Abroad ಅನ್ನೋ ಮಾಯೆ...
ಕೆಲ ವರ್ಷಗಳ ಹಿಂದೆ ಯರಾದರು ಹೊರದೇಶಕ್ಕೆ ಹೊಗುತ್ತಿದಾರೆಂದರೆ ಅದು ಒಂದು ಘನತೆಯ ವಿಷಯ ವಾಗಿತ್ತು. ಆದರೆ ಈಗ ಅದು ಸರ್ವೇ ಸಾಮಾನ್ಯ ವಾಗಿ ಬಿಟ್ಟಿದೆ.
ಯಾವಾಗ IT ಮತ್ತು BPO ಕಂಪೆನಿಗಳು ನಮ್ಮ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಶುರು ಮಾಡ್ತೊ ಆಗಿನಿಂದ ಹೊರದೆಶಕ್ಕೆ ಹೊಗೊದು ಸಮಾನ್ಯ ಆಗ್ಬಿಟ್ಟಿದೆ.
ಆದರೆ ಒಂದು ಬೇಸರದ ವಿಷಯ ಏನೆಂದರೆ ನಮ್ಮ ಜನ ಜಾಗತೀಕರಣದ ಹೆಸರಿನಲ್ಲಿ ನಮ್ಮ ಸಂಸ್ಕ್ರುತಿಯನ್ನು ಮರೆಯುತ್ತಿದಾರೆ ಅನ್ಸುತ್ತೆ... ಏಲ್ಲೊ ಕೇಳಿದೆ... ಹೊರದೇಶದಲ್ಲಿದ್ದ ಮಗ ತನ್ನ ತಂದೆಯ ಅಂತ್ಯ ಸಂಸ್ಕಾರಕ್ಕೂ ಬರೋದಕ್ಕೆ ನಿರಾಕರಿಸಿದನಂತೆ. ಕಾರಣ ತನ್ನ ವೀಸ expire ಆಗೊದ್ರಲ್ಲಿದ್ದು ತಾನು ಅಲ್ಲಿಗೆ ಬಂದ್ರೆ ಮರಳಿ ವಿದೇಶಕ್ಕೆ ಹೊಗೊದು ಕಷ್ಟ ಅಗ್ಗುತ್ತೆ ಅಂತ.
ನೋಡಿ ಕಾಲ ಹೇಗೆ ಆಗ್ಬಿಟ್ಟಿದೆ ಅಂತ... ತಂದೆ ತಾಯಿಯನ್ನ ನೋಡ್ಕೊ ಬೇಕಾಗಿರೊ ಮಕ್ಕಳು ವಿದೇಶದ ವ್ಯಮೋಹದಿಂದ ಹೆತ್ತವರನ್ನೇ ಮರಿತಿದ್ದಾರೆ...
ಎಷ್ಟು ಕಷ್ಟವಾದ್ರು ನಮ್ಮ ಮಕ್ಕಳು ಚೆನ್ನಾಗಿರಬೇಕೆಂದು ತಮ್ಮ ಜೀವನವೆಲ್ಲಾ ಮುಡಿಪಾಗಿಟ್ಟು ನಮ್ಮನ್ನು ಸಾಕಿದ ತಂದೆ ತಾಯಿಗಳನ್ನು ಹೀಗೆ ಒಂಟಿಯಾಗಿ ಬಿಟ್ಟುಹೊಗೋದು ಎಷ್ಟು ಸರಿ... ಅವರನ್ನು ಚೆನ್ನಾಗಿ ನೂಡ್ಕೊಳಕ್ಕೆ ಆಗಲ್ಲ ಅಂದ್ರೆ ನಾವು ಎಷ್ಟು ಸಂಪಾದಿಸಿದ್ರು ಏನು ಪ್ರಯೊಜನ...?? ನಾವು ಬೇಕಾದ್ರೆ ಅವರಿಗೆ ದುಡ್ಡು ಕಳುಹಿಸ ಬಹುದು ಆದರೆ ಪ್ರೀತಿ ಕಳ್ಸೋಕಾಗುತ್ತ...??
ನಾವು ನಮ್ಮ ದೇಶದಲ್ಲೇ ರಾಜರ ತರಹ ಇರಬಹುದಲ್ಲ...??
ವಿದೇಶಕ್ಕೆ ಹಾರಿ ಹೋದವರಿಗು... ಹಾಗು ಹಾರಿ ಹೋಗಲು ಯೋಚನೆ ಮಾದುತ್ತಿರುವವರಿಗು ನನದೊಂದು ವಿನಂತಿ... ನೀವು ಯವದೇಶಕ್ಕಾದರು ಹೊಗಿ.. ಅದರೆ ನಿಮ್ಮ ಸಂಸ್ಕ್ರುತಿಯನ್ನು... ನಿಮ್ಮ ತಂದೆ ತಾಯಿಗಳನ್ನು ಮರೆಯಬೇಡಿ... ನಮ್ಮ ನೆಲ ಯವಾಗಲು ನಮ್ಮಗೆ ಸಂತೊಷ ನೀಡೊಂತದ್ದು... ಅದನ್ನು ರಕ್ಷಿಸೋದು ನಮ್ಮ ಕರ್ತವ್ಯ ವಲ್ಲವೇ... ನೀವೆನ್ ಹೆಳ್ತೀರ...??

- ನೀತಾ ರವರ ಬ್ಲಾಗ್
- Login or register to post comments
- 469 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS:
ಪ್ರತಿಕ್ರಿಯೆಗಳು
ಉ: Abroad ಅನ್ನೋ ಮಾಯೆ...
ಪ್ರಿಯರೇ,
ನಮಸ್ಕಾರ. ಸಂಪದ ಕುಟುಂಬಕ್ಕೆ ಸ್ವಾಗತ. ನಿಮ್ಮ ಬ್ಲಾಗ್ ಓದಿ ಖುಷಿಯಾಯ್ತು. ಒಂದು, ನೀವು ನಮ್ಮೂರಿನವರು ಅಂತ. ಮತ್ತೊಂದು, ಒಳ್ಳೆಯ ವಿಷಯವನ್ನ ಆಯ್ಕೆ ಮಾಡ್ಕೊಂಡಿದ್ದೀರಿ. ಆದರೆ, ಕೆಲವೊಮ್ಮೆ ವಿದೇಶಕ್ಕೆ ಹೋಗೋದು ಅನಿವಾರ್ಯವಾಗ್ತದೇನೋ ಅನ್ಸುತ್ತೆ. ಈಗ ನಮ್ಮನ್ನೇ ನೋಡಿ. ಮೈಸೂರಿನಲ್ಲಿ ಅವಕಾಶಗಳು ಇಲ್ದೇ ಇರೋದಕ್ಕೆ ಬೆಂಗಳೂರಿನಲ್ಲಿ ಕೆಲ್ಸ ಮಾಡ್ತಿಲ್ವೆ. ಹಾಗೆಯೇ, ಓದಿಗಾಗಿ, ವೃತ್ತಿಗಾಗಿ ಹೋಗಬೇಕಾಗ್ತದೆ. ಆದ್ರೆ, ಅಲ್ಲೇ ನೆಲಸೋದು ಮಾತ್ರ ತಪ್ಪು ಅಂತ ಹೇಳ್ಬೋದು, ಅದರಲ್ಲೂ ತನ್ನೋರನ್ನು ಮರೆತು. ಸಂಬಂಧಗಳಿಗಿಂತ ದೊಡ್ಡದು ಬದುಕಿನಲ್ಲಿ ಯಾವುದೂ ಇಲ್ಲ ಅಲ್ವ? ಸಂಬಂಧಗಳಿಲ್ದೆ ಹೋದ್ರೆ, ಮನುಷ್ಯನ ಜೀವನಕ್ಕೆ ಅಸ್ತಿತ್ವ, ಅರ್ಥ ಏನೂ ಇರೋಲ್ಲ ಅಲ್ವ? ಸಂಬಂಧಗಳಿಗೆ ಬೆಲೆ ಕೊಡ್ದೆ ನಾವು ಏನೇ ಸಾಧಿಸಿದ್ರೂ ಅದು ವ್ಯರ್ಥವೇ...
ಇಂಥ ಸೂಕ್ಷ್ಮ ವಿಚಾರಗಳ ಬಗ್ಗೆ ಬರೀತಾ ಇರಿ. ನಾವೂ ಪ್ರತಿಕ್ರಿಯಿಸ್ತಾ ಇರ್ತೇವೆ. ಈ ಮೂಲಕ ನಾವು ಜೀವನ ಶಾಲೆಯಲ್ಲಿ ಒಳ್ಳೇ ಪಾಠ ಕಲಿತಾಗೂ ಆಗುತ್ತೆ. ಒಳ್ಳೆಯ ಮಾನವ ಸಂಬಂಧಗಳ ನಿರ್ಮಾಣವೂ ಆಗುತ್ತೆ. ನನ್ನ ಪ್ರಕಾರ, ಬ್ಲಾಗ್ ಸಾರ್ಥಕ್ಯ ಇರೋದೇ ಅಲ್ಲಿ.
ಕಡೆಯದಾಗಿ, ಕೆಲವೊಂದು ಸಣ್ಣ ಪುಟ್ಟ ಕಾಗುಣಿತ ದೋಷಗಳ ಕಡೆ ಗಮನ ಹರಿಸಿ. ನಿರಂತರವಾಗಿ ಬರೀತಾ ಇರಿ.
ಸಿರಿಗನ್ನಡಂ ಗೆಲ್ಗೆ
ನಿಮಗೆ ಎಲ್ಲವೂ ಒಳ್ಳೆಯದಾಗಲಿ.
ವಿಶ್ವಾಸದಿಂದ,
ಶಶಿ
ಜಾಲತಾಣ: http://vishwamanava.mywebdunia.com/
ಉ: Abroad ಅನ್ನೋ ಮಾಯೆ...
ನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು ಶಶಿಅವರೆ. ನೀವು ಹೇಳಿದ್ದು ನೋರಕ್ಕೆ ನೋರು ಸತ್ಯ... ನಾವು ಹೊರದೇಶಕ್ಕೆ ಹೋಗುವುದು ಅನಿವಾರ್ಯವಾದರು ನಾವು ನಮ್ಮ ಕರ್ತವ್ಯಗಳನ್ನು ಮರೆಯಬಾರದು.
ನಾನು ನನ್ನ ಕಾಗುಣಿತದ ತಪ್ಪುಗಳನ್ನು ತಿದ್ದಿ ಕೊಳ್ಳಲ್ಲು ಪ್ರಯತ್ನಿಸುತ್ತೇನೆ
ಉ: Abroad ಅನ್ನೋ ಮಾಯೆ...
ನೀತಾ, ಅವರೆ ಒಳ್ಳೆಯ ವಿಶ್ಯ ಮೊದಲು ಮಾಡಿದಿರಿ. ಕಾಪಾಡಿಕೊಳ್ಳುವುದರಲ್ಲಿ ಎಷ್ಟೋ ಬಗೆ ಇರುತ್ತವೆ.
೧. ವಿದೇಶಕ್ಕೆ ಹಾರಿ, ತಿಂಗಳಿಗೆ ಇಂತಿಶ್ಟು ಅಂತ ತಂದೆತಾಯಿಗೆ ಕೊಡುವ ಏರ್ಪಾಟು ಮಾಡಿಕೊಂಡು, ತಮ್ಮ ದೇಶಕ್ಕೆ ಫಾರಿನ್ ಎಕ್ಸಚೇಂಜ್ ಕೊಡೋದು.
೨. ವಿದೇಶಕ್ಕೆ ಹೋಗಿ, ಓದ್ಕೊಂಡೋ, ಬರ್ಕೊಂಡೋ ಮಾಡಿ, ಒಂದಶ್ಟು ವರ್ಷ ಹಣ ಸಂಪಾದಿಸಿ ಆಮೇಲೆ ವಾಪಸ್ ಬರೋದು.
೩. ವಿದೇಶಕ್ಕೆ ಹೋಗಿ, ಅಲ್ಲಿಯೇ ಸೆಟಲ್ ಆಗಿ, ಇಲ್ಲಿನ ಕಲೆಗಳನ್ನು ಅಲ್ಲಿ ರೂಢಿಸಿಕೊಂಡು, ನಮ್ಮ ಸಂಸ್ಕೃತಿ ಕಾಪಾಡಿಕೊಂಡಿದ್ದೇವೆ ಎಂದುಕೊಳ್ಳುವುದು.
"ತಾವು ವಿದೇಶಕ್ಕೆ ಬರಲು ಕಾರಣವಾದ ತಮ್ಮ ಹಿನ್ನೆಲೆಯನ್ನು ಮರೆಯದಿರುವುದು, ಅದರಲ್ಲೂ ಮುಖ್ಯವಾಗಿ ತಂದೆತಾಯಿಯ ಬಗ್ಗೆ ನೀವು ಹೇಳಿದ್ದು" ನನಗೆ ವೈಯಕ್ತಿಕವಾಗಿ ಮುಖ್ಯವೆನಿಸುತ್ತದೆ.
ಉ: Abroad ಅನ್ನೋ ಮಾಯೆ...
ನೀತಾರವರೆ,
ಇಲ್ಲಿ ಓದಲು ಬಂದವರು, ಓದು ಮುಗಿದೊಡನೆ ವಾಪಸ್ಸು ಹೋದರೆ ಸರಿ. ಇಲ್ಲದಿದ್ದರೆ, ಕೆಲಸ, ವೀಸಾ, ಗ್ರೀನ್ ಕಾರ್ಡ್, ಮದುವೆ, ಮಕ್ಕಳು, ಇವುಗಳ ಜಂಜಾಟದಲ್ಲಿ ಸಿಲುಕಿ ಮತ್ತೆ ಹೋಗುವುದೇ ಇಲ್ಲ( ಆಗಾಗ vacation visit ಬಿಟ್ಟು).
ನಿಮ್ಮ ಲೇಖನದಲ್ಲಿ ಬರೆದಿರುವುದನ್ನು ಓದಿ ವಿದೇಶದಲ್ಲಿರುವ ಭಾರತೀಯರಿಗೆ guilty feeling ಬಂದೇ ಬರುತ್ತೆ
ಬಹಳ ಹಿಂದೆ, ಇಲ್ಲಿನ ಸೌಲಭ್ಯಗಳು ಭಾರತಕ್ಕಿಂತ ಚೆನ್ನಾಗಿದ್ದು, ಅದಕ್ಕಾಗಿ ಜನ ಕಷ್ಟಪಟ್ಟು ಇಲ್ಲಿಗೆ ಬರುತ್ತಿದ್ದರು. ತಂದೆ ತಾಯಿಯರೂ ಸಹ ತಮ್ಮ ಮಕ್ಕಳು ವಿದೇಶದಲ್ಲಿದ್ದರೆ ಏನೋ ಕೋಡು ಬಂದಂತೆ ವರ್ತಿಸುತ್ತಿದ್ದರು. ಈಗ ಸೌಲಭ್ಯಗಳಿಗೆ ಭಾರತದಲ್ಲಿ ಬರವಿಲ್ಲ. ಜೊತೆಗೆ, ಅಮೇರಿಕದಲ್ಲಂತೂ 7/11 ದುರಂತವಾದ ಮೇಲೆ, ಕೆಲಸದ recessionನಿಂದಾಗಿ immigrants ಬಗ್ಗೆ ದ್ವೇಷ ಇದ್ದೇ ಇದೆ. ಹೀಗಿದ್ದರೂ, ಈಗಿನ ಭಾರತದ ತರುಣ/ತರುಣಿಯರು ಇಲ್ಲಿಗೆ ಯಾಕೆ ಬರುತ್ತಿದ್ದಾರೆ ಎನ್ನುವುದು ನನಗೂ ಅರ್ಥವಾಗದ ಪ್ರಶ್ನೆ. ಇದು ಬಹುಶಃ ಭಾರತೀಯರು ತಮ್ಮನ್ನು ತಾವೇ ಕೇಳಿಕೊಳ್ಳಬೇಕು ಅನ್ನಿಸುತ್ತೆ.
ವಿದೇಶಕ್ಕೆ ಬಂದ ಮೇಲೆ ಪರಿಸ್ಥಿತಿಯ ಒತ್ತಡದಿಂದಾಗಿ ಮನೆಯವಗೊಂದಿಗೆ ಮೊದಲಿನ ಸಂಬಂಧವಿರಿಸಿಕೊಳ್ಳುವುದು ಕಷ್ಟವಾಗಬಹುದು. ಮನೆಯವರ ದಿನನಿತ್ಯದ ಕಷ್ಟಸುಖಗಳಲ್ಲಿ ಭಾಗಿಯಾಗಲು ಸಾಧ್ಯವಾಗುವುದಿಲ್ಲ. ತಂದೆ ತಾಯಿಯರು ಸಹ ವಿದೇಶದಲ್ಲಿ ಮಕ್ಕಳು ಪಡುವ ಕಷ್ಟಕ್ಕೆ ಸ್ಪಂದಿಸಲಾಗುವುದಿಲ್ಲ. ಒಟ್ಟಿನಲ್ಲಿ, ವಿದೇಶಕ್ಕೆ ಬರುವವರು ಪ್ಲೇನ್ ಟಿಕೆಟ್ ಜೊತೆಗೆ ಸಂಬಂಧಗಳ ವಿಷಯದಲ್ಲೂ ಭಾರಿ ಬೆಲೆಯನ್ನು ತೆರಲು ಸಿದ್ಧರಾಗಿರಬೇಕು. ಇಲ್ಲದಿದ್ದರೆ ವಿದೇಶಕ್ಕೆ ಬರದಿರುವುದೇ ಒಳ್ಳೆಯದು.
ಉ: Abroad ಅನ್ನೋ ಮಾಯೆ...
ನಾನು ಬರೆದ 7/11 ತಪ್ಪು. ದಯವಿಟ್ಟು 9/11 ಎಂದು ಓದಿಕೊಳ್ಳಿ.
~ಕಲ್ಪನ
ಉ: Abroad ಅನ್ನೋ ಮಾಯೆ...
ಅದೂ ನಿಜ.. ಹಿಂದೆ ವಿದೇಶಕ್ಕಿದ್ದ ಬೇದಿಕೆ ಈಗ ಇಲ್ಲ... ಆದ್ರು ಜನ ಪ್ಯಪೋಟಿಮೇಲೆ ಹೊಗ್ತಿದ್ದಾರೆ... ನಮ್ಮ ಜನ ಯಾವಾಗ ಇದರಿಂದ ಹೊರಗೆ ಬರ್ತರೋ ಗೊತ್ತಿಲ್ಲ...
ಉ: Abroad ಅನ್ನೋ ಮಾಯೆ...
ತಂದೆ ತಾಯಿಗಳನ್ನು ನೋಡ್ಕೊಂಡು ಇರೋದು ನಮ್ಮ ಕರ್ತವ್ಯ ಅದನ್ನು ಮರೆಯಬಾರದು. ನಮ್ಮೂರು, ನಮ್ಮ ಜನರೇ ಚೆಂದ.
ಈಗ ವಿದೇಶಗಳಿಗೆ ಹೋಗುವುದು ಅನಿವಾರ್ಯವಾಗುತ್ತೆ. ಬೇರೆ ದೇಶಗಳಿಗೆ ಹೋಗುವುದಿಲ್ಲ ಎಂದು ಹೇಳಿದ್ರೆ ಅದೇ weakness ಆಗುತ್ತೆ. ಫೋನ್ಗಳಲ್ಲಿ ಮಾತಾಡೋದು ಅಥವ ವೆಬ್ ಕ್ಯಾಮ್ ನಲ್ಲಿ ನೋಡ್ಕೊಂಡು ಇರೋದು ಪೋಷಕರಿಗೆ ಎಷ್ಟು ಕಷ್ಟವೊ ಹಾಗೆ ಇಲ್ಲಿರುವ ಮಕ್ಕಳಿಗು ಅನಿಸುತ್ತೆ.
ನಮ್ಮ ದೇಶದ ಕೆಟ್ಟ ರಾಜಕೀಯ ಹೋಗಿ development ಕಡೆಗೆ ಗಮನ ಕೊಟ್ರೆ ತುಂಬ ಜನರು ಅಲ್ಲೇ (ಭಾರತದಲ್ಲಿ) ಇರಲು ಇಷ್ಟ ಪಡುತ್ತಾರೆ. ಇಲ್ಲಿನ ಕೆಲವು ಸೌಕರ್ಯಗಳನ್ನು ಕಂಡು ಕಲವರು ಇಲ್ಲೇ ಇರಲು ಒಲವು ತೋರುತ್ತಾರೆ. ಹಾಗಾಗಿ ಸಂಬಂಧಗಳನ್ನು ಉಳಿಸಿಕೊಳ್ಳುವುದರಲ್ಲಿ , ಸಮಯಕ್ಕೆ ತಕ್ಕಂತೆ ವರ್ತಿಸುವುದರಲ್ಲಿ ವಿಪುಲರಾಗುತ್ತಾರೆ.
ನಾನು ನೋಡಿದ ಒಂದು ಪ್ರಸಂಗವನ್ನು ಹೇಳುತ್ತೇನೆ
ತಂದೆಗೆ ೫ ಜನ ಗಂಡು ಮಕ್ಕಳು, ತಂದೆ ನಮ್ಮೂರಲ್ಲಿ ಮರಣ ಹೊಂದಿದರು , ಅದರಲ್ಲಿ ಒಬ್ಬರಿಗಂತು (ಅನಾಮಿಕ ಇರೋದು ಬೆಂಗಳೂರಿನಲ್ಲಿ) ನಮ್ಮ ಸಂಸ್ಕ್ರುತಿಯ ಬಗ್ಗೆ ತೀರ ವಿರೋಧ. ಆ ೫ ಮಕ್ಕಳು ಬಂದ್ರು, ಶವ ಸಂಸ್ಕಾರ ಅಗಿತ್ತು ಇನ್ನು ಕೆಲವು ಕೆಲಸಗಳು ಬಾಕಿಯಿದ್ದಾಗಲೇ ಅನಾಮಿಕ ಬಂದು ನನಗೆ ಈ ಕಾರ್ಯಗಳಲ್ಲಿ ನಂಬಿಕೆಯಿಲ್ಲ ನಾನು ಇನ್ನು ಯಾವ ಕಾರ್ಯಕ್ಕು ಬರುವುದಿಲ್ಲ ಎಂದು ಹೇಳಿ ಲಕ್ಷಗಳನ್ನು ಕೊಟ್ಟು ತಾವು ತಮ್ಮ ಜಾಗಕ್ಕೆ ಹಿಂತಿರುಗಿದರು.
ಕೆಲವೊಂದು ವಿಷಯಗಳಿಗೆ ಸ್ಥಳಗಳು ತುಂಬ ಪರಿಣಾಮವನ್ನುಂಟು ಮಾಡುವುದಿಲ್ಲ, ಅವರ ಜವಬ್ದಾರಿಗಳನ್ನು ನಿರ್ವಹಿಸಬೇಕು ಎಂಬ ಮನಸ್ಸು ಇರಬೇಕು.
ಉ: Abroad ಅನ್ನೋ ಮಾಯೆ...
ನೀವು ಹೇಳಿದ್ದು ಸರಿ... ಏನೇ ಮಾಡಲು ಮನಸ್ಸು ಮುಖ್ಯ.. ಆದರೆ ಮನಸಿನ ಮೇಲೆ ಸ್ಥಳದ ಪ್ರಭಾವ ಬೀರೋದು ಹೆಚ್ಚು ಅಲ್ವೇ...?? ನಮ್ಮ ದೇಶದ ಆಡಳಿತ ಸರಿಯಿಲ್ಲ ಎಂದು ದೂಶಿಸುವ ಬದಲು ನಾವು ಇಲ್ಲೇ ಇದ್ದು ಅದನ್ನು ಸರಿಪಡಿಸಬಹುದಲ್ಲವೇ..??
ಉ: Abroad ಅನ್ನೋ ಮಾಯೆ...
ಎಲ್ಲ ಸರಿಯಾದ ಮೇಲೆ ಸ್ವಂತ ದೇಶಕ್ಕೆ ಮರಳುತ್ತೇನೆ ಎಂದುಕೊಳ್ಳುವುದು ಅದಕ್ಕಿಂತ ಸುಲಭದ ದಾರಿ ಅಲ್ವಾ? ಯಾರೇ ಆಗಲಿ ಯಾವ ದಾರಿ ಅನುಸರಿಸುತ್ತಾರೆ? ಸುಲಭದ್ದೋ ಕಷ್ಟದ್ದೋ?
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: Abroad ಅನ್ನೋ ಮಾಯೆ...
ಹು.. ಅದಂತು ನಿಜ... ಎಲ್ಲಾ ಸುಲಭವಾದ ದಾರಿಯನ್ನೇ ಆರಿಸೋದು:)
ಪ್ರತಿಕ್ರಿಯೆಯ ಹೊರಗೆ:
hpnಅವರೇ ನನ್ನ ಬ್ಲಾಗಿಗೆ comment ಹಾಕಿದಕ್ಕೆ ತುಂಬ ಧನ್ಯವಾದಗಳು. ಚಿತ್ರದ ಮುಂದೆ ನನ್ನ ಹೆಸರು ಬರ್ತಿಲ್ಲ please ಸಹಾಯ ಮಾಡಿ. ಉದಾಹರಣೆಗೆ ಇಲ್ಲೊಂದು ಚಿತ್ರ ಇದೆ... ಕೆಂಪು ಮಾರ್ಕ್ ಹಾಕಿರೊ ಜಾಗದಲ್ಲಿ ಹೆಸರು ಇಲ್ಲ...
http://lh6.ggpht.com/erandra/SGOYMR7NpFI/AAAAAAAADRI/FHnlOn3zHug/s400/mi...
ಅದೇ ತರಹ ನನ್ನ ಚಿತ್ರದ ಮುಂದೆ ನನ್ನ ಹೆಸರೂ ಇಲ್ಲ... ನನ್ನ ಹೆಸರು ಬರೋ ಹಾಗೆ ಮಾಡಿ ಪ್ಲೀಸ್.
ಉ: Abroad ಅನ್ನೋ ಮಾಯೆ...
ಹರಿಯವರೆ , ಎಲ್ಲ ಸರಿಯಾದ ಮೇಲೆ ಬರುತ್ತೇನೆ ಅಂತ ನಾನೇನು ಹೇಳಲ್ಲಿಲ್ಲ. ನನ್ನ ಅನಿಸಿಕೆ ಅದು ಒಂದು ಕಾರಣವಾಗಿರಬಹುದು ಎಂದು.
ಹಾಗೆ ಹೇಳಿದವರು ಭಾರತಕ್ಕೆ ಮರಳಲು ಎಷ್ಟು ವರ್ಷ ಬೇಕು? ಎಷ್ಟು ವರ್ಷಕ್ಕೆ ಎಲ್ಲವು ಸರಿಯಾಗುತ್ತೆ?
ಉ: Abroad ಅನ್ನೋ ಮಾಯೆ...
ನೀವು ಹೇಳುವುದನ್ನು ನಾನು ಒಪ್ಪಿಕೊಳ್ಳುತ್ತೇನೆ, ಆದ್ರೆ ಅಲ್ಲೆ ಇದ್ದು ಯಾರೂ ನಮ್ಮ ದೇಶದ ಆಡಳಿತ ಸರಿಯಿಲ್ಲ ಅಂತ ಯಾರು ದೂಷಿಸುವುದಿಲ್ಲವೆ? ಅಂದ ಹಾಗೆ ನಮಗೇನು ಇಲ್ಲೇ ನೆಲೆಸಲು ಇಷ್ಟವಿಲ್ಲ.ನಾವು ಇಲ್ಲಿಗೆ ೧ ವರ್ಷಕ್ಕೋಸ್ಕರ ಬಂದಿದ್ದೇವೆ, ನಂತರ ಅಲ್ಲಿಗೆ ಬಂದು ನಾವು ಎಲ್ಲರಂತೆಯೆ ಮೂಕ ಪ್ರೇಕ್ಷಕಳಾಗುತ್ತೇವೆ.
ನಾವು ವ್ಯವಸ್ಥೆಯನ್ನು ಸರಿಪಡಿಸಬಹುದು ಎಂಬುದು ನನಗೆ ಕನಸಾಗಿಯೆ ಉಳಿದಿದೆ. marriage certificate ಮಾಡಿಸಿಕೊಳ್ಳಲು ಗೊತ್ತಿರುವವರ ಹೋದೆ ೧ ವಾರ ಓಡಾಡಿದೆ , ಮತ್ತೆ ಲಂಚ ಕೊಟ್ಟು ತೆಗೆದುಕೊಂಡು ಬಂದೆ. ಅವ್ರು ಮದುವೇನೇ ಆಗಿರಲ್ಲಿಲ್ಲ ಆದ್ರೂನು ಮನೆಯಲ್ಲೇ ಕುಳಿತು marriage certificate ತೆಗೆದುಕೊಂಡರು. Transfer ಗೆ ೧೦ -೧೫ ಸಾವಿರ ಕೊಟ್ರು transfer ಆಗಲ್ಲಿಲ್ಲ.ಸ್ಮಶಾನದಲ್ಲಿ ಮುನ್ಸಿಪಾಲ್ಟಿಯವರು ಒಬ್ಬ ಏಜೆಂಟ್ನ ಇಟ್ಟಿರುತ್ತಾರೆ , ಅವನಿಗೆ ಸತ್ತವರ details ಕೊಟ್ರೆ ಅವ್ನೇ ಬೇಕಾದಷ್ಟು death certificate ಕೊಡುತ್ತಾರೆ.ಬಸ್ನಲ್ಲಿ ರು ೫ ಕೊಟ್ಟು ಮಾರ್ಕೆಟ್ಗೆ ಟಿಕೆಟ್ ಕೊಡಿ ಅಂದ್ರೆ ೨ ರುಪಾಯಿ ಚೈಂಜ್ ಕೊಟ್ಟು ಹೋದಳು. passport ಗೆ apply ಮಾಡಿದ್ದೆ, ಪೋಲಿಸರ ಹತ್ತಿರ ಪರಿಶೀಲನೆಗೆ ಬಂತು ಅವರಿಂದ ಯವುಡೆ ಮಾಹಿತಿಯೇ ಬರಲ್ಲಿಲ್ಲ, ಕೊನೆ ತಾರೀಖು ಹತ್ತಿರ ಬಂದಾಗ ವಿಷಯ ತಿಳಿಸಿದರು, ಅಲ್ಲೂ ಲಂಚ ಕೊಟ್ಟ ಮೇಲೆ ಅದರ ಕೆಲಸ ಮುಂದುವರೆಯಿತು. ಟಿವಿ ೯ ಕನ್ನಡ ಚಾನೆಲ್ ನಲ್ಲಿ ನೋಡುದ್ರಾ? ಬಿಬಿಎಮ್ಪಿ ಯವರಿಗೆ ಒಬ್ಬರು ಲಂಚ ಕೊಡಲು ನಿರಾಕರಿಸದಾಗ ಅವ್ರ ಕಟ್ಟಡವನ್ನೆ ಒಡೆದಿದ್ದಾರೆ.ರಿಜೆಸ್ಟಾರ್ ಆಫೀಸ್ನಲ್ಲಿ ಸೈಟ್ ರಿಜೆಸ್ಟರ್ ಮಾಡಿಸಿಕೊಳ್ಳೋಕೆ ಹೋಗಿದ್ದೆವು, ಅಲ್ಲಿ ೧೦,೦೦೦ ಕೊಡಬೇಕು. influence ಇದ್ರೆ ೩,೦೦೦-೪೦೦೦ ಕೊಡಬೇಕು.ನಮ್ಮ ದೇಶದಲ್ಲಿ ಲಂಚ ಸಾಮ್ರಾಜ್ಯ ಹೋಗುತ್ತೆ ಅಂತ ನನಗನಿಸುತ್ತಿಲ್ಲ . ನಿಮಗು ಇಂತಹ ಅನುಭವ ಆಗಿರುತ್ತೆ ಅಲ್ವಾ?
ಉ: Abroad ಅನ್ನೋ ಮಾಯೆ...
ತುಂಬಾ ಚೆನ್ನಾಗಿ ಬರ್ದಿದೀರ.. ನೀವು ಹೇಳೋದು ನೋರಕ್ಕೆ ನೋರು ಸತ್ಯ. ನಾವು ನಿಮ್ಮನ್ನು ದೋಶಿಸುತ್ತಿಲ್ಲ... ನಾವ್ ಹೇಳ್ತಿರೋದೇನಂದ್ರೆ ಭಾರತದಲ್ಲಿದ್ದು ಈ ಅವ್ಯವಹಾರವನ್ನು ತಡಿಯ ಬೇಕೆಂದು. ಉದಾಹರಣೆಗೆ ಪರಿತ್ರಾಣ ಅಂತ ಒಂದು ಪಕ್ಷ ಬಂತು, ಅದ್ರಲ್ಲಿದವರೆಲ್ಲಾ IIT graduates. ಆವ್ರು ದೇಶದಲ್ಲಿ ಬದಲಾವಣೆ ತರ್ಬೇಕಂತ ಹೋರಾಡ್ತಿದ್ದಾರೆ. ಅದೇ ರೀತಿ ನಾವು ಯೆನಾದ್ರು contribute ಮಾಡಬೊಹುದಲ್ವಾ...??
ಉ: Abroad ಅನ್ನೋ ಮಾಯೆ...
ಈ ಪರಿತ್ರಾಣದ ಬಗ್ಗೆ ನನ್ಗೆ ಸರಿಯಾಗಿ ಗೊತ್ತಿಲ್ಲ. ನೀತಾ ಅವ್ರೆ ಅದು ಸಕ್ಸಸ್ ಆಗುತ್ತೆ ಅಂತ ನನಗೆ ನಂಬಿಕೆ ಇಲ್ಲ. ಉತ್ತರ ಭಾರತದ ಮೂಲದವರಾದ " ಶ್ರೀ ರಾಜೀವ್ ದೀಕ್ಷಿತ್" ರ ಭಾಷಣವನ್ನು, ಪೇಪರ್ನಲ್ಲಿ ಬರೆದಿದ್ದ ಅಂಕಣಗಳನ್ನು ದಿನಾ ಓದುತ್ತಿದ್ದೆ. ಅವರ ಅಭಿಮಾನಿಗಳಲ್ಲಿ ನಾನು ಒಬ್ಬಳು. ಆದ್ರೆ ಅವ್ರನ್ನು ಬೆಳೆಯಲು ನಮ್ಮ ಆಡಳಿತದವ್ರು ಬಿಡಲೇ ಇಲ್ಲ, ಬಿಟ್ಟರೆ ಎಲ್ಲಿ (ರಾಜಕೀಯದವ್ರಿಗೆ) ಅವ್ರಿಗೆ ಕುತ್ತು ಬರುತ್ತದೆಯೋ ಅಂತ. ಈಗ ಲೋಕಾಯಕ್ತದವ್ರನ್ನೆ ನೋಡಿ ಅವ್ರು ಎಲ್ಲ ಅವ್ಯವಹಾರಗಳನ್ನು ತೆಗೆದಿಡುತ್ತಾರೆ , ಆದ್ರೆ ಮುಂದೆ ಅಂತ ಅಧಿಕಾರಿಗಳಿಗೆ ಶಿಕ್ಷೆ ಆಗುತ್ತ? ಲೋಕಾಯಕ್ತಕ್ಕೆ ಹೆಚ್ಚು ಅಧಿಕಾರ ಕೊಡೋಕ್ಕು ಕಡಿವಾಣ ಹಾಕುತ್ತಾರೆ. ದೇಶದಲ್ಲಿ ಬದಲಾವಣೆ ತರಲು ಇಂತಹವರು ಬಿಡುತ್ತಾರೆಯೆ?
ಉ: Abroad ಅನ್ನೋ ಮಾಯೆ...
http://www.freedomindia.com/index.html
ಇಲ್ಲಿರುವ ಮಾಹಿತಿಯನ್ನು ಒಮ್ಮೆ ಕಾಲಾವಕಾಶವಾದಾಗ ಓದಿ.
ಉ: Abroad ಅನ್ನೋ ಮಾಯೆ...
ಉಪಯುಕ್ತ ಮಾಹಿತಿ... ತುಂಬ ಧನ್ಯ ವಾದಗಳು.
ಉ: Abroad ಅನ್ನೋ ಮಾಯೆ...
ನಮಸ್ಕಾರ ರಾಜೇಶ್ವರಿಯವರೆ. ಎಲ್ಲರೂ ವ್ಯವಸ್ಥೆ ಸರಿಯಿಲ್ಲ, ಬದಲಾಯಿಸಬೇಕು ಅಂತ ದೂರುತ್ತಾರೆ. ಆದರೆ, ಸರಿಪಡಿಸಬೇಕಾಗಿರೋದು ವ್ಯವಸ್ಥೆಯನ್ನಲ್ಲ, ಅವ್ಯವಸ್ಥೆಯನ್ನ. ಯಾವುದೇ ಬದಲಾವಣೆಯಾದ್ರೂ ನಮ್ಮಿಂದಲೇ ಶುರುವಾಗ್ಬೇಕು ಅಲ್ವ? ನಮ್ಮ ನಡೆ, ನುಡಿ ಪ್ರಾಮಾಣಿಕವಾಗಿರಬೇಕು. ಸ್ವಾಮಿ ವಿವೇಕಾನಂದರು ಕನಸು ಕಂಡ ಹಾಗೆ, ಯುವಶಕ್ತಿ ಮಾತ್ರ ಒಂದು ದೇಶವನ್ನ ಪ್ರಗತಿ, ಅಭಿವೃದ್ದಿಗಳತ್ತ ಕರೆದೊಯ್ಯೋದಕ್ಕೆ ಸಾಧ್ಯ. ಎಲ್ಲರೂ ನಾವಾಯ್ತು, ನಮ್ಮ ಕೆಲಸವಾಯ್ತು ಅಂದ್ರೆ ಏನನ್ನ ತಾನೇ ಬದಲಾಯಿಸೋದಕ್ಕೆ ಸಾಧ್ಯ ಹೇಳಿ? ಸಮಾಜದಿಂದ ಎಲ್ಲವನ್ನೂ ಪಡೆದುಕೊಳ್ಳೋ ನಾವು ಅದಕ್ಕೂ ಏನನ್ನಾದರೂ ಕೊಡಬೇಕಲ್ವ? ಸುಮಾರು ಜನ ಐಎಎಸ್ ಅಧಿಕಾರಿಗಳು ಅಷ್ಟು ದೊಡ್ಡ ಅಧಿಕಾರ ಬಿಟ್ಟು ಎನ್ ಜಿಒಗಳನ್ನ ಮಾಡಿಕೊಂಡು ಸದ್ದಿಲ್ಲದೇ ಕೆಲಸ ಮಾಡ್ತಿರೋದು ಯಾಕೆ ಹೇಳಿ? ಸಮಾಜದಲ್ಲಿ "ಒಳ್ಳೆಯ" ಬದಲಾವಣೆ ತರಬೇಕು ಅಂತಲ್ವ? ನಾವೆಲ್ಲರೂ ಒಬ್ಬರಿಗೊಬ್ಬರು ಜವಾಬ್ದಾರರು ಅಲ್ವ?
ಇನ್ನು "ಜಾಗತೀಕರಣ" ನಮ್ಮ ಸಂಸ್ಕೃತಿಯನ್ನ ಕೆಡಿಸಿದೆಯೇನೋ ಅನ್ನೋದಕ್ಕಿಂತ ಮನುಷ್ಯನ ಅಪರಿಮಿತ ಬಯಕೆ, ಅನುಕೂಲ ಸಿಂಧುತ್ವ, ಅವಕಾಶವಾದಗಳಿಂದಾಗಿ ಇಂತದ್ದೆಲ್ಲಾ ನಡೀತಿದೆ ಅಂತ ಅನ್ಸುತ್ತೆ. ಎಲ್ಲವೂ ಸರಿಯಾಗಿದ್ರೆ ಯಾರೂ ಎಲ್ಲಿಗೂ ಹೋಗೊಲ್ಲ ಅಲ್ವ?
ಸಿರಿಗನ್ನಡಂ ಗೆಲ್ಗೆ
ನಿಮಗೆ ಎಲ್ಲವೂ ಒಳ್ಳೆಯದಾಗಲಿ.
ವಿಶ್ವಾಸದಿಂದ,
ಶಶಿ
ಜಾಲತಾಣ: http://vishwamanava.mywebdunia.com/
ಉ: Abroad ಅನ್ನೋ ಮಾಯೆ...
"ನಮ್ಮ ನಡೆ, ನುಡಿ ಪ್ರಾಮಾಣಿಕವಾಗಿರಬೇಕು". ಇದರಿಂದ ನಮ್ಮ ಎಲ್ಲಾ ಸರ್ಕಾರಿ ಕೆಲಸಗಳು ಆಗುವುದಿಲ್ಲ.ಅದನ್ನು(ಪ್ರಾಮಾಣಿಕತೆಯನ್ನು) ಪರಿಗಣಿಸುವ ಬುದ್ದಿಯಾದ್ರು ಇರಬೇಕಲ್ವ? ಎಲ್ಲಿಂದ, ಯಾರಿಂದ ದುಡ್ಡನ್ನು ಪಡೆಯಬಹುದು ಎಂದು ನಮ್ಮ ಅಧಿಕಾರಿಗಳು ಪ್ರತಿಯೊಂದು ಕ್ಷಣವು ಯೋಚಿಸುತ್ತಿರುತ್ತಾರೆ. ಸದಾ ಹಣದ ಬಗ್ಗೆ ಯೊಚಿಸುತ್ತಿವವರಿಗೆ ಪ್ರಮಾಣಿಕತೆಯ ಅರಿವು ಇರುತ್ತದೆಯೆ?
ನೀವು ಹೇಳುತ್ತಿರುವುದು ೧೦೦% ಸರಿ.
ಉ: Abroad ಅನ್ನೋ ಮಾಯೆ...
ನೀತಾ ಅವರೆ,
ನೀವು ಬರೆದಿರುವುದಕ್ಕೆ ತುಸು ಸಂಬಂಧವಿರುವ ಲೇಖನ ಇದು ಅನ್ನಿಸಿತು. ಓದಿ ನೋಡಿ - http://thatskannada.oneindia.in/column/nataraj/2008/0807-pain-of-losing-...
~ಕಲ್ಪನ