಯುತ ಲೇಖನ, ಶ್ರೀಧರ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hariharapurasridhar on

ನನಗೆ ಅರ್ಥ ಆಗ್ತಾ ಇಲ್ಲ, ಇದು ನನ್ನ ಬರಹವಲ್ಲ. ನಾನು ಇದೇ ಹೆಸರಲ್ಲಿ ವೇದಸುಧೆಯಲ್ಲಿ ಪ್ರಕಟಿಸಿದ್ದ ಲೇಖನ ಕೆಳಗಿದೆ..

ಪ್ರತಿಕ್ಷಣ ಮಯಂ ಕಾಲಃ ಕ್ಷೀಯಮಾಣೋ ನ ಲಕ್ಷ್ಯತೇ ।
ಆಮಕುಂಭ ಇವಾಂಭಃಸ್ಥೋ ವಿಕೀರ್ಣೋ ನ ವಿಭಾವ್ಯತೇ ॥

ಪ್ರತಿ ಕ್ಷಣದಲ್ಲಿಯೂ ಸಹ ನಮ್ಮ ಆಯುಸ್ಸು ಕಳೆಯುತ್ತಿದ್ದರೂ ಗೊತ್ತಾಗುವುದಿಲ್ಲ,ಹಸಿಯಾದ ಮಡಿಕೆಯು ನೀರಿನಲ್ಲಿ ಕರಗುತ್ತಿದ್ದರೂ ಗೊತ್ತಾಗುವುದಿಲ್ಲ. ಅದಕ್ಕೆ ಅಲ್ಲವೆ ಆಯುರ್ನಶ್ಯತಿ ಪಶ್ಯತಾಂ ಪ್ರತಿದಿನಂ ಯಾತಿ ಕ್ಷಯಮ್ ಯೌವ್ವನಂ ಎಂದು ಆದಿಶಂಕರರು ಹೇಳಿದ್ದು. ಪ್ರತಿದಿನವೂ ವೃದ್ಧತ್ವ ಪಡೆಯುತ್ತಿದ್ದರೂ ನಮ್ಮ ಗತಿಸಿದ ಬಗ್ಗೆ ಅಲೋಚಿಸಲಾರೆವು.

ನನ್ನ ಮಾತು:

ಈ ಸೂಕ್ತಿ ಎಷ್ಟು ಸೊಗಸಾಗಿದೆ, ಹೌದು, ಇಷ್ಟು ಆಯಸ್ಸನ್ನು ಕಳೆದಿದ್ದೇವೆ ನಾವು ಸಮಾಜಕ್ಕೆ ಮಾಡಿದ್ದೆಷ್ಟು? ಸಮಾಜದಿಂದ ಪಡೆದಿದ್ದೆಷ್ಟು? ನಿಜವಾಗಿ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳ ಬೇಕಲ್ಲವೇ? ಈ ಸೂಕ್ತಿ ನನ್ನ ದೃಷ್ಟಿಯಲ್ಲಿ ಎಳೆಯರಿಗಿಂತಲೂ ಪ್ರೌಢರಿಗೆ ಹೆಚ್ಚು ತಾಕಬೇಕು. ಹಿಂದಿದ್ದಷ್ಟು ದಿನ ಮುಂದೆ ಇರುವುದು ಗೊತ್ತಿಲ್ಲ. ನಾಳ್ಯಾರೋ, ನಾವ್ಯಾರೋ? ಎಂಬ ಮಾತಿದೆ. ಯಮನ ಧೂತರು ಬಂದು ಸೆಳೆಯುವಾಗ ನಾನು ಇನ್ನೂ ಏನೋ ಮಾಡಬೇಕೆಂದಿರುವೆ, ಸ್ವಲ್ಪ ತಾಳು, ಎಂದರೆ ಅವ ತಾಳಲಾರ. ಇಂದು ಬದುಕಿದ್ದೇವೆ. ಇಂದೇ ಈಗಲೇ ನಾವೇನಾದರೂ ಸಮಾಜಮುಖಿ ಕಾರ್ಯದಲ್ಲಿ ನಮ್ಮನ್ನು ತೊ ಡ ಗಿಸಿಕೊಂಡು ಬಿಡಬೇಕಲ್ಲವೇ?
ಮತ್ತೆ ಹೇಳುವೆ...ನಾಳ್ಯಾರೋ? ನಾವ್ಯಾರೋ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kavinagaraj on

???

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hariharapurasridhar on

ಮೂರು ಪ್ರಶ್ನಾರ್ಥಕ ಚಿನ್ಹೆಗಳ ವಿವರಣೆ ಕೊಟ್ಟಿದ್ದರೆ ನನ್ನಂತಹ ಪಾಮರರಿಗೆ ಅರ್ಥವಾಗ್ತಾ ಇತ್ತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatesh on
ಉತ್ತಂ ಅತಿ ಉತ್ತಂ !