November 4, 2012 - 2:43am
ನಾ ನಿನ್ನವಳಲ್ಲ... ನಿನ್ನ
ನೆನಪಲೆ ಕಳೆದುಹೋದವಳಲ್ಲ.
ಹಂಬಲಿಸಿ ಕಾದಿರುವೆ ಕಳೆದುಹೋಗಲು
ನಡುಮಧ್ಯಾಹ್ನದಲಿ ಬೆಳಗಿರುವ ಹಣತೆಯಂತೆ
ಇಡಿಸಾಗರದ ಮಧ್ಯೆ ಹಿಮಚಕ್ಕೆಯಂತೆ.
ನೀ ನನ್ನ ಪ್ರೀತಿಸುವುದ ನಾ ಬಲ್ಲೆ.
ಪ್ರಖರ ಅಂತಃಶಕ್ತಿಯ ಬೆಳಕಿನಲ್ಲೆ
ಆದರೂ ಕಳೆದುಹೋಗಲು ನನ್ನ ಹಂಬಲಿಕೆ
ಇರುಳಲ್ಲಿ ಇಣುಕಿಯೂ ನೋಡದ ಬೆಳಕಿನಂತೆ
ಪ್ರೀತಿ ಸಾಗರದಲಿ ನನ್ನ ಮುಳುಗಿಸು
ಮತಿಯ ಮತ್ತಿನಲೆ ಮಲಗಿಸು
ಮೂಕವಾದರು, ಕೇಳದಾದರು
ಹಂಬಲಿಸಿ ಕಾದಿರುವೆ ಕಳೆದುಹೋಗಲು
ನಿನ್ನ ಪ್ರೀತಿಯ ಬಿರುಗಾಳಿಯಲೆ ತರಗೆಲೆಯಾಗಲು.
ಸಾರಾ ಟೀಸ್ ಡೇಲ್ ಅವರ " I am not yours " ಪದ್ಯದ ಭಾವಾನುವಾದ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ನಾ ನಿನ್ನವಳಲ್ಲ
ಮೆಚ್ಚಿದ್ದಕ್ಕಾಗಿ ನನ್ನಿ
ಕವಿತೆ
ತುಂಬುಹೃದಯದ ಕೃತಙ್ಞತೆಗಳು ಅನಿಲ್
ಏನಾದರೂ ನೀ ನನ್ನವಳೇ ..!!
ನಾನು ಉದ್ದೇಶಪೂರ್ವಕವಾಗಿಯೇ ಮೂಲ