ನಾ ನಿನ್ನ ಕನಸಿಗೆ ಚಂದಾದಾರನೂ....

ನಾ ನಿನ್ನ ಕನಸಿಗೆ ಚಂದಾದಾರನೂ....

(ನನಗೆ ಒಗ್ಗದ ಕೆಲಸದಲ್ಲಿ ಇಡೀ ದಿನ ಕಳೆಯಬೇಕಾಗಿ ಬಂದು. ಬೇಸರವಾಗಿ ಹಳೆಯ ಪುಸ್ತಕವೊಂದನ್ನು ಓದತೊಡಗಿದಾಗ ಸಿಕ್ಕ ಈ
ಚೆಂದದ ಕತೆ ದಿನವನ್ನು ಸಾರ್ಥಕ ಗೊಳಿಸಿತು)

ಕತೆಗಳನ್ನು ಪ್ರಕಟಿಸುವ ಒಂದು ಪತ್ರಿಕೆ. ಅದು ತುಂಬಾ ಜನಪ್ರಿಯವೂ ಹೌದು. ಅದರ ಸಂಪಾದಕನ ಗೆಳೆಯನು ಒಂದು ಸಲ ಅವನ ಕಚೇರಿಗೆ ಹೋದಾಗ ಅವನ ಮೇಜಿನ ಮೇಲೆ ಒಂದು ಸುಂದರ ಚೌಕಟ್ಟಿನಲ್ಲಿ ಕಟ್ಟು ಹಾಕಿದ ಒಂದು ಪತ್ರವನ್ನು ನೋಡಿದನು. ಏನಿತ್ತು ಅದರಲ್ಲಿ ? ಅದು ಯಾರೋ ಒಬ್ಬ ಚಂದಾದಾರರ ಪತ್ರ. ಯಾವುದೊ ಸಂಚಿಕೆ ಸಿಕ್ಕಿಲ್ಲ, ಮತ್ತೆ ಕಳಿಸಿ ಎಂಬ ಪತ್ರ . ಅದನ್ನೇಕೆ ಇವ ಕಟ್ಟು ಹಾಕಿಸಿಟ್ಟಿದ್ದಾನೆ? ಕೆದಕಿ ಕೇಳಿದಾಗ ಹೊರಬಿದ್ದ ಸಂಗತಿ ಇದು.

ಸಂಪಾದಕನು ತರುಣನಿದ್ದಾಗ ಅವನು ಪಕ್ಕದ ಮನೆಯ ತರುಣಿ ಯನ್ನು ಪ್ರೀತಿಸಿ ಮದುವೆಯಾಗಬಯಸಿದನು. ಆದರೆ ಅವಳ ತಾಯಿತಂದೆಯರು ಇವನ ಉದ್ಯೋಗ, ಸಂಬಳ ಕಡಿಮೆ ಎಂದು ದೊಡ್ಡ ಸಂಬಳದ ನ್ಯಾಯಾಧೀಶನೊಡನೆ ಅವಳ ಮದುವೆ ಮಾಡಿ ಕೊಟ್ಟರು.

ಈತನು ಅವಳ ಗಂಡನ ಸದ್ಯದ ಊರನ್ನು ಸರಕಾರಿ ಗೆಜೆಟ್ ಓದುತ್ತ ತಿಳಿದುಕೊಂಡು ಇರುತ್ತಿದ್ದನು.

ಅವಳ ಕೈ ಬರಹದ ಒಂದು ಸಾಲನ್ನು ಪಡೆಯುವ ಹಂಬಲದಿಂದ ಅವಳ ಕ್ಷೇಮ ವಿಚಾರಿಸಿ ಒಂದು ಪತ್ರ ಬರೆದಿದ್ದನಾದರೂ ಅವಳ ಗಂಡನಿಂದ ಕಾನೂನುಕ್ರಮದ ಎಚ್ಚರಿಕೆ ಬಂದಿತು!

ಅವಳು - ಅವಳ ಹೆಸರು ಇಂದುಲೇಖೆ - ಕತೆಪುಸ್ತಕಗಳ ಓದುಗಳಾದ್ದರಿಂದ , ಇವನು ಮುಂದೆ ಒಂದು ಕತೆಗಳ ಮಾಸ ಪತ್ರಿಕೆಯನ್ನು ಆರಂಭಿಸಿದನು - ಅದೂ ಅವಳ ಹೆಸರಿನಲ್ಲಿ . ಅದು ಸಾಕಷ್ಟು ಜನಪ್ರಿಯವಾಯಿತು.

ಈಗ ಕಟ್ಟು ಹಾಕಿಸಿಟ್ಟ ಪತ್ರವು ಆ ಕಚೇರಿಗೆ ಬರುವ ಸಾವಿರಾರು ಪತ್ರಗಳಲ್ಲಿ ಒಂದಾದರೂ ಅವನ ಕಣ್ಣಿಗೆ ಬಿದ್ದಿದ್ದು ಅಕಸ್ವಾತ್ ಆಗಿ . ಅದು ಅವನ ಸುದೈವ ಎಂದೇ ಹೇಳಬೇಕು. ಏಕೆಂದರೆ ಅದು ಅದೇ ಇಂದುಲೇಖೆಯೇ ಸ್ವ ಹಸ್ತಾಕ್ಷರದಲ್ಲಿಯೇ ಬರೆದದ್ದು !

ಅಂದಿನಿಂದ ಆ ಚಂದಾದಾರಳಿಗೆ ಕಳಿಸುವ ಪ್ರತಿಯ ವಿಳಾಸವನ್ನ ತಾನೇ ಖುದ್ದಾಗಿ ಬರೆಯುವ ಪರಿಪಾಠ ಇಟ್ಟುಕೊಂಡಿದ್ದಾನೆ!

( ಈ ಕತೆಯು 'ಪಂಜರದ ಪಕ್ಷಿ ' ಎಂಬ ಹಳೆಯ ಪುಸ್ತಕದಲ್ಲಿದೆ. ಈ ಪುಸ್ತಕವನ್ನು ಓದಬೇಕಾದರೆ pustaka.Sanchaya,net ತಾಣದಲ್ಲಿ ಹುಡುಕಿ)

Rating
No votes yet

Comments