ಭಾಷೆ ಒಂದು means of communication ಅಷ್ಟೆ
ಎಲ್ಲರೂ ನಮಗೆ ಕನ್ನಡ ಬೇಕು ಇಂಗ್ಲೀಷ್ ಬೇಡ.. ಹಿಂದಿ ಬೇಕು ತಮಿಳ್ ಬೇಡ ಅಂತೆಲ್ಲಾ ವಾದ ಮಾಡ್ತಾರೆ... ಆದ್ರೆ ನನಗೆ ಅರ್ಥ ಆಗ್ತಿಲ್ಲ... ಭಾಷೆ ಇರೊದು ಸಂವಹನಕ್ಕೆ ಅಲ್ವಾ... ಈ ಭಾಷೆ ಹೆಸ್ರಲ್ಲಿ ಯಾಕೆ ಇಷ್ಟೋಂದು ಗಲಾಟೆ ಮಡ್ತಾರೆ...?? ನಾವು ನಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸೊಕೆ ಭಾಷೆ ಬಳಿಸ್ತೀವಿ. ನಾವು ಹೇಳಬೇಕಾಗಿರೊ ವಿಷಯ ಇನ್ನೊಬ್ಬರಿಗೆ ಅರ್ಥವಾದ್ರೆ ಸಾಕಲ್ವಾ... ಅದು ಕನ್ನಡ ವಾದ್ರೇನು ಇಂಗ್ಲೀಷ್ ಆದ್ರೇನು...??
ಹಲವು ವರ್ಷಗಳ ಹಿಂದೆ ತಂತ್ರಙ್ನಾನ ಇಷ್ಟೊಂದು ಮುಂದುವರ್ದಿರ್ಲಿಲ್ಲ... ಹಾಗಾಗಿ ಜನ ತಮ್ಮ ಮಾತ್ರು ಭಾಷೆಯಲ್ಲೇ ವಿಷಯಗಳನ್ನು ವ್ಯಕ್ತ ಪದಿಸ್ತಿದ್ರು. ಆದ್ರೆ ಈಗ ವಿಙ್ನಾನ ಬೆಳೆದಿದೆ ಹಾಗಾಗಿ ಎಲ್ಲರೂ ಇಂಗ್ಲೀಷನ್ನು ಸಾಮಾನ್ಯ ಭಾಷೆಯಾಗಿ ಪರಿಗಣಿಸಿ ಅದ್ರಲ್ಲೇ ವಿಷಯಗಳನ್ನು ವ್ಯಕ್ತ ಪಡಿಸೋಕೆ ಶುರು ಮಾಡಿದ್ದಾರೆ.
ಜಾಗತೀಕರಣದ ಪ್ರಭಾವದಿಂದ ಇಂಗ್ಲೀಷ್ ಬೇಡಿಕೆಯಲ್ಲಿರುವ ಭಾಷೆಯಾಯ್ತು. ಆ ಕಾರಣದಿಂದ ಮಕ್ಕಳಿಗೆ ಇಂಗ್ಲೀಷ್ ಕಲಿಸುವುದು ಉಪಯುಕ್ತ ಅಂತ ಪೋಷಕರು ತೀರ್ಮಾನ ಮಾಡಿದ್ರು...ಇಂಗ್ಲೀಷಲ್ಲೇ ಓದೋದ್ರಿಂದ ಮಕ್ಕಳಿಗೆ ಕನ್ನಡದ ಬಳಕೆ ಕಡಿಮೆಯಾಯ್ತು, ಅದರ ಮೇಲಿನ ಆಸಕ್ತಿಯೂ ಕಡಿಮೆಯಾಗ್ತಾ ಬಂತು. ಹಾಗೆ ಬಳಕೆಯೂ ಕ್ಷೀಣಿಸುತ್ತಿದೆ. ಇದಕ್ಕೆ ಮಕ್ಕಳನ್ನಾಗಲಿ ಪೋಷಕರನ್ನಾಗಲಿ ದೂಶಿಸುವುದು ಸರಿಯಲ್ಲ.
ಹೀಗಂತ ಕನ್ನಡ ತಿಳಿದಿದ್ದರೂ ತಿಳಿಯದಂತೆ ವರ್ತಿಸುವರ ಬಗ್ಗೆ ನನಗೂ ಬೇಸರವಿದೆ. ಯಾವಾ ಭಾಷೆಯೂ ಹೆಚ್ಚಲ್ಲ ಯಾವುದೂ ಕಡಿಮೆಯಲ್ಲ. ನನ್ನ ಪ್ರಕಾರ ಮತನಾಡಿದರೆ ಅವಮಾನ ವಾಗುವಂತಹ ಅಥವ ಘನತೆ ಹೆಚ್ಚಿಸುವಂತಹ ಭಾಷೆ ಯಾವುದೂ ಇಲ್ಲ. ಎಲ್ಲಾ ನಮ್ಮ ನಮ್ಮ ಅನುಕೋಲಕ್ಕೆ ತಕ್ಕಂತೆ ಉಪಯೋಗಿಸುತ್ತೇವೆ ಅಷ್ಟೆ. ಕೆಲವು ವಿಷಯಗಳನ್ನು ನಮ್ಮ ಮಾತ್ರು ಭಾಷೆಯಲ್ಲಿ ಹೇಳಿದರೆ ಅದು ಹೆಚ್ಚು ಪ್ರಭಾವ ಬೀರುವ ಸಾಧ್ಯತೆಗಳಿವೆ. ಅಂತಹದನ್ನು ಮಾತ್ರು ಭಾಷೆಯಲ್ಲಿ ಹೇಳುವುದೇ ಸೂಕ್ತ ಆದರೆ ಕೇಳುವವರಿಗೆ ಅದು ಅರ್ಥವಗುವಂತಿರಬೇಕು ಅಷ್ಟೆ.
ಭಾಷೆಗಳ ತಾರತಮ್ಯ ಮಾಡಿದಷ್ಟೂ ನಮಗೆ ಗೊಂದಲಗಳು ಹೆಚಾಗುತ್ತೆ ಅಷ್ಟೆ. ಆ ಸಮಯಕ್ಕೆ ನಮಗೆ ತಿಳಿದಿರುವ ಯಾವ ಭಾಷೆ ಸೂಕ್ತಎಂದೆನಿಸುತ್ತದೆಯೋ ಅದನ್ನು ಬಳಸುವುದು ಉತ್ತಮವೆಂದೆನಿಸುತ್ತದೆ. ಜೇವನ ಬಂದಹಾಗೆ ಸ್ವೀಕರುಸುವುದರಿಂದ ಚಿಂತೆಗಳು ಕಡಿಮೆಯಾಗುತ್ತದೆ ಅಲ್ವಾ....??
PS: ನನಗೆ ಕನ್ನಡದ ಮೇಲೆ ಯಾವುದೇ ದ್ವೇಷವಿಲ್ಲ. ಇದು ನನ್ನ ವ್ಯಯಕ್ತಿಕ ಅಭಿಪ್ರಾಯವಷ್ಟೆ. ಯಾವುದೋ ಘಳಿಗೆಯಲ್ಲಿ ಮೂಡಿಬಂದ ಯೋಚನೆ. ಇದು ಯಾರನ್ನೂ ದೋಶಿಸುವುದ್ದಕ್ಕಾಗಲಿ ಅಥವ ಯಾರ ಮೇಲಿನ ದ್ವೇಷಕ್ಕಾಗಲಿ ಬರೆದದ್ದಲ್ಲಾ. ಇದರಿಂದ ಯಾರಿಗಾದರು ನೋವುಂಟಾಗಿದ್ದರೆ ನನ್ನನ್ನು ದಯವಿಟ್ಟು ಕ್ಷಮಿಸಿ. ನಾನು ಇದನ್ನು ಬರೆದಾಗ 1 ಅಥವ 2 ಪ್ರತಿಕ್ರಿಯೆ ಬರಬಹುದೆಂದು ತಿಳಿದಿದ್ದೆ. ಆದರೆ ಇಷ್ಟೋಂದು ಪ್ರತಿಕ್ರಿಯೆಗಳು ಬರುತ್ತದೆಯಂದು ಊಹಿಸಿರಲಿಲ್ಲ.
ಇದನ್ನು ನಾನು ಯಾವ ಪ್ರಚಾರಕ್ಕೂ ಬರೆದಿಲ್ಲ. ಈ ಲೇಖನದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದವರಿಗೆ ನನ್ನ ವಂದನೆಗಳು.

- ನೀತಾ ರವರ ಬ್ಲಾಗ್
- Login or register to post comments
- 1274 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು
ಉ: ಭಾಷೆ ಒಂದು means of communication ಅಷ್ಟೆ
ಇಂಗ್ಲೀಷನ್ನು ಸಾಮಾನ್ಯ ಭಾಷೆಯಾಗಿ ಪರಿಗಣಿಸುವುದು ತಪ್ಪಲ್ಲ ಅನ್ನೋದೆ ನನ್ನ ಅನಿಸಿಕೆ. ಆದ್ರೆ ನನಗೆ ತು೦ಬ ಬೇಜಾರಾಗೊ ವಿಷಯ ಅ೦ದ್ರೆ Government schoolನಲ್ಲಿ ಮಾತ್ರ ಕನ್ನಡ ಮಾದ್ಯಮವನ್ನು compulsory ಮಾಡೋದು. ಮಾಡೊದಿದ್ರೆ ಎಲ್ಲ ಶಾಲೆಗೂ ಮಾಡ್ಲಿ. Government school and private ಅ೦ಥ ತಾರತಮ್ಯ ಯಾಕೆ ಅಲ್ವಾ?
ಉ: ಭಾಷೆ ಒಂದು means of communication ಅಷ್ಟೆ
ನೀವು ಹೇಳೋದು ಸರಿ... ಭಾಷೆಯನ್ನು ಪರಿಗಣಿಸುವ ರೀತಿ ಬದಲಾಗಬೇಕು ಅದು ಸಾಧ್ಯವಾಗುವುದು ನಮ್ಮ ಯೋಚನೆಯ ರೀತಿ ಬದಲಾದರೆ ಮಾತ್ರ.
ಉ: ಭಾಷೆ ಒಂದು means of communication ಅಷ್ಟೆ
----------ಭಾಷೆ ಒಂದು means of communication ಅಷ್ಟೆ-------
ಅಷ್ಟೆ.
no tension at all...
**************************
http://vikasavada.blogspot.com/
**************************
ಉ: ಭಾಷೆ ಒಂದು means of communication ಅಷ್ಟೆ
ಉ: ಭಾಷೆ ಒಂದು means of communication ಅಷ್ಟೆ
ಯಾಕೋ ಎರೆಡೆರಡು ಬಾರಿ ನೆಗಾಡಿದರೆ...ಎರಡನೇ ನಗೆ ನೆಗದು ಬಿದ್ದು ಹೋಗತ್ತೆ..!!
ಹೆಚ್.ಪಿ.ಎನ್, ಸಹಾಯ ಮಾಡ್ತೀರಾ...!
ಉ: ಭಾಷೆ ಒಂದು means of communication ಅಷ್ಟೆ
ಜಾಸ್ತಿ ನಗ್ಬಾರ್ದು ಅಂತ ಬೇಕಂತ ಹಾಗೇ ಪ್ರೋಗ್ರಾಮ್ ಮಾಡಿರದು
**************************
http://vikasavada.blogspot.com/
**************************
ಉ: ಭಾಷೆ ಒಂದು means of communication ಅಷ್ಟೆ
ನಗೋದಕ್ಕೂ restriction ಯಾಕೆ?
ಉ: ಭಾಷೆ ಒಂದು means of communication ಅಷ್ಟೆ
ಅದೇ ಅಲ್ವಾ !
ನಗು is also a means of communication , is it?
**************************
http://vikasavada.blogspot.com/
**************************
ಉ: ಭಾಷೆ ಒಂದು means of communication ಅಷ್ಟೆ
ofcourse! ಅಲ್ಲವಾ???
ಉ: ಭಾಷೆ ಒಂದು means of communication ಅಷ್ಟೆ
ಹಿ...ಹಿ... thank u.. thank u

ನಗೊದು ಒಂದು means of communication ಅಂತ ನಗ್ತನೇ ಇದ್ರೆ ಅಮೇಲೆ ಕಷ್ಟ ಆಗುತ್ತೆ ಅದಕ್ಕೆ ಸ್ವಲ್ಪ restriction ಇರ್ಬೇಕು.
ಉ: ಭಾಷೆ ಒಂದು means of communication ಅಷ್ಟೆ
ಇದೊಂದು ವಿಷಯವೇ ನೀವು ಯಾವುದೇ ವಿಷಯ ಕುಱಿತು ಗಂಭೀರವಾಗಿ ಅಥವಾ ಆೞವಾಗಿ ಯೋಚಿಸಲಾಱಿರಿ ಎಂಬುದನ್ನು ಸೂಚಿಸುತ್ತದೆ. ಅಥವಾ ಬೇಱೆಯವರನ್ನು ಕೆರಳಿಸುವ ಸಲುವಾಗಿಯೋ ಈ ಲೇಖನ ಬರೆದಿರಬಹುದು. ಭಾಷೆ ಕೇವಲ ಸಂವಹನ ಮಾಧ್ಯಮವಷ್ಟೇ ಆಗಿದ್ದರೆ ನಮಗೆ ಭಾಷಾಪಂಡಿತರ ಅವಶ್ಯಕತೆಯೇ ಇರಲಿಲ್ಲ. ಜಿಜ್ಞಾಸೆ ಎಲ್ಲಾ ವಿಷಯದಲ್ಲಿರುವಂತೆಯೇ ಭಾಷೆಯನ್ನು ಒಂದು ವಿಷಯವನ್ನಾಗಿ ಅಧ್ಯಯನ ಮಾಡಬಹುದಲ್ಲ. ನೀವೇನಂತೀರಾ?
ಉ: ಭಾಷೆ ಒಂದು means of communication ಅಷ್ಟೆ
ಸಾರ್, ನೀವು ಸುಮ್ನೆ tension ತಗೊಂಡ್ರಿ ಮತ್ತೆ.
ಎಲ್ಲಾ ನಮ್ಮ ನಮ್ಮ ಅನುಕೋಲಕ್ಕೆ ತಕ್ಕಂತೆ ಉಪಯೋಗಿಸುತ್ತೇವೆ
ಭಾಷೆ ಒಂದು means of communication ಅಷ್ಟೆ.
English ಆದ್ರೇನು ಹಿಂದಿ ಆದ್ರೇನು.? ಕನ್ನಡ ಬೇಕು ಅಂತ ಇಲ್ಲ.
**************************
http://vikasavada.blogspot.com/
**************************
ಉ: ಭಾಷೆ ಒಂದು means of communication ಅಷ್ಟೆ
ಅದು ಅವರವರ ಆಸಕ್ತಿಯ ಮೇಲೆ ಹೋಗುತ್ತೆ... ಭಾಷೆ ಮೇಲೆ ತುಂಬಾ ಆಸಕ್ತಿ ಇದ್ದು ಅದನ್ನ ಅಧ್ಯಾಯನ ಮಾಡ್ಬೇಕಂತಿದ್ರೆ ಮಾದೊದ್ರಲ್ಲಿ ತಪ್ಪೇನಿಲ್ಲ... ಹಾಗಂತ ನಮ್ಮ ಭಾಷೆ ನಿಮ್ಮ ಭಾಷೆ ಅಂತ ಜಗಳ ಯಾಕೆ ಆಡ್ಬೇಕು...??
ನಾನು ಯಾರನ್ನೂ ಕೆರಳಿಸಲು ಈ ಲೇಖನ ಬರೆದಿಲ್ಲ... ಹಾಗೆ ಒಂದು ಯೋಚನೆ ಹೊಳಿತು ಅಷ್ಟೆ.
ಉ: ಭಾಷೆ ಒಂದು means of communication ಅಷ್ಟೆ
ಸುಮ್ ಸುಮ್ನೆ ಯಾರೂ ಜಗಳಾಡೋಲ್ಲ ಅಲ್ವಾ? ಒಂದು ಭಾಷೆ ಇಂದ ಇನ್ನೊಂದು ಭಾಷೆಗೆ ಅಥವಾ ಒಂದು ಭಾಷೆಯ ಜನರಿಂದ ಇನ್ನೊಂದು ಭಾಷೆಯ ಜನರಿಗೆ ತೊಂದರೆಯಾದಾಗ ಮಾತ್ರ ಜಗಳಾಡೋದು. ಸುಮ್ನೆ ಹೆಂಗೂ ಭಾಷೆ ಒಂದು means of communication ಅಂತ ಸುಮ್ನೆ ಇದ್ದುಬಿಡಬೇಕಾ?
**************************
http://vikasavada.blogspot.com/
**************************
ಉ: ಭಾಷೆ ಒಂದು means of communication ಅಷ್ಟೆ
ಇಷ್ಟು ಸರಳವಾಗಿ ಬದುಕೋಕೆ ಸಾಧ್ಯವಾಗುವಂತಿದ್ದರೆ ಜಗತ್ತು ಎಂದೋ ನಂದನವನವಾಗಿಬಿಡುತ್ತಿತ್ತು!
ಧರ್ಮಗಳು only the means to God ಎಂದು ತಿಳಿದುಬಿಟ್ಟರೆ ಜಗತ್ತು ಇಷ್ಟು ಕ್ರುದ್ಧವಾಗಿರುತ್ತಿರಲಿಲ್ಲ.
ಪ್ರೀತಿ, ಪ್ರೇಮ, ಮದುವೆಗಳು are only means for reproduction ಎಂದುಬಿಟ್ಟರೆ ಜಗತ್ತಲ್ಲಿ ಇಷ್ಟೆಲ್ಲಾ ಗೊಂದಲಗಳು ಇರುತ್ತಲೇ ಇರಲಿಲ್ಲ.
ಬದುಕು, ಸಾಧನೆ, ತ್ಯಾಗ are only means to satisfy hunger ಎಂದು ತಿಳಿದರೆ ಜಗತ್ತಲ್ಲಿ ಇಷ್ಟು ಸ್ಪರ್ಧೆಯೂ ಇರುತ್ತಿರಲಿಲ್ಲ!
ಅಲ್ಲವೇ?
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಭಾಷೆ ಒಂದು means of communication ಅಷ್ಟೆ
ಸುಪ್ರಿ, ಇನ್ನೊಂದು ಸೇರಿಸೋಣ
ಮನೆ ಅಂದ್ರೆ a place for accommodation ಅಷ್ಟೆ.
ಯಾರ ಮನೆಯಾದ್ರೇನು, ಯಾವ ಮನೆಯಾದ್ರೇನು. comfortable ಆಗಿದ್ರೆ ಸಾಕು.
**************************
http://vikasavada.blogspot.com/
**************************
ಉ: ಭಾಷೆ ಒಂದು means of communication ಅಷ್ಟೆ
ಹ್ಹ..ಹ್ಹ.. ಸೇರಿಸಬಹುದು!
ಹಂಗೇ
ತಿನ್ನೋದು ಅಂದರೆ just a means to live ಅನ್ನಬಹುದು
ಬಟ್ಟೆ ತೊಡೋದು only a means to hide body ಅಂತಲೂ
ಪಟ್ಟಿ ಬೆಳೆಸಿ ಪಿಎಚ್.ಡಿಗೆ ಅರ್ಜಿ ಗುಜರಾಯಿಸಬಹುದು!
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಭಾಷೆ ಒಂದು means of communication ಅಷ್ಟೆ
ಸುಪ್ರಿ, ಅಲ್ಲೇ ಶುರುವಾಗೋದು ಪ್ರಾಬ್ಲೆಮ್ಮು.
ತಿನ್ನೋದು ಅಂದರೆ just a means to live ಅನ್ನಬಹುದು. ಆದ್ರೆ ಒಬ್ಬೊಬ್ಬ್ರಿಗೆ ಒಂದೊಂದು ತರ ತಿನ್ನೋದು ಬೇಕಾಗತ್ತೆ. ಒಬ್ರಿಗೆ ಒಂದೊಂದು ಆಗಲ್ಲ. ನಿಂಗೆ ಬರೇ ಹೊಟ್ಟೆ ತುಂಬಬೇಕಲ್ವಾ? ದೋಸೆ ಆದ್ರೇನು ಪಿಜ್ಜಾ ಆದ್ರೇನು ಅಂತ ಒಬ್ರು ಕೇಳ್ತಾರೆ. ಈಗ ಜಾಗತೀಕರಣ ಆಗೋಗಿದೆ ಸಹಜವಾಗಿ ಎಲ್ಲರೂ ಪಿಜ್ಜಾ ತಿಂತಾರೆ ಅಂತ ಸಮರ್ಥನೆ ಮತ್ತೊಬ್ರು ಕೊಡ್ತಾರೆ. ಅದ್ರ ಮಧ್ಯ ನಮ್ಮಂತೋರಿಗೆ ಅನ್ನ ಸಾರು ಚಪಾತಿನೇ ಬೇಕು ಅನ್ಸತ್ತೆ. ಹಿಂಗೇ ಏನೇನೋ...
ಅದೇ ರೀತಿ, ಬಟ್ಟೆ ತೊಡೋದು only a means to hide body ಅಂತಲೂ ಅಂದುಕೊಂಡ್ರೆ ಯಾರು ಎಷ್ಟೆಷ್ಟು ಬಾಡಿ ಹೈಡ್ ಮಾಡ್ಬೆಕು ಅನ್ನೋದರ ಬಗ್ಗೆ ಪ್ರಾಬ್ಲೆಮ್ಗಳು ಶುರು.
its only a means to hide body ಅಂತ ಗೋಣಿ ಚೀಲನೋ, ಕರ್ಟನ್ನೋ ಸುತ್ಕೊಂಡು ಓಡಾಡಕ್ಕಾಗತ್ತಾ ಅಲ್ವಾ? ಪ್ಯಾಂಟು, ಶರಷು, ಚೂಡಿ, ಮಿಡಿ ಏನೇನೋ ಇರತ್ತೆ. ಬರೀ ಮೈ ಮುಚ್ಚಿದರೆ ಸಾಕು ಅನ್ನುವಂತಿದ್ದರೆ ಇಷ್ಟೆಲ್ಲಾ ಬಟ್ಟೆಗಳು ಯಾಕಿರಬೇಕಿತ್ತು.
ಅಲ್ವಾ ನೀತಾಅವರೆ?
**************************
http://vikasavada.blogspot.com/
**************************
ಉ: ಭಾಷೆ ಒಂದು means of communication ಅಷ್ಟೆ
ಅಲ್ವಾ ಮತ್ತೆ?
ನೀತಾರವರು ಎಷ್ಟು ಸರಳವಾಗಿ ಹೇಳ್ಬಿಟ್ರಲ್ಲಾ... ಅದರ ಬಗ್ಗೆ ಯೋಚಿಸಬೇಕು ಅಷ್ಟೇ!
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಭಾಷೆ ಒಂದು means of communication ಅಷ್ಟೆ
ಹಾಗೆ ನೋಡಿದ್ರೆ ಎಲ್ಲವೂ simple ಆಗ್ ಬಿಡುತ್ತೆ. ಬೇರೆಯವರ ಮನೆಯಲ್ಲಿರೋಕೆ permission ಬೇಕು... ಆದ್ರೆ ಭಾಷೆ ಉಪಯೋಗಿಸೋಕೆ permission ಬೇಡ. legal ಆಗಿರೋದನ್ನ ಮಾಡೋದು ಉತ್ತಮ ಅಲ್ವಾ.
ಉ: ಭಾಷೆ ಒಂದು means of communication ಅಷ್ಟೆ
ಮನೆ ಅನ್ನೋದನ್ನ ಮೊದಲಿಗೆ ಒಬ್ಬರಿಗೇ ಸೇರಿದ್ದು ಅಂತ ಲೀಗಲ್ ಮಾಡಿದ್ದು ಯಾಕೆ? ಅದರಿಂದಲೇ ಇಷ್ಟೆಲ್ಲಾ ಕಾಂಪ್ಲಿಕೇಶನ್ಸ್ ಹುಟ್ಟಿದ್ದು ಅಲ್ವಾ?
ಅದಕ್ಕೇ ಮಾತೃ ಭಆಷೆಯನ್ನು ಶಾಲೆಯಲ್ಲಿ ಕಲಿಸಬೇಕು ಅನ್ನೋದನ್ನ ಲೀಗಲ್ ಮಾಡಬಾರದು, ಮಾಧ್ಯಮದ ವಿಷಯವನ್ನೂ ಲೀಗಲ್ ಮಾಡಬಾರದು. ಆಗ ಎಲ್ಲವೂ ಸಿಂಪಲ್ಲಾಗಿರುತ್ತೆ!
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಭಾಷೆ ಒಂದು means of communication ಅಷ್ಟೆ
ನಮಸ್ಕಾರ. ಆಗಲೇ ನಮ್ಮ ಗೆಳೆಯರು ಹೇಳಿದ ಹಾಗೆ ಭಾಷೆ ಕೇವಲ "ಸಂವಹನ ಮಾಧ್ಯಮ"means of communication) ಮಾತ್ರವಲ್ಲ, ಅದೊಂದು ಬ್ರಹ್ಮಾಂಡ. ನಮ್ಮ ಅಲ್ಲಮ ಹೇಳಿದ ಹಾಗೆ, "ಮಾತೆಂಬುದು ಜ್ಯೋತಿರ್ಲಿಂಗ.
ಇಂದು ಭಾಷಾ ವಿಜ್ಞಾನ(Linguistics) ಎಷ್ಟು ಅಗಾಧವಾಗಿ ಬೆಳೆದು ನಿಂತಿದೆಯೆಂದರೆ, computational linguistics ಕೂಡ ಅದರಲ್ಲಿ ಮಹತ್ವದ ಸ್ಥಾನ ಪಡೆದುಕೊಂಡುಬಿಟ್ಟಿದೆ. ಭಾಷೆಯೆನ್ನುವುದು ಕೇವಲ ಕಲೆ(humanities)ಗೆ ಸೇರಿದ ವಿಷಯವಲ್ಲ, ಅದು ವಿಜ್ಞಾನವೂ ಹೌದು. ಭಾಷೆಯ ಕುರಿತಾಗಿ ನಮ್ಮ ದೇಶದಲ್ಲಿ ನಡೆಯುತ್ತಿರುವ ಸಂಶೋಧನೆ ಮತ್ತು ಅಭಿವೄದ್ಧಿ ಕುರಿತು ತಿಳಿಯಬೇಕಿದ್ದಲ್ಲಿ, ಮೈಸೂರಿನ ಭಾರತೀಯ ಭಾಷಾ ಸಂಸ್ಥಾನ - Central Institue of Indian Languages(CIIL)ಗೆ ಭೇಟಿ ಕೊಟ್ಟು ಅಲ್ಲಿನ ತಜ್ಞರನ್ನು ಸಂಪರ್ಕಿಸಿ ಅಥವಾ www.ciil.org ಗೆ ಭೇಟಿ ಕೊಡಿ.
"ಹಲವು ವರ್ಷಗಳ ಹಿಂದೆ ತಂತ್ರಙ್ನಾನ ಇಷ್ಟೊಂದು ಮುಂದುವರ್ದಿರ್ಲಿಲ್ಲ... ಹಾಗಾಗಿ ಜನ ತಮ್ಮ ಮಾತ್ರು ಭಾಷೆಯಲ್ಲೇ ವಿಷಯಗಳನ್ನು ವ್ಯಕ್ತ ಪದಿಸ್ತಿದ್ರು. ಆದ್ರೆ ಈಗ ವಿಙ್ನಾನ ಬೆಳೆದಿದೆ ಹಾಗಾಗಿ ಎಲ್ಲರೂ ಇಂಗ್ಲೀಷನ್ನು ಸಾಮಾನ್ಯ ಭಾಷೆಯಾಗಿ ಪರಿಗಣಿಸಿ ಅದ್ರಲ್ಲೇ ವಿಷಯಗಳನ್ನು ವ್ಯಕ್ತ ಪಡಿಸೋಕೆ ಶುರು ಮಾಡಿದ್ದಾರೆ.
ಜಾಗತೀಕರಣದ ಪ್ರಭಾವದಿಂದ ಇಂಗ್ಲೀಷ್ ಬೇಡಿಕೆಯಲ್ಲಿರುವ ಭಾಷೆಯಾಯ್ತು. ಆ ಕಾರಣದಿಂದ ಮಕ್ಕಳಿಗೆ ಇಂಗ್ಲೀಷ್ ಕಲಿಸುವುದು ಉಪಯುಕ್ತ ಅಂತ ಪೋಷಕರು ತೀರ್ಮಾನ ಮಾಡಿದ್ರು...ಇಂಗ್ಲೀಷಲ್ಲೇ ಓದೋದ್ರಿಂದ ಮಕ್ಕಳಿಗೆ ಕನ್ನಡದ ಬಳಕೆ ಕಡಿಮೆಯಾಯ್ತು, ಅದರ ಮೇಲಿನ ಆಸಕ್ತಿಯೂ ಕಡಿಮೆಯಾಗ್ತಾ ಬಂತು. ಹಾಗೆ ಬಳಕೆಯೂ ಕ್ಷೀಣಿಸುತ್ತಿದೆ. ಇದಕ್ಕೆ ಮಕ್ಕಳನ್ನಾಗಲಿ ಪೋಷಕರನ್ನಾಗಲಿ ದೂಶಿಸುವುದು ಸರಿಯಲ್ಲ."
ನೀವು ಹೇಳಿರೋ ಹಾಗೇನೂ ಇಲ್ಲ. ಅಷ್ಟು ಸರಳವಾದ ವಿಚಾರವಾಗಿದ್ದಿದ್ರೆ ಇಲ್ಲಿ ಸಂಪದದಲ್ಲಿ ಎಲ್ಲರೂ ಇಷ್ಟು ತಲೆ ಕೆಡಿಸಿಕೊಂಡು ಕನ್ನಡದ ಕುರಿತು ಚರ್ಚೆ ನಡೆಸ್ತಿರ್ಲಿಲ್ಲ. ಇನ್ನು ಬ್ರಿಟೀಷರ ಆಡಳಿತದ ಪ್ರಭಾವದಿಂದಾಗಿ ಇಂಗ್ಲೀಶ್ ಭಾಷೆ, ಸಂಸ್ಕೃತಿ ಪ್ರಭಾವ ನಮ್ಮ ಮೇಲೆ ದಟ್ಟವಾಗಿ ಆಯ್ತೇ ಹೊರತು, ವಿಜ್ಞಾನ ತಂತ್ರಜ್ಞಾನದ ಪ್ರಭಾವದಿಂದಾಗಿಯೇನೂ ಅಲ್ಲ. ಹಾಗೆ ಹೇಳೋದಾದ್ರೆ, ಆಗಿನವರಷ್ಟು ಚೆನ್ನಾಗಿ ಈಗಿನವರು ಇಂಗ್ಲೀಶ್ ಮಾತಾಡೋಲ್ಲ. ಜಾಗತೀಕರಣದ ಪ್ರಭಾವದಿಂದ ಇಂಗ್ಲೀಶ್ ಪ್ರಭಾವ ಆಗಿಲ್ಲ. ಬ್ರಿಟನ್, ಅಮೆರಿಕಾದಂತಹ ದೇಶಗಳನ್ನು ಹೊರತುಪಡಿಸಿದರೆ, ಇತರ ಯುರೋಪ್ ದೇಶಗಳು, ಏಷ್ಯಾದ ಪ್ರಮುಖ ದೇಶಗಳು(ಬ್ರಿಟೀಶ್ ಆಳ್ವಿಕೆಗೊಳಗಾಗದ) ಈಗಲೂ ಇಂಗ್ಲೀಶ್ ಬಳಸೋಲ್ಲ. ಆದರೂ, ಆ ದೇಶಗಳು ವಿಜ್ಞಾನ ತಂತ್ರಜ್ಞಾನದಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿವೆ. ಪ್ರಜ್ಞಾವಂತರಾದ ನಾವು ಎಚ್ಚೆತ್ತುಕೊಳ್ಳದ ಹೊರತು ನಮ್ಮ ಭಾಷೆಗೆ ಉಳಿಗಾಲವಿಲ್ಲ.
ಸಿರಿಗನ್ನಡಂ ಗೆಲ್ಗೆ
ನಿಮಗೆ ಎಲ್ಲವೂ ಒಳ್ಳೆಯದಾಗಲಿ.
ವಿಶ್ವಾಸದಿಂದ,
ಶಶಿ
ಜಾಲತಾಣ: http://vishwamanava.mywebdunia.com/
ಉ: ಭಾಷೆ ಒಂದು means of communication ಅಷ್ಟೆ
ಮೊದಲು ಹಾಗಿತ್ತು, ಹಾಗಾಯಿತು, ಅಲ್ಲಿ ಹಾಗಿದೆ, ಇಲ್ಲಿ ಹೀಗೆ ಅನ್ನೋ tension ಎಲ್ಲಾ ಯಾಕೆ ಬೇಕು ಅಂತ ನೀತಾ ಮೇಡಂ ಕೇಳ್ತಿರೋದು.
ಸದ್ಯದ ಪರಿಸ್ಥಿತಿಯಲ್ಲಿ ನಾವು ಇಂಗ್ಲೀಷನ್ನು ಅಪ್ಪಿಕೊಂಡಿದೀವಿ. ಅದು ಹೆಂಗೆ ಯಾಕೆ ಅಂತೆಲ್ಲಾ ಬೇಡ.
ನಮಗೆ its just a means of communication. ಅದ್ಕೆ ಕನ್ನಡವೇ ಬೇಕೂಂತ ಇಲ್ಲ ಅಂತ.
ಇಂಗ್ಲೀಷ್ ಇಲ್ಲದ ಕಡೆ ವಿಜ್ಞಾನ , ತಂತ್ರಜ್ಞಾನ ಬೆಳೆದಿಲ್ಲ. ಪಾಪ ಜಪಾನಿಯರು, ಚೀನೀಯರು, ಇಂಗ್ಲೆಂಡ್ ಪಕ್ಕದಲ್ಲೆ ಇರೋ ಫ್ರಾನ್ಸ್, ಜರ್ಮನಿ ಎಲ್ಲರೂ ಇನ್ನೂ ಕರೆಂಟಿಲ್ಲದೇ ಬದುಕುತ್ತಾ ಇದ್ದಾರೆ ಗೊತ್ತಾ ನಿಮಗೆ? ಅವರ ಮಕ್ಕಳನ್ನೆಲ್ಲಾ ಇಂಗ್ಲೀಷ್ ಮೀಡಿಯಂನಲ್ಲೇ ಓದ್ಸಿದ್ರೆ ಹಿಂಗಾಗ್ತಿತ್ತಾ?
ಅವರಿಗೆ language is just a means of communication.
ನಮಗೆ ಕನ್ನಡವೇ means of communication.
**************************
http://vikasavada.blogspot.com/
**************************
ಉ: ಭಾಷೆ ಒಂದು means of communication ಅಷ್ಟೆ
ವಿಕಾಸ್ ಅವರೆ ನೀವು ನನ್ನ ಕಾಲ್ ಎಳಿತಾಇಲ್ಲ ತಾನೆ...??
ಉ: ಭಾಷೆ ಒಂದು means of communication ಅಷ್ಟೆ
ಛೇ ! ಎಲ್ಲಾದ್ರೂ ಉಂಟೇ?
ನಾನೂ ಎರಡೂ ದೃಷ್ಟಿಯಿಂದ ಯೋಚಿಸುತ್ತಿದ್ದೆ ಅಷ್ಟೆ.
**************************
http://vikasavada.blogspot.com/
**************************
ಉ: ಭಾಷೆ ಒಂದು means of communication ಅಷ್ಟೆ
ಸರಿ ಸರಿ... ನೀವ್ ಹೇಳೋದೆಲ್ಲಾ ಸರಿ. ನಾನು ನಿಮ್ಮೆಲ್ಲಾರಷ್ಟು ಆಳವಾಗಿ ಯೋಚಿಸಿರ್ಲಿಲ್ಲ. ನಾನೇನು ತಿಳ್ದಿದ್ದೆ ಅಂದ್ರೆ ಎಲ್ಲರೂ ತಮಗೆ ತಿಳಿದಿರುವ ಭಾಷೆಯಲ್ಲಿ ಬೇರೆಯವರಿಗೆ ಅರ್ಥವಾಗುವ ಭಾಷೆಯಲ್ಲಿ ಸಂವಾಹನ(communicate)ಮಾಡಿದ್ರೆ, ಯಾರಿಗೂ ತೊಂದರೆ ಬರೋದಿಲ್ಲ ಅಂತ.ಏನೋ ಹೇಳ್ತಾರಲ್ಲ simple living high thinking ಅಂತ ಹಾಗೆ.
ಉ: ಭಾಷೆ ಒಂದು means of communication ಅಷ್ಟೆ
ನಿಮ್ಮ ವಿಚಾರಸರಣಿ ನನಗೆ ಮುದ ತಂತು(ತಂದಿತು).
ಉ: ಭಾಷೆ ಒಂದು means of communication ಅಷ್ಟೆ
ನನಗೂ ಕೂಡ !
**************************
http://vikasavada.blogspot.com/
**************************
ಉ: ಭಾಷೆ ಒಂದು means of communication ಅಷ್ಟೆ
ನೀವು ಸುಮ್ಮನೆ ನನ್ನನ್ನು ಕೆರಳಿಸಿ ಮಜಾ ತಗೋಳ್ಳಿಕ್ಕೆ ಪ್ರಯತ್ನಿಸುತ್ತಿದ್ದೀರಿ. ಸುಮ್ನೆ ನಾನ್ಯಾಕೆ ಟೆನ್ಸನ್ ಮಾಡಿಕೊಳ್ಳಿ. ಇದನ್ನು ಇಲ್ಲಿಗೆ ಬಿಟ್ಟುಬಿಡುತ್ತೇನೆ.
ಉ: ಭಾಷೆ ಒಂದು means of communication ಅಷ್ಟೆ
ಸುಮ್ ಸುಮ್ನೆ ನೀವ್ ಯಾಕ್ ಸಾರ್ "ಕೆರಳಿಸಿ ಮಜಾ ತೊಗೋತೀರಾ" ಅಂತೀರಾ ...
ಆಯಮ್ಮ ಪಾಪ ಹಾಗೇನೂ ಇಲ್ಲ ಅಂದ್ರಲ್ಲ...
ಇದೊಳ್ಳೆ ಕುಂಬಳ ಕಾಯ್ ಕಳ್ಳನ ಕಥೆ ಆಯಿತು...
ಉ: ಭಾಷೆ ಒಂದು means of communication ಅಷ್ಟೆ
ಅಬ್ಬಬ್ಬ ಎಷ್ಟೋಂದು Communication ನಡೀತಾಯಿದೆ ಇಲ್ಲಿ ?
ಶಶಿಕನ್ನಡ ಹಾಗು ಯೂನಿಕ್-ಸುಪಾರಿ ರವರು ಬಹಳ ಸಮಂಜಸವಾದ ಉತ್ತರಗಳನ್ನು ಕೊಟ್ಟಿದ್ದಾರೆ.
ಭಾಷೆ ಕೇವಲ communication ಅಲ್ಲ, ಭಾಷೆಯಂಬುದು ಕೇವಲ ಸಂವಹನ ಮಾದ್ಯಮವೇ ಆಗಿದ್ದಲ್ಲಿ ಅದು ಮೊದಲಿಗೆ ಇಷ್ಟು ಹಿರಿದಾಗಿ ಬೆಳೆಯುತ್ತಲೇ ಇರುತ್ತಿರಲಿಲ್ಲ. ಅದು ಎಲ್ಲಿ ಪ್ರಾರಂಭವಾಯ್ತೊ ಅಲ್ಲೇ ನಿಂತುಹೋಗ್ತಾಯಿತ್ತು (ಅ : ಅಂದರೆ ಊಟ ಮಾಡಿದ್ಯ ಅಂತ, ಆ: ಅಂದರೆ ಕಾಫ಼ಿ ಕುಡಿದ್ಯಾ ಅಂತ ಅಗ್ತಾಯಿತ್ತು).
ನಾವು ಬುದ್ದಿವಂತರಾಗಿದ್ದಲ್ಲಿ ನಮ್ಮ ಶಾಲೆಯಲ್ಲಿ ಕನ್ನಡ ಬೇಕೊ, ಇಂಗ್ಲಿಷ್ ಬೇಕೊ ಎಂಬ ದ್ವಂದ್ವ ಯುದ್ದದ ಬದಲಿಗೆ ಇಂಗ್ಲಿಷ್ಷೇ ಎಲ್ಲ ಅನ್ನುತ್ತ ನಮ್ಮ ಮಕ್ಕಳನ್ನು ಬ್ರೈನ್ ವಾಶ್ ಮಾಡುವಂತವರನ್ನು (ಸಮಾಜ ವ್ಯವಸ್ತೆ, ಸರ್ಕಾರ, ಉದ್ಯಮ) ಹಿಡಿದು-ಹೊಡೆದು ಲಾಕಪ್ ನಲ್ಲಿ ಹಾಕಿ ಏರೋಪ್ಳೇನ್ ಹತ್ತಿಸ್ಬೇಕು. :x
ಬಹುಶಃ ನಮ್ಮ ದೇಶವನ್ನು ಬ್ರಿಟೀಷರು ಆಳದೆ ಜರ್ಮನರು ಆಳಿದ್ದರೆ ಆಗ ನಾವು ಜರ್ಮನಿ ಕಲೆತು ಅವರ ಕಾರ್ ಕಂಪನಿಗಳಲ್ಲಿ ಕೆಲಸವನ್ನು ಮಾಡ್ತಾಯಿರಬೇಕಿತ್ತು, ಅಲ್ಲವೇ ?
ಭಾಷೆಗೆ ಇತಿಹಾಸವಿದೆ, ಭಾಷೆ ಬೆಳೆದಂತೆಲ್ಲ ಮನುಷ್ಯ ಬೆಳೆಯುತ್ತಾನೆ. ಕೊನೆಗೆ ಇಷ್ಟು ದೊಡ್ಡ ಭಾರತದಲ್ಲಿ ಭಾಷೆಯಿಂದಲೇ ನಾವು ಗುರುತುಪಡಿಸಿಕೊಳ್ಳಲು ಸಾದ್ಯ.
ಮನಯೇ ಮೊದಲ ಶಾಲೆಯಾದ್ದರಿಂದ ಮಕ್ಕಳಿಗೆ ನೀವು ನಿಮ್ಮ ಪಾಡಿಗೆ ಕನ್ನಡ ಕಲಿಸಿ ಶಾಲೆಗೆ ಕಳುಹಿಸಿ (ಇಂಗ್ಲಿಷ್ ಮಾದ್ಯಮವಾದರು ಪರವಿಲ್ಲ),ಆದ್ರೆ ನೀವು ಹೇಳಿಕೊಟ್ಟ ಕನ್ನಡದಿಂದ ಏನೂ ಉಪಯೋಗವಿಲ್ಲ ಅನ್ನುತ್ತ ನಮ್ಮ ಮಕ್ಕಳನ್ನು ಎಡಬಿಡಂಗಿ ಮಾಡುವ ಶಾಲೆಗಳನ್ನು ಮಾತ್ರ ಬಿಡಬೇಡಿ. (ಹಿಂದೆ ಮುಂದೆ ನೋಡದೆ ನಿಮ್ಮ ಕೈನಲ್ಲಿ ಇರುವ ಸೌಟು, ಬೂಟಿನಲ್ಲಿ ಹೊಡೆಯಿರಿ.) :x
Nobody learns anything at School, it's just a place to cross-check what you have learnt at home is right or not among others.
ನೀವು ಏನ್ಹೇಳ್ತೀರಿ ??
-ಯುವಪ್ರೇಮಿ
ಉ: ಭಾಷೆ ಒಂದು means of communication ಅಷ್ಟೆ
ಏನಾರ ಆಕ್ಕಳ್ಲಿ. ಇಷ್ಟೆಲ್ಲಾ ತಲೆನೇ ಕೆಡಿಸ್ಕಬೇಡಿ ಅಂತ ನೀತಾ ಮೇಡಂ ಹೇಳಿದ್ದು.
ಎಲ್ರೂ ಇಂಗ್ಲೀಷ್ ಮೀಡಿಯಂಗೋಗ್ತಾರೆ, ನಿಮ್ ಮಕ್ಳನ್ನೂ ಕಳ್ಸಿ. ಎಲ್ರೂ ಇಂಗ್ಲೀಶಲ್ಲೇ ಮಾತಾಡ್ತಾರೆ, ನಿಮ್ ಪಾಡಿಗೆ ನೀವೂ ಇಂಗ್ಲೀಷಲ್ಲೇ ಮಾತಾಡಿ, ನಿಮ್ ಮಕ್ಳಿಗೂ ಅದೇ ಹೇಳ್ಕೊಡಿ.
ಹಿಂದಿಯವರತ್ರ ಅವರಿಗೆ ಅರ್ಥ ಆಗೋ ಹಾಗೆ ಹಿಂದಿಯಲ್ಲಿ ಮಾತಾಡಿ. ಯಾರಾರ್ಯಿಗೆ ಏನೇನು ಅರ್ಥಾಗುವಂತೆ ಮಾತಾಡ್ಬೇಕೋ ಆ ತರ ಮಾತಾಡಿ.
ಅಷ್ಟೆ.. ನೋ ಟೆನ್ಸನ್
ನೀವೆಲ್ಲಾ ಯಾಕ್ ಹಿಂಗೆ ಭಾಷೆ ಭಾಷೆ ಅಂತ ತಲೆಕೆಡಿಸಿಕೊಂಡಿದೀರಿ ಅಂತ ನೀತಾರಿಗೂ ಮತ್ತು ನನಗೂ ಅರ್ಥವೇ ಆಗುತ್ತಿಲ್ವಪ್ಪ !

ಕನ್ನಡ ಹೋಯ್ತಾ ಹೋಗ್ಲಿ ಬಿಡಿ.. ಮಾತೇನೋ ನಿಂತೋಗ್ಲಿಲ್ವಲ್ಲ. ಇಂಗ್ಲೀಷಲ್ಲಿ ಮಾತಾಡ್ಕೊಂಡು ಸುಖವಾಗಿರಿ. its just a means of communication u know
**************************
http://vikasavada.blogspot.com/
**************************
ಉ: ಭಾಷೆ ಒಂದು means of communication ಅಷ್ಟೆ
ಪ್ರೀತಿಯ ವಿಕಾಸ್ ರವರೆ,
ನಿಮ್ಮ ಮಾತುಗಳಿಗೆ ನನ್ನ ನಗೆ ಬಿಟ್ಟರೆ ಬೇರೆ ಏನು ನೀಡಲು ಆಗದು. ಏಕೆಂದರೆ ನೀವು ನಂಬಿರೊ ಇಂಗ್ಲಿಷ್ ನಲ್ಲಿ ಕನ್ನಡದಷ್ಟು expression ಕೊಡಲು ಸಾದ್ಯವಾಗದು....!!

-ಯುವಪ್ರೇಮಿ
ಉ: ಭಾಷೆ ಒಂದು means of communication ಅಷ್ಟೆ
**************************
http://vikasavada.blogspot.com/
**************************
ಉ: ಭಾಷೆ ಒಂದು means of communication ಅಷ್ಟೆ
ವಿಕಾಸ್, ನಾನೂ ನಿಮ್ ಜೊತೆ ಇದೀನೀಪ್ಪ.
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ಭಾಷೆ ಒಂದು means of communication ಅಷ್ಟೆ
ಓ....!! ಇಲ್ಲಿ ಮ್ಯಜಾರಿಟಿ ಆಪೋಸಿಸನ್ ನವರೆ ಇದ್ದಾರೆ.
ಹಾಗಿದ್ರೆ ಸರಿ, ನಮಗೆ ಕನ್ನಡ ಆದ್ರೆ ಏನು ಇಂಗ್ಲಿಷ್ ಆದ್ರೆ ಏನು, ನೀವೆಲ್ಲ ಹೇಳಿದ ಹಾಗೆ ಇನ್ಮೇಲೆ ಎಲ್ಲಾ ಕಡೆ ನಮ್ಮ ಪ್ರತಿಷ್ಟೆ ತೋರಿಸ್ಕೊಳ್ಳೋಕೆ ಇಂಗ್ಲಿಷನಲ್ಲೇ ಮಾತ್ನಾಡ್ತೀವಿ.
ಅದೂ ಅಲ್ಲದೆ ಈ ಫ಼್ರೆಂಚ್, ಸ್ಪ್ಯಾನಿಶ್ ಕಲ್ತ್ಕೊಂಡ್ರೆ ಇನ್ನೂ ಒಳ್ಳೆ ಕೆಲಸ, ಕೈತುಂಬ ಕೆಲಸ ಕೊಡ್ತೀವಿ ಅಂತ ನಮ್ಮ ಕಂಪನಿನಲ್ಲಿ ಹೇಳೀದ್ದಾರೆ. ನಾವು ಹಾಗೆ ಮಾಡುವುದೇ ಒಳ್ಳೆಯದು.
ನಮ್ಮ ಕನ್ನಡ ಕಟ್ಕೊಂಡೂ ನಂಗೆ ಏನಾಗ್ಬೇಕು. ನಾವು ಹೇಳೋದು ಇನ್ನೊಬ್ಬರಿಗೆ ಗೊತ್ತಾದ್ರೆ ಸಾಕು ಅಲ್ವೆ, ಅದು ಯಾವ ಭಾಷಯಾದ್ರು ಓ.ಕೆ ?
ನಮ್ಮ ಮಕ್ಕಳು ನಮ್ಮನ್ನ ಮಮ್ಮಿ, ಡ್ಯಾಡಿ ಅಂದ್ರೆ ಎಷ್ಟು ಚನ್ನಾಗಿದೆ ಅನ್ಸುತ್ತೆ ಅವರ ಮಾತು.

ಎಲ್ಲಾ ಭಾಷೆನು ಒಂದೇ, ಎಲ್ಲ ಬರೆ ಕಮ್ಯುನಿಕೇಷನ್ಗೆ ಹುಟ್ಟೊಂಡಿರೋದ್ರಿಂದ ಸುಮ್ನೆ ನಾವು ಇಲ್ಲಿ ಸಮಯ ವ್ಯರ್ಥ ಮಾಡ್ಬಾರ್ದು.
ನಮ್ಮ ಕನ್ನಡನಾಡನ್ನ ಪಕ್ಕದ ರಾಜ್ಯಕ್ಕೆ ಮಾರಿ ಬಿಡೋಣ. ಒಳ್ಳೆ ದುಡ್ಡು ಸಿಗುತ್ತೆ...!!
ಉದಯವಾದರು ಆಗ್ಲಿ, ಉರಿದಾದ್ರು ಹೋಗ್ಲಿ ನಮ್ಮ ಚಲುವ ಕನ್ನಡ ನಾಡು...!!
-ಯುವಪ್ರೇಮಿ
ಉ: ಭಾಷೆ ಒಂದು means of communication ಅಷ್ಟೆ
ಇಲ್ಲಿ ಆಪೋಸಿಸನವರು ಅಂತ ಯಾರು ಇಲ್ವಲ್ಲಾ. ನಾವ್ಯಾರು ಕನ್ನಡವನ್ನು ಅಪ್ಪೋಸ್ ಮಾಡ್ತಿಲ್ಲ... ಆಗ್ಲೆ ಹೇಳಿದ ಹಾಗೆ ಇಲ್ಲಿ ಪ್ರತಿಷ್ಟೆ ತರುವಂತಹ ಭಾಷೆ ಯಾವುದೂ ಇಲ್ಲ. ನಿಮಗೆ ಅನುಕೂಲಕ್ಕೆ ಬರೋದಾದ್ರೆ ಯಾವ ಭಾಷೆ ಕಲಿತರೇನು. ಹಾಗಂತ ಕನ್ನಡವನ್ನು ಬಿಟ್ಟುಬಿಡಬೇಕಂತಯೇನು ಇಲ್ವಲ್ಲಾ.
ಬೇರೆ ಭಾಷೆ ಮಾತನಾಡಿದ ತಕ್ಷಣ ಕನ್ನಡವನ್ನು ತೊರೆದುಬಿಡಬೇಕೆಂಬುದು ತಪ್ಪು.ನಾವ್ಯಾಕೆ ಕನ್ನಡವನ್ನು ಮಾರಬೇಕು...?? ಅದು ನಮ್ಮ ಮಾತ್ರು ಭಾಷೆ ಅಲ್ವಾ...?? ನಾವು ಆದಷ್ಟು ಕನ್ನಡವನ್ನೇ ಉಪಯೋಗಿಸಬೇಕು... ಅದು ಆಗದಿದ್ದಾಗ ಕೆಲವೊಮ್ಮೆ ನಾವು ಬೇರೆ ಭಾಷೆಯನ್ನು ಉಪಯೊಗಿಸುತ್ತೇವೆ.. ಅಷ್ಟೆ.. simple.. ಅಲ್ವಾ...??
ಉ: ಭಾಷೆ ಒಂದು means of communication ಅಷ್ಟೆ
ನೀತಾ ರವರೆ,
ನೀವು ಕನ್ನಡವನ್ನು ಮಾತ್ರ ಒಪ್ಪಿ ಅನ್ನುವ ಅಭಿಪ್ರಾಯವನ್ನ ನಾನು ನೀಡಿಲ್ಲ, ಆದರೆ ನೀವು ಒಂದು ಭಾಷೆ (ಕನ್ನಡ,ಹಿಂದಿ,ತಮಿಳು,ತೆಲುಗು) Just for communication ಅಂತ ಹೇಳಿದ್ರೆ ನೀವು ಬಹುಶಃ ಭಾಷೆಯ ಮಹತ್ವದ ಮೇಲೆ ಗಮನ ಹರಿಸಿಲ್ಲ ಅನ್ಸುತ್ತೆ.
ಇಂಗ್ಲಿಷ್ ನಲ್ಲಿ Just ಅಂದ್ರೆ ಕನ್ನಡದಲ್ಲಿ "ಕೇವಲ" ಅನ್ನುವ ಅರ್ಥ ಇದೆ. ಅಂದ್ರೆ ನಿಮಗೆ ಭಾರತದ 14 (recognized) ಭಾಷೆ ಕೇವಲ ಸಂವಹನಕ್ಕೆ ಇರೋದು ಅನ್ಸುತ್ತ ?
"ಮಾತು ಮನೆ ಕೆಡಿಸ್ತು", ತೂತು ಒಲೆ ಕೆಡಿಸ್ತು" ಅಂದ ಹಾಗೆ ಭಾಷೆ ಬರೆ ಮಾತಿಗಲ್ಲ. ಪ್ರತೀ ಭಾಷೆಗೂ ಅದರದೇ ಆದ ವಿಶಿಷ್ಟ ಮಹತ್ವ ಇದೆ. ಅದಕ್ಕೆ ಮುಸ್ಲೀಮ್ ನವರು ನಮ್ಮ ಭಾರತದಲ್ಲಿ ಮೈನಾರಿಟಿ ಇದ್ರು (15%) ಅವರು ಉರ್ದು ಮರೆತಿಲ್ಲ. ನೀವು ಹೇಳೊ ಹಾಗೆ ಭಾಷೆ Just for communication ಆಗಿದ್ರೆ ಅವ್ರು ಅವರ ಭಾಷೆಗೆ ಡಿಮ್ಯಾಂಡ್ ಇಲ್ಲ ಅಂತ ಬೇರೆ ಭಾಷೆಗೆ ಪೂರ್ಣ ಮೊರೆ ಹೋಗ್ತಾಯಿದ್ರು.
ನಾವು ಕನ್ನಡದಲ್ಲಿ ಹುಟ್ಟಿದ್ರೆ ಕನ್ನಡದ ಮೇಲೆ ಪ್ರೀತಿ ಇರಬೇಕು. ಹಾಗೆ ನಾವು ಒಂದು ಪಕ್ಷ ತಮಿಳಿನಲ್ಲಿ ಹುಟ್ಟಿದ್ರೆ ಆಗ ತಮಿಳನ್ನು ಪ್ರೀತಿ ಮಾಡಬೇಕು.
ಭಾಷೆ ಬರೆ ಸಂವಹನಕ್ಕೆ ಇರೋದು ಅಂತ ಅಂದ್ರೆ ತಾಯಿ ಬರೆ ಮಕ್ಕಳನ್ನ ಹೆರೋದಕ್ಕೆ ಇರೋದು ಅಂತ ಹೇಳ್ತೀರ ನೀವು ?
-ಯುವಪ್ರೇಮಿ
ಉ: ಭಾಷೆ ಒಂದು means of communication ಅಷ್ಟೆ
ನೀತಾ ರವರೆ,
comments ನೋಡಿ, ಕಾಲು ಎಳೆಸಿಕೊ೦ಡು ತು೦ಬಾ ಸುಸ್ತು ಆಗಿರಬೇಕು ಅಲ್ವಾ?
ಇನ್ನೊ೦ದು ಸಲ ಇಷ್ಟೋ೦ದು tension ಮಾಡಿಸುವ೦ತಹ topic ತಗೋಬೇಡಿ. ಯಾರು support ಮಾಡುತ್ತಿದ್ದಾರೆ ಯಾರು ಕಾಲು ಎಳೆಯುತಿದ್ದಾರೆ ಅ೦ತ ಗೋತ್ತಾಗಲ್ಲ
ಉ: ಭಾಷೆ ಒಂದು means of communication ಅಷ್ಟೆ
No problem ಉಷ.. ಯಾರ support ಇಲ್ಲದಿದ್ರೂ ನಿಮ್ಮ support ಇರುತ್ತೆ ಅಂತ ಗೊತ್ತು...
ಉ: ಭಾಷೆ ಒಂದು means of communication ಅಷ್ಟೆ
ಹೌದು ನೀತಾ madam. ನಿಮಗೆ ಮಾಡ್ದೆ ಇನ್ಯಾರಿಗೆ ಮಾಡೋದು ಹೇಳಿ?
ಉ: ಭಾಷೆ ಒಂದು means of communication ಅಷ್ಟೆ
ತುಂಬ ಧನ್ಯವಾದ
ಉ: ಭಾಷೆ ಒಂದು means of communication ಅಷ್ಟೆ
ಭಾಷೆ ಬೇಱೆಯವರಿಗೆ ಹೇೞಕ್ಕೊಂದು ಹತ್ಯಾರು ಎಂದರಷ್ಟೆ ಆಗಿತ್ತಪ್ಪ. ಈ ಮಹಿಳಾಮಣಿಗಳಿಗೆ ಗಂಡ್ಗೋಳ್ಗಿಂತ ಇಂಗ್ಲಿಸ್ ಮ್ಯಾಕೆ ಒಸಿ ಪಿರೀತಿ ದಾಸ್ತಿ ಅನ್ಸುತ್ತೆ!
ಉ: ಭಾಷೆ ಒಂದು means of communication ಅಷ್ಟೆ